ಸೋಮವಾರ, ಫೆಬ್ರವರಿ 18, 2019

784. ಕವನ-ನಾವು

ನಾವು

ಆ ದೇವ ಸೃಷ್ಟಿಸಿದ ಸರಕುಗಳು ನಾವೆಲ್ಲ
ಉದ್ದ ಕುಳ್ಳಗಿನ ಗಿಡ್ಡ ಎತ್ತರದ
ನಡು ತೆಳು ದಪ್ಪವಾದ
ಮನದೊಳಗೆ ಒಳ್ಳೆ, ಕೆಟ್ಟ ಭಾವನೆಯ...

ನಲಿಯುತಿಹ ಕುಣಿಯುತಿಹ
ನಗೆಗಡಲಲಿ ಮೀಯುತಿಹ
ಅಳುತಿಹ ಅಳಿಸುತಿಹ
ಕಣ್ಣೀರನು ಒರೆಯುತಿಹ
ಒರೆಸುವಂತೆ ಬಿಂಬಿಸುತಿಹ..

ನಾಟಕವಾಡುತಲಿರುವ, ನೇರವಾಗಿರುವ
ನಿಷ್ಟುರವಾಗಿ ಬಾಳುತಿರುವ
ಮನದೊಳಗೆ ಮರುಗುತಿಹ
ವನವನೆಲ್ಲ ಕಡಿಯುತಿಹ..

ಸಂಪಾದನೆ ಮಾಡುತಿರುವ
ಕುಡಿದು ಕುಣಿದು ತಿಂದು ತೇಗುತಿಹ
ಜೀವ ಜಂತು ಕೊಂದು ತಿನ್ನುತಿಹ
ಕಷ್ಟ ಸುಖದಿ ಬದುಕುತಿಹ..
ಸರಕುಗಳು ನಾವೆಲ್ಲ..
@ಪ್ರೇಮ್@
12.02.2019

ಪ್ರೇಮ್  ಅವರ ನಾವು
ಮಾನವ ಜನಾಂಗವನ್ನು  ಸರಕುಗಳನ್ನಾಗಿ ಮಾಡಿದ ಬ್ರಹ್ಮ. ವಿವಿಧ ತರಹದ ದಾಸ್ತಾನುಗಳು ನಾವು,   ತರಹ ತರಹದ ಬಣ್ಣ , ರೂಪ,  ರುಚಿ,  ಆಕಾರ ಇರುವ ನಾವು,   ಈ ಪೃಥ್ವಿಯಲ್ಲಿ, ಇರುತ್ತಾ  ಆಗ ಪೃಥ್ವಿಯ ಲಾಭ ಪಡೆದು,  ಅದನ್ನೇ ನಾಶ ಮಾಡುವೆವು,  ಒಂದು ದಿನ ನಾವು  ಕೊಳೆತು,  ಈ ಪೃಥ್ವಿಯಲ್ಲೇ ಕರಗಿ ಹೋಗುತ್ತೇವೆ,  ಅನ್ಯ ವಸ್ತುಗಳಂತೆ,  ನಮಗೆ ನೀಡಿದ ಬುದ್ಧಿಯನ್ನು  ಸದುಪಯೋಗ  ಮಾಡದೆ,  ಕೇವಲ ಮೋಜಿನಲ್ಲಿ ನಾಶವಾಗುವ ಸರಕುಗಳು ನಾವು.
ಭಿನ್ನವಾದ ರೀತಿಯಲ್ಲಿ  ಬರೆದಿರುವ ಕವನ.
ಎಂದಿನಂತೆ   ಪ್ರಾಸದಿಂದ ಅಲಂಕರಿಸಿದ  ಕವನ🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ