ಕಾಯುವಿಕೆಯೇ ಬದುಕು
ಅದೆಷ್ಟು ಕಾತುರವೋ ಇಳೆಗೆ
ರವಿ ಬಂದು ತನ್ನ ಎಬ್ಬಿಸುವನೆಂದು!
ಬರಡಾದ ಭೂಮಿಯದು ಕಾಯುವುದು
ಮೇಘ ಮಳೆ ಹನಿಗಳ ಸುರಿಸುವನೆಂದು!
ಮೋಡದೊಳಗೇ ಅವಿತ ಹನಿಗಳು ಕಾಯುವುವು
ಮೇಘ ತಂಪಾಗಿ, ಡಿಕ್ಕಿ ಹೊಡೆಯಲೆಂದು...
ಗದ್ದೆ ಉಳುಮೆಯ ಮಾಡಿ
ನಾಡ ರೈತನು ಕಾವ
ಧರೆ ತೊಯ್ದು ಮಣ್ಣಲ್ಲಿ ನೀರು ಸೇರಲಿ ಎಂದು..
ಚಂದ್ರ ಕಾಯುವ ಇಣುಕೆ
ನಿಶೆಯು ಬರಲೆನುತಿಳೆಗೆ
ವಸಂತನಿಗಾಗಿ ಕಾವ ಮರಗಳ ಸಾಲು
ಚಿಗುರೆಲೆಗಳ ಪಡೆವ ಬಯಕೆಯಲಿ..
ಸಾಧನೆ ಮಾಡೆ ಕಾಯುವ ಎದೆಯಿರಲಿ
ಕಠಿಣ ಪರಿಶ್ರಮದ ಬಳಿಕ
ಆಗೊದಗಿ ಬರುವ ಸಿರಿಗೆಂದೂ
ಕಾತುರವಿರಲಿ, ಫಲ ಸ್ವೀಕರಿಸುವ ಮನವಿರಲಿ..
ಛಲವಿರಲಿ.. ಧೈರ್ಯವಿರಲಿ..
@ಪ್ರೇಮ್@
07.02.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ