ನೀಲಿಯಂಚಿನಲಿ..
ನೀಲಾಕಾಶದಿ ನೀಲ ಚಂದ್ರನಂತೆ
ನೀಲಿ ಕಂಗಳಲಿ ನಗುತಿಹ ಚೆಲುವೆ
ನೀಲ ವದನದ ನೀಳ ಕಾಯದ
ನೀಲನ ಬದುಕಿಗೆ ನೀ ಬಾರೆ...
ನಗುತಲಿ ನಯನದಿ ತುಂಟಾಟವನಾಡುವೆ
ನಗೆ ಮೊಗ ತೊರೆಯದೆ ನಿನ್ನನೆ ಸೇರುವೆ
ನಲ್ಲೆಯೇ ನನ್ನಯ ಬಾಳಿಗೆ ನೀನೇ
ನಿನ್ನನು ಬಿಟ್ಟರೆ ಬಾಳೆನ್ನ ಕೊನೆ...
ನಲಿವಿವ ಬಾಳಲಿ ಅನುದಿನ ಮೆರೆಯುವ
ನಸುನಗು ಬರಲಿ ಒಲವಲಿ ನಿರಂತರ
ನಯನವು ಸಾವಿರ ರಾಗವ ಹಾಡಲಿ
ನಭದಲಿ ನಮ್ಮಯ ಗುರುತದು ಮೂಡಲಿ..
ನಂಬಿಕೆಯಿಂದಲಿ ನಾವು ಸೇರುವ
ನೋಡಿದ ಜನಕೆ ಪ್ರೀತಿಯ ಹಂಚುವ
ನವ ವಸಂತವ ಕ್ಷಣ ಕ್ಷಣ ಕಳೆಯುತ
ನಮ್ಮೀ ದಿನಗಳ ಜೊತೆಯಲಿ ಕಳೆಯುವ..
@ಪ್ರೇಮ್@
15.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ