ಆಸೆ
ಹಸಿರೆ ನಿನ್ನ ಉದರದಾಗ
ತನ್ಮಯಳಾಗಿ ಮಲಗಾ ಬೇಕು..
ನಿನ್ನ ಹುಲ್ಲು ಹೊದಿಕೆಯಾಗ
ಬೆಚ್ಚನಾಗಿ ಮುದುಡಬೇಕು...
ಬೀಸೋ ನಿನ್ನ ಗಾಳಿಯಾಗೆ
ಮಧುರ ಕಂಪ ಆಘ್ರಾಣಿಸಬೇಕು..
ಹಾರಿ ಬರುವ ಹಕ್ಕಿಯ ಮೇಲಿನ
ಬಣ್ಣದ ಪುಕ್ಕ ನಾನಾಗ ಬೇಕು..
ಘರ್ಜಿಸುವ ಹುಲಿಯ ಕಂಠಕೆ
ಸ್ವರವು ನಾನಾಗಬೇಕು
ಉಲಿಯುವ ಕೋಗಿಲೆಯ ದನಿಗೆ
ರಾಗ ನಾ ಹಾಡಬೇಕು..
ಮಾಮರದ ಎಲೆಯ ಚಿಗುರ
ಪಚ್ಚೆ ನಾನಾಗಬೇಕು
ನೀಲಿಯಾಗಸದ ಹೊದಿಕೆ
ಬಣ್ಣ ನಾ ಸೇರಬೇಕು.
ಮಳೆಯ ಹನಿಯು ಬಿದ್ದ
ಮಣ್ಣ ಸುವಾಸನೆಯು ನಾನಾಗಬೇಕು..
ಮೌನವಾಗಿ ತಲೆಯ ತೂಗೊ
ಮರದ ಟೊಂಗೆ ನಾನಾಗಬೇಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ