ಸೋಮವಾರ, ಅಕ್ಟೋಬರ್ 22, 2018

542.ಗಝಲ್-38

ಗಝಲ್-38

ಹಸಿರ ಕಾನನ ಗಿರಿಯ ಕಂದರ ಉಳಿಯಲಿ ನಮ್ಮಿಂದಲೇ
ವರುಣಾಗಮನ ಹಕ್ಕಿ ಕಲರವ ಬೆಳೆಯಲಿ ನಮ್ಮಿಂದಲೇ..

ಚಿಟ್ಟೆ ರವರವ ಪಟ್ಟೆ ಪ್ರಾಣಿಗಳ ಕೂಗು ಇಂಚರ
ಮಡಿಲ ಸೇರಿ ಗುರುತಾಗಲಿ ನಮ್ಮಿಂದಲೇ..

ಕಾಡ ಅಂದಕೆ ನಾಡ ಸೊಬಗದು ಸೇರಿ
ಪಕ್ಷಿ ಸಂಕುಲ ನಿತ್ಯ ಉಲಿಯಲಿ ನಮ್ಮಿಂದಲೇ..

ಪಚ್ಚೆ ಪರಿಸರ ಹಸಿರ ತೋರಣ ಶುದ್ಧ ಜಲವು
ಮಾನವತೆಯ ಮೂಕ ತೊಟ್ಟಿಲು ತೂಗುವಂತಾಗಲಿ ನಮ್ಮಿಂದಲೇ...

ನೇಸರನ ಹೊನ್ನ ಕಿರಣವು ಧರೆಗೆರ5 ಮುತ್ತನಿಕ್ಕಿದೆ
ಕಿರಣ ಜೀವಕೆ ವಿಷವಾಗದೆ ತಲುಪಲಿ ಜಗಕೆ ನಮ್ಮಿಂದಲೇ..

ಮರಗಳುದುರಿ ಹಾದಿ ಮಲಗಿದೆ,ನೆರಳು ಮಾಯವಾಗಿದೆ
ಅದನು ಪುನಃ ಪಡೆವ ಭಾಗ್ಯವು ಬರಲಿ ನಮ್ಮಿಂದಲೇ..

ಪ್ರೀತಿ ಪ್ರೇಮವು ದೂರವಾಗಿದೆ, ಹಣದ ದಾಹವು ಹೆಚ್ಚಿದೆ.
ಮುರಿದ ಮನಗಳು ಎಲ್ಲಾ ಮರೆತು ಒಂದುಗೂಡಲಿ ನಮ್ಮಿಂದಲೇ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ