ಬುಧವಾರ, ಮಾರ್ಚ್ 27, 2019

890.ಗಝಲ್ . 76

ಗಝಲ್-76

ಹಚ್ಚುವೆ ಬಣ್ಣವ ನಗುತಲಿ ನಾ ಕಲಾವಿದ!
ಗೀಚುವೆ ಕಾಗದ ಪೆನ್ನಿನಲಿ ನಾ ಕಲಾವಿದ!!

ಗೀಚಿದ ಪದಗಳ ಭಾವದಿ ಉಲಿಯುವೆ,
ಹೊರಗೆ ಬದುಕುವೆ ಬೇರೆಯೆ ಬಣ್ಣದಲಿ,ನಾ ಕಲಾವಿದ!

ಕುಂಚದ ಅಂಚದು ಮಂಚದ ತುದಿಗೆ ತಾಕಿ ಚಿತ್ರವಾಯಿತು..
ಪಾತ್ರದಲಿ ಲೀನವಾಗಿ ಮೈಮರೆತು ಅಭಿನಯಿಸುತಲಿ ನಾ ಕಲಾವಿದ!

ರಂಗ ಕಲೆಗೆ ಕೊಡುವೆನು ಬಹಳವೇ ಬೆಲೆಯ!
ರಂಗದ ಮೇಲೆ ಪಾತ್ರದ ಹೃದಯದಲಿ, ನಾ ಕಲಾವಿದ!!

ದೇವಾಲಯ,ಮಂದಿರ , ಮಠ ಎಲ್ಲಾದರೇನಂತೆ!
ಪರಕಾಯ ಪ್ರವೇಶ ಮಾಡುತ ಆಡುತಲಿ ನಾ ಕಲಾವಿದ..

ಕೀರ್ತಿ,ನೀತಿ, ಭೀತಿ,ಭಕ್ತಿ,ಶಕ್ತಿಯ ಪ್ರೀತಿಯಲಿ ನಡೆಯುತಲಿ..
ಸಾತ್ವಿಕ ಅಭಿನಯದಿ ಮನಗೆದ್ದು, ಹೇಳುವೆ ವಿನಯದಲಿ ನಾ ಕಲಾವಿದ!

ಏರುತ ಇಳಿಯುತ ಜೀವನ ಸಾಗಿಸುತಿರುವವ..
ಪ್ರೇಮದಿ ರಂಗದಿ ಕುಣಿದು ಕುಪ್ಪಳಿಸುತಲಿ ನಾ ಕಲಾವಿದ!
@ಪ್ರೇಮ್@
27.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ