ರಾಯರು
ನಮ್ಮ ರಾಯರಿಗೆ ಶುಕ್ರದೆಸೆ ಬಂತೀಗ!
"ಮಗನ ಬುದ್ಧಿ ಬೆಳೆದಿಲ್ಲ,
ಮದುವೆ ಮಾಡಿಸಿ ಜವಾಬ್ದಾರಿ ಬರಲಿ" ಊರವರ ಸಲಹೆ.
ಮದುವೆ ಮಾಡಲು ಊರವರು
ನೆಂಟರು, ಬಂಧುಗಳು ಹೆಣ್ಣು ಕೊಡಲಾರರು..
ಹೊರ ಊರಿಗೆ ಸಂಚರಿಸಿ ಹೆಣ್ಣು ನೋಡಲಾಯ್ತು!
ಅಮವಾಸ್ಯೆಯಂದು ಹುಟ್ಟಿದ
ಮೂಲಾ ನಕ್ಷತ್ರದ ಹೆಣ್ಣೆಂದು
ತಿರಸ್ಕೃತಳಾದ ಚೆಲುವೆ, ಸಂಪನ್ನೆ!
ಬಹು ಖುಷಿಯಿಂದಲೆ ಒಪ್ಪಿದರೀರ್ವರೂ..
ಹಿರಿಯರೂ ಸಮ್ಮತಿಯಿತ್ತರು ಸಂತಸದಿ!
ಹುಡುಗಿ ಜಾಣೆ, ಸರಕಾರಿ ಕೆಲಸದಾಕೆ
ಓದಿದಾಕೆ, ತಿಳುವಳಿಕೆಯುಳ್ಳವಳು!
ಪರರ ತಿಳಿದವಳು, ಕೋಶ ಓದಿದವಳು!
ಅಡಿಗೆ ಕಲಿತವಳು, ಕಲಿಸುವವಳು!
ಬುದ್ಧಿ ತಿಳಿದವಳು!
ಇನ್ನೇನು ಬೇಕು ಗಂಡಿಗೆ
ತನ್ನ ಬಾಳ ಸಂಗಾತಿಯ ಬಗೆಗೆ!
ಮದುವೆ ಆಯಿತು, ಗಮ್ಮತ್ತಿರಲಿಲ್ಲ!
ಮದುವೆಯ ಬಳಿಕ ಜೋತಿಷ್ಯರು ಹೇಳಿದಂತೆ
ಶುಕ್ರದೆಸೆ ಬಂತು!
ಬಂದ ಹೆಣ್ಣು ಗೃಹಲಕ್ಷ್ಮಿಯಾದಳು!
ಮನೆ ಬೆಳಗಿತು, ಮನ ಬೆಳಗಿತು!
ಮೂಲಾ ನಕ್ಷತ್ರ ಆಕಾಶದಲಿ ನಗುತ್ತಿತ್ತು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ