1. ಶಿವನೇ
ನೀ ಸೂತ್ರದಾರ ನಾ ಪಾತ್ರಧಾರಿ
ಕುಣಿಸುವೆ ನಮ್ಮ ನಿನ್ನಿಚ್ಛೆಯಲಿ
ನಾಲ್ಕು ದಿನದ ಪಾತ್ರದಲಿ
ಕರುಣಾಮಯಿಯಾಗಿ ಮಾಡೊ ಹರನೇ..
ಧಾರಾವಾಹಿಯ ಅತ್ತೆ-ಸೊಸೆ ಪಾತ್ರ ಬೇಡವೋ...
2. ಅಂತರಾಳ
ನಿನ್ನ ಭಕುತರು ಹಲವಿಹರು ಗುರುವೇ
ನನಗಾವ ಪಾತ್ರ ನೀಡುವೆ ನೀನು
ಭಕುತಿಯರಿಯೆ, ಪ್ರೀತಿಯೊಂದೇ ಸಾಧನ
ಗುರುವೆ ಭಕ್ತಿಯಲಿ ಪ್ರೀತಿಸುವೆ ನಿನ್ನ!
ಸಲಹುವೆಯೆಂಬ ನಂಬಿಕೆಯಲಿ ನನ್ನ!!!
@ಪ್ರೇಮ್@
15.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ