ಬುಧವಾರ, ಫೆಬ್ರವರಿ 13, 2019

765. ಭಾವಗೀತೆ-16 ಅಷ್ಟೆ ಸಾಕು

ಅಷ್ಟೆ ಸಾಕು

ನೀರೆ ನನ್ನ ಮನಸಿನಲಿ
ಇರಿಸಿರುವೆ ನಿನ್ನ ಮುದದಲಿ..
ನೀನು ಬಂದ ಮೇಲೆ ಬದುಕ
ಗಾನ ಹಾಡುತಿರುವೆ ಭರದಲಿ...

ನವ್ಯ ನಮನ ನಿನ್ನ ವದನ
ನಾದ ಗಂಗೆ ಜೀವನ
ಕಾವ್ಯ ಕಣ್ಣಿನಲ್ಲಿ ಕವನ
ಕರಗದಿರಲಿ ಹೃನ್ಮನ..

ಬೇರೆ ಏನು ಬೇಡ ನನಗೆ
ಬೊಗಸೆ ತುಂಬ ಪ್ರೀತಿ ಸಾಕು
ಮೊಗೆದು ಕುಡಿವೆ ಅದನೆ ನಾನು
ಹೀರಿದಂತೆ ಹಾಲು ಜೇನು...

ಸರಸ ವಿರಸ ಎಲ್ಲ ಬೇಕು
ಸಮರಸದ ಬದುಕು ಬಾಳಬೇಕು
ಸೋತು ಗೆದ್ದು ಸಾಧಿಸೋಣ
ಸೌಖ್ಯ ಸಾಗರ ದಾಟೋಣ..

ಪದರ ಪದರ ಬಾಳಿನಲ್ಲಿ
ಪರಿಣಯದ ಗಂಧ ಪಸರಿಸಲಿ
ಪ್ರಕೃತಿ ಹಸಿರು ಹಾಡಿರಲಿ
ಪವನ ಸುಗಂಧ ಬೀಸಿ ತರಲಿ..
@ಪ್ರೇಮ್@
13.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ