ಪ್ರಳಯ
ಸುದ್ದಿಯೊಂದು ಸದ್ದುಮಾಡಿ
ಹದ್ದಿನಂತೆ ಗದ್ದಲಿಸುತ
ಮೆದ್ದ ಜನತೆ ಹೆದರಿ ಹೋಗಿ
ಸಂದಿಯಲ್ಲಿ ಇಣುಕಿಣುಕಿ
ಕಂದೀಲಿನ ಬೆಳಕಿನಲ್ಲಿ
ರದ್ದಿಯಲ್ಲೆ ಕುಳಿತು, ಹೊರಗೆ ಬಾರದೆ
ತಿಂಡಿ ತೀರ್ಥವೆಲ್ಲ ಮರೆತು
ಕದ್ದದ್ದೆಲ್ಲ ಅಲ್ಲೆ ಬಿಸುಟು
ಸಿದ್ಧರಾಗಿ ಸಾವ ಕಡೆಗೆ
ವದನದಲ್ಲಿ ಬಿಗುಮಾನವು
ಕದನವೆಲ್ಲ ಮರೆತು ಹೋಗಿ,
ಪೆದ್ದರನ್ನೂ ಕರೆದುಕೊಂಡು
ನಿದ್ದೆ ಗಿದ್ದೆಯೆಲ್ಲ ಬಿಟ್ಟು
ಸದ್ದು ಗದ್ದಲವೆಲ್ಲ ಮರೆತು
ವಿಧಿಯಾಟಕೆ ಬಲಿಯಾಗಲು
ಸದಾ ಮದಗಜಗಳಂತಿದ್ದ
ಪದತ್ಯಾಗವ ಮಾಡಿ ಬಂದು
ಜೀವತ್ಯಾಗವಾಗುವುದೆಂದು
ಕದವ ತೆರೆದು ಮನದಲಿ
ಆನಂದವು ಮರೆತುಹೋಗಿ
ಪ್ರಳಯದ ಭೀತಿಯಲ್ಲಿ
ಯಾರಿಗಾರನೂ ಉಳಿಸಲಾಗಲಿಲ್ಲ
ಬದಿಯಲಿಹನೂ ಒಂದೆ ಎಲ್ಲ
ಜಾತಿ ಮತ ಧರ್ಮವಿಲ್ಲ
ನೀರಿನೆದುರು ಒಂದೆ ಸರ್ವರೆಲ್ಲ!
ಜಲಪ್ರಳಯವು ಬಂತಲ್ಲ
ಸಮಾನ ನೋವು ತಂದಿತಲ್ಲ..
ಮನೆ ಮಾರು ಜೀವ ಹಾನಿಯಾಯ್ತಲ್ಲ..
ಎಲ್ಲರೊಂದೆ ಎಂದು ಸಾರಿತಲ್ಲ...
@ಪ್ರೇಮ್@
22.03.2019
*ಪ್ರಳಯ*
*ಪ್ರೇಮ್ ಮೇಡಂ*
*ಇಂದು ವಿಶ್ವ ಜಲ ದಿನ ಆಗಿದ್ದರಿಂದ ಎಲ್ಲರಿಗೂ ಶುಭಾಶಯಗಳು ಹನಿ ಹನಿ ನೀರನ್ನು ಉಳಿಸಿ ನಿಮ್ಮ ಭವಿಷ್ಯವನ್ನ Honey ಆಗಿಸಿಕೊಳ್ಳಿ*
ಜಲಪ್ರಳಯದ ಅನಾವರಣ ಕಣ್ಣಿಗೆ ಕಟ್ಟುವಂತೆ ಕಟ್ಟಿದ್ದಿರಾ ಎಷ್ಟೇ ದೊಡ್ಡವನಿರಲಿ ಸಣ್ಣವನಿರಲಿ ಬಡವನಿರಲಿ ಸಾಹುಕಾರನಿರಲಿ ಯಾವುದೇ ಜಾತಿಯಿರಲಿ ಧರ್ಮವಿರಲಿ ಎಲ್ಲರೂ ನೀರಿನ ಮುಂದೆ ಒಂದೇ ಜಲ ಪ್ರಳಯ ಬಂದು ನಾವೆಲ್ಲಾ ಒಂದೇ ಎನ್ನುವಂತೆ ಆಗಿದೆ ತುಂಬಾ ಚೆನ್ನಾಗಿದೆ ಮೇಡಂ
ಧನ್ಯವಾದಗಳು
: ಪ್ರೇಮ್ ರವರ
ಪ್ರಳಯ ಕವನ
ಎಲ್ಲವೂ ತನ್ನದೇ ಎಂದು ˌತಾನೇ ಎಲ್ಲವೂ ಎಂದು ಸೊಕ್ಕಿನಲ್ಲಿ ಸುಖದ
ಅಮಲಿನಲ್ಲಿರುವ ಮನುಷ್ಯನ
ಕೀಳು ಬುದ್ಧಿಗೆ ಜಲ ಪ್ರಳಯ ಬಂದು
ಜಾತಿ ಮತವೆನ್ನದೆ ಎಲ್ಲರನ್ನೂ
ಸೆಳೆದೊಯ್ಯಿತು.ಪ್ರಕೃತಿಯನ್ನು
ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು
ಉಳಿಸಿ ಬೆಳೆಸುತ್ತದೆ ಎನ್ನುವ
ಉತ್ತಮ ಸಂದೇಶ ಸಾರುವ ಕವನ
*ಗೌರಿ ಪಾಟೀಲ್*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ