ಶುಕ್ರವಾರ, ಮಾರ್ಚ್ 1, 2019

821. ಕೇಳುವವರಾರು

ಕೇಳುವವರಾರು?

ಮಂತ್ರಿಗಳು ಬಂದರು ಆ ಹಳ್ಳಿಯಲಿ
ಅಣೆಕಟ್ಟು ಉದ್ಘಾಟನೆಗೆ ಸಿದ್ಧವಾಗಿರಲು
ತಮ್ಮ ಪಕ್ಷದ ಬಗೆಗೆ ಮಾತುಗಳನಾಡಲು

ಇಷ್ಟವಾಯಿತು ಮಂತ್ರಿಗೆ ಊರು
ಮುಂದಿನ ವಾರವೆ ಬಂದಿತವರ ತೇರು
ಜಾಗವು ಬೇಕಿತ್ತು ಎಕರೆ ನೂರಾರು.
ಜನಕ್ಕೆಲ್ಲ ಹೇಳಿದರು "ಜಾಗವ ನೀ ಮಾರು"..

ಜನರ ಆಕ್ರಂದನ ಕೇಳುವವರಾರು
ಹಣದ ಎದುರಲಿ ಮಾತಾಡುವವರಾರು
ಚಿಲ್ಲರೆ ಸದ್ದನು ನೋಟದು ಮಾಡದು
ಕಾರ್ಖಾನೆ ಕಟ್ಟಲು ಜನರನು ಕಾಯದು..

ಬಂತೋ ಬಂತು ಕಾರ್ಖಾನೆ ಬಂತು!!
ಹಳ್ಳಿಯ ಮರಕೆ ಗರಗಸ ಬಂತು!
ಶುದ್ಧ ಗಾಳಿಗೆ ರಾಸಾಯನಿಕ ಸೇರಿತು,
ಹಳ್ಳಿಯು ಇಂದು ಪಟ್ಟಣವಾಯಿತು...

ಪಕ್ಷಿ, ಪ್ರಾಣಿ ಸಂಖ್ಯೆಯು ತಗ್ಗಿತು
ಹಾವು, ಕೀಟ ಇಲ್ಲವಾಯಿತು
ಪರಿಸರದಲಿ ಅಸಮತೋಲನ ಹೆಚ್ಚಿತು..
ಜನವಮನವೆಲ್ಲ ರೋಗದಿ ತೇಲಿತು..
@ಪ್ರೇಮ್@
01.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ