ಸೋಮವಾರ, ಫೆಬ್ರವರಿ 25, 2019

802. ವಿಮರ್ಶೆ-6

6. ದುರ್ಗೇಕರ್ ಸರ್ ರವರ

ಗೋಡೆಗಳೆ

ಮನಸ್ಸಿಗೆ ಕಟ್ಟಿದೆ ಗೋಡೆಗಳೆ
ತೆರೆಯಿರಿ ಜ್ಞಾನದ ಧ್ವಾರ
ಇಂದ್ರನ ಲೋಕದ ದಿಕ್ಬಾಲಕರೆ
ಸಂಯಮ ಪ್ರೇಮದ ಸಾರ

🍒🍒🍒🍒🍒🍒🍒🍒

ಕಟ್ಟಿದ, ದ್ವಾರ ಆಗಬೇಕಿತ್ತೇನೋ... ಪದಗಳ ಟೈಪಿಂಗ್. "ಸಂಯಮ ಪ್ರೇಮದ ಸಾರ" ಈ ಸಾಲು ಇಷ್ಟವಾಯ್ತು... ಅಂತ್ಯ ಪ್ರಾಸದ ನವಿರು ಪದಗಳು ಓದುಗನನ್ನು ಕೈ ಹಿಡಿದು ಕರೆದೊಯ್ಯುವ ಪರಿ ಚೆನ್ನ.

🍒🍒🍒🍒🍒🍒🍒🍒

ಬಾಗಿಲು ಬಿಗಿದಿದೆ ಅಹಃ ಬೀಗ
ನಾನು ನಾನೆ ನನ್ನದು ಲೋಕ
ಧರಿಸಿ ಮೂಳೆ ಮಾಂಸದ ತೊಗಲು
ದಿನವೂ ಬೇಡಿದ ಬಡ ಭಿಕ್ಷುಕ
🍒🍒🍒🍒🍒🍒🍒🍒
ಅಹಃ ಏಕೋ ಗೊತ್ತಾಗಲಿಲ್ಲ. ಕವನದ ಅಂದಕ್ಕಾದರೆ ಓಕೆ. ಅಹಂ ಆಗಿದ್ದಿದ್ದರೆ ಮುಂದಿನ ಸಾಲಿಗೆ ಪೂರಕವಾಗಿರುತ್ತಿತ್ತು. ಮಾರ್ಮಿಕ ಕವನ. ನಮ್ಮನ್ನು ನಾವೇ ಅಹಂ ಎಂಬ ಬೀಗ ಹಾಕಿ ಬಂಧಿಸಿಕೊಂಡಿದ್ದೇವೆ. ವಾವ್... ಸೂಪರ್ ಗುರುಗಳೇ..
🍒🍒🍒🍒🍒🍒

ನಲಿವು ಐಶ್ವರ್ಯಕ್ಕಾಗಿ ಯಾಗ
ಸೃಷ್ಠಿಸಿತು ದೇವ ದೇವಲೋಕ
ನೋವು ನಲಿವಿನ ಭಜನೆಯ ರಾಗ
ಭಾವ ಬಂಧಿ ಮಾಡಿತು ಶೋಕ
🍒🍒🍒🍒🍒🍒🍒🍒
ಕವಿಭಾವ ಹಾರುತ್ತಾ ಸಾಗಿದೆ. ಭವದಿಂದ ಭವಿತವ್ಯದ ಕಡೆಗೆ. ದೇಹದಿಂದ ಕಾರ್ಯದ ಕಡೆಗೆ. ಮನುಜನ ಆಲೋಚನೆಗಳ ಸರಪಣಿ ಹರಿದಿದೆ. ಕರ್ತವ್ಯದ ಪರಿ ಅಡಗಿದೆ.
🍒🍒🍒🍒🍒🍒🍒🍒

ಕಾರ್ಗತ್ತಲ ಕೋಣೆಯಲ್ಲಿ ಬದುಕು
ಹಗಲಿರುಳಲಿ ಕಾಣದ ಬೆಳಕು
ಕಲ್ಲು ಗೋಡೆಯ ಕಟ್ಟಿಗೆ ಕಿಟಕಿಗಳು
ತೋರಿದವು ಭಾವದ ಪರಿಪಾಕ

🍒🍒🍒🍒🍒🍒🍒

ಅರ್ಥಗರ್ಭಿತ ಸಾಲುಗಳಾದರೂ ಅರಗಿಸಿಕೊಳ್ಳಲು ಕಷ್ಟ. ನಮ್ಮ ಜೀವನವ ಉನ್ನತಕ್ಕೇರಿಸಬೇಕಾದ ಅನಿವಾರ್ಯತೆಗೆ ಬೆಳಕು ಚೆಲ್ಲಲಾಗಿದೆ. ಮನುಜ ಮತ ವಿಶ್ವ ಪಥವ ಸಾರಿ ಬಂಧನದಿಂದ ಬಿಡಿಸಿಕೊಳ್ಳ ಬೇಕಿದೆ. ಕುವೆಂಪುರವರ ಓ ನನ್ನ ಚೇತನಾ... ಕವನ ನೆನಪಿಸಿದವು ನಿಮ್ಮೀ ಸಾಲುಗಳು.. ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು.. ಎಂದಂತೆ..
🍒🍒🍒🍒🍒🍒🍒🍒

ಅಲ್ಲಿ ಇಲ್ಲಿ ಗುರು ಕರುಣೆಯಲ್ಲಿ
ಹುಡುಕಿದರೂ ಸಿಗದು ಎಸಳು
ನಡೆದು ಸಂತ ಪ್ರೀತಿ ಸೇವೆಯಲ್ಲಿ
ಕಾಣು ಸತ್ಯ ಧರ್ಮದ ತವರು

🍒🍒🍒🍒🍒🍒🍒

ಸತ್ಯಕ್ಕಿಂತ ದೊಡ್ಡ ಕೀಲಿಕೈ ಜಗದೊಳಿಹುದೆ ಗುರುಗಳೇ? ಆದರೆ ಸತ್ಯ ನಮಗೆ ಪ್ರಿಯವಲ್ಲದ ವಸ್ತು, ವಿಷಯ. ಇಂದಿನ ಕಾಲದಲಿ ಸತ್ಯ ಹೇಳಿದವ ಸತ್ತು ಹೋಗುವನು, ಅನ್ಯಾಯ ಮಾಡಿದವ ಅನ್ನ ತಿನ್ನುವನು ಎಂಬಂತಿದೆ. ಕವನದ ಸಾಲುಗಳು ದೀರ್ಘಾಲೋಚನೆಗೆ ಎಡೆಮಾಡಿ ಕೊಡುತ್ತವೆ.
🍒🍒🍒🍒🍒🍒

ನಿನ್ನೊಳಗಿನ ದಿವ್ಯ ಜ್ಯೋತಿಯಲ್ಲಿ
ಬೆಳಗಲಿ ಅಂದಕಾರದ ಯುಗ
ನಿನ್ನಾತ್ಮದಲ್ಲಿ ನಿನ್ನ ಮನದ ಬೀಗ
ನೀನೆ ಅರಿತು ತೆರೆದು ಬಿಡು ಬೇಗ
🍒🍒🍒🍒🍒🍒🍒

ನಿಮ್ಮನ್ನು ರೀಚ್ ಆಗೋದೆಂದರೆ ಮಂಗಳ, ಚಂದಿರರ ಹಿಡಿವಂತೆ. ಎತ್ತರಕ್ಕೆ ಕೈ ಚಾಚಿದರೂ, ಜಂಪ್ ಮಾಡಿದರೂ, ವಾಹನಗಳ ಬಳಸಿದರೂ ಸಾಧ್ಯವಾಗದು. ರಾಕೆಟ್ ನಿಂದ ಮಾತ್ರ ಸಾಧ್ಯವದು. ನಿಮ್ಮ ಕವಿಭಾವ ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿರುವೆನೋ ತಿಳಿದಿಲ್ಲ. ತಪ್ಪಿದಲ್ಲಿ ಕ್ಷಮೆಯಿರಲಿ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ