ದೇಶಪ್ರೇಮದ ಸೈನಿಕ
ಗಡಿಯ ಕಾಯ್ದು ಕಷ್ಟ ಪಡುತ
ಮಂಜಿನಲ್ಲಿ ಕರಗುತ
ಕುಟುಂಬ ಸುಖವ ಮರೆತು ತಾನು
ದೇಶ ಸೇವೆ ಮಾಡುತ...
ಪ್ರಾಣವನ್ನೆ ಒತ್ತೆಯಿಟ್ಟು
ವೈರಿಪಡೆಯ ದಬ್ಬುತ
ಊಟ ತಿಂಡಿ ತನ್ನೆ ಮರೆತು
ದೇಶಕಾಗಿ ಬದುಕುತ..
ಉಸಿರ ಬಿಗಿಯ ಹಿಡಿದುಕೊಂಡು
ದೇಶವನ್ನೆ ಕಾಯುತ
ಜನತೆಗೆಲ್ಲ ನೆಮ್ಮದಿಯ
ಬದುಕನ್ನು ನೀಡುತ...
ಪ್ರಾಣವನ್ನು ಒತ್ತೆಯಿಟ್ಟು
ವೀರ ಮರಣ ಪಡೆಯುತ
ತನ್ನ ಕೈ ಕಾಲ ನೋವು
ಎಲ್ಲವನ್ನು ತೊರೆಯುತ..
ಊಟ ನಿದ್ರೆ ಸ್ನಾನ ಧ್ಯಾನ
ಎಲ್ಲವನ್ನು ಮರೆಯುತ
ನನ್ನ ದೇಶ ನನ್ನ ಜನರು
ಎಂಬ ಭಾವ ಬೆಳೆಸುತ..
ನಿನಗೆ ನೀನೆ ಸಾಟಿ ಯೋಧ
ನಾನು ಬರೆವೆ ನಮಿಸುತ
ಅರ್ಪಿಸುವೆ ಪ್ರೇಮದೀ ಕವನವ
ಮನದ ಹೃದಯ ಮಿಡಿಯುತ...
@ಪ್ರೇಮ್@
15.02.2019
*ಚಿಂತಕರ ಚಾವಡಿ/ ಹನಿ ಹನಿ ಇಬ್ಬನಿ.*
💦💦💦💦💦💦💦💦💦
*ಇಂದಿನ ಫಲಿತಾಂಶ ಪಟ್ಟಿ:*
*ಇಂದಿನ ಅಡ್ಮಿನ್: *ಮಂಗಳಕಂಬಿ* *ದುರ್ಗೇಕರ್*
*ವಿಷಯ *
*ಪ್ರಕಾರ: ಕವನ*
💦💦💦💦💦💦💦💦💦
*ಪ್ರೇಮ ಅಖಂಡ!! ಅದು ಯಾವುದಕ್ಕೆ ಸೀಮಿತ? ಪ್ರೇಮ ಪದವೇ ಭಾವಪೂರ್ಣ!! ಆದರೂಇಂದುಹನಿ ಹನಿಯಲ್ಲಿ....ಹೆಚ್ಚು ಕವನಗಳು ಭಾವಪೂರ್ಣ ವಾಗಿ ನಮ್ಮ ನೆಚ್ಚಿನ ಯೋಧರನ್ನು ಸ್ಮರಿಸಿದ್ದು ನಿಜಕ್ಕೂ... ಸಂತೋಷ ದ ವಿಷಯ.*
🙏🙏🙏🙏🙏🙏🙏
ಇಂದು *ಪ್ರೇಮ* ಕುರಿತಾಗಿ ಅತ್ಯುತ್ತಮವಾಗಿ ಬರೆದವರು
🏆 *ತಗ್ಗಿಹಳ್ಳಿ ರವಿಕುಮಾರ್ ಅವರ ನಿನ್ನ ತಾಯಾಣೆ*
ಉತ್ತಮವಾಗಿ ಬರೆದ ಕವನಗಳು
🥇 *ಸಾವನ್ ಕೆ ರ ಸೈನಿಕನೆಂಬ ದೇವರು*
🥈 *ಅಮ್ಮ ರಾಜೇಶ್ ರ ಹೆಗಲಾದವಳು*
🥉 *ಪ್ರೇಮ್ ರ ದೇಶ ಪ್ರೇಮದ ಸೈನಿಕ*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ