ಭಾರತಿಯ ಮನೆಯಲಿ
ತಾಯಿ ಭಾರತಿಯ ಮನೆಯಲೆಲ್ಲ ರಾತ್ರಿ ಚುಕ್ಕೆ ಕಲರವ..
ಹಗಲಿನಲ್ಲು ಹಸಿಹಸಿರ ಮರದೆಲೆಗಳ ನಾಟ್ಯ ವೈಭವ!!
ರಂಗಿನ ತೋಟದಲಿ ಮಿಂದೆದ್ದ ದುಂಬಿಗಳ ಹಾರಾಟ
ನಾ ಮುಂದು ತಾಮುಂದೆಂದು ಬೆಳ್ಮುಗಿಲ ನೂಕಾಟ..
ನಾ ಮುಂದು ತಾ ಮುಂದೆಂದು ಎತ್ತರೆತ್ತರೆಕೆ ಬೆಳೆವ ಮರಗಳ ನೋಟ
ಸಾಗರದ ತೀರದಲಿ ಆನೆ ಗಾತ್ರದ ಅಲೆಗಳ ಸಿಹಿಯೂಟ...
ಬಣ್ಣಬಣ್ಣವ ಹೊರಚೆಲ್ಲಿ ನರ್ತಿಸುವ ಹೂಗಳ ಕೂಟ
ಕೈಬೀಸಿ ಕರೆದು ಕೈಮುಗಿದು ಸ್ವಾಗತಿಸುವ ಗದ್ದೆಗಳ ಮೈಮಾಟ...
ಎಲೆ ತುದಿಗಳ ತೋಯಿಸಿ ಕುಣಿಯುತಿಹ ಹಿಮಬಿಂದುಗಳ ಸಾಲು..
ಅದರೊಳಗೆ ಹೊಕ್ಕು ಕಾಮನ ಬಿಲ್ಲ ಪ್ರತಿನಿಧಿಸುತಲಿಹ ಸೂರ್ಯ ಕಿರಣದ ಕಾಲು..
ಭಾರತಿಯ ಅಂದಕ್ಕದು ಭಾರತವೇ ಸಾಟಿ
ಮೇಲಿನ ಹಿಮಾಲಯದ ಹಿಮಪದರ ಕಿರೀಟಕೆ
ಕೆಳಗಿನ ಹಿಂದೂ ಮಹಾಸಾಗರ ಕಾಲ್ತೊಳೆಯಲಿಕೆ..
@ಪ್ರೇಮ್@
02.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ