ಗಝಲ್-78
ಮುಟ್ಟಲಾಗದ, ಏರಲಾಗದ ಅದ್ಭುತವಾದ ಅಂಬರ,
ದೇವತೆಗಳ ಸಂಚಾರದ ಮಾರ್ಗವಾದ ಅಂಬರ!!
ತಾಯಿಯ ಪ್ರೀತಿಯಂತೆ ಅಳೆಯಲಾರದಂಥ ಗಗನವು!
ಅಕ್ಕಿಯಂತೆ ಸವೆದಷ್ಟು ರುಚಿಯಾದ ಅಂಬರ!!
ಪಾತಾಳಕ್ಕಿಳಿದ ಬೇರಿನಂತೆ ಜಟಿಲವೂ, ಆಳವೂ ಆಕಾಶ,
ಪಾಮರನಿಗೂ ಪೂರ್ಣ ತಿಳಿದುಕೊಳ್ಳಲಾರದ ಅಂಬರ!
ಕಲಿತಷ್ಟು ಮುಗಿಯದ ಗ್ರಹ ತಾರಾ ಕೂಟವಹುದಲ್ಲಿ!
ಚಂದ್ರಮ, ಉಪಗ್ರಹ ಉಲ್ಕೆಗಳ ಬಿಟ್ಟಿರದ ಅಂಬರ!!
ಧೂಮಕೇತು, ನಕ್ಷತ್ರ, ಕಿರುತಟ್ಟೆಗಳ ಹೊತ್ತಿಹುದು ನೋಡಾ!
ದೂರದಲ್ಲಿದ್ದು, ಹತ್ತಿರ ಕಾಣುತಲಿರುವ ಬಿರುಸಾದ ಅಂಬರ!!!
ಮೋಡಗಳೆಡೆಯಲಿ ಅವಿತು ಕುಳಿತಿಹುದು ಕಾಣದೆ!
ಸಾಗರದ ಮೆರೆತಕೂ ಕಾರಣವಾಗಿರುವ ನೀಲಿಬಣ್ಣದ ಅಂಬರ!
ಪ್ರೀತಿಯ ಚಂದಮಾಮನ ಮನೆಯಿಹುದು ಅಲ್ಲಿ!
ಪ್ರೇಮಕಾವ್ಯದ ಪುಸ್ತಕಕೆ ಸಾಟಿಯಾದ ಅಂಬರ!!
@ಪ್ರೇಮ್@
29.03.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ