ಗಝಲ್
ಬದುಕದು ಮೇಲಕೂ ಕೆಳಕೂ ಜೀಕುವ ಜೋಕಾಲಿ
ನಯದಲಿ ನಾಜೂಕಲಿ ನಡೆಯುವ ಜೋಕಾಲಿ...
ವಿನಯವು ಸರಸವು ವಿರಸವೂ ಇರಲಿ
ಗೌರವ ಮಮತೆ ಸಂತಸ ತರುವ ಜೋಕಾಲಿ..
ಸಲಹೆಯ ಪಡೆಯುತ ಖುಷಿಯನು ಹಂಚುತ ಬಾಳಲು ಬೇಕು
ಮೌನದ ಪರದೆಯ ಸರಿಸಿ ಮಾತನಾಡುವ ಜೋಕಾಲಿ..
ಅಧಿಕವೂ ಆಗದೆ ಕಡಿಮೆಯೂ ಆಗದೆ ಇರಲಿ
ಪರಿಸರದೊಡನೆ ಹೊಂದಿಕೊಳ್ಳುವ ಜೋಕಾಲಿ..
ಪರರನು ಕೂಡುತ ಹಂಚಿ ತಿನ್ನುತಲಿರಬೇಕು
ಮನಸಿಗೆ ಸಾಂತ್ವನ ಕೇಳುತಲಿರುವ ಜೋಕಾಲಿ..
ಪ್ರೀತಿಯಲಿದ್ದು ಪ್ರೀತಿಯ ಪಡೆಯುತಲಿರಬೇಕು
ಪ್ರೇಮವ ಹಂಚುತ ಕಳೆಯುವ ಜೋಕಾಲಿ..
@ಪ್ರೇಮ್@
25.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ