ನೊಂದ ಮನ
ನೊಂದ ಮನವೆಂದೂ ನೋಯಿಸಲು ಬಯಸದು
ಪ್ರೀತಿಗೆ ನೋವಾದ ಹೃದಯ ದೂರ ಸರಿವುದು.
ಮನದಾಳದ ರಕ್ತಪಾತ ಹೊಸಬರಿಗೆ ತಿಳಿಯದು
ದೇಹದ ಗಾಯಕ್ಕಿಂತ ಮನದ ಗಾಯ ದೊಡ್ಡದು.
ಕೋಲಿನ ಪೆಟ್ಟು ಸಹಿಸಬಹುದು
ಮಾತಿನ ಪೆಟ್ಟು ಸಹಿಸಲಾಗದು
ದ್ರೋಹವ ಮಾಡಿದ ಹೃದಯವನು
ಯಾವ ಜೀವವೂ ಒಪ್ಪದು...
ನಿನ್ನಂತೆ ನಾನೆಂಬ ಗ್ರಹಿಕೆ ಇರಬೇಕಾಗುವುದು
ಹತ್ತಿದ ಏಣಿಯನು ಕೆಳಗೆ ನೂಕಬಾರದು
ಗೆಳೆತನದ ಅರ್ಥವನು ತಿಳಿದು ಬದುಕಬೇಕಾಗುವುದು
ತಾ ಮೇಲೆಂದು ಬೀಗಲು ಸಹಾಯಕೆ ನೆರಳೂ ಬರದು..
ಮಾನವನಿಂದ ಮೋಸ ಹೋದರೆ ದೂರವಿದ್ದು ಸುಮ್ಮನಿರಬಹುದು
ದೇವರೆ ಮೋಸ ಮಾಡಬೇಡಿರೆಂದು ಪ್ರಾರ್ಥನೆಗೈಯಬಹುದು.
ದೇವರ ಪ್ರಾರ್ಥನೆ,ಪೂಜೆಯಿಂದಲಾದರೂ ಒಲಿಸಿಕೊಳ್ಳಬಹುದು.
ಅಲ್ಪ ಮಾನವ ಜೀವ ಕೊಟ್ಟರೂ ತಿರುಗಿ ಬೀಳಬಹುದು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ