ಮಂಗಳವಾರ, ಅಕ್ಟೋಬರ್ 16, 2018

534.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-17

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-17

ಮಕ್ಕಳಿಗೀಗ ಹೆಸರಿಗೆ ಮಾತ್ರ ದಸರಾ ರಜೆ. ಕಲಿಕೆಯಲ್ಲಿ ಹಿಂದುಳಿದಿರುವ ಸರಕಾರಿ ಶಾಲಾ ಮಕ್ಕಳಿಗೆ ವಿಶ್ವಾಸ ಕಿರಣ, ಖಾಸಗಿ ಶಾಲಾ ಮಕ್ಕಳಿಗೆ ಟ್ಯೂಶನ್. ಹೋಮ್ ವರ್ಕ್ ಗಳ ಕಾಟ. ಹಿಂದೆ ಇದ್ದುದು ವರ್ಷಕ್ಕೆ ನಾಲ್ಕು ಕಿರು ಪರೀಕ್ಷೆ ಗಳು, ಒಂದು ಅರ್ಧ ವಾರ್ಷಿಕ ಪರೀಕ್ಷೆ ಮತ್ತೊಂದು ವಾರ್ಷಿಕ ಪರೀಕ್ಷೆ. ಆ ಪರೀಕ್ಷೆಗಳಿಗಿದ್ದ  ಶಿಸ್ತೇ ಬೇರೆ!
  ಶಿಸ್ತಿನ ಪರೀಕ್ಷೆಗಳನ್ನು ಮಕ್ಕಳ ತಲೆಗೆ ಭಾರವಾಗಬಾರದೆಂದು, ತೆಗೆಸಿ, ದಿನಾಲೂ ಟೆನ್ಷ ನ್ ಬರುವ ಅತಿ ಭಾರದ ಸಿಸಿಇ ತರಲಾಯಿತು. ಈಗ ಮಕ್ಕಳಿಗೂ, ಶಿಕ್ಷಕರಿಗೂ ಪರೀಕ್ಷೆ ಬರೆಯುವುದು, ಓದುವುದು, ಪ್ರಾಜೆಕ್ಟ್ ವರ್ಕ್, ರೆಕಾರ್ಡ್ ಬರೆಯೋದು ಇದೇ ಕೆಲಸ. ಯಾವ ಮಗುವಿಗೂ ಪರೀಕ್ಷಾ ಭಯವಿಲ್ಲ! ಅವ ಏನೇ ಓದಲಿ, ಏನೇ ಬರೆಯಲಿ, ಬರೆಯದೆಯೇ ಇರಲಿ ಅವನು ಪಾಸ್.. ಇದು ಈಗಿನ ಶಿಕ್ಷಣ ಪದ್ಧತಿ.
  ಇಪ್ಪತ್ತು ಮಕ್ಕಳಿಗಿಂತಲೂ ಕಡಿಮೆ ಮಕ್ಕಳಿರುವ ಶಾಲೆಗೆಂದೇ ಬಳಕೆಯಾಗುವ ಪದ್ಧತಿ ನಲಿಕಲಿ ಪದ್ಧತಿ. ಅದನ್ನು ಅರವತ್ತು ಮಕ್ಕಳಿರುವ ಶಾಲೆಯಲ್ಲೂ ಬಳಸಿಕೊಳ್ಳಲಾಗಿದೆ..ಭಾರತ ದೇಶವಿನ್ನೂ ಮುಂದುವರೆಯುತ್ತಿರುವ ರಾಷ್ಟ್ರ. ಸೌಲಭ್ಯಗಳು ಬರುವ ಮೊದಲೇ ಮಂತ್ರಿಗಳು ಹಾಗೂ ಕೆಳಗಿನವರ ಅಕೌಂಟಿಗೆ ಇಂತಿಷ್ಟು ಹೋಗಿ ತುಂಬಿರಬೇಕು ಅಷ್ಟೇ.
  ಈಗಿನ ಮಕ್ಕಳ ಬಗ್ಗೆ ನೆನೆಸಿಕೊಂಡರೆ ಭಯವಾಗುತ್ತದೆ. ಟೆನ್ಶನ್ ಹೆಚ್ಚಾದರೆ ಬೆನ್ನು ನೋವು ಬರುವುದಂತೆ. ಬ್ಯಾಗಿನ ಭಾರಕ್ಕೂ, ಮನದ ಟೆನ್ಶನಿಗೂ ಬೆನ್ನು ಬಗ್ಗಿ ಹೋಗಿ, ಜೀವನ ತೊಡಕಾಗಬಹುದು.
   ಆರಾಮದಾಯಕವಾದ ಮೊದಲಿನ ಜೀವನ ಈಗಿಲ್ಲ. ಹೊಟ್ಟೆಯಲ್ಲಿ ಇರುವಾಗಲೇ ಆ ಮಗುವಿಗೆ ಕಬ್ಬಿಣ, ಕ್ಯಾಲ್ಶಿಯಂ, ಪ್ರೋಟೀನ್ ಕೊಟ್ಟು ಅದನ್ನು ಬೆಳೆಸಲಾಗುತ್ತದೆ. ನಂತರ ಅದು ಅತಿಯಾಗಿ ಬೆಳೆದು ದಪ್ಪನಾಗಿರಲು ಹೊರತೆಗೆಯಲು ಸಿಸೇರಿಯನ್ ಪದ್ಧತಿ ಬಳಸಲಾಗುತ್ತದೆ! ಹೊರ ದೇಶಗಳ ಜನರು ಭಾರತೀಯರಿಗೆ ಹುಚ್ಚು ಎಂದು ನಗುತ್ತಿರುವರಂತೆ ಹಲವಾರು ಸಿಸೇರಿಯನ್ ಕೇಸ್ ಗಳ ನೋಡಿ, ನೋಡಿ. ಕಾರಣ ಅದೊಂದು ಸ್ವಾಭಾವಿಕ ಕ್ರಿಯೆ ಅವರಿಗೆ. ನಮ್ಮ ಹಾಗೆ ಮೊದಲೇ ಹೋಗಿ ಹೈ ಟೆಕ್ ಆಸ್ಪತ್ರೆಯಲ್ಲಿ ಬೆಡ್ ಬುಕ್ಕಿಂಗ್ ಮಾಡೋದಿಲ್ಲ ಅವರು!
  ಇನ್ನು ಮಕ್ಕಳ ಮನಸ್ಥಿತಿಯ ಬಗ್ಗೆ. ಡಾಕ್ಟರ್ ಅಥವಾ ಇಂಜಿನಿಯರ್ ಗೆ ಓದು, ಓದು ಓದು ಎಂದು ಮೊದಲೇ ಅಂಟಿಸಿ ಬಿಟ್ಟಿರುತ್ತೇವೆ ನಾವು.. ಯಾವ ಪೋಷಕರಾದರೂ "ನೀನು ಓದಿ ಮುಂದೆ ನಿನ್ನ ಸ್ವಂತ ಕಾಲಲ್ಲಿ ನಿಲ್ಲಲು ವ್ಯಾಪಾರ ಮಾಡು" ಎಂದು ಮಗನನ್ನು ಪ್ರೋತ್ಸಾಹಿಸುವನೇ.. ಪೆರೋತ್ಸಾಹಿಸಿದ್ದೇ ಆದರೆ ಮಗು ಬೆಳೆಯುವುದು.
  ಪ್ರತಿ ಮಗುವನ್ನೂ ನಾವು ಮುಂದೆ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ದುಡಿಯಲು ಇಲ್ಲಿ ವಿದ್ಯಾಭ್ಯಾಸ ಕೊಟ್ಟು ರೆಡಿಮಾಡುತ್ತೇವೆ ನಾವು! ನಮಗೆ ಸ್ಟಾಂಡರ್ಡ್ ಕಂಪನಿಗಳ ಬಟ್ಟೆ ಬೇಕು. ಅದು ಭಾರತದ್ದಾಗದು.
      ನಮ್ಮ ಮಕ್ಕಳನ್ನು ಹೇಗೆ ನಾವು ಬೆಳೆಸಿರುತ್ತೇವೆ ಎಂದರೆ ಇಂಗ್ಲಿಷ್ ಚೆನ್ನಾಗಿ ಮಾತನಾಡಿದಷ್ಟು ಅವನು ಗ್ರೇಟ್, ಕಂಪನಿ ಬಟ್ಟೆ ಹಾಕಿದವನು ಚೀಪ್!

ಮಕ್ಕಳನ್ನು ಮಕ್ಕಳಾಗಿರಲು ಬಿಡಬೇಕು. ಕುಣಿಯುತ್ತಾ ಆಡಲು ಅವಕಾಶ ಹಿರಿಯರು ಮಾಡಿಕೊಡಬೇಕು. ಮಕ್ಕಳು ಟೆನ್ಶನ್ ರಹಿತರಾಗಲು. ಆರಾಮವಾಗಿರಲಿ, ಒಂದೆರಡು ಗಂಟೆ ಫ್ರೀಯಾಗಿ ಎಲ್ಲರೊಂದಿಗೆ ಬೆರೆಯಲಿ..
  ಆಟ ಪಾಠವನ್ನು ಕಲಿತು, ಕಲಿಕೆಯ ಮೇಲೆ  ಹಿಡಿತ ಬಂದು ಖುಷಿಯಾಗಿ ಹಿತವಾಗಿರುವ ಬಟ್ಟೆ, ತಂದು ಮಲಗ್ಸಿ, ಆರಾಮದಲ್ಲಿ ತಿಂದು..ಹೀಗೆ ಮಕ್ಕಳಾಗಿ ಬೆಳೆಯಲಿ ಮಕ್ಕಳು. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ