ಬದುಕ ಗೂಡು
ಇತರರ ನಂಬದಿರು ಮನವೆ.
ನೆರಳೂ ತನ್ನನು ಬದಲಾಯಿಸಿ ಕೊಳುವುದು
ಚಪ್ಪಲಿಯೂ ಆಗಾಗ ಕೈಯನು ಕೊಡುವುದು
ಮನಗಳು ಬದಲಾಗುವುವೂ..
ಹೃದಯದ ಭಾವಗಳು ಬೇರೆಯಾಗುವುವು..
ತಾನೇ ಎತ್ತಿ ತಿನ್ನಿಸಿ ಆಡಿಸಿ
ಬೆಳೆಸಿದ ಮಗುವು ತನಗೆದುರಾಗುವುದೂ
ತನ್ನಯ ದಾಯಾದಿಗಳು ಹಣ, ಜಾಗದ ಪಾಲಿಗೆ
ಶತ್ರುಗಳಾಗಿ ಮುಖ ತಿರುಗಿಸುವರು..
ಗೆಳೆಯರು ಬದಲಾಗದೆ ಇರುವರೇ..
ಕನಸು ನನಸಾಗುವುದೇ ನಮ್ಮ..
ನಮ್ಮ ಏಳಿಗೆಯನು ಸಹಿಸುವರೇ..
ತಾನೇ ಸಾಕಿದ ಹಸುವದು ಒದೆಯದೇ..
ಜನರ ಪರೀಕ್ಷೆಯದು ತುಂಬಾ ಕ್ಷಣಿಕ
ಮೇಲ್ಗಡೆ ಕುಳಿತ ದೇವನ ಗಣಿತ
ಲೆಕ್ಕವು ತಪ್ಪುವುದೇ...ಕಷ್ಟವು ಬರದಿಹುದೇ
ನಮ್ಮ ಗುಣಗಳ ಬದಲಾಯಿಸದೇ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ