ಮೇಲು ಕೀಳಿಲ್ಲ ಇಲ್ಲಿ
ನಾನಾರೋ ನೀನಾರೋ ತಿಳಿಯದಿಲ್ಲಿ
ಬಂದಿಹೆವು ಬದುಕಲು ಜೊತೆಯಲ್ಲಿ..
ಇದು ಬದುಕಿನಾಟ ತಮ್ಮ ಕೇಳಿಲ್ಲಿ..
ಅವಸಾನ ಬರಲಿದೆ ನೋಡಲ್ಲಿ...
ನೀನ್ಹೆಚ್ಚು ನಾನ್ಹೆಚ್ಚು ಎನ್ನುತಲಿ
ಬಾಳ ಬಂಡಿಯ ಸವೆಸುತಲಿ
ಕೊಲ್ಲುವವ ಕಡಿಯುವವ ಸೇರಿ
ಉಳಿಸುವವ ಉಳುವವನೂ ಪರಾರಿ...
ಹೋಗಲಿದೆ ಬಂದಲ್ಲಿ ಮತ್ತೊಮ್ಮೆ ಆಟದಿ
ನಡೆಯಲಿದೆ ಸವಿದ ದಾರಿಯ ಪಾದದಿ..
ನಡೆ ಮುಂದೆ ಕುಗ್ಗದೆಯೇ ಕ್ಷಣದಲಿ
ಕೈಲಾದ ದಾನವನು ಬೇಡುವಗೆ ಕೊಡುತಲಿ...
ಸಾವಿಗಾರು ಮೇಲು ಕೀಳಿಲ್ಲ ಇಲ್ಲಿ
ಬಂದೆ ಬರುವುದು ಸರ್ವರ ಬಾಳಲ್ಲಿ
ಗುದ್ದಾಡಿ ಹೊಡೆದಾಡಿ ನಿಂದರೂ ಕೂಡಾ
ಒಂದು ದಿನ ಚಟ್ಟದಲಿ ಸಾಗುವೆ ನೋಡಾ....
@ಪ್ರೇಮ್@
18.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ