ಶುಕ್ರವಾರ, ಅಕ್ಟೋಬರ್ 5, 2018

505.ನಿನಗಾಗಿ

ನಿನಗಾಗಿ

ನಿನ್ನ ಕಣ್ಣ ಕಿರಣವೆನ್ನ
ಮನದಿ ನಾಟಿ ನಿಂತಿದೆ..
ನಿನ್ನ ತುಟಿಯ ನಗೆಯು ನನ್ನ
ಎದೆಯ ಬಡಿತ ಮೀಟಿದೆ..

ನಿನ್ನ ಪ್ರೇಮರಾಗವೆನ್ನ
ನಾಡಿ ಮಿಡಿತವಾಗಿದೆ..
ಕಣ್ಣಂಚಿನ ಭಾವವೆನ್ನ
ಸೆಳೆದು ಭಾವ ಉಕ್ಕಿದೆ...

ನಿನ್ನ ಕರೆಯು ನನ್ನ ಉಸಿರ
ವೇಗವನ್ನು ಇಮ್ಮಡಿಸಿದೆ
ನಿನ್ನ ಸ್ಪರ್ಶ ರಾಗ ರತಿಯ
ರಂಗು ಹೆಚ್ಚುಗೊಳಿಸಿದೆ..

ಮರೆಯದಿರು ಮನದ ಮಾತು
ಎದೆಯ ಸ್ವರವು ಕರೆದಿದೆ..
ನಿನ್ನ ಕಣ್ಣ ನೋಟ ಭಾಷೆ
ಮನಕೆ ಅರ್ಥವಾಗಿದೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ