ಸೀತೆಯ ಸ್ವಗತ
ರಾಮ ನಿನಗೆ ತೋರಿದ ಪ್ರೀತಿ ಅನಂತ!
ನೀ ನನ್ನ ಬಾಳಿಗೆ ಬಂದ ಮನ್ಮಥ!
ನೀನಾದೆ ಮದುವೆಯಾಗಿ ನನ್ನ ಕಾಂತ,
ಆದರೂ ಸಿಗದಾಯಿತು ನಮಗೆ ಏಕಾಂತ!
ಲಕ್ಮ್ಷಣ ನಮ್ಮ ಬಾಳಿಗೆ ಸಹಾಯಕನಾಗಿ ನಿಂತ,
ನೀ ಕಳುಹಿಸಿದೆ ಉಂಗುರವ ಗುರುತಿಗೆ ಅಂತ!
ಹನುಮಂತನು ನಿನ್ನಯ ಹೃದಯದಲ್ಲೆ ಕುಂತ!
ನಮ್ಮಿಬ್ಬರ ಜೀವನವ ಒಂದು ಮಾಡಲಂತ!!
ಊರ್ಮಿಳೆಯು ಯೋಚಿಸಿದಳು ತಾನೇ ಸ್ವಗತ!
ಪರೋಪಕಾರ ಸರ್ವರ ಬದುಕಿಗೆ ಹಿತ!!
ಒಂಟಿಯಾಗುಳಿದಳು ಅರಮನೆಯಲಿ ಗಂಡನ ನಮ್ಮೊಂದಿಗೆ ಕಳುಹಿಸುತ!!
ತೊರೆಯುತ ತನ್ನ ಬಾಳಿನ ಸುಖಾಂತ!!
ಮಂಡೋದರಿಯೋ ಕೇಳಿದಳು ರಾವಣನಿಗೆ 'ಬುದ್ಧಿ ಬಂತಾ?
ತಾನು ಸಾಲದೆ ನಿನಗೆ ಹೆಂಡತಿ ಅಂತ'
ರಾಕ್ಷಸ ಮಾರುಹೋದ ನನ್ನ ಚೆಲುವಿಗಂತ!
ಕೊನೆಗೆ ತನ್ನನ್ನೆ ತಾನು ಕಳಕೊಂಡನಂತೆ...
ಭರತ ನಮ್ಮ ಕಾಡಿಗಟ್ಟಿದ ಸಹೋದರನಂತೆ..
ರಾಜ್ಯವಾಳುವ ಮನಸ್ಸು ಅವನದಂತೆ!!
ಅವನಮ್ಮ ಕೈಕೇಯಿಯಆಸೆ ಫಲಿಸಿತಂತೆ!!
ಕೆಲಸದಾಕೆ ದಾಸಿ ಮಂಥರೆಯ ಕುಮ್ಮಕ್ಕು ನಡೆಯಿತಂತೆ!!
@ಪ್ರೇಮ್@
25.03.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ