ಗಝಲ್-37
ಮನದನ್ನೆ ನಿನ್ನರಳಿದ ವದನವ ನೋಡದೆ ನಾ ಹೇಗಿರಲಿ..
ನನ್ನೊಲವೆ ನಿನಗೆ ಕೊಡಲಿರುವ ಸಿಹಿಮುತ್ತ ಕೊಡದೆ ನಾ ಹೇಗಿರಲಿ...
ನಿನ್ನ ನೋಡಿ ಮನತುಂಬಿ ಹೋಗಬೇಕೆಂದಿದ್ದೆ,
ಬರಿಗೈಲಿ ಹೋದ ಪಕೀರನಂತೆ ಮನ ಬೇಸರಿಸಿದೆ ನಾ ಹೇಗಿರಲಿ...
ಹುಸಿ ಮುನಿಸು ತುಸು ಕೋಪ ಚೆಲ್ಲುವ ಚೆಲುವೆ
ನೀ ಬರದೆ ಮುದ ನೀಡದೆ ನಾ ಹೇಗಿರಲಿ...
ವದನದಲಿ ನಗುವ ಬೆರೆಸುತ ನನ್ನ ನೋಡಬರಲೊಲ್ಲೆ
ವೀಣೆಯಂತೆ ಮನವ ಮೀಟಿದೆ,ನಾ ಹೇಗಿರಲಿ..
ಸೋನೆ ಮಳೆಯು ಬರುತಿಹುದು ಹದದಲಿ
ಸಿಹಿ ಮಳೆಯೆ ನನ್ನೆದೆಗೆ ನೀ ಉದುರದೆ ನಾ ಹೇಗಿರಲಿ...
ದೇವ ನಿನ್ನನು ನನಗಾಗಿ ಸೃಷ್ಟಿಸಿಹನು
ಅಡಗಿರುವೆ ಎಲ್ಲಿ, ನೀನಿರದೆ ನಾ ಹೇಗಿರಲಿ....
ನನ್ನೊಡಲ ಪ್ರೇಮವೇ ನನ್ನಾಸರೆಯ ಚಿಗುರೇ
ನನ್ನ ಬಳ್ಳಿಯ ಹೂವೇ ನೀ ಬರದೆ ನಾ ಹೇಗಿರಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ