ಗಝಲ್
ಈ ಧರೆಯ ಮೇಲೆ ನಾನಿಹುದೆ ಕೌತುಕ
ಹನಿ ನೀರು ಆಹಾರ ಸಿಗುವುದೆ ಕೌತುಕ
ಮಾನವನ ದುರಾಸೆಯ ಪ್ರಕೃತಿಯು ತಡೆಯುತಿದೆ
ನೆಲವನಗೆವಾಗ ನೀರು ಬರುವುದೆ ಕೌತುಕ..
ದೇಶ ದೇಶಗಳ ನಡುವೆ ಬಾಂಧವ್ಯವಿರಬೇಕು
ಗಡಿ ಕಾಯುತ ಯುದ್ಧ ಮಾಡುವುದೆ ಕೌತುಕ..
ನಾನೂ ನಿನ್ನಂತೆ ಎಂಬ ಭಾವನೆ ಬೇಕು
ಜಗಳಾಡಿ ಕಿರುಚಾಡಿ, ಒಟ್ಟಿಗೆ ಬಾಳುವುದೆ ಕೌತುಕ..
ಭುವಿಗೆ ಪ್ಲಾಸ್ಟಿಕನು ನಾವೆಸೆಯ ಬಾರದು
ವಿದ್ಯಾವಂತರಿಗೂ ಅದು ಅರ್ಥವಾಗದಿರುವುದೆ ಕೌತುಕ..
ಸೋಜಿಗದ ಜೀವನವು ಸಂತಸದಿ ಸಾಗಲಿ
ಸಾಗರದ ನೀರದು ಉಕ್ಕದಿರುವುದೆ ಕೌತುಕ..
ಪ್ರಪಂಚದ ಜನರು ನಾವೆಲ್ಲ ಒಂದೇ
ಪ್ರೇಮದಿ ಬಾಳನು ನಡೆಸದಿರುವುದೆ ಕೌತುಕ..
@ಪ್ರೇಮ್@
12.02.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ