ಗಝಲ್-75
ಕನಸಿನ ತೋಟದಿಂದ ಹೊರಗೆ ಬಾರೋ ಜಾನು..
ಮನಸಿನ ಮೂಟೆಯೊಳ ಸೇರೋ ಜಾನು..
ನೂರ್ಕಾಲ ಒಟ್ಟಿಗೆ ಬಾಳಿನಾಟವ ಆಡಬಾರೋ..
ಸರ್ದಾರ ನೀನೆನ್ನ ಬದುಕಿಗೆ, ಬಳಿ ಸಾರೋ ಜಾನು..
ಎದೆಕದವ ತೆರೆದಿರುವೆ ಒಳಸೇರಿ ಕುಳಿತುಕೋ...
ಸದೆಬಡಿಯದಂತಹ ಪ್ರೀತಿಯೆನಗೆ ತೋರೋ ಜಾನು..
ದೇವಾಲಯದ ಘಂಟಾ ನಾದದಂತೆ ಹೃದಯ ಬಡಿತ ಸಾಗಿದೆ..
ನಡೆವ ಹಾದಿಗೆ ನಗೆ ಹೂವ ಹಾಸಿ ಕರೆತಾರೋ ಜಾನು..
ವನಸಿರಿಯ ಮಡಿಲಲಿ ಬೀಡು ಬಿಟ್ಟು ಕಾಯುತಿಹೆ ನಿನಗಾಗಿ..
ತರುಲತೆಗಳಂದದದಿ ಹಸಿರಾಗಿ ಮಳೆ ಸುರಿಯೆ ಬಳಿಸಾರೋ ಜಾನು!!
ಮನದಿ ಮತ್ಸರ ಬೇಡ, ನಿನ್ನೊಳಗೆ ನಾ, ನನ್ನೊಳಗೆ ನೀ..
ಕಣಕಣದ ಜೀವದಿ ಪಣತೊಟ್ಟು, ಮುನಿಸಾಗದೆ ಸೇರೋ ಜಾನು..
ತಂತ್ರಜ್ಞಾನಜಂತೆ ವೇಗವಾಗಿ ನನ್ನೊಳಗೆ ಪಸರಿಸೋ ಜೀವವೆ,
ಸಂತ್ರಸ್ಥಳಾಗದಂತೆ ಪ್ರೀತಿಯಲಿ ಪ್ರೇಮನೊಡನಿರಬಾರೋ ಜಾನು...
@ಪ್ರೇಮ್@
26.03.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ