ಬುಧವಾರ, ಅಕ್ಟೋಬರ್ 24, 2018

545. ಗಝಲ್-39

ಗಝಲ್-39

ಮನವ ಕಲಕದೆ ಶುಚಿತ್ವ ಬೆಳಗುತ ಬರಲಿ ಮನದಿಂಗಿತ
ಕನಸು ಬೆದರದೆ ನೋವ ಮರೆಯುತ ಸಾಗಲಿ ಮನದಿಂಗಿತ..

ಭರವಸೆಯ ಕಿರಣವದು ಬದುಕ ಸಾಗಿಸುತ
ಬೆಳಗು ಬೆಳಗುತ ಬಾಳ ಪಯಣವ ಬೆಳಗಲಿ ಮನದಿಂಗಿತ..

ನಕ್ಕು ನಲಿದು ಪುಕ್ಕ ತೆರೆಯುತ
ಸುಕ್ಕುಗಟ್ಟದೆ ಸಿಕ್ಕು ಹರಿಯದೆ ಹಾರಲಿ ಮನದಿಂಗಿತ..

ಬೇಸರದುಸಿರು ಬಾರದೆ ಶಾಂತಿಯುದಕವು ಉಕ್ಕುತ
ಜೋಪಾನದಿ ಜೀವ ಕಾಯುತ ಸಹಾಯ ನೀಡಲಿ ಮನದಿಂಗಿತ..

ಬಾರದ ಲೋಕಕೆ ಸಾಗಲುಂಟು ಕಾಯೋದ್ಯಾಕೆ ಅನವರತ
ಬದುಕ ಕೊಂಡಿಯ ಗಟ್ಟಿಯಾಗಿ ಬೆಸೆದು ಹೋಗಲಿ ಮನದಿಂಗಿತ..

ಬಂದೆ ಬರುವುದು ಸಾವು ಖಚಿತ ತಿಳಿದು ಬದಲಾಗದಿರಲಿ
ಬರುವ ಅತಿಥಿಯ ಎದುರುಗೊಳ್ಳಲು ಕಾಯುತಿರಲಿ ಮನದಿಂಗಿತ..

ಹೃದಯದೊಳಗಡೆ ಪ್ರೀತಿಯಮೃತ ಉಕ್ಕಿ ಹರಿಯುತಲಿರಲು
ಮನದ ಭಾವನೆ ಪ್ರೇಮದಲಿ ಬೇರೆಯಾಗದಿರಲಿ ಮನದಿಂಗಿತ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ