ಗಝಲ್-68
ವರಸೆ ತಿಳಿದರೂ ತಲೆಬಾಗಿಯೇ ಸೋಲಬೇಕು ಮನವೇ,
ತಪ್ಪೇ ಇರದಿದ್ದರೂ ನೀ ಜಗದಲಿಯೇ ಸೋಲಬೇಕು ಮನವೇ...
ಮಂಜಿನ ಮುಸುಕು ತುಂಬಿದೆ ಜಗದೊಳಗೆ ಎಲ್ಲೆಲ್ಲೂ...
ಪಸರಿಸುತ ಸತ್ಯವ ಒಳಗೊಳಗೆಯೇ ಸೋಲಬೇಕು ಮನವೇ...
ತಪ್ಪಿತಸ್ಥರು ಇತರರು, ತನ್ನ ತಪ್ಪಿಲ್ಲವೆಂಬ ಅರಿವಿಹುದು.
ಬದುಕಿನ ಏಳಿಗೆಯ ಸಾಧಿಸಲಿಕ್ಕಾಗಿಯೇ ಸೋಲಬೇಕು ಮನವೇ..
ನಾನು ನನ್ನದೆಂಬ ಅಂಧಕಾರ ಕೂಪದಲಿ ಮೆರೆಯುತಿಹೆವು..
ಪ್ಪಪಂಚವ ಕಣ್ಣು ಬಿಟ್ಟು ನೋಡುವುದಕ್ಕಾಗಿಯೇ ಸೋಲಬೇಕು ಮನವೇ...
ಮಮತೆಯ ಮಡಿಲು ತುಂಬಿಹಳು ಸೌಮ್ಯ ವನಸಿರಿ.
ನಮ್ಮೊಳು ನಮ್ಮ ಗುಣವ ವೃದ್ಧಿಪಡಿಸಲಿಕ್ಕಾಗಿಯೇ ಸೋಲಬೇಕು ಮನವೇ...
ಬಡವ ಬಲ್ಲಿದನಾಗಿ ಭೂಮಿಗಿಳಿಸಿದವ ದೇವರು.
ಸಾಧನೆಗೆ ಪರಿಮಿತಿಯಿಲ್ಲದನು ತೋರಿಸಲಿಕ್ಕಾಗಿಯೇ ಸೋಲಬೇಕು ಮನವೇ..
ಪ್ರೀತಿಯ ಹಂಗಿನಲಿ ಬದುಕುವವರು ನಾವೆಲ್ಲಾ..
ಪ್ರೇಮವ ಬಿತ್ತರಿಸಿ , ಅರ್ಪಿಸಲಿಕ್ಕಾಗಿಯೇ ಸೋಲಬೇಕು ಮನವೇ..
@ಪ್ರೇಮ್@
18.03.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ