2. ನೂರ್ ಅಹಮ್ಮದ್ ಸರ್
ತಿಳಿಗೇಡಿ
ಅರಿವು ಮರೆವು ದೇಹದ ಚೀಲ
ನೆನಪಿನ ಬುದ್ದಿ ಹಿಡಿದಿಡಲು
ಹುಡಿಕಿತು ಮನಸು ಬಾಗಿಲ ಕೀಲ
ಕೈಯಲ್ಲಿ ಕೀಲಿಕೈ ಮರೆತಿರಲು
🍎🍎🍎🍎🍎🍎🍎
ಆದಿಪ್ರಾಸ, ಅಂತ್ಯಪ್ರಾಸ ಮಿಳಿತವಾಗಿ ನೇಯ್ದ ಭಾವಗೀತೆ ಸುಂದರ.
"ಹುಡುಕಿತು" "ಬುದ್ಧಿ" ಆಗಬೇಕಿತ್ತೇನೋ. ನೆನಪಿನ ಬುದ್ಧಿ- ರೂಪಕವಾಗಿ ಮೂಡಿ ಬಂದಿದೆ.
🍎🍎🍎🍎🍎🍎🍎🍎
ವರೆಸುತ ಬೆವರು ನಾಟ್ಯವ ಮಾಡಲು
ಆಕಡೆ ಇಕಡೆ ತಲೆ ಕೆರೆಯುತ
ಢವಢವ ಹೃದಯ ಧಾವಿಸಿ ಬರಲು
ಸಂದಿ ಗೊಂದಿ ಎಲ್ಲವ ಹುಡುಕುತ
🍎🍎🍎🍎🍎🍎🍎
"ಈ ಕಡೆ" "ಸಂಧಿ"-ಆಗಬೇಕಿತ್ತು ಅನಿಸುತ್ತದೆ. ಅನುಕರಣಾವ್ಯಯ, ಜೋಡುನುಡಿ ಪುಂಜಗಳು ಕವನದ ಅಂದವನ್ನು ಹೆಚ್ಚಿಸಿವೆ.
ಕೀಲಿಕೈ ಹುಡುಕುವ ಕಾರ್ಯವ ವರ್ಣಿಸಿದ ಪರಿ ಅಂದವಾಗಿದೆ.
🍎🍎🍎🍎🍎🍎🍎🍎
ಇಲ್ಲೆ ಇಟ್ಟಿತ್ತು ಹೋಯಿತು ಎಲ್ಲಿ
ಅಯ್ಯೊ ಇವನೌನ ಎನ್ನುತ್ತ
ಗೊಣಗುತ ಸಿಡುಕುತ ಮೈಚಲ್ಲಿ
ಸಿಡಿಮಿಡಿ ಸಿಕ್ಕವರಿಗೆ ಬೈಯುತ್ತ
🍎🍎🍎🍎🍎🍎🍎🍎
ವಾವ್! ನೈಜತೆ ಎದ್ದು ಕಾಣುತ್ತಿದೆ. ಬಳಸಿದ ಪದಪುಂಜಗಳು ಇಷ್ಟವಾಯ್ತು. ನೇರನುಡಿ. ಮನುಜ ತಾಳ್ಮೆ ತಪ್ಪುವ ಪರಿ ಅನನ್ಯ!
🍎🍎🍎🍎🍎🍎🍎
ಅವಸರ ಅಡೆತಡೆ ಬಿಟ್ಟು ನೆಮ್ಮದಿಕರಿಸಿ
ತಿಳಿಗೇಡಿ ಸಮಾಧಾನ ಸಹಿಸಲು
ಸಿಕ್ಕಿತು ದಕ್ಕಿತು ಸೊಂಟದಲ್ಲೆ ಸಿಕ್ಕಿಸಿ
ಬುದ್ಧಿಗೇಡಿ ಮಾಡಿತು ಬಯಲು.
🍎🍎🍎🍎🍎🍎🍎🍎
ಕೊನೆಯ ಸಾಲು ಏಕೋ ಸ್ವಲ್ಪ ಬದಲಾಯಿಸಿದ್ದರೆ ಚೆನ್ನಿತ್ತು ಅನಿಸಿತು. ತಿಳಿಗೇಡಿ ಬುದ್ಧಿ ಆಯಿತು ಬಯಲು! ಹೀಗೆನಬಹುದಿತ್ತೇನೋ. ನನ್ನ ಅನಿಸಿಕೆ.
🍎🍎🍎🍎🍎🍎🍎
ಉತ್ತಮ ಕವನ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ