ಸೋಮವಾರ, ಫೆಬ್ರವರಿ 18, 2019

786. ಆಧುನಿಕ ಮಂಥರೆಯರು

ಆಧುನಿಕ ಮಂಥರೆಯರು

ಅತ್ತಿತ್ತ ಸುತ್ತಮುತ್ತ ತುಂಬಿಹರು
ಆಧುನಿಕ ಮಂಥರೆಯರು!
ಗೆಳೆತನವ ಕಂಡು ಕರುಬುವವರು,
ಏಳಿಗೆಯ ಕಂಡು ಉರಿಯುವವರು!
ಇತರರ ಹೀಯಾಳಿಸಿ ಖುಷಿ ಪಡುವವರು!!

ತಮ್ಮ ಕಾಲ ಬುಡವ ತಾ ನೋಡದವರು!
ಇತ್ತಿಂದತ್ತ, ಅತ್ತಿಂದಿತ್ತ ವಿಚಾರ ಕೊಡುವ ಅಂಚೆಯವರು!!
ವದನದಿ ನಗು, ಮನದಿ ವಿಷ ಬೆರೆತವರು!!
ವರ್ತನೆಯಿಂದ ಮನೆಯೊಡೆವ ವನಿತೆಯರು!!

ತಾವೇನೆಂದು ಅರಿಯದೆ ಬಾಳುವವರು!
ಇತರರ ಮನೆಯ ದೋಸೆ ತೂತೆನುವವರು!
ತನ್ನ ಮನೆಯ ತೂತು ಕಾವಲಿಯ ಕಾಣದವರು!
ಪಕ್ಕದ ಮನೆಯವರ ಉರಿಸಲು ಖರ್ಚು ಮಾಡುವವರು!!!

ತಾವು ಯಾರೆಂದೇ ಮರೆತುಬಿಡುವವರು!
ತಾನೇ ಪ್ರಪಂಚದಲಿ ಬಾಳುವೆವೆಂದಾಡುವವರು!!
ನಾಳೆಯನೆಂದೂ ಅರಿಯದೆ ಬಾಳುವವರು,
ಮೂರನೆಯವರಿಗೆ ಹಿತವಾಗಿ ಬಡಾಯಿ ಕೊಚ್ಚುವವರು!!

ತನ್ನ ಮನೆಯಲಿ ಹುಲಿ ಸತ್ತರೂ ಸರಿ
ಆಚೆ ಮನೆಯಲಿ ಇಲಿಯೆನುವವರು!!
ಚಾಡಿ ಹೇಳುತ್ತ ಸಮಯ ಕಳೆವವರು,
ತಾ ಮಂಥರೆಯೆಂದು ತಿಳಿಯದವರು!!
@ಪ್ರೇಮ್@
19.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ