ಗುರುವಾರ, ಮಾರ್ಚ್ 7, 2019

836. ಹೆಣ್ಣೆಂಬ ಮಾಯೆ

ಹೆಣ್ಣೆಂಬ ಮಾಯೆ

ಜಗದೊಳವತರಿಸಿಹಳು ಭಾಮಿನಿ
ತಾಯಾಗಿ ಅಕ್ಕ -ತಂಗಿಯಾಗಿ
ಅಜ್ಜಿಯಾಗಿ ಅತ್ತೆ-ಸೊಸೆಯಾಗಿ
ಪ್ರೀತಿ ಹಂಚುವ ಸಲುವಾಗಿ..

ತಾಳ್ಮೆಯ ಸಾಕಾರ ಮೂರ್ತಿಯಾಗಿ
ಪರಿಮಳದ ಬಣ್ಣದ ಪುಷ್ಪವಾಗಿ
ಮಮತಾಮಯಿ, ಸಹೃದಯಿ
ಕುಟುಂಬ ಬೆಳಗಿಸೋ ದೀಪವಾಗಿ..

ವಸಂತ ಕಳೆದರೂ ಕಳೆಯದು
ಮಾತೆಯೆಂಬ ಮಾಯೆಯ ಅವತಾರ
ತನ್ನಿರವನು ಮರೆತು ಪರರಿಗಾಗಿಹ
ನೋವ ತನ್ನೆಡೆಗಿಟ್ಟು ನಗುವ ಹಂಚುವವಳು..

ತನ್ನ ಸೆರಗನೆ ಹರಿದು ಜೀವವುಳಿಸುವ
ಸತಿಯಾಗಿ ಪತಿಯ ಕಾಯುವ
ಸಂಸಾರದ ರಥ ಹೊರುವ
ಯಶಸ್ವಿ ಪುರುಷನ ಬೆನ್ನೆಲುಬಾಗಿರುವ...

ಕೆಲವೊಮ್ಮೆ ಮಹಾಕಾಳಿಯ ರೂಪ ತಾಳಿ
ಮನೆಮನ ಒಡೆದು ಸಂಸಾರ ಕೆಡಿಸುವ
ಒಡೆವ ಒಡೆಸುವ ನಡೆಸಿ ಬೀಳಿಸುವ
ನಾಲಗೆಯಲೆ ಸುಡುವ ಕಾರ್ಯವು
ಆಗದೆ ಇರಲಿ, ವಿಶ್ವಾಸಿಯಾಗಿರಲಿ
ಸದ್ಗುಣಿಯಾಗಲಿ ಮಹಿಳೆ...
@ಪ್ರೇಮ್@
08.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ