ಗಝಲ್-79
ಕಪ್ಪೆಯ ವಟವಟ, ಮಳೆಯು ತಟಪಟ
ಸಾವಿನ ಸುದ್ದಿಯು ಇಲ್ಲದೆಯು ಪಟಪಟ..
ಕಿವಿಯಿಂದ ಕಿವಿಗೆ ಮಾಹಿತಿ ಹರಡಿತು.
ಜನರ ಬಾಯಲಿ ಎಲ್ಲೆಡೆಯು ಅಕಟಕಟ!!
ಒಂದಲ್ಲ ಒಂದಿನ ಹೋಗಲೆ ಬೇಕು.
ಶಿವನ ಪಾದದ ಬಳಿಯು ಶಕಟ!!
ಮಾನವ,ಪ್ರಾಣಿ,ಪಕ್ಷಿ, ಜಂತುವನೂ ಬಿಡದು!
ಒಂದು ಕೊನೆದಿನದ ಮಾಯೆಯು ಅಕಟ!
ಬದುಕುತ ಸಾಧಿಸು ಅಲ್ಪ ಸ್ವಲ್ಪವೇ,
ಹೋಗಲು ನೀ ಶುಭಾಶೀರ್ವಾದವ ಪಡೆಯು ಮರ್ಕಟ!
ಜಾರುತ ಬಾಳಲಿ ಕ್ಷಣಗಳ ಬದಲಿಸುತಲಿರು!
ಉಸಿರೊಂದು ದಿನ ನಿನ್ನ ಬಿಡಲಿದೆ ಮಾಡದೆಯು ಪ್ರಕಟ!!
ದಿನಗಳ ಕ್ಷಣಗಳ ಖುಷಿಯಲಿ ಕಳೆಯಿರಿ!
ಬರುತಿದೆ ಧುಮುಕಲು ಗಂಟೆಯು ನಿಕಟ!!!
@ಪ್ರೇಮ್@
30.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ