ಸೋಮವಾರ, ಏಪ್ರಿಲ್ 27, 2020

1411. ಗಝಲ್

ಗಝಲ್

ವಯಸು ದೇಹಕೆ ಮುದವು ಮನಕೆ ಸಾಗೋಣ ಮುಂದೆ
ನಲಿವ ನೆನೆದು ನೋವ ಮರೆತು ಸಾಗೋಣ ಮುಂದೆ...

ನನಗೆ ನೀನು ನಿನಗೆ ನಾನು ಭವದ ಜಗದಲಿ
ಭಯವ ಮರೆತು ಪ್ರೀತಿ ಬೆರೆತು ಸಾಗೋಣ ಮುಂದೆ..

ಇಂದು ಇಹುದು ನಾಳೆ ಏನೋ ಯಾರು ಬಲ್ಲರು?
ಮುದದ ಬಾಳು ಬಾಡದಂತೆ ನಿತ್ಯ ಸಾಗೋಣ ಮುಂದೆ!

ಬಡವ ಬಲ್ಲಿದ ರೋಗಿ ಭೋಗಿ ಸರ್ವರಿರುವರು ಇಲ್ಲಿ
ಬಾಳ ಬಂಡಿ ಸವೆಸೆ ಪ್ರಯಾಣ ಸಾಗೋಣ ಮುಂದೆ

ಜಾತಿ ಮತದ ಕಟ್ಟೆಯೊಡೆದು ಕ್ಷಣವ ನೋಡಬೇಕು
ಶಾಂತಿ ತುಂಬಿ ಭ್ರಾಂತಿ ಮರೆತು ಸಾಗೋಣ ಮುಂದೆ.

ಅಳುವು ನಗುವು ಬೆರೆತು ಮೆರೆವ ಕ್ಷಣಿಕ ಆಟವಿದು
ಸಮಾಜವೆಂಬ ಬಂಧದಲಿ ನಲಿದು ಅಳುತ ಸಾಗೋಣ ಮುಂದೆ

ಪ್ರೀತಿ ಪ್ರೇಮ ಇರಲಿ ಹೀಗೆ ದ್ವೇಷ ಏತಕೆ
ಮಾತಿನಲಿ ಜಗಳ ಕದನ ತೊರೆದು ಸಾಗೋಣ ಮುಂದೆ..
@ಪ್ರೇಮ್@
28.04.2020

1410. ಹೀಗೊಂದು ಕತೆ-ಕಥನ ಕವನ

ಕಥನ ಕವನ

ಹೀಗೊಂದು ಕತೆ

ಆಕೆ ಸುರಸುಂದರಾಂಗಿ, ಜಿಂಕೆ ಕಣ್ಣು.
ದಾಳಿಂಬೆ ಹಲ್ಲುಗಳು, ಹವಳದ ತುಟಿ
ಜೇನಿನಲ್ಲಿ ಅದ್ದಿ ತೆಗೆದ ಸವಿಯಾದ ನಗು
ಗೋಧಿ ಬಣ್ಣ ನೀಳವಾದ ಮೈಕಟ್ಟು..

ಆತ ಸದಾನಂದ, ಹೆಸರಿನಂತೆ ನಗುಮೊಗ
ಬಿಳುಪಿನ ಸುಣ್ಣದಂಥ ನಿಷ್ಕಲ್ಮಶ ಹಲ್ಲು!
ಅಂತೆಯೇ ಆಗಲವಾದ, ಕೂದಲುಳ್ಳ ಎದೆ!
ಮುಗ್ಧ ಮುಖ, ದಪ್ಪಕ್ಕೆ ತಕ್ಕಎತ್ತರ, ಸುಂದರ!

ಸುಂದರಿ ತುದಿಗಣ್ಣಲ್ಲೇ ಸದನ ನೋಡಿ ಕಿರುನಗೆ ಬೀರಿದಳು!
ಸದನು ಆ ಕಿರುನಗೆಯ ನೋಡಿ ತನ್ನ ತಾನು ಮರೆತನು!
ಅವಳ ಕುಡಿನೋಟಕಾಗಿ ಕಾದು ಕುಳಿತನು!
ಸಂತೆಗೆ ಹೋದಾಗ ಅವಳ ಕಂಡು ದೂರದಿಂದ ಚೀಟಿಯೆಸೆದನು!

ಗಿಣಿಗೆ ಚೀಟಿ ಸಿಕ್ಕಿತು,ಅದರಲಿತ್ತವನ ಜಂಗಮಗಂಟೆಯ  ಸಂಖ್ಯೆ!
ಮತ್ತೆ ಕೇಳಬೇಕೆ ಪ್ರಾರಂಭವಾಯಿತು!
ವಾಟ್ಸಪ್, ಮುಖಪುಟ, ಟೆಲಿಗ್ರಾಮ್, ಹೈಕ್, ಟ್ವಿಟರ್ ಚಾಟ್!

ಒಂದು ತಿಂಗಳ ಕಾಲ ಹರಟೆ, ಮಾತು, ನಗು, ಅಳು, ಪಟ, ವೀಡಿಯೋ ಹೋಗಿ ಬಂದವು!
ಸಣ್ಣ ವಿಷಯಕ್ಕಾಗಿ ಮನಸ್ತಾಪ, ಗಲಾಟೆ, ಜಗಳ, ತಟಪಟ!
ಸಾಮಾಜಿಕ ಜಾಲ ತಾಣದಲೆಲ್ಲ ಬ್ಲಾಕ್ ಮಾಡಲಾಯಿತು!

ತದನಂತರ ಒಂಟಿತನ, ಬೇಸರ, ತರತರ!
ಹಲದಿನಗಳ ಬಳಿಕ ಮತ್ತೆ ಮೊದಲಿನಂತೆ ಬದುಕು ಚಿಗುರೊಡೆಯಿತು!
ಸದನಿಗೊಂದು, ಸುಂದರಿಗೊಂದು ಹೊಸ ಪ್ರೊಫೈಲೊಂದಿಗೆ!

ಜನರು ಅವರಿಬ್ಬರೇ! ತಾಣವೂ ಅದೇ! 
ಮೊಬೈಲುಗಳೂ ಅವುಗಳೇ!
ಅಂಕೆ-ಸಂಖ್ಯೆ ಹೆಸರು ಬದಲಾವಣೆಗಳೊಂದಿಗೆ!!
@ಪ್ರೇಮ್@
27.04.2020

ಸೋಮವಾರ, ಏಪ್ರಿಲ್ 20, 2020

1409. ವಿಮರ್ಶೆ-ಗೋವಿಂದಪ್ಪ ಬಡವನಹಳ್ಳಿಯವರ ಹನಿಗವನ

ಪಿ ಗೋವಿಂದಪ್ಪ* 
*ಬಡವನಹಳ್ಳಿ* ಅವರ ಹನಿ.....  

🍇ಸಾಮಾನ್ಯ ಸಮಸ್ಯೆಯ ಸುತ್ತ ಹೆಣೆದ ಹನಿಗವನವಿದು.ಕವಿಯ ಆಶಯ ಉತ್ತಮ.🍇

*ದಾಯಾದಿ ಮತ್ಸರ* 
ಒಡಲೊಂದು, ಕವಲೊಡೆದ ಕುಡಿಯರೆಡು 
ಅಳುವಾಗ ಸಂತೈಸಿ ಕಣ್ಣೊರೆಸುವ ಕೈಯೆರಡು

🍇ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ತಾಯಿ, ಮನೆಯನ್ನು ಹಂಚೆಕೊಂಡವರಿವರು. ಕುಡಿಯೆರಡು ಎಂದಾಗಬೇಕಿತ್ತು ನೋಡಿ. ಯರಡು ಆಗಿದೆ.🍇

ಮಡಿಲ ಮಮತೆ ,ಹೆಗಲ ಹರುಷ ಹಂಚಿ ಮೆರೆದವು
ಒಂದೇ ಮನ ಒಂದೇ ಜೀವದಂತೆ ಬಾಳಿದವು.

🍇ಭೂತಕಾಲದ, ಬಾಲ್ಯದ ಬದುಕನ್ನಿಲ್ಲಿ ಮೆಲುಕು ಹಾಕಲಾಗಿದೆ. ಕವಿಯ ಮನದಾಳ ಕವನ ರೂಪದಲಿ ಹೊರಹೊಮ್ಮಿದೆ.🍇

ಬಾಲ್ಯವೆಲ್ಲ ಬೇವುಬೆಲ್ಲ ಬೆರೆಸಿ ತಿಂದ ಯುಗಾದಿ
ಬಲಿತ ಮನಸು ಆಸ್ತಿಗಾಗಿ  ಹೆಸರು ಹೊತ್ತು ದಾಯಾದಿ

🍇ಬಾಲ್ಯಕ್ಕೂ, ಯೌವನಕ್ಕೂ ಹೊಂದಾಣಿಕೆ ಮಾಡಲಾಗಿದೆ. ಬುದ್ಧಿ ಇರದಾಗಿನ ಒಳ್ಳೆತನ,ಬುದ್ಧಿ ಬಂದಾಗಿನ ಕೆಟ್ಟಗುಣ ಕವಿತೆಯ ಸಾಲಿನಲ್ಲಿ ಒಡಮೂಡಿದೆ.🍇

🍇ಹನಿಯಲ್ಲೆ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಯೊಂದರ ನೈಜ ಚಿತ್ರಣವನ್ನು ಕಟ್ಟಿಕೊಟ್ಟ ತಮ್ಮ ಹನಿಗವನ ಅರ್ಥಗರ್ಭಿತವಾಗಿದೆ ಸರ್.👌👌🍇
@ಪ್ರೇಮ್@
20.04.2020

1408. ವಿಮರ್ಶೆ-ಅನುರಾಧಾ ಶಿವಪ್ರಕಾಶ್ ಅವರ ಕವನ

ಅನುರಾಧಾ ಶಿವಪ್ರಕಾಶ್ ಅವರ ಭಾವದ ಹೂರಣ.

❤ಶೀರ್ಷಿಕೆ ಹೆಸರೇ ಅಂದ. ರೂಪಕದಿ ಮೇಳೈಸಿದೆ. ಹೂರಣವೆಂದರೇನೇ ಸಿಹಿ. ಕವನವೂ ಸವಿಯಾಗಿದೆ❤

ಮದರಂಗಿ ಚಿತ್ತಾರವ
ಬಿಡಿಸುವಾ ಬಾಲೆಯರೇ
ಭಾವ ಹೂರಣವನೆಲ್ಲಾ
ತುಂಬಿ ಬಿಡುವಿರಾ ನೀವು

❤ ಇದೊಂದು ಸನ್ನಿವೇಶವನ್ನು ಕಣ್ಣಿಗೆ ಕಟ್ಟಿ ಕೊಡುತ್ತದೆ. ಮದುವೆಯ ಹಿಂದಿನ ರಾತ್ರಿ ಹಲವಾರು ಬಾಲೆಯರು ಸೇರಿ ಮರುದಿನದ ಮದುಮಗಳ ಕೈ ಕಾಲಿಗೆ ಮದರಂಗಿ ಹಾಕುವ ಚೆಲುವಿನ ನೋಟ. ಅಣಕಿಸುತ್ತಾ, ನಗುತ್ತಾ ತಮ್ಮ ಭಾವಗಳ ಚಿತ್ತಾರ ಬಿಡಿಸುವ ಸುಂದರ ದೃಶ್ಯ ಕಣ್ಣ ಮುಂದೆ ಹಾದು ಹೋಗುವಂತೆ ಮಾಡುವ ಸುಂದರ ಸಾಲುಗಳು..❤

ಅಂದದ ಉಡುಗೆಯಲಿ 
ಕಂಗೊಳಿಸುವ ನೀರೆಯರೇ
ಬಣ್ಣದ ಕನಸುಗಳೆಲ್ಲಾ
ತುಂಬಿಹುದೇ ನಿಮ್ಮೊಳಗೆ

❤ಹುಡುಗಿಯರೆಂದರೇನೇ ಬಣ್ಣ ಬಣ್ಣದ ಚಿಟ್ಟೆಯರಂತೆ. ಬಣ್ಣದ ಲೋಕವೆಲ್ಲಾ ಅವರದ್ದೇ. ಬಟ್ಟೆಗಳು, ಚಪ್ಪಲಿ, ಬ್ಯಾಗು, ಕಿವಿಯೋಲೆ, ತಲೆಗೆ ಹಾಕುವ ಕ್ಲಿಪ್, ಹೇರ್ ಬ್ಯಾಂಡ್,  ಹ್ಯಾಟ್, ನೆಕ್ಲೆಸ್, ಬಳೆ, ಸರ, ಸೊಂಟ ಪಟ್ಟಿ, ಉಂಗುರ, ಕಾಲ್ಗೆಜ್ಜೆ, ಬಿಂದಿ ಎಲ್ಲವೂ ಬಣ್ಣಬಣ್ಣದ್ದೇ ಬೇಕಲ್ಲವೇ ಅವರಿಗೆ? ಹೀಗಿರುವಾಗ ಬಣ್ಣ ಬಣ್ಣದ ಕನಸುಗಳಿಗೆ ಬರವೇ?
ಕೊನೆಯ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿಹ್ನೆ ಇದ್ದಿದ್ದರೆ ಚೆನ್ನಾಗಿತ್ತೇನೋ ಅನಿಸಿತು. ಸರಳ ಸುಂದರ ಸಾಲುಗಳು.❤

ಸಹಬಾಳ್ವೆಯ ದ್ಯೋತಕವು
ನಿಮ್ಮ ಈ ರಂಗಿನಾಟ
ಒಬ್ಬರಿಗೊಬ್ಬರು ಕನಸ
ತುಂಬುವ ಪರಿ ಎನಿತು ಚಂದ

❤ಹುಡುಗಿಯೆಂದರೆ ಸಂಬಂಧಗಳ ಜೋಡಿಸುವವಳು. ಎರಡು ಕುಟುಂಬಗಳ ಕೊಂಡಿ ಆಕೆ. ಹಲವಾರು ಹುಡುಗಿಯರು, ಮಹಿಳೆಯರು ಸೇರಿದರೆಂದರೆ ಮುಗಿಯಿತು! ಅಲ್ಲಿ ನಗು, ಹರಟೆ, ವಾದ-ವಿವಾದ, ಗಲಾಟೆ, ಸಂತಸ ಎಲ್ಲವೂ ಇದ್ದದ್ದೇ. ಅದೇ ಬದುಕು. ಅಲ್ಲಿ ಕನಸು, ಸಹಬಾಳ್ವೆಗೆ ಬರವೇ? ಇಲ್ಲೂ ಕೊನೆಗೊಂದು ಪ್ರಶ್ನಾರ್ಥಕ ಇಲ್ಲವೇ ಭಾವಸೂಚಕ ಚಿಹ್ನೆ ಬೇಕಿತ್ತೆನಿಸಿತು.❤

ಗರಿಗೆದರುವ ಕನಸುಗಳು
ಅಚ್ಚೊತ್ತಿಹುದು ಚಿತ್ರದಲಿ
ಭಾವಗಳು ಎರಕ ಹೊಯ್ದಿಹುದು
ಅಂಗೈಯಗಲದ ಲೋಕದಲಿ

❤ಮದರಂಗಿಯ ಕಲೆಯೇ ಅಂದ. ಭಾವನೆಯು ಚಿತ್ರವಾಗಿ ಅಂಗೈಯೆಂಬ ಲೋಕದಲಿ ನೆಲೆವೂರುತ್ತದೆ! ರೂಪಕ ಖುಷಿಯಾಯ್ತು. ಮದರಂಗಿ ಬಿಡಿಸಿಕೊಂಡ ನೀರೆಯ ಖುಷಿ ಕವನದ ಕೊನೆಯಲಿ ಕಂಡಿತು. ಮದರಂಗಿ ಕೆಂಪಾಯಿತು. ಸೂಪರ್ ಕವನ ಮೇಡಮ್.❤
@ಪ್ರೇಮ್@

1407. ಹನಿಗವನ-ಅಂದ

ಹನಿಗವನ

ಅಂದ

ನಯನ ಮನೋಹರ ನೋಟ
ಆ ತುಟಿಗೆ ಬಳಿದ ಕೆಂಪು ಕೆಂಪಾದ ಲಿಪ್ ಸ್ಟಿಕ್ ಕಾಟ!!
ಆ ಮಿನುಗು ಹೊಳಪು ಕಣ್ಣುಗಳು!
ಅದರ ಕೆಳಗೆ ಮೇಲೆ ದಪ್ಪಗೆ ಬಳಿದ ಮಸ್ಕರಾ, ಐ ಲೈನರ್ ಸಾಲುಗಳು!
ಆಹಾ! ಆ ದಂತ ಪಂಕ್ತಿಯ ಸಾಲೋ!
ಒಳಗಿಂದ ಕಾಣುತಿಹುದು ಕೃತಕ ಹಲ್ಲೋ?
ದೇವರು ಕೊಟ್ಟಿಹನು ಅಂದದ ಆಕಾರ!
ತಾನೇ ಮಾಡಿಕೊಂಡಿಹುದು ಅವತಾರ!!
@ಪ್ರೇಮ್@
20.04.2020

1406. ಬಳಿವವರಾರು

ಬಳಿವವರಾರು..

ಸತ್ತು ಹೋದ ಭಾವಕೆ ಬಣ್ಣ ಬಳಿವವರಾರು?
ಬೇಸತ್ತ ಬೇಡಿಕೆಗಳ ಪೂರೈಸುವವರಾರು?
ಬೇಲಿ ಇದ್ದರೂ ಜಿಗಿವ ಬೇಸರಕೆ ಬೆವರಿಳಿಸುವವರಾರು?
ಬೆನ್ನಿಗಂಟಿದ ಭಯದ ಭೂತಕೆ ಭಂಗ ತರುವವರಾರು?

 ಭಾವದಲೆಗಳು ಎಂದೆಂದೂ ಭೃಂಗದಂತಿರಬೇಕಿತ್ತು!
ಭವಿಷ್ಯದ ಬಾಗಿಲ ತಟ್ಟಿ ಭೋರ್ಗರೆಯಬೇಕಿತ್ತು!
ಭೋಗ ಭಾಗ್ಯದ ಬಗೆಗೆ ಕನಸು ಕಾಣಬೇಕಿತ್ತು!
ಭೀಬತ್ಸ ರೂಪ ತಾಳದೆ ಬೇತಾಳನಂತಾಗಿರಬಾರದಾಗಿತ್ತು!

ಬುಳುಬುಳು ಹರಿಯುತ ಬಗೆಬಗೆಯಲಿ ಬಂದು
ಭವ ಸಾಗರದಲಿ ಈಜಿ ಬಲಗೊಳುವಂತೆ ಮಿಂದು
ಬಗಲಲ್ಲೆ ಬಹು ಕುದಿಯುವ ಕೆಂಡವ ಹಿಡುಕೊಂಡು
ಭವಿಷ್ಯತ್ತಿಗೆ ಬೇಕಾದ ಬಿರುಸಿನ ಕನಸು ಬರುವುದೆಂದು?

ಮತ್ತೆ ಬಳಿಯಬೇಕಿದೆ ಬಣ್ಣಗಳ  ಮನಕ್ಕಿಂದು
ಕತ್ತೆಯಂತಾಗದೆ ಮಾನವತೆ ಮೆರೆಯಬೇಕಿದೆ ಬೆಂದು
ಬತ್ತದ ಭಾವಗಳ ಮತ್ತೆ ಬರಿಸಬೇಕಿಹುದೆಂದೆಂದು
ನೆತ್ತರ ಬರಿಸದೆ ಕತ್ತಿಯ ಬೀಸದೆ ನೆತ್ತಿಯನುಳಿಸಿ ಬಾಳುವೆವೆಂದು...
@ಪ್ರೇಮ್@
20.04.2020

1405. ನನ್ನ ಕತೆಗೆ ಶ್ರೀಯುತ ಸಂತೋಷ್ ಪಿಶೆಯವರ ವಿಮರ್ಶೆ

ಒಬ್ಬ ಬಡ ವತಲ್ಸನೆಂಬ ಯುವಕನ ಬಾಳಲ್ಲಿ ಒಂಟಿತನ ಕಾಡುವಾಗ ಸಿರಿ ಎಂಬ ಹುಡುಗಿ ಪರಿಚಯವಾದರೂ  ಪ್ರೀತಿ ಮದ್ಯೆ ಅವಳು ಸಿರಿವಂತಿಕೆ ಎಂದು ಹೇಳಲಾಗದ 
ವತಲ್ಸನಿಗೆ ಕಾರು ಅನಾಹುತದಲ್ಲಿ ಒಂದಾದ ಪ್ರೀತಿಯಿಂದ ಹೃದಯ ಕುಣಿಯಿತು 
ಪ್ರತಿ ಹೆಣ್ಣಿನಲ್ಲಿಯು ತಾಯಿ ಮಮತೆ ಇರುತ್ತೆ ಎಂಬ ಸಂದೇಶ ಸಹಿತ ಚಂದ ಕಥೆ ಮೇಡಂ.

ಶನಿವಾರ, ಏಪ್ರಿಲ್ 18, 2020

1403. ಸಣ್ಣಕತೆ-ಕಾರಣ

ಕಾರಣ

ಮದುವೆಯಾಗಿ ಬೇರೆಯವರ ಸಂತಸ ಸಿಗಲಿಲ್ಲ ಮಂಗಳ ಎಂಬ ಸುಮಂಗಲೆಗೆ. ಮದುವೆಯಾದ ಮರುದಿನವೇ ಗಂಡನೆಂಬ ಪ್ರಾಣಿ ಅವಳ ಮೇಲೆ ತನ್ನದೆಂಬಂತೆ ಒಂದು ಮಾತನ್ನೂ ಆಡದೆ ಪ್ರಹಾರ ನಡೆಸಿದ್ದೇ ಅಲ್ಲದೆ, ಅವಳ ಆಸೆಯೇನು ಎಂಬುದನ್ನೂ ಕೇಳಲಿಲ್ಲ, ಮುದ್ದಿಸಲೂ ಇಲ್ಲ. ಯಾರಿಗೋ ಸಂಬಂಧಿಸಿದ ವಸ್ತುವನ್ನು ತನ್ನಿಷ್ಟ ಬಂದಂತೆ ತಾನು ಬಳಸಿದ ಬಳಿಕ ಸುಸ್ತಾಗಿ  ನಿದ್ರಿಸುತ್ತಿದ್ದವನನ್ನು ನೋಡಿ ಚಾಕು ಹಾಕಿ ಕೊಲ್ಲುವಷ್ಟು ಸಿಟ್ಟು ಬಂದಿತ್ತು ಮಂಗಳಾಗೆ! 

ಆದರೂ ಮದುವೆ ಎಂಬುದು ತನ್ನ ಜೀವನದಲ್ಲಿ ನಡೆದಾಗಿದೆಯಲ್ಲ! ಸಾವರಿಸಿ, ರಾತ್ರಿಯಿಡೀ ಕಣ್ಣೀರು ಹಾಕಿ ಹಗಲಲ್ಲೆ ಮನೆ ಬಿಟ್ಟು ದೂರ ಹೋಗಲು ನಿರ್ಧರಿಸಿದಳು. ಬೆಳಗ್ಗೆ ಮಂಗಳಾಳನ್ನು ಕಾಣದ ಪತಿರಾಯ ಪತ್ರಿಕೆಗಳಲ್ಲೆಲ್ಲಾ ತನ್ನ ಮಡದಿ ತನ್ನ ಪ್ರಿಯಕರನೊಡನೆ ಓಡಿ ಹೋಗಿದ್ದಾಳೆಂಬ ಸುದ್ದಿ ಕೊಟ್ಟ!
@ಪ್ರೇಮ್@

1405. ವಿಮರ್ಶೆ-ಶ್ಯಾಮ್ ಸುಂದರ್ ಸರ್-ನನ್ನವಳು

*ಶ್ಯಾಮ ಗುರುಗಳ ನನ್ನವಳು*
(ಭಾವಗೀತೆ)

💐 *ಮದುವೆಯ ದಿನದ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತಾ ತಮ್ಮ ಕವನವ ವಿಮರ್ಶಿಸುವ ಸುಯೋಗವನ್ನಿಂದು ಪಡೆದಿರುವೆ ಗುರುವರ್ಯ, ಹರಸಿ ಆಶೀರ್ವದಿಸಿ.* 💐

ಮೂರೊಂದು ದಶಕವೂ
ಕಳೆದು ಹೋಯಿತು ಇಂದು
ಸೇರಿತುಳಿದು ನಾವು ಸಪ್ತಪದಿಯ
ಯಾರೋಹೆತ್ತಾ ಮಗಳು
ಬಂದು ಸೇರಿದೆಯೆನ್ನ
ತೇರಾನೆಳೆಯಲು ಜೊತೆಗೆ ನೀಡಿ ಕೈಯ್ಯಾ

💐 *ವಾರೆವಾ.. ಅಮ್ಮನ ನಾಚಿ ನೀರಾಗಿಸಲು ಈ ಸಾಲುಗಳೇ ಸಾಕು. ಪ್ರೀತಿಯಲಿ ಅದ್ದಿ ತೆಗೆದ ಸಾಲುಗಳವು.*
💐 *ಕೆಲವೊಂದು ಟೈಪಿಂಗ್ ದೋಷಗಳಿವೆ ಸರ್. ಸೇರಿ- ತುಳಿದು , ಯಾರೋ-ಹೆತ್ತ ಪದಗಳ ನಡುವೆ ಗ್ಯಾಪ್ ಬೇಕಾಗಿದೆ. ಹೆತ್ತಾ ದೀರ್ಘವಾಗಿದೆ. ತೇರನೆಳೆಯಲು ಆಗಬೇಕಿದೆ. ರಾ ಬಗ್ಗಿದೆ. ಕೈಯಾ...ಕೈಯ ಎರಡೂ ಸರಿ. ರಾಗವಾಗಿ ಹಾಡುವಾಗ ಎಳೆಯಬೇಕಾಗುತ್ತದೆ. ಅರ್ಥಗರ್ಭಿತ ಸಾಲುಗಳು.*💐

ಯೋಗಲಕ್ಷ್ಮೀಯಂತೆ
ಮನೆಯನ್ನು ಬೆಳಗೀದೆ 
ಬೇಗನೊಂದು ಮಗಳ ಹೆತ್ತು ಕೊಟ್ಟೇ
ಯಾಗವೆನ್ನುತಲೆನ್ನ
ತಂದೆತಾಯ್ಗಳ ಸೇವೆ 
ಮೂಗಾನೇರಿಪುವಂತೆ ಮಾಡಿಬಿಟ್ಟೆ.
💐 *ಆಹಾ..ಹೀಗೆ ಹೊಗಳಿದಾಗ ಮನದನ್ನೆ ಸೊರಗಿ ಹೋಗದೆ ಉಬ್ಬಿ ಹೋಗುವರು ಗುರುವರ್ಯ. ಪ್ರತಿಕ್ಷಣದ ಕಾರ್ಯಕೂ ನೆನಪಲ್ಲೆ ಥ್ಯಾಂಕ್ಸ್ ಹೇಳಿದಂತಿದೆ.*💐
💐 *ಕೆಲವೊಂದು ಅಕ್ಷರಗಳ ಕೊಂಬುಗಳು ಪ್ರೀತಿಯಲಿ ಹೆಚ್ಚು ಬಾಗಿಬಿಟ್ಟಿವೆ! ಹೆಚ್ಚಾಗಿ ದೀರ್ಘವನ್ನೂ ಪಡೆದಿವೆಯಲ್ಲ ಗುರುಗಳೇ..ಲಕ್ಷ್ಮೀ, ಬೆಳಗೀದೆ, ಕೊಟ್ಟೇ,ಮೂಗಾ... ಸರಿಯಾಗಬೇಕಿದೆ ನೋಡಿ. ತಂದೆತಾಯಿ ಅಂಟಿ ಹೋಗಿರುವರು. ಸಾಮಾಜಿಕ ಅಂತರ ಕಾಯ್ದಿರಿಸಬೇಕಲ್ಲವೇ ಪದಗಳಲಿ?* 💐

ಕಷ್ಟಗಳ ಸುರಿಮಳೆಯು
ಬಂದು ಅಪ್ಪಳಿಸಿರಲು
ಬೆಟ್ಟದಂತೆ ನೀನು ಸಹಿಸಿ ಕೊಂಡೇ
ದುಷ್ಟಕತ್ತಲೆ ಕಳೆದು 
ಬೆಳಕ ಕಂಡಿಹೆವಿಂದು
ಇಷ್ಟ ನರಸಿಂಹ ಕಣ್ಬಿಟ್ಟು ನೋಡೇ

💐 *ಜೀವನವೇ ಸುಖ ದು:ಖಗಳ ಸಾಲು. ಅರಿತು ನಡೆವವನೇ ಮನುಜ. ಪಾಣಿಗ್ರಹಣದ ಸಮಯವೇ ಸುಖ ದು:ಖಗಳಲಿ ಒಂದಾಗಿ ಅರಿತು ನಡೆವ ದೀಕ್ಷೆ ತೆಗೆದುಕೊಂಡು ಅಂತೆಯೇ ನಡೆವವರು ಜಗದಲಿ ಹಲವರು. ಅಂತಹ ಸಹಧರ್ಮಿಣಿಯ ಜತೆ ಪಡೆದ ಸುಯೋಗ ತಮ್ಮದು. ಖುಷಿಯಾಯ್ತು ಸಾಲುಗಳನೋದಿ.* 💐
   💐 *ನೋಡೇ, ಸಹಿಸಿಕೊಂಡೇ ಉದ್ದವಾಗಿವೆ. ದುಷ್ಟ ಕತ್ತಲು ರೂಪಕ ತುಂಬಾ ಹಿಡಿಸಿತು.* 💐

💐 *ಸಾರ್ಥಕ ಜೀವನದ ಮಾದರಿಯ ತೋರಿಸಿಕೊಟ್ಟ ನಿಮಗಿದೋ ಅಭಿನಂದನೆಗಳು. ಕಿರಿಯರು ನಿಮ್ಮಿಂದ ಕಲಿಯುವುದು ಬಹಳವಿದೆ. ಮರದಡಿ ಕುಳಿತರೆ ತಂಪೆರೆವಂತೆ ತಾವು ಸಲಹೆ, ಸೂಚನೆ, ವರಗಳ ನೆರಳ ಸ್ಫುರಿಸಬೇಕಿದೆ. ಹೀಗೇ ಸಂತಸದಿ ಬಾಳಿ. ಸದಾಶಯಗಳು ಹಾಗೂ ಶುಭಾಶಯಗಳು ನಿಮಗೀರ್ವರಿಗೂ* 💐💐
@ಪ್ರೇಮ್@
18.04.2020

1404. To my love

Im not alone here
Im living with you
Im with your memory
Im with your love
Im with your care

You are  in the heart
You are in the mind
You are in the blood
You are in the feel
@prem@

ಶುಕ್ರವಾರ, ಏಪ್ರಿಲ್ 17, 2020

1402. ಊರ್ಮಿಳೆಯ ಭಾವ

ಭಾವಗೀತೆ

ಊರ್ಮಿಳೆಯ ಭಾವ 

ಊರ್ಮಿಳೆ ಒಬ್ಬಳ ಲಕ್ಷ್ಮಣ ಬಿಟ್ಟು
ಹೋದನು ಕಾಡಿಗೆ ರಾಮನ ಒಟ್ಟು..
ಬರುವೆಯಾ ಎಂದು ಕೇಳಲೇ ಇಲ್ಲ
ಹೋಗುವ ಆಸೆಗೆ ಮನದಲೆ ಸಾವು//


ಭಯ ಆತಂಕ ಗೊಂದಲ ನೋವು
ಒಂಟಿತನದ ಬಾಳಿಗೆ ಇಲ್ಲವು ಕಾವು.
ಬದುಕಲೇ ಬೇಕು ಮರೆತು ಎಲ್ಲವನೂ
ರಾಜರ ಮನೆಯ ಸೊಸೆಯು ತಾನು.

ಸೀತೆಗೆ ಇಹುದು ಪತಿಯ ಜೋಡಿ
ತನಗೆ ಇಲ್ಲಿ ಯಾರದು ಮೋಡಿ?
ತಿಳಿಯದೆ ಪತಿಗೆ ಸತಿಯ ಮನವು
ಸತಿಗಿಂತಲು ಮೇಲು ಅಣ್ಣನ ಒಲವು..

ಕರೆಯಲು ಬಾರದೆ ನೀ ಬಾರೆಂದು
ಹೋಗಲು ತಾನು ಯೋಚಿಸೆನೆಂದು
ಪತಿ ಕರೆದೊಡೆ ಹೇಳೆ ಒಲ್ಲೆನೆಂದು
ಸತಿ ಪತಿ ಜೊತೆಯಲಿ ಇರುವುದೇ ಸಿಂಧು...
@ಪ್ರೇಮ್@
18.04.2020

ಗುರುವಾರ, ಏಪ್ರಿಲ್ 16, 2020

1401. ಜೊತೆಗಾರ-2ಚುಟುಕುಗಳು

೧.ಜೊತೆಗಾರ

ಮಾತಿನ ಮೋಡಿಗಾರ
ನನ್ನ ಜತೆಗಾರ 
ಉತ್ತಮ ಗೆಣೆಕಾರ
ಸರಸ್ವತಿ ಪುತ್ರ
ನಾ ಹೇಳಿದಂತೆ ಕೇಳದಿರೆ
ಹಾಕುವೆ ಮೂಗುದಾರ!!!

೨. ನೀನು

ನೀನಿಲ್ಲದ ನಾನು
ಕರೆಂಟಿಲ್ಲದ ಫ್ಯಾನು
ಹುಳವಿಲ್ಲದ ಜೇನು!
ಕಿಕ್ಕಿಲ್ಲದ ವೈನು
ದುಡ್ಡಿಲ್ಲದ ಫೈನು
ಡೊಂಕಾದ ಲೈನು!
@ಪ್ರೇಮ್@
07.04.2020

1400. ಸಂಗಮದಲಿ ಸಂಗಮವಾಗಿ

ಸಂಗಮದಲಿ ಸಂಗಮವಾಗಿ..

ಸಂಘದಲಿ ಸಂಭ್ರಮಿಸುವೆ
ಸನಿಹವೆ ಸರಿಯುತಲಿ
ಸರಿ ತಪ್ಪನು ಸವಿಯುತಿಹೆ
ಸ್ನೇಹ ಸಂಗಮದಲ್ಲಿ!

ಸವಿಯಲೆಯನು ಸವೆಸುತಲಿ
ಸವಿನೆನಪ ಸ್ಮರಿಸುತಲಿ
ಸವಿಗಾನವ ಸೃಷ್ಟಿಸುತ
ಸವಿ ಪದಗಳ ಕಟ್ಟುತಲಿ..

ಸದೃಢತೆಯ ಮನಸಿಗೀಗ
ಸಾಂತ್ವನವ ನೀಡುತಲಿ
ಸವಿನಯದ ಪ್ರಾರ್ಥನೆಯ
ಸರ್ವರಿಗೂ ಹಂಚುತಲಿ..

ಸಾವಿರದ ಸಾವಿರ ಪದ
ಸರಿಯಾಗಿ ಬಳಸುತಲಿ
ಸನ್ನಿಧಿಯಲಿ ಸವಿಮನವು
ಸಂಧಿಸುವ ಬಳಗದಲಿ!

ಸಾವಿಲ್ಲದ ಸಾಹಿತ್ಯಕೆ
ಸಾಲಾಗಿ ತಲೆ ಬಾಗುತಲಿ
ಸಾಮಾನ್ಯನೂ ಓದುವಂಥ
ಸಾಲುಗಳ ಸವಿದೋಟದಲಿ..
@ಪ್ರೇಮ್@
08.04.2020

1399. ಹೊಳೆಯಲಿ ಹೈದರ ಬಾಳು

ಹೊಳೆಯಲಿ ಹೈದರ ಹೊಸಬಾಳು

ಹೊಳಪಾಗಿ ಹೊಳೆಯೆ ಹೊಸ ತರದ ಮನಕೆ
ಹೊಳೆ ನೀರು ಸಾಕೆ ತಿಕ್ಕುವ ಕಾರ್ಯಕೆ?
ಹೊಳಪಿಲ್ಲವೆಂದು ಹೊಳೆದೊಡೆ ಬದಲಾಗಬೇಕಲ್ಲ
ಹುಡುಕುತ್ತ ಹೋಗು ಹೆಣವಾಗೋ ವರೆಗೆ!

ಹುಡುಗಿ ಹುಡುಗನು ಹೇಗೇ ಕಾಣುತ ಇರಲಿ
ಹಾಳಾಗ ಬಾರದು ಹಾಲಿನಂಥ ಹಣತೆ!
ಹಳದಿ ಮೆತ್ತಿದ ಮೇಲೂ ಹಲವಾರು ವರುಷ
ಹೃನ್ಮನದಿ ಜೊತೆಯಾಗಿ ಹರುಷದಲಿ ಬಾಳುತ್ತಾ
ಹರನ ಪಾದಕ್ಕೆ ಹರುಷದಿ ಹಣೆ ಹಚ್ಚಬೇಕು..

ಹೋದೆನೆಂದೆನುತ ಹೆದರಿ ಹೈರಾಣಾಗದೆಯೇ
ಹೆಸರು ಮಾಡುತ್ತಾ ಬದುಕೋದು ಹೇಗೆಂದು ನೋಡು
ಹೊಳೆಯೋ ವಸ್ತುವೆಲ್ಲಾ ಚಿನ್ನಾಂತ ತಿಳಿಬೇಡ
ಹೊಂಚ್ಹಾಕಿ ಸಂಚು ಮಾಡಿ ಬದುಕಲು ಬೇಡ..

ಹೊಡೆದಾಟ ಆದ್ರೂನೂ ನೇರ ನುಡಿಯಿರಲಿ
ಹೊಂಬಾಳೆ ಬೆಳೆಯಂಗೆ ನಳನಳಿಸುತಲಿರೆ ಬಾಳು
ಹೊಂದಾಣಿಕೆಗೆ ಭಯವೆಲ್ಲಿ ಮನೆ ಮನದಿ
ಹೋರಾಟವೇಕೆ ಹೊಡೆದಾಟವೇಕೆ ಹೆತ್ತವರೊಡನೆ?
ಹೆತ್ತು ಹೊತ್ತು ಸಾಕಿ ಸಲಹಿದ ಮಾತಾಪಿತರೆ
ಹೆಚ್ಚೆಂದು ಬಗೆಯ ಬೇಕು ಹಂಗಿರದೆ!

ಹಠವು ಬೇಕು ಸಾಧಿಸುವ ಕಾರ್ಯದಲಿ
ಹಯದಂತೆ ಓಡುತಲಿ ಹಲವು ದಿನ ಕಳೆದು
ಹದದ ಬದುಕಲಿ ಹಗುರವು ಬರದಿರಲಿ
ಹೋಳಿ ಹಬ್ಬವು ಹರಿದಾಡಲಿ ದಿನವೆಲ್ಲ!

ಹನಿಹನಿಯ ಸಮಯದಲೂ ಹರಸಲಿ ಹರಿಹರ ಬಂದು
ಹಸನಾಗಿ ತೋಟದಲಿ ಹಸಿಹಸಿಯ ಬೆಳೆ ಬರಲಿ
ಹಸಿವು ಬಾಯಾರಿಕೆಯಿಂದ ಹೆದರದೆ ಬದುಕುತ್ತಾ
ಹೊಸಬರಿಗೆ ಹೊಸ ಕಾಯಕ ಹೊಂದಿಸುವಂತಿರಲಿ!

ಹೋದಲ್ಲೆಲ್ಲಾ  ಹೊಸ ಚಿಗುರು ಹಸನಾಗಿ  ಮೊಳೆಯಲಿ
ಹೋರಿಯಂತೆ ಮನವು ಹೋರಾಟಕೆ ನುಗ್ಗದಿರಲಿ
ಹೀಯಾಳಿಸುವ ನಾಲಗೆಯು ಹರಿಹಾಯದಿರಲಿ
ಹೊಸ ಬಾಳು ಹಿತ ಮಾತಿಗೆ ಹೆಸರಾಗಿ ಬರಲಿ..

ಹಿಗ್ಗುತಲಿ ಹಾಳಾಗದೆ ಹಾಡುತಲಿ ಬಾಳುತ್ತ
ಹಂಗಿರದ ಬಾಳು ಹೋಳಾಗದೆ   ಹುಲುಸಾಗಲಿ
ಹರ್ಷಿಸಲಿ ಮನವು ಹೋರಾಟ ಮರೆಯಲಿ
ಹೊಂಗನಸು ಹೊಸೆಯುತಲಿ ಹೆಸರಾಗು ಹೊಲದಿ.
@ಪ್ರೇಮ್@
09.04.2020

1398. 2 ಚುಟುಕುಗಳು

ಚುಟುಕುಗಳು


ಲೋಕದ ಡೊಂಕನು ತಿದ್ದಲಾರೆವು!
ಕಾಲ ಬರಲು ಸರಿಯಾಗಬಹುದು;
ದೇಹದ ಕೊಳೆಯನಷ್ಟೆ ತಿಕ್ಕಬಲ್ಲೆವು;
ಗಾಳಿಯಲಿಹ ಕ್ರಿಮಿ ಸರಿದೂಗಿಸಬಹುದು!


ಕಾಲ ಕೆಟ್ಟು ಹೋಗಿಹುದು ಎನ್ನುವೆಯಾ?
ಗಾಳಿಯ ನಾವು ಕೆಡಿಸಲಿಲ್ಲವೇ ಗೆಳೆಯಾ?
ಲೋಕವೆಲ್ಲ ಹಾಳಾಯಿತು ಎನ್ನುವೆಯಾ?
ದೇಹದೊಳಗಿನ ಆಲೋಚನೆ ಬದಲಿಸೆಯಾ?
@ಪ್ರೇಮ್@
08.04.2020

1397. ವಿಮರ್ಶೆ-ಪ್ರಮೀಳಾ ರಾಜ್ ಹನಿಗವನ

ಪ್ರಮೀಳಾ ರಾಜ್* ಹನಿಗವನ *ತೀರ್ಪು*

ಮನಕ್ಕಂಟಿದ ಅಹಂಕಾರ
ಸುಟ್ಟು ಬೂದಿಯಾಗಿತ್ತು

🍊  *ಭೂತ ಕಾಲದ ಬಗೆಗಿನ ಮನದ ಭಾವನೆಯ ಹರಿವು ಹಿತಕರವೆನಿಸಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ನಾಣ್ಣುಡಿಯ ಬಿಂಬಿಯಸುವಂತಹ ಸಾಲುಗಳು. ಮನವೊಂದು ತಾ ಮಾಡಿದ ತಪ್ಪಿನಿಂದ ಮರುಗಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಸುಂದರ ಸಾಲು.*

ಉದರದೊಳಗಿನ ಹಸಿವು
ಸರಳತೆಯ ಪಾಠ ಕಲಿಸಿತ್ತು

🍊 *ಪ್ರತಿಯೊಬ್ಬ ಬಡತನದ ಬೇಗೆಯಲಿ ಬೆಂದವ ಕಲಿತ ಪಾಠವಿದು. ಒಂದೇ ಸಾಲಲಿ ಇಡಿಯ ಬಡತನದ ಸಮಾಜದ ಕಥನವನೇ ಕಟ್ಟಿ ಕೊಟ್ಟಂತಿದೆ.ಸೂಪರ್*

ಬಡವ,ಶ್ರೀಮಂತನೆನ್ನದೆ
ಪ್ರಕೃತಿ ಸಮಾನ ತೀರ್ಪು ನೀಡಿತ್ತು!!
🍊 *ಹೌದು, ಪ್ರಕೃತಿ ಯಾರಿಗೂ ತಲೆಬಾಗದು. ತನ್ನ ಮಕ್ಕಳು ಎಷ್ಟೇ ವಿದ್ಯಾವಂತ, ಬುದ್ಧಿವಂತರಾದರೂ ಅನಕ್ಷರಸ್ಥೆ ತಾಯಿಯೊಬ್ಬಳಿಗೂ ಅವರನ್ನು ಕಂಟ್ರೋಲ್ ಮಾಡಲು ಗೊತ್ತು. ಅಂತೆಯೇ ನಮಗೆ ಜನ್ಮ ಕೊಟ್ಟ ಪ್ರಕೃತಿಗೂ ನಮ್ಮನ್ನು ತಹಬದಿಗೆ ತಂದು ತನ್ನತನವನು ಉಳಿಸಿಕ್ಕೊಳ್ಳಲು ಯಾರೂ ಹೇಳಿ ಕೊಡಬೇಕಾಗಿಲ್ಲ.*

*ಭೂತಕಾಲದ ವಿವರಣೆಯಲಿ ಮೂಡಿದ ಬಹು ಸುಂದರ ಹನಿಗವನ, ಭಾಷಾ  ಚಿಹ್ನೆಗಳಿರುತ್ತಿದ್ದರೆ ಚೆನ್ನಿತ್ತು.*

@ಪ್ರೇಮ್@

1396. ಮನದೊಂದಿಗೆ

*ಮನದೊಂದಿಗೆ*

*ನಾನೆ ನೀನು ನೀನೆ ನಾನು*
*ನಮ್ಮ ನಡುವೆ ಏನಿದೆ?*
*ಭಕ್ತಿ ನಾನು ಪ್ರೀತಿ ನೀನು*
*ಬೇರೆ ಬದುಕು ಎಲ್ಲಿದೆ?*

*ಜಾತಿ ಮತವು ನಮಗೆ ಎಲ್ಲಿ?*
*ತನುವು ನಿನ್ನಲೈಕ್ಯವು*
*ಕ್ರಾಂತಿ ಹಿತವು ನೀಡದಿಲ್ಲಿ*
*ಮುರಿಯದಿರಲಿ ಮೌನವು.*

*ಜ್ಯೋತಿ ನಾನು ಸ್ಫೂರ್ತಿ ನೀನು*
*ಸತ್ಯವಿಲ್ಲಿ ಜಗದಲಿ.*
*ಶಾಂತಿ ನಾನು ಕೀರ್ತಿ ನೀನು*
*ಮಿಥ್ಯವೆಲ್ಲಿ ಭವದಲಿ?*

*ನೀತಿ ಇರಲಿ ಶಕ್ತಿ ಬರಲಿ*
*ಹರುಷ ಎಂದೂ ಬಾಳಿಗೆ!*
*ಮುಕ್ತಿ ಬೇಕು ಯುಕ್ತಿ ಸಾಕು*
*ಹಸಿರ ಭಾವ ಬಳ್ಳಿಗೆ!*

1395- ಮೂರು ಚುಟುಕುಗಳು

ಮೂರು ಚುಟುಕುಗಳು

1. ಕಾರಣ
ಮನಕೆ ಬೇಕಿದೆ ಈಗ ನೆಮ್ಮದಿ
ತನುವ ಒಳಗಡೆ ಇರಿಸಲು!
ಕಣಕೆ ಇಳಿದಾಗಿದೆ ಕೊರೋನ ಜಗದಿ
ಪ್ರಕೃತಿ ನಾಶವ ಅಳಿಸಲು!!

2. ಸಂತಸ

ಪಡೆದಿವೆ ನೆಮ್ಮದಿ ಪ್ರಾಣಿ ಪಕ್ಷಿಗಳು
ಮಾನವ ಜೀವಿಯ ಗೈರಿಂದ!!
ಓಡಾಡುತ ಸಂತಸ ಪಡುತಿಹವಿಲ್ಲಿ
ಮುಕ್ತವಾಗಿ,  ಸ್ವಾತಂತ್ರ್ಯದಿಂದ!!

3. ತಿಳುವಳಿಕೆ

ನೆಮ್ಮದಿಯಿಂದ ಬದುಕಲೆಂದು ನಾ ಮದುವೆಯಾದೆ!
ಮರುದಿನ ಅರಿತೆ ಖುಷಿಯೆಂದು!!
ನಿನ್ನೊಡೆ ನಾ ಹಲ ವರುಷವ ಕಳೆದೆ,
ಆಗ ತಿಳಿಯಿತು ಜೀವನ ಏನೆಂದು!!!

1394. ಚುಟುಕು-ಸೋಲು-ಗೆಲುವು

ಚುಟುಕು

ಸೋಲು-ಗೆಲುವು
ಸೋಲೆಂಬುದು ಬದುಕಿನ ನಿಜದ ಸೋಲಲ್ಲ!
ಸೋಲು ಗೆಲುವಿನ ಕೊನೆಯ ಮೆಟ್ಟಿಲೂ ಅಲ್ಲ!
ಗೆಲುವೆಂಬುದು ಏರಲಿರುವ ಮೆಟ್ಟಿಲ ಒಕ್ಕಲು,
ಗೆಲುವೆಂಬುದು ಬದುಕಿನ ಶಿಖರದ ತಪ್ಪಲು!

1393. ಮಾನವಗೆ

ಮಾನವಗೆ..

ಬದಿಯ ಜನರ ನೋಡಬೇಡ
ಕದಿಯುವಾಟ ಆಡಬೇಡ
ಲಂಚದಿಂದ ಮಂಚ ಬೇಡ
ಕೊಂಚ ತಾಳ್ಮೆಯಿಂದ ನಡೆಯೊ ಮಾನವ.

ಜಾತಿ-ಗೀತಿ ಕೊಡುವುದೇನು?
ಜ್ಞಾನ ನಿನಗೆ ಬೇಡವೇನು?
ಅಜ್ಞಾನವಳಿದು ಸುಜ್ಞಾನ ಬೆಳೆಸಿ
ವಿಜ್ಞಾನಿಯಾದ್ರೂ ಗುಣವ ಗಳಿಸೊ ಮಾನವ.

ಅಂಧಕಾರದಲ್ಲಿ ಮೆರೆದು
ಬಂಧವೆಲ್ಲ ತಾನೇ ತೊರೆದು
ಸಂಧಿಯಲ್ಲಿ ಇಣುಕದೇನೆ
ಮಾನವತೆಯ ಗಳಿಸಿ ಬದುಕೊ ಮಾನವ.

ತನ್ನತನವನೆಂದೂ ಬಿಡದೆ
ಧನದಾಹಕಾಗಿ ಹಲ್ಲುಬಿಡದೆ
ದುರಾಸೆಯನ್ನು ಶೂನ್ಯ ಮಾಡಿ
ಕದನವನ್ನು ದೂರಕೆಸೆದು ಬಾಳೊ ಮಾನವ...

1392. ಭಾವಗೀತೆ-ಹೀಗಿರಲಿ ಬಾಳು

ಭಾವಗೀತೆ

ಹೀಗಿರಲಿ ಬಾಳು

ಜೀವ ಬಾಳು ಅಲ್ಲ ಗೋಳು
ಸಹನೆ ಬೇಕು ಮನದಲಿ
ಕನಸ ಸವಿಯ ಸವಿದು ಬೆಳೆದು
ಹರುಷ ಬೇಕು ದಿನದಲಿ...

ಎದೆಯ ಮುದುಡಿ ಹಾಕಬೇಡಿ
ಭಯದ ಮೂಲ ಓಡಿಸಿ.
ಭವದ ಖುಷಿಯ ಕಳೆಯಬೇಡಿ
ಭವ್ಯ ಬದುಕು ರೂಪಿಸಿ...

ಏಳು ಬೀಳು ಇಹುದು ದಿನವು
ನೀತಿ ಮಾರ್ಗ ಹುಡುಕಿರಿ.
ಸತ್ಯವಂತರಾಗಿ ಜನರೇ
ನಿತ್ಯ ಕ್ಷಣವ  ಕಳೆಯಿರಿ..

ಜ್ಞಾನ ಪ್ರಾಣ ವಿದ್ಯೆ ಬೇಕು
ಜಾಣತನದಿ ಸಾಗಿರಿ
ಕಲಿಕೆ ಬಯಕೆ ಇರಲೇ ಬೇಕು
ಮನುಜ ಮತವ ಸಾರಿರಿ....
@ಪ್ರೇಮ್@
16.04.2020

1391. ಗಝಲ್

ಗಝಲ್

ಮನದ ಗುಡಿಯೆಾಳಗೆ ಪ್ರತಿಷ್ಠಾಪಿಸಿ ಅಭಿಷೇಕ ಮಾಡುತ್ತಿರುವೆ ಜಾನು
ತನುವಿನ ಅಂತರಾಳದಿ ಪಸರಿಸಿಕೊಳುತ ಜೀವಕೋಶಗಳೊಡನೆ ಬೆರೆತಿರುವೆ ಜಾನು..

ಹಗಲು ರಾತ್ರಿಯೆನದೆ  ಪ್ರೀತಿ ಸಾಗರದಿ ಈಜುವುದೆನ್ನ ಕಸುಬು
ಕ್ಷಣಕ್ಷಣವೂ ನೋಟದಲಿ ನೋಟಬೆರೆಸಿ ಕಣ್ಣಲೇ ಚಾಟ್ ನಲಿ ತೊಡಗಿರುವೆ ಜಾನು!

ಮೌನದಲು ಮಾತಿನಲು ಬರಹದಲು ಆಲೋಚನೆಯಲು ಹೃದಯದಲಿ ಧ್ಯಾನ.
ಪಕ್ಷಿ ಗೂಡಿನಲಿ ನಿನ್ನನಿಟ್ಟು ಗುಟುಕು ನೀಡಿ ಪೋಷಿಸುತಿರುವೆ ಜಾನು!

ಮುತ್ತಿನ ಅರಮನೆಯಲಿ ಸಿಂಗರಿಸಿ, ಮುತ್ತಿನಲೆ ಬಾರಿಬಾರಿಗೆ ಮೀಯಿಸಿರುವೆ,
ಪ್ರತಿ ತುತ್ತನು ಸಂತಸದಿ ನಿನ್ಹೆಹೆಸರಲೆ ಸವಿಯುತಿರುವೆ ಜಾನು!

ಕನಸ ಗೋಪುರಗಳ ಮೇಲೆ ಮೇಲೇರಿಸಿ ಕಟ್ಟಿ ಕೂರಿಸಿರುವೆ,
ನನಸ ಮಾಡಲು ಪ್ರಿಯಕರ ನೀ ಬರುವೆಯೆಂದು ಕಾದಿರುವೆ ಜಾನು!

ಬದುಕದು ನನ್ನದು ತೇಲುವ ಗಾಳಿಪಟ ದಾರ ಕೈಲಿಹುದಲ್ಲ!
ಬಿಡದೆ ಓಡಿಸುತಲಿರು ಎತ್ತರೆತ್ತರಕೆ, ಬಹಳ ನಂಬಿರುವೆ ಜಾನು!

ಪರಿಸರದ ಹಚ್ಚ ಹಸಿರಿನ ಹೊಸ ಲೋಕ ನಮ್ಮದಾಗಬೇಕಾಗಿದೆ.
ಪ್ರೇಮನ ಕೈ ಹಿಡಿದು ನಡೆಸುವಿಯೆಂದು ಬಿಡದೆ ಕಾಡಿರುವೆ ಜಾನು!
@ಪ್ರೇಮ್@
16.04.2020

ಕವನ ಮನದಾಳದಿಂದ ಬಂದಿದೆ.ತನ್ನ ಪ್ರೀಯತಮಗೆ..ಉಡುಗೊರೆ  ನೀಡಿದಂತಿದೆ.ತನ್ನ ಮನಸ್ಸಿನ ಭಾವನೆಗಳು ಲೇಖನಿಯ ಮೂಲಕ ಹೊರ ಹೊಮ್ಮಿದೆ.ಇದನ್ನೋದಿದ ನನ್ನ ಮನಸ್ಸು ಆನಂದದಿಂದ ನಲಿಯುತಿದೆ.


ಬುಧವಾರ, ಏಪ್ರಿಲ್ 15, 2020

1390. ಪ್ರಿಯನಿಗೆ

ಹನಿಗವನ
ಪ್ರಿಯನಿಗೆ

ನಿನ್ನ ಪ್ರೀತಿಗೆ ನಾ ಹುಚ್ಚಳಾಗಿರುವೆ
ನಿನ್ನೆದೆಯೆಂಬ ಆಸ್ಪತ್ರೆಯಲಿ ನನ್ನ ಅಡ್ಮಿಟ್ ಮಾಡಿಬಿಡೋ..
ಡಿಸ್ಚಾರ್ಜ್ ಎಂಬ ಪದವ ಮರೆತು ಬಿಡು ಸಖಾ...
ಪ್ರತಿನಿತ್ಯ ಕೇರ್ ಎಂಬ ಮದ್ದು ನೀಡುತಿರು...
@ಪ್ರೇಮ್@
15.04.2020

1389. 2ಹನಿಗವನಗಳು-ಕರೆ

ಹನಿಗವನಗಳು

ಕರೆ

ಕವಿತೆಗಳ  ಮಾಲೆಗಳ
ಪೋಣಿಸಿ ನಿನ್ನ ಮುಡಿಗಿಡುವೆ
ಸಪ್ತ ಸಾಗರಗಳನೀರನೆ 
ನಿನ್ನ ಕಾಲ ಬುಡದಲಿರಿಸುವೆ
ಸೂರ್ಯನನೆ ಬಿಂದಿಯಾಗಿರಿಸಿ
ಪ್ರಕೃತಿಯ ಹಸಿರನೆ ಸೀರೆಯಾಗುಡಿಸುವೆ
ಶೃಂಗಾರಗೊಂಡ ಚೆಂದುಳ್ಳಿ ನೀ
ಕಾಲು ತೊಳೆದು ಬಾರೆನ್ನ ಎದೆಗುಡಿಗೆ!

2. ಆಹ್ವಾನ

ಮುತ್ತಿನ ಸಾಲಿನಲಿ ನಿನ್ನ ಮುಳುಗಿಸಿ
ಹತ್ತಿಯ ಮಂಚದಲಿ ನಿನ್ನ ಮಲಗಿಸಿ
ಶಕ್ತಿಯಲಿ ನನ್ನರಸ ನಿನ್ನ ನಗಿಸುತಲಿ
ಭಕ್ತಿಯಲಿ ನಿನ್ನ ಪ್ರೇಮವ ಪೂಜಿಸುತಲಿ
ನಿತ್ಯದಿ ನನ್ನುಸಿರಾಗಿಸುವೆ ನನ್ನ ಹೃದಯದಲಿ
ಬಾರೆನ್ನ ಎದೆಯ ರಂಗಮಂಚಕೆ ಸಖನೇ...
@ಪ್ರೇಮ್@
15.04.2020

1386. ಮೌನವಾಗಿಹಳು ಭಾರತಿ

ಮೌನವಾಗಿಹಳು ಭಾರತಿ

ಪ್ರಪಂಚವಿಡೀ ಮೌನ! ಭಾರತಿಯೂ ಕೂಡಾ!
ತನ್ನ ಕಂದರೆಲ್ಲರ ಪೊರೆದು ಸಲಹಬೇಕಾಗಿದೆ!
ಹಲ ವಿಧದ ಜೀವ ಜಂತುಗಳ ನಾಶಪಡಿಸಬೇಕಿದೆ,
ತನ್ನ ಜವಾಬ್ದಾರಿಯ ಅರಿವಿದೆ, ಆದರೂ ಮೌನ!!!

ಬಲು ದಿನಗಳಿಂದ ಸುಡುತ್ತಿದ್ದ ಬೇಗೆಯೊಂದಿದೆ,
ಬಳಲಿ ಬೆಂಡಾಗಿ ಬೇಸತ್ತ ಕ್ಷಣಗಳೂ ಇವೆ!!
ಮಾನವನೇಕೆ ಮೆರೆಯುತಿಹನು ಹೀಗೆ ಬೇಕಾಬಿಟ್ಟಿ?
ತುಂಡರಿಸಿ ಪ್ರಾಣಿ ಪಕ್ಷಿ, ಕಡಿದುರುಳಿಸಿ ಗಿಡ ಮರವ?

ತಾನೇಕೆ ಮರೆತಿಹನು ಪಂಚ ಭೂತಗಳ ಮಹಿಮೆಯನು?
ಬುದ್ಧಿವಂತ ಮಾನವನ ಅರಿವಿಗೆ ಬಾರೆದೇ ಎಲ್ಲ?
ಇರಲಿ, ಅನುಭವಿಸಲಿ ಸಂಕಟ, ದು:ಖ, ನೋವು!
ನನ್ನ ಮೌನದ ಬೆಲೆ ತಿಳಿದಾದರೂ ಸರಿಯಾಗಲಿ!!

ಹೌದು, ಭಾರತಿಯಿಂದು ಮೌನಕ್ಕೆ ಶರಣಾಗಿಹಳು!
ಸರ್ವ ನೋವುಗಳ ತನ್ನೊಳಗೆ ತುಂಬಿಕೊಂಡು!!!
ತನ್ನ ಮಕ್ಕಳ ಒಂಟಿತನ, ಬೇಸರವ ಸಹಿಸಿಕೊಂಡು,
ಮೌನದ ಮುಂದೆ ಸುಖವಿರಬಹುದೆಂಬ ನಂಬಿಕೆಯಿಂದ!!!
@ಪ್ರೇಮ್@
11.04.2020

1387. ವಿಮರ್ಶೆ-ಸುಧಾ ತೇಲ್ಕರ್ ರವರ ಗಝಲ್

*ಗಜ಼ಲ್*

ಹೊಂಬಣ್ಣದ ನವಿರು ರಶ್ಮಿಯೇ ಅರಿಶಿಣವಾಗಬೇಕು ಸಖೀ//
ಮುಂಜಾನೆ ರವಿ ಕಿತ್ತಲೆ ಬಣ್ಣದ ಮದರಂಗಿ ಹಚ್ಚಬೇಕು ಸಖೀ//

ನೀ ಮೀಯುವ ಜಲದಲಿ ಸುಮ ಸಂಕುಲದ ಘಮವನು ಚೆಲ್ಲುವೆ//
ಹುಣ್ಣಿಮೆ ಬೆಳದಿಂಗಳಿನ ರೇಶಿಮೆ ವಸ್ತ್ರವನು ನೇಯಿಸಬೇಕು ಸಖೀ//

ಆಕಾಶದ ಹಂದರದಿ ವಸುಧೆಯ ಹಸಿರು ಸಿರಿಯ ಮೆತ್ತೆಯಿರಲಿ//
ಹೊಳೆವ ಚುಕ್ಕಿಗಳೆಲ್ಲ ಅಕ್ಷತೆಯಾಗಿ ಆಶೀರ್ವದಿಸಬೇಕು ಸಖೀ//

ಮುಂಗಾರಿನ ಮುತ್ತಿನ ಹನಿ ಸಿಂಚನದ ಗಂಧವಿರುವುದು//
ಮಿಂಚಿನ ಬೆಳಕಿನಲಿ ಗುಡುಗು
ವಾದ್ಯವ ನುಡಿಸಬೇಕು ಸಖೀ//

ಸುಧೆಯ ಮೊಗದಲಿ ನಗುವಿನ ಆಭರಣವೊಂದೇ ಸಾಕು//
ಕವಿತೆಗಳ ಹೂಮಾಲೆ ಹಾಕಿ ನಾ ನಿನ್ನನು ವರಿಸಬೇಕು ಸಖೀ//


*ಅಮರ ಪ್ರೇಮಿಯ ಕನಸು*

*ಸುಧಾ ಎನ್. ತೇಲ್ಕರ್* ಅಮ್ಮನವರ ಗಝಲ್ ಒಂದನ್ನು ವಿಮರ್ಶೆಗಾಗಿ ಆಯ್ದುಕೊಂಡಿರುವೆ.

 ಗಝಲ್ ನನ್ನಿಷ್ಟದ ಕವನ ಪ್ರಕಾರ. ಅಂತೆಯೇ ಭಾವ ಪರವಶ ಗಝಲ್ ನನ್ನ ಮನನೆಚ್ಚಿತು. ಬಳಗದ ಉತ್ತಮ ಕವಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಸುಧಾ ಅಮ್ಮನವರ ಬರಹದ ಶೈಲಿಯೇ ಅದ್ಭುತ. ಅಂತಹ ಕವಿಯ ಪ್ರತಿ ಕವನವೂ ಓದುಗರಿಗೆ ರಸದೂಟ
 
ಪ್ರೇಮಿಯೊಬ್ಬ ತನ್ನ ಗೆಳತಿಗೆ ಬಯಸಿವ ಪ್ರೀತಿಯ ಪರಿಧಿ ಅಗಾಧ. ತನ್ನ ಸಖಿಗೆ ತಾನೇನೆಲ್ಲಾ ಮಾಡಬೇಕೆಂಬ ಕನಸು ಕಾಣುವವರಿಗೆ ಇದೊಂದು ಮಾದರಿ ಗಝಲ್. 

 ತಾನು ಮೆಚ್ಚಿದ ಹೆಣ್ಣಿಗೆ ತಾರೆಗಳನ್ನೇ ತಂದು ಅಕ್ಷತ್ ಹಾಕುವ ಪರಿ ಕವಿ ಭಾವದ ಮೇಲ್ಪಂಕ್ತಿಗೆ ಸಾಕ್ಷಿಯಾಗಿದೆ. ಆಕಾಶದ ಸೂರ್ಯ ರಶ್ಮಿಯ ಅರಶಿನ ಬಣ್ಣವನ್ನೇ ತನ್ನವಳಿಗೆ ಹಚ್ಚಬೇಕು.ಮುಂಜಾನೆ ರವಿಯ ಕಿತ್ತಳೆ ಬಣ್ಣವೇ ಅವಳ ಕೈಗೆ ಮೆಹಂದಿಯಾಗಬೇಕು. ಆಹಾ ಭವ್ಯ ಬದುಕನ್ನು ನೇಸರಕ್ಕೆ ಹೋಲಿಸಿದ ರೂಪಕ ಅಮೋಘ!

ಹುಣ್ಣಿಮೆ ಬೆಳದಿಂಗಲೇ ರೇಶ್ಮೆ ವಸ್ತ್ರವಾಗಿ, ಪ್ರಪಂಚದ ಪುಷ್ಪವೆಲ್ಲ ಅವಳ ಸ್ನಾನದ ನೀರಿನ ಸುಗಂಧಕ್ಕಾಗಿ ಬಳಕೆಯಾಗಬೇಕು! ರೂಪಕ
ಮನಸ್ಸಿಗೆ ಚಿತ್ರಕವನವನ್ನೇ ಕಟ್ಟಿಕೊಡುತ್ತದೆ!

ಬುವಿಯ ಹಸಿರು ಸಿರಿ ಪಲ್ಲಂಗವಾಗಿ ಆಗಸದಲ್ಲಿ ಮೆತ್ತನೆ ಮಲಗುವ ಕನಸು! ವಾವ್.. ಅದ್ಭುತ ಭಾವ!

ಮುಂಗಾರು ಮಳೆ ಹನಿಗಳು ಮುತ್ತುಗಳಾಗಿ ಅಮೃತ ಸಿಂಚನವಾಗಬೇಕು. ಅಲ್ಲಿ ಗುಡುಗು ಸಿಡಿಲುಗಳೇ ವಾದ್ಯಘೋಷಗಳು! ಇವು ನಮ್ಮ ಮನದಲ್ಲಿ ಒಂದು ಛಾಪೊತ್ತಿ ಕನಸು ಕಾಣುವಂತೆ ಮಾಡಲಾರವೇ?

"ಮೊಗದಲಿ ನಗುವೊಂದೇ ಸಾಕು!" ಇಷ್ಟೆಲ್ಲಾ ಮೇಲೇರಿದ ಗಝಲ್ ಕೊನೆಯಲಿ ಆಗಸದಿಂದ ಭೂಮಿಗಿಳಿದು ನೈಜತೆಯನ್ನು ಸಾರುತ್ತದೆ. ತನ್ನವಳ ಮೊಗದಲಿ ನಾನು ಬಯಸುವುದು ಕೇವಲ ನಗುವನ್ನು ಮಾತ್ರ! ಅಂದರೆ ತಾನು ಅವಳನ್ನು ಸಂತಸವಾಗಿ ಇರಿಸಬೇಕು! ಅದಕ್ಕಾಗಿ ನಾನು ಪ್ರಿಯೆಯನ್ನು ಹೇಗೆ ವರಿಸಬೇಕೆನ್ನುವಲ್ಲಿ ಒಳಗಿನ ಕವಿತ್ವ ಹೊರಗೆ ಬಂದಿದೆ! ಕವಿತೆಗಳ ಹಾರದಲಿ ನಾನವಳ ವರಿಸಬೇಕು! ಆಹಾ..ರೂಪಕವೇ! ಕವಿತೆಯನು ಆಶ್ವಾದಿಸಬಲ್ಲ ಮನಕ್ಕೆ ಬೇರೆ ಬೇಕೇ? 
    
   ವಾವ್, ಓದುಗನಿಗೊಂದು ಹಬ್ಬ ಈ ಗಝಲ್. ಪೂರ್ತಿ ಓದಿದ ಬಳಿಕ ಒಂದು ಸುಂದರ ಪ್ರಣಯದ ಸಿನೆಮಾ ನೋಡಿದ ಅನುಭವ ಕೊಡುವ ಗಝಲ್. I simply loved it!
@ಪ್ರೇಮ್@
15.04.2020

ಮಂಗಳವಾರ, ಏಪ್ರಿಲ್ 14, 2020

1388. ಸಹನೆಯ ಮೇಲೆ ೧೦ ಚುಟುಕುಗಳು

ಪದ-ಸಹನೆ
ಪ್ರಕಾರ-ಚುಟುಕುಗಳು

1. ಆಶಯ
ತೊಲಗಲಿ ಜಾತಿ ಧರ್ಮದ ಕೋಟೆ
ಮೊಳಗಲಿ ಮನದಲಿ ಸಹನೆಯ ಮೂಟೆ
ನಲಿಯಲಿ ಮಿಡಿಯುವ ಮಾನವ ಹೃದಯವು
ಜನಿಸಲಿ ನವೀನ ಸಮಾನತೆಯ ಮಗುವು!!

2.  ತಿಳಿವು
ಹೊರಗಡೆ ಬಾರದೆ ಒಳಗಿರು ಮಾನವ
ಪ್ರಾಣಿಯ ಪಂಜರದಲಿ ಹಾಕುತ ಮೆರೆದವ
ಮನದಲಿ ನಿಜ ಸಹನೆಯು ಮಡುಗಟ್ಟಿರಲಿ
ಜೀವಿಯ ವೇದನೆ ತನಗೂ ತಿಳಿಯಲಿ!

3. ಪ್ರಾರ್ಥನೆ
ಪ್ರೀತಿ -ಪ್ರೇಮ -ಶಾಂತಿ -ಸಹನೆ
ಬೆಳೆಯಬೇಕು ನಮ್ಮಲಿ,
ಕ್ರೂರ ದ್ವೇಷ-ಮೋಸ-ವಂಚನೆ
ತೊಲಗಬೇಕು ಮನದಲಿ!!

4. ಭರವಸೆ
ಇರಲದು ದೇಶಕೆ ಹಿಮಾಲಯದ ಸಹನೆ
ಬರಲದು ಮಕ್ಕಳ ನಿಷ್ಕಲ್ಮಶ ನಗೆಯು;
ನಗಲದು ಬದುಕು, ನಲಿವಿಗೆ ವಂದನೆ,
ಅಳಲದು ಕೊರೋನ-ಅಟ್ಟಹಾಸದ ನಡೆಯು!

5. ಅಹವಾಲು
ಸಹನೆಯು ಬೇಕು ನಮ್ಮಯ ಬದುಕಲಿ
ಸಹವಾಸವಿರುವ ಸರ್ವರ ಮನದಲಿ
ಸರಿಯದೆ ದೂರ ಹರುಷದ ಬಾಳಲಿ
ಸಮಾನತೆ ಬೇಕು ಜನರ ಕಾರ್ಯದಲಿ!

6. ಕಲಿಯೋಣ
ದೇಶದ ಯೋಧರ ಹಾಗೆಯೇ ನಾವು
ಜತನದಿ ಕಾಯುವ ತಾಯಿಯ ಸಹನೆಯಲಿ!
ಕಾಣದ ಕೈಗಳ ಕ್ರೂರದ ನೃತ್ಯವು
ಭಾದಿಸದಿರಲಿ ಪ್ರತಿ ಮನೆ- ಮನಗಳಲಿ!!

7.  ನಮನ
ನಿನ್ನ ಹಿತವಾದ ಸಹನೆಯ ಕಟ್ಟೆಯನು
ನಾ ಹೇಗೆ ತಾನೇ ಮರೆಯಲಿ?
ತಾಯಿ ಭರತ ಮಾತೆ ನಾನು
ನಿನಗೆ ಏನು ತ್ಯಾಗ ಮಾಡಲಿ?!

8. ರೈತ
ದುಡಿಯುವ ರೈತಗೆ ಕಾಯುವ ಸಹನೆ
ಬೆಳೆದ ಬೆಳೆ ಸಿಗಲು ಸಂತಸವು!
ನೀರು ಗೊಬ್ಬರ ಹಾಕಿ ಕಾದೊಡನೆ
ತೆನೆ ಬರಲದು ಹಿತ ಸಂಭ್ರಮವು!

9. ತಿಳಿ
ಪ್ರಕೃತಿಯ ಸಹನೆಯು ಮಹಾನ್ ಆಳ
ಅಳತೆ ಮಾಡದಿರು ಎಲೆ ಮಾನವನೇ!
ಗಾಳಿ -ನೀರು -ಬಿಸಿಲು-ಮಳೆಗಾಲ
ನಿನಗಾಗಿಯೆ ತಿಳಿಯೊ ಶತ ದಾನವನೇ!!

10. ಮಾನವಗೆ
ಮನೆ ಮನದಲಿ ಕಷ್ಟವು ಎಲ್ಲರಿಗಿರಲು
ನಿಜವನು ತಾ ಉಲಿಯಲು ತೊಂದರೆಯೇ?
ಸಹನೆಯ ತಾಳಲು ಸರ್ವಗೆ ಮನವಿರಲು
ಸಕಲವು ಸಿಗವುದು ಎಂಬುದ ಮರೆಯುವೆಯೇ?
@ಪ್ರೇಮ್@
15.04.2020









1385. ಸಂಗಾತಿಗೆ

ಸಂಗಾತಿಗೆ...

ನೀನೆಂದಿಗೂ ನನ್ನವನು
ನನಗಾಗೇ ಮೀಸಲಾದವನು
ನನ್ನ ತುಟಿಯಂಚಿನ ನಗು ನೀನು
ನನ್ನ ಕಣ್ಣಿನ ಪ್ರತಿಬಿಂಬ ನೀನು
ನನ್ನ ಹೃದಯದ ಭಾವ ನೀನು
ನನ್ನ ಪದಗಳ ಅರ್ಥ ನೀನು
ನನ್ನ ಬಾಳ ಪುಸ್ತಕ ನೀನು
ನನ್ನ ಮನದಾಳದ ನಲಿವು ನೀನು
ನನ್ನ ಉಸಿರ ಗಾಳಿ ನೀನು
ನನ್ನ ಮೆದುಳಿನ ಶಕ್ತಿ, ಯುಕ್ತಿ ನೀನೇ...

ನೀನೆನ್ನ ಬಾಳಿನ ಸಂಗಾತಿ
ನೀನೆನ್ನ ಬದುಕ ಬಂಗಾರ
ನೀನೆನ್ನ ಮನದ ಮಂದಾರ
ನೀನೆನ್ನ ಹೃದಯ ಚೋರ!

ಬದುಕ ಪರಿಸರದ ಹಸಿರು ನೀನು
ಬಾಳ ನದಿಯ ತಿಳಿನೀರು ನೀನು
ಹೃದಯ ತುಂಬುವ ಸವಿಭಾವ ನೀನು
ಬೆನ್ನು ತಟ್ಟುವ  ನೆಲೆವೀಡು ನೀನು
ನಗುವ ತರಿಸುವ ರಣಧೀರ ನೀನು!
@ಪ್ರೇಮ್@
14.04.2020

1384. ಜೋಡಿ

ಜೋಡಿ

ನಿನ್ನ ನಿಷ್ಕಲ್ಮಶ ನಗುವಲಿ ನನ್ನ ನಗುವಡಗಿದೆ
ಆ ಹೃದಯದೊಳಗೆನ್ನ ಹೃದಯ ಮಿಡಿತವಿದೆ
ಮನದ ವಾಂಛೆಗಳು ಸರಿ ಏಕವಾಗಿರಲು
ಸುಖದ ಕನಸು ಬಂದು ಇಲ್ಲೆ ನೆಲೆಗೊಳ್ಳಲು
ಕಷ್ಟ ನಮ್ಮ ನೋಡಿ ದೂರ ಓಡಿ ಹೋಗಲು
ಇಷ್ಟ ನಿನ್ನಯ ಜೊತೆಗೆ ನಾ ನಿತ್ಯ ಬಾಳಲು..

ಭಯವೆ ಇಲ್ಲವು ನಿನ್ನಿಂದ ಬಾಳ ಹಾದಿಯೊಳು
ಖುಷಿಯೆ ಅನುಕ್ಷಣ ಜೊತೆಗೆ ಸದಾ ನೀನಿರಲು
ನಗುವೆ ಮೊಗದಲಿ ಗೆಲುವು ನಮ್ಮದಾಗಿರಲು
ಸಾವು ಬಂದರೂ ಜತೆಯಲೇ ಒಂದಾಗಲು
ನಾವು ಕಾಯುತಿರುವೆವು ಸಮಯ ಬಳಿ ಬರಲು
ಪ್ರತಿ ಕನಸ ಭಾವಗಳು ಒಂದೇ ಆಗಿರಲು..

ಮನದ ಸವಿ ನಗೆಯಲಿ ಶುಭ್ರ ಬಿಳಿಮೋಡಗಳು
ವೈರತ್ವವಿರದೆ ಸಂತಸದಿ ಬದುಕೊ ಹೃದಯಗಳು
ಬೀಸು ಗಾಳಿಯಲೂ ಪ್ರೇಮದಲೆಯ ರಿಂಗಣಗಳು
ಮಮತೆ ತೋಟದಲಿ ಪ್ರತಿ ನಿತ್ಯ ಹಣ್ಣು ಹಂಪಲು
ಕ್ಷಮೆಯ ಬಯಸುತ ನಲಿಯೊ ಮಗ್ಧ ರೇಖೆಗಳು
ನೈಜದೊಳಗಡೆ ನಿಜವ ಸಾರುತಿವೆ ಘಟನೆಗಳು..

ಒಂದೆ ಭಾವನೆ ಒಂದೆ ಮಾತಿನ ಗೌರವದಲೆಗಳು
ನಯ ವಿನಯ ಸದ್ಗತಿ ಸಂಪನ್ನ ಬಾಳ ಲಕ್ಷಣಗಳು
ನಲಿವು ನೋವಿನ ಕತೆಯ ಮೊದಲ ಬಾಗಿಲುಗಳು
ಮೋಹ ಮದ ಮಾತ್ಸರ್ಯ ತೊರೆದ ಕಣ್ಣುಗಳು
ಸರ್ವ ದೇವರ ಪದ ತಳದಲಿರಿಸಿದ ಮಹಾ ಕ್ಷಣಗಳು
@ಪ್ರೇಮ್@
15.04.2020

ಭಾನುವಾರ, ಏಪ್ರಿಲ್ 12, 2020

1382. ಆಸೆ

ಆಸೆ

 ನಾ ನಿನ್ನ  ಮಡಿಲಲಿ ಮಗುವಾಗುವಾಸೆ
 ಮಳೆ ಹನಿಗಳ ನಡುವೆ ನಿನ್ನ ಕೈಹಿಡಿದು ಮುತ್ತಿಡುವಾಸೆ

 ನೂಪುರವ ತೊಟ್ಟು ಝಣಝಣವೆನುತ ನಿನ್ನ ಬಳಿ ಓಡಾಡುವಾಸೆ
 ನವಿಲಂತೆ ಕುಣಿಯುತಲಿ ನಿನ್ನ ಸುತ್ತಮುತ್ತ ನರ್ತಿಸುವಾಸೆ

 ಮನದಣಿಯೆ ಮನದರಸ ನಿನ್ನೊಡಲ ಒಳಸೇರಿ ನಿನ್ನಲ್ಲಿ ನೀನಾಗುವಾಸೆ.
 ನಗೆಬುಗ್ಗೆಯ ಚಿಮ್ಮಿಸಿ ನಗೆಗಡಲಲಿ ನಿನ್ನೊಂದಿಗೆ ತೇಲಾಡುವಾಸೆ

 ಕೈಯೊಳಗೆ ಕೈಯಿಟ್ಟು, ಕಣ್ಣೊಳಗೆ ಕಣ್ಣಿಟ್ಟು ನನ್ನೆ ನಾ ನೋಡುವಾಸೆ
 ನಿನ್ನ ಗುಳಿಕೆನ್ನೆಯಲಿ ನನ್ನೆ ನಾ ದೂಡಿಕೊಂಡು ಬೀಳುವಾಸೆ

 ಹಾರು ರಥದಲಿ ನಿನ್ನೊಡನೆ ನಭದಲಿ ಜಾರಿ ಹೋಗುವಾಸೆ..
 ನಿನ್ನ ತೊಡೆಯಲಿ ಕುಳಿತು ಎದೆ ಮೇಲೆ ತಲೆಯಿಟ್ಟು ಎಡೆಬಡಿತ ಆಲಿಸುವಾಸೆ

 ದೂರದ ದ್ವೀಪದಲಿ ತಿಳಿ ನೀರ ಬಳಿಯಲಿ ನಿನ್ನ ಬಳಸಿ ನಿಲ್ಲುವಾಸೆ
 ಸುಯ್ಯೆಂದು ಸಾಗುವ ನಾವೆಯಲಿ ನಿನ್ನೊಡನೆ ಕುಳಿತು ಸಾಗುವಾಸೆ

ತಲೆ ಮೇಲೆ ಮುಖವಿಟ್ಟು ಗಲ್ಲದಲಿ ಬೆರಳಿಟ್ಟು ಫೋಟೋ ತೆಗೆವಾಸೆ!
ಹನಿ ನೀರ ಮುತ್ತುಗಳ ಎಡೆಬಿಡದೆ  ನಿನಗೆರಚಿ ತಣಿಸುವಾಸೆ
@ಪ್ರೇಮ್@
12.04.2020

1381. ಲೇಖನಿ

ಲೇಖನಿ

ನನ್ನಯ ಲೇಖನಿ ಬರೆವುದು ವೇಗದಿ
ಕನ್ನಡ, ಇಂಗ್ಲಿಷ್, ಹಿಂದಿಯನು!
ಅಷ್ಟೇ ಅಲ್ಲವು ಅದರಲಿ ಬರೆವುದು
ನನ್ನ ಮನದ ಆಳವನು..//

ಬುದ್ಧಿಯ ಜ್ಞಾನದ ಪದಗಳು ಬಂದು
ಬರಹ ಎನ್ನುತ ಕೂರುವುವು
ಪುಸ್ತಕ ಹಿಡಿದು ಕುಳಿತರೆ ಬರುವುದು
ಪೆನ್ನಿನ ಶಾಯಿಯ ಲೇಖನವು//

ಕತೆ , ಕಾದಂಬರಿ, ಕವನವೋ, ಕಾವ್ಯವೊ
ಬರೆಯಲು ಲೇಖನಿ ಬೇಕಲ್ವೇ?
ಹಾಳೆಯ ಮೇಲೆ ನೃತ್ಯವ ಮಾಡುತ
ಶಾಯಿಯ ಚೆಲ್ಲೋದೆ ಬದುಕಲ್ವೇ?//

ಪೆನ್ನಿನ ಕೆಲಸವು ಪೆನ್ನಿಗೇ ಗೊತ್ತು!
ಅಳಿವಿನ ಅಂಚಲಿ ಇಹುದಿಂದು!
ಡಿಜಿಟಲ್ ಯುಗವು, ಕೈ ಬರಹವು ಕಡಿಮೆ
ಸೀಲಲೆ ಸಹಿಯನೂ ಹಾಕುವರು!!//

ಲೇಖನಿ ಸರಿಯುತಲಿಹುದದು ದೂರಕೆ
ಕಂಪ್ಯೂಟರ್ ಪಾಠವ ಕೇಳಣ್ಣ!
ಗುಂಡಿಯ ಒತ್ತುತ ಬರೆವುದ ಕಲಿತು
ಈ ಪೆನ್ನನು ಮರೆಯಲು ಬೇಡಣ್ಣ!
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ, ದ.ಕ
premauday184@gmail.com

ಶನಿವಾರ, ಏಪ್ರಿಲ್ 11, 2020

1383. ವಿಮರ್ಶೆ ಎನ್. ಬಿ. ಹಿಳ್ಳೆಯವರ ಭಾವಗೀತೆ

ವಿಮರ್ಶೆ

"ಕರವನು ಪಿಡಿಯದೆ ಇಹನೇನು?" ಎನ್ .ಬಿ. ಹಿಳ್ಳೆಯವರ ಕವನ ನಾನು ಆಯ್ದುಕೊಂಡದ್ದು. 
             ಮೊದಲಿಗೆ ನಾನು ಯಾಕೆ ಇದೇ ಕವನವನ್ನು ಆಯ್ದುಕೊಂಡೆನೆಂಬುದಕ್ಕೆ ಎರಡು ಮಾತು. ಕೊರೋನಾದಿಂದಾಗಿ ಲೋಕಕ್ಕೆ ಲೋಕವೇ ಲಾಕ್ ಡೌನ್ ಆಗಿದೆ. ಅಂತೆಯೇ ನಾನೂ ಲಾಕ್ ಡೌನ್. ನನ್ನ ಮನಸ್ಸಿಗೆ ಸಾಂತ್ವನ ಕೊಟ್ಟು ನನ್ನನ್ನು ಮಾನಸಿಕವಾಗಿ ಸದೃಢಗೊಳಿಸಿ, ನನ್ನಲ್ಲಿ ಶಕ್ತಿ ತುಂಬಿದ ಕವನವಿದು. ನಾನು ನಾರಾಯಣ ಭಟ್ರ ಕವನಗಳ ಅಭಿಮಾನಿ ಕೂಡಾ. ಅವರನ್ನು ನೋಡಿಲ್ಲ, ಸಾಮಾಜಿಕ ಜಾಲ ತಾಣಧಲಿ ಅವರ ಕವಿತೆಗಳನ್ನೋದಿ ಖುಷಿ ಪಡುವವರಲ್ಲಿ ನಾನೂ ಒಬ್ಬಳು.

     ಕವಿತೆಯ ವಿಚಾರಕ್ಕೆ ಬಂದರೆ ಇದೊಂದು ಉತ್ತಮ ಭಾವಗೀತೆ, ಭಕ್ತಿಗೀತೆ ಹಾಗೂ ಪ್ರಾರ್ಥನಾ ಗೀತೆ. ಶರ ಷಟ್ಪದಿಯಲ್ಲಿ ರಚಿತವಾದ ಪದಪದಗಳಲ್ಲೂ ಸಂತಸ ಕೊಡುವ ಹಾಡುಗಾರರು ಸುಲಭವಾಗಿ ತಾವೇ ಸ್ವರ ಸಂಯೋಜನೆ ಮಾಡಿ ಸಂತಸಪಟ್ಟು ಹಾಡಬಹುದಾದ ಗೀತೆ.

    ಇದನ್ನೋದುವಾಗ ನನಗೆ ದಾಸರ 'ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ… " ಈ ಹಾಡೊಮ್ಮೆ, ಮಗದೊಮ್ಮೆ ಎನ್ ಎಸ್. ಲಕ್ಷ್ಮಿ ನಾರಾಯಣ ಭಟ್ಟರ "ಯಾರು ಜೀವವೇ ಯಾರು ಬಂದವರೂ…" ಕವನಗಳು ನೆನಪಾದವು.  "ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿಹಲು…." ಕನಕದಾಸರೂ ನೆನಪಾದರು. ಸರಳ ಸಾಲುಗಳಲಿ ಓದಿಸಿಕೊಂಡು ಹೋಗುವ, ಸುಶ್ರಾವ್ಯ ಕಂಠವಾಗಬಹುದಾದ ರೂಪಕವಿದು. 

   ಮನದಣಿಯೆ ಓದಿ ಭಟ್ಟರ  ಕಾವ್ಯ ಕಟ್ಟುವ ಕಲೆಗೆ ಶರಣಾದೆ. ಭಯ ಹೋಗಿ ನೆಮ್ಮದಿ, ಸಾಂತ್ವನ, ನಂಬಿಕೆ ಬೆಳೆಸಿದ ಕವನವಿದು.  ಕವನದಲಿ ಭಾಷಾ ಚಿಹ್ನೆಗಳು ಟೈಪಾಗದಿದ್ದುದು ಬೇಸರ ತರಿಸಿತು. ಮುಂದಿನ ಜನಾಂಗ ಅವುಗಳನ್ನೆಲ್ಲ ಮರೆತೇ ಬಿಡುವುದೇನೋ ಎಂಬ ಭಯ, ಭಾಷಾ ಶಿಕ್ಷಕಿಯಾಗಿ ಕಾಡುತ್ತಿದೆ ನನ್ನ. ನಾವೆಷ್ಟು ಭಾಷಾ ಚಿಹ್ನೆಗಳ ಕಡೆಗಣಿಸುತಿರುವೆವು ಎಂಬುದಕ್ಕೂ ಈ ಕವನ ಉತ್ತರದಂತಿದೆ. ಬೇಕೋ, ಬೇಡವೋ ಜಿಜ್ಞಾಸೆಯಲ್ಲೇ ನಾವಿದ್ದೇವೆ. ಕೆಲವರಂತೂ ಕವನದಲಿ ಬೇಡವೆಂದೇ ವಾದಿಸಿ ಅದನ್ನೆಲ್ಲ ತೊರೆದಾಗಿದೆ. ಕಾಲಕ್ಕೆ ತಕ್ಕನಾಗಿ ನಾವೂ ಹೊಂದಿಕೊಂಡು ಹೋಗಬೇಕಾಗಿದೆ ಅಲ್ಲವೇ.
    ಅದೇನೇ ಇರಲಿ , ಕವನದ ಪದ ಬಳಕೆ, ಪ್ರಾಸಗಳು, ಅರ್ಥವತ್ತಾದ ರಚನೆ ನನ್ನನ್ನು ಸೆಳೆಯಿತು. "ಕವನ ಎಂದರೆ ಹೀಗಿರಬೇಕು" ಎಂಬ ಭಾವನೆ ಮೂಡಿತು. 
  ಸರ್, ಇಂತಹ ನೂರಾರು ಕವನಗಳು ನಿಮ್ಮ ಲೇಖನಿಯಿಂದ ಹೊರಬರಲಿ,ನಮ್ಮ ಮನಸ್ಸು, ಕಣ್ಣು, ಕಿವಿಗೆ ಆನಂದ, ಶಕ್ತಿ ನೀಡಲಿ ಎಂಬ ಶುಭ ಹಾರೈಕೆಗಳೊಂದಿಗೆ,
ಧನ್ಯವಾದಗಳು.
@ಪ್ರೇಮ್@
12.04.2020

ಶುಕ್ರವಾರ, ಏಪ್ರಿಲ್ 10, 2020

1385. ಭಾವಗೀತೆ-ಉಸಿರೇ

ಉಸಿರೇ...

ಮನದ ಸನಿಹ
                ತಾನೇ ಬಂದೆ
ಒಲವ ರಾಗ
               ನೀನೇ ತಂದೆ..

ಉಸಿರಿನಲ್ಲೂ ಬೆರೆತ
                ಭವ್ಯ ಪ್ರಾಣವೇ
ಅರಿವಿನಲ್ಲೆ ನಡೆದು
               ಬಂದ ಮೋಹವೇ..

ಎದೆಯ ಭಾವ
              ಹೊಮ್ಮಿ ಚೆಲ್ಲಿ
ನಗೆಯ ಕಡಲು
              ಉಕ್ಕಿ ಹರಿದು..

ಭಾವದಲೆಯ ಏರಿ
              ನಿಂದ ಮೌನವೇ
ವಿನಯದಿಂದ ಬೆರೆತ
              ಪ್ರೇಮ ನಾದವೇ..
@ಪ್ರೇಮ್@
09.04.2020

1384. ಸುಮಧುರ ಬದುಕು

*ಸುಮಧುರ ಬದುಕು*

*ಸಮರವು ಬೇಡವು ಸುಮಧುರ ಬಾಳಲಿ*
*ಸಮರಸ ಜೀವನ ನಡೆಸುವ ಸಾಲಲಿ*//

*ಮನದಲಿ ಸಂತಸ ಮನೆಯಲಿ ಸಾಹಸ*
*ಉತ್ಸಾಹ ತರುತಲಿ ನವೀನ ಭಾವಕೆ*
*ವದನದಿ ನಗುವೂ, ಮಾತಲಿ ಸತ್ಯವು*
*ಸುಖಮಯ ಜೀವಕೆ ಬೇಕದು ನಿತ್ಯವು*//

*ನೀತಿಯು ಇರಲು ಪ್ರೀತಿಯ ಮಾತದು*
*ಸೂಕ್ತವು ಜಗದಲಿ ಚಿನ್ಮಯ ಸೂಕ್ತಿಯು*
*ಮಂಗಳ ವಾದ್ಯದ ಗಾನದ ಜೊತೆಗದು*
*ನಯನದ ಚೆಲ್ಲಾಟ ಹರಿವಿನ ಗೀತೆಯು*//

*ವಿಷಯದ ಆಳಕೆ ನಿಶೆಯಲಿ ಸೇರುತ*
*ಮನಸಿನ ಬಯಕೆಗೆ ಬೇಲಿಯ ಕಟ್ಟುತ*
*ಸವಿನುಡಿ ಸವಿಮನ ಆಸರೆ ಎಂದಿಗು*
*ಬೆರೆಯುತ ಸಾಗಲು ಕಷ್ಟವ ಮುರಿಯುತ*//
@ಪ್ರೇಮ್@
10.04.2020

1383. ಭಾವಗೀತೆ-ಮನದೊಂದಿಗೆ

*ಮನದೊಂದಿಗೆ*

*ನಾನೆ ನೀನು ನೀನೆ ನಾನು*
*ನಮ್ಮ ನಡುವೆ ಏನಿದೆ?*
*ಭಕ್ತಿ ನಾನು ಪ್ರೀತಿ ನೀನು*
*ಬೇರೆ ಬದುಕು ಎಲ್ಲಿದೆ?*

*ಜಾತಿ ಮತವು ನಮಗೆ ಎಲ್ಲಿ?*
*ತನುವು ನಿನ್ನಲೈಕ್ಯವು*
*ಕ್ರಾಂತಿ ಹಿತವು ನೀಡದಿಲ್ಲಿ*
*ಮುರಿಯದಿರಲಿ ಮೌನವು.*

*ಜ್ಯೋತಿ ನಾನು ಸ್ಫೂರ್ತಿ ನೀನು*
*ಸತ್ಯವಿಲ್ಲಿ ಜಗದಲಿ.*
*ಶಾಂತಿ ನಾನು ಕೀರ್ತಿ ನೀನು*
*ಮಿಥ್ಯವೆಲ್ಲಿ ಭವದಲಿ?*

*ನೀತಿ ಇರಲಿ ಶಕ್ತಿ ಬರಲಿ*
*ಹರುಷ ಎಂದೂ ಬಾಳಿಗೆ!*
*ಮುಕ್ತಿ ಬೇಕು ಯುಕ್ತಿ ಸಾಕು*
*ಹಸಿರ ಭಾವ ಬಳ್ಳಿಗೆ!*

1382. ಮೂರು ಚುಟುಕುಗಳು

ಚುಟುಕುಗಳು


ದೇಹವೆಂಬುದು ಗಾಳಿ ಕಾಣಿರೊ
ಲೋಕ ನಮ್ಮಯ ಆಲಯ;
ಬಂದು ಹೋಗುವವರೆಗೆ ಕಾಲವು
ಹೋದ ಕೂಡಲೆ ನಾವು ಲಯ!!


ಲೋಕದ ಡೊಂಕನು ತಿದ್ದಲಾರೆವು!
ಕಾಲ ಬರಲು ಸರಿಯಾಗಬಹುದು;
ದೇಹದ ಕೊಳೆಯನಷ್ಟೆ ತಿಕ್ಕಬಲ್ಲೆವು;
ಗಾಳಿಯಲಿಹ ಕ್ರಿಮಿ ಸರಿದೂಗಿಸಬಹುದು!


ಕಾಲ ಕೆಟ್ಟು ಹೋಗಿಹುದು ಎನ್ನುವೆಯಾ?
ಗಾಳಿಯ ನಾವು ಕೆಡಿಸಲಿಲ್ಲವೇ ಗೆಳೆಯಾ?
ಲೋಕವೆಲ್ಲ ಹಾಳಾಯಿತು ಎನ್ನುವೆಯಾ?
ದೇಹದೊಳಗಿನ ಆಲೋಚನೆ ಬದಲಿಸೆಯಾ?
@ಪ್ರೇಮ್@
08.04.2020

1381. ಮೂರು ಶಾಯರಿಗಳು

*ಮೂರು ಶಾಯರಿಗಳು*

*ಶಾಯರಿ-೧*

*ಕಲ್ಲೆದೆಯೂ ಕರಗುವುದು ಪ್ರೀತಿಯಲಿ, ಜಗದಿ ಮಲ್ಲನೂ ಮೆಲುವಾಗುವನು!*
*ಸುಳ್ಳು ಹೇಳಿಯಾದರೂ ಒಲಿಸಿಕೊಳ್ಳುವ ಪರಿ ನಲ್ಲ-ನಲ್ಲೆಗಿಲ್ಲಿ ಒಲಿದಿಲ್ಲವೇನು?*

*ಶಾಯರಿ-೨*

*ಗುಡಿಯೊಳಗಿಹ ನಿನ್ನ ಕಂಡು, "ಈ ಕಲ್ಲಿಗೇನು ಗೊತ್ತು ಪ್ರೀತಿ" ಎಂದೆನು!*
*ಮನೆಗೆ ಬಂದು ನೋಡಲು, ನಿನ್ನಿರವ ಕಂಡು ನಾನೇ ಕಲ್ಲಾಗಿ ಹೋದೆನು!!*

*ಶಾಯರಿ-೩*

*ದಾನ, ಮಾನಕಿಂತಲೂ ಸುರಪಾನವೇ ಮೇಲು!ಸುರೆಯಿರದೆ ಸಾಯುತಿಹರು ಒಬ್ಬೊಬ್ಬರಾಗಿ!*
*ಸರಸರನೆ ಕುಡಿದೊಡೆ ಒತ್ತಡವು ಮಾಯ, ನಿಶೆಗೆ ಗೆಳೆಯರಿಹರು ಸಾಲು ಸಾಲಾಗಿ!!!*

ಗುರುವಾರ, ಏಪ್ರಿಲ್ 9, 2020

1379. Love is life

Lu lot dear
 with my 
every nerves
Every cells
Every muscles
Evey feelings
Sweet brain
Cute heart
All the veins
Two little eyes
Air flow pipes
Ten shine fongers
Lovely face
Chubby cheek
Fantastic chin
Straight hair
Sweet kisses...
@Prem@
10.04.2020

ಬುಧವಾರ, ಏಪ್ರಿಲ್ 8, 2020

1378. ಸಂಕ್ರಾಂತಿ

ಸಂಕ್ರಾಂತಿಯ ಶುಭಾಶಯಗಳು


ಭೂಮಿ ಸೂರ್ಯರಿಗೆ ಮಾತ್ರವೇ?
ನಮ್ಮಲ್ಲೂ ಆಗಲಿ ಹೊಸ ಸಂಕ್ರಾಂತಿ,
ಪ್ರತಿ ಮನದಲ್ಲೂ ಮೂಡಲಿ
ಸಹನೆ, ಒಗ್ಗಟ್ಟಿನ ಕ್ರಾಂತಿ!

ಎಳ್ಳು, ಬೆಲ್ಲ, ಕಬ್ಬು ಎಲ್ಲ
ಜತೆ ಸೇರಿ ಮರೆಸಲಿ ಸುಖ-ದುಃಖ
ಸಮನಾಗಿ ಸ್ವೀಕರಿಸೋಣ ಬದುಕ
ಇಲ್ಲೆ ಇದೆ ಸ್ವರ್ಗ-ನರಕ!

ಸಂಕ್ರಾಂತಿ ಹಸನಾಗಿಸಲಿ ಬಾಳು
ಕೊನೆಯಾಗಲಿ ನಮ್ಮೆಲ್ಲರ ಗೋಳು
ಹಳೆಯ ನೋಟಿನಂತಾಗದಿರಲಿ ರದ್ದಿ
ದೇವ ಕಲಿಸಲಿ ಸರ್ವರಿಗೂ ಬುದ್ಧಿ...

ಸಕಲ ಆಸೆಗಳು ನೆರವೇರುವಂತಾಗಲಿ
ಆಕಾಂಕ್ಷೆಗಳು ಬೇಗನೆ ಫಲಿಸಲಿ
ಬಾಳ ಭವನ ಏರಿ ಸಾಗಲಿ
ನೂರಾರು ಶುಭಾಶಯಗಳು ಹರಿದು ಬರಲಿ...
@ಪ್ರೇಮ್@

1377 ನನ್ನ ವಿಮರ್ಷೆ

ವಾವ್...
ವಾಣಿ ಮೇಡಂ ರವರಿಂದ ಪ್ರೇರಿತವಾಗಿ...ಈ ವಿಮರ್ಶೆಗೆ ಪ್ರಯತ್ನ..

ಸಿರಾಜ್ ಸರ್
...
************************
"ದೇವನು ಕೋಲು ಬೀಸಿದನು"
*************************

ಗಟ್ಟಿಯಾದ ಮೋಡಗಳು
ಪದೇ ಪದೇ ಗುಡು ಗುಡುಗಿ
ದೇವನ ಮೊರೆ ಹೋಗುವವು..
ಸುರಿಯಬೇಕು ಇಳೆಗೆ ನಾವು
ತಿಳಿಯಾಗಿಸಿ ಮಳೆಯಾಗಿಸಿ
ಕಳಿಸು ಧನ್ಯವಾಗುವೆವು...೧

👍👍👍👍👍👍👍

ವಾವ್..ಪರ್ಸಾನಿಫೈಡ್ ಸಾಲುಗಳ ಅಂದನೇ ಅಂದ...ಮೋಡಗಳ ಮನವನ್ನು ಮುಟ್ಟಿ, ಮೆದುಳ ಆಲೋಚನೆಗಳ ಕದ್ದಿರುವಿರಿ ಸರ್ ನೀವು...
👌👌👌👌👌👌

ಮೋಡಗಳ ಮೊರೆ ಕೇಳಿದ
ದೇವನು ಕೋಲು ಬೀಸಿದನು..
ಮಹಾಮಹಿಮೆಯ ಬೆಳಕ್ಹರಿಸಿ
ಕೋಲ್ಮಿಂಚು ತೋರಿಸಿದನು...೨

👍👍👍👍👍👍👍
ದೇವನ ಕೋಲು ಬೀಸುವಿಕೆಯೇ ಕೋಲ್ಮಿಂಚಾಯಿತು! ನಮಗದು ಕಂಡಿತು..ಸೂಪರ್ ಕವಿಭಾವ...
👌👌👌👌👌👌

ಇದು ಕೋಲ್ಮಿಂಚೋ? ದೇವನ
ಅನನ್ಯ ಲೇಖನಿಯೋ?..
ಬಾನಂಗಳದಲಿ ಹೊಳೆಯುವ
ಭಾರೀ ಬೆಳಕಿನ ವಿಶಾಲ ರೇಖೆ
ದೇವನ ಹಸ್ತಾಕ್ಷರವೋ...?೩

🙏🙏🙏🙏🙏🙏
ಕನ್ಫ್ಯೂಜನ್ ಸ್ಟೇಜ್..ಪೆನ್ನೋ, ಕೋಲೋ,ಹಸ್ತಾಕ್ಷರವೋ..ರವಿ ಕಾಣದುದ ಕವಿ ಕಂಡ...ಅದ್ಭುತ ಸರ್..
👍👍👍👍👍👍👍

ಧರೆಯ ನೀರನು ಧರೆಗೆ ಚೆಲ್ಲಿ
ಹಸಿರು ಬೆಳೆಸುವಾತನು..
ಆವಿಯನ್ನು ಮೋಡವಾಗಿಸಿ 
ಕರಗಿಸಿ ಮಳೆಯಾಗಿಸುವನು...೪
🙏🙏🙏🙏🙏
ದೇವರ ಅದ್ಭುತ ಕಾರ್ಯಗಳಲಿ ಮಳೆ ಸುರಿಸುವುದೂ ಒಂದು..ಇಂದ್ರ, ವರುಣ,ವಾಯು, ಅಗ್ನಿ..ಹೀಗೆ..ಅದರ ವರ್ಣನೆ ವಾವ್..ಎನ್ನುವಂತಿದೆ..
👌👌👌👌👌
ಧರೆಯಂತಹ ಅಗಣಿತ ಗೋಳ
ಅವನ ಕರದಲ್ಲಿವೆ..  
ಸಕಲ ಜೀವಕೋಟಿ ಸೃಷ್ಟಿಗಳು
ಅವನ ಅಧೀನದಲ್ಲಿವೆ...೫
🙏🙏🙏🙏🙏🙏
Thank you god for the world so sweet, 
Thank you god for the food we eat.. 
god's love is so wonderful... 
ಮೊದಲಾದ ಆಂಗ್ಲ ಕವನ, ರೈಮ್ಸ್ ಗಳು ಈ ಸಾಲನ್ನೋದುವಾಗ ಒಟ್ಟಾಗಿ ನೆನಪಾದವು ಸರ್..ದೇವರು ತನ್ನೆರಡು ಕರಗಳಲಿ ಭೂಮಿಯ ಹಿಡಿದಂತೆ..
ಸೂಪರ್ ಭಾವ.. ವಂಡರ್ಫುಲ್ ಕವನ..
@ಪ್ರೇಮ್@

1376. ಗಝಲ್ ದಿಲ್-28

ಗಝಲ್

ಮಲ್ಲಿಗೆ ಗಿಡ ಬಾಡಿ ಹೋದೊಡೆ
ಹೂವರಳಿಸಬಹುದೇ ದಿಲ್?
ಮರ ಕಡಿದು ಉರುಳಿಸಿದ ಜಾಗದಿ ಮತ್ತೆ ಹಣ್ಣ ಕಾಣಬಹುದೆ ದಿಲ್?


ಮರೆತುಾ ಮರೆಯಲಾರೆ ನಿನ್ನೊಡನೆ ಕಳೆದ ಕ್ಷಣಗಳನು.
ಮದಿರೆಯಂದದಿ ಮತ್ತೆ ಮತ್ತೆ ಜೀವಹಿಂಡಿ ನೆನಪಾಗದೆ ದಿಲ್?

ಮನವು ಅತ್ತು ಹಿಂಡಿ ಹಿಪ್ಪೆಯಂತಾಗಿದೆ ಈಗ.
ಮುದದಿ ಜತೆಗೂಡಿದ ಮುಸುಕು ಕನಸುಗಳು ಕಾಣಲಾರದೆ ದಿಲ್?

ಕರಿಮೋಡಗಳು ಬರಲು ಒಳಗಿಹ ಚಂದಿರ ಕಾಣುವನೇ?
ಕಡಿದಾದ ಬಾಳಲಿ ಬೆಳಕು ಬರುವುದೇ ನೀನಿರದೆ ದಿಲ್?

ಮೊಹಬ್ಬತ್, ಪ್ಯಾರ್, ಇಶ್ಕ್ ಎಲ್ಲವೂ ನಿನ್ನೊಳಿತ್ತು.
ಮತ್ತೊಬ್ಬರ ನಿನ್ನಂತೆ ಕಾಣಲು ಮನ ಒಪ್ಪುವುದೆ ದಿಲ್?

ಮುಸ್ಸಂಜೆಯಂದದಿ ಬಾಡಿಹುದು ಬದುಕ ಹೂವು.
ಮೌನ ತಬ್ಬಿದ ಮನಸು ಮುದುಡಿ ಹೋಗಿದೆ ದಿಲ್.

ಪ್ರೇಮವಿದ್ದರೆ ಬಾಳು, ಇರದಿದ್ದರೆ ಹೋಳಾದಂಥ ಗೋಳು!
ಪರರ ಪ್ರೀತಿಯಲಿ ನಿನ್ನನರಸಲು ಸಾಧ್ಯವಾಗುವುದೆ ದಿಲ್?
@ಪ್ರೇಮ್@

1375. ನನ್ನ ಹೆಮ್ಮೆ

ನನ್ನ ಹೆಮ್ಮೆ

ಹಚ್ಚ ಹಸುರಿನ ಸ್ವಚ್ಛ ಹಳ್ಳಿಯು
ನನ್ನದೆ ಆಗಿಹುದು
ಹಾಲನು ಹೊತ್ತ ಎತ್ತಿನ ಗಾಡಿಯು
ಪಟ್ಟಣಕೋಡಿಹುದು .

ಭತ್ತದ ಗದ್ದೆಯು ನಮಗಾಗೆಂದೂ
ಊಟವ ನೀಡಿತ್ತು!
ಮನೆಯಲಿ ದನಕರು ಹೋರಿಯೂ ಕೂಡಾ
ಸಂತಸದಲಿ ನಲಿದಿತ್ತು..

ಗದ್ದೆಯ ಉಳುಮೆಗೆ ನಾನೂ ಹೋಗುವೆ
ಅಪ್ಪನ ಹೆಗಲಲ್ಲಿ
ಹಾರುತಲಿರುವ ಚಿಟ್ಟೆಯ ಹಿಡಿವೆ
ಅಕ್ಕನ ಜೊತೆಯಲ್ಲಿ..

ಎತ್ತಿನ ಬಂಡಿಯು ಪೇಟೆಗೆ ಹೋಗಲು
ಮಾವನ ಕೈಹಿಡಿದು..
ಕೈಯಲಿ ತುಂಬಾ ಕಡಲೇಕಾಯಿ
ತಿನ್ನುತ ನಾ ನಡೆದು..


ಪ್ರತಿದಿನ ಕೆರೆಯಲಿ ಸ್ನಾನವ ಮಾಡಿ
ಉಲ್ಲಾಸ ಮನಕೆಲ್ಲಾ..
ನಮ್ಮಯ ಹಳ್ಳಿಯ ಅಂದವ ಕಂಡು
ಹೆಮ್ಮೆ ನಮಗೆಲ್ಲಾ..
@ಪ್ರೇಮ್@
08.01.2020

1374. ಅಮವಾಸ್ಯೆ ಬೇಡ

ಅಮವಾಸ್ಯೆ ಬೇಡ..

ಚಂದದ ಚಂದಿರನೆ ನೀನೇಕೆ ನನಗಿಂದು ಅಮವಾಸ್ಯೆಯ ನೀಡಿದೆ?
ನನ್ನ ಕಾಣಲು ಬರದೆ ಅಮವಾಸ್ಯೆಯ ಕತ್ತಲನು ತುಂಬಿದೆ!

ಚುಕ್ಕಿ -ತಾರೆಗಳು ಮಿನುಗುತಿಹವು ತಮ್ಮದೇ ದರ್ಪದಲಿ!
ಆದರೇನು, ಇಳೆಗೆ ಕಳೆ ತರಲು ನೀನೇ ಬೇಕಲ್ಲವೇ ಇರುಳಲಿ?

ಹಗಲು ರವಿ ಕೊಡುವ ಬಿಳುಪು ಕಿರಣಗಳ ಕಾಂತಿ ಒಂದು ಬದಿಗೆ,
ಮತ್ತೆ ನನ್ನ ಬೇರೆ ಬದಿಯನೂ ತಣಿಸಬೇಕಲ್ಲವೇ ನೀತಿಯಲಿ ಸರ್ವರಿಗೆ!

ನೀನೇಕೆ ಬರದಾದೆ ಆದಿತ್ಯನ ಕಾಂತಿಯನೇ ಹೊತ್ತು ತಂಪಾಗಿ?
ತಿರೆ ಕಾದಿಹಳು ಬಾಳ ನಿಶೆಯ ಬೆಳಕಿಗಾಗಿ!

ಇಂದ್ರನ ರಥವ ದತ್ತು ಪಡೆದಾದರೂ ನೀ ಬರಬೇಕಿತ್ತು!
ಅಮವಾಸ್ಯೆಯೆಂಬ ಪದವ ನಿನ್ನ ಶಬ್ದಕೋಶದಿ ಅಳಿಸಿ ಹಾಕಬೇಕಿತ್ತು!

ನಿನ್ನಿರವೆ ನನಗೆ ಖುಷಿ ತಿಳಿಯದೇ ಸೋಮನೇ?
ನೀ ಬರಲು ಹಾಲ್ಚೆಲ್ಲಿದ ಬೆಳದಿಂಗಳು, ಮರೆತೆಯಾ ಮಾಮನೇ?

ಚಂದ್ರೋದಯದ ಗಳಿಗೆಗೆ ತಡಮಾಡದಿರು ಎಂದೆಂದೂ..
ಧರಣಿ ಕಾದು ಬೆಂಡಾಗಿಹಳು ತಿಳಿದುಕೋ ಮುಂದೂ..

ವಿರಹದುರಿಯಲಿ ಬೇಯುವೆ ನೀನಿರದ ಕ್ಷಣಗಳಲಿ
ಗಾಢಾಂಧಕಾರದಲಿ ನೆನೆಯುವೆ ನೀ ಬರದ ಕರಾಳ ಕಪ್ಪಿನಲಿ..

ಬೇಸರಿಸದಿರು ಧರಿತ್ರಿ ಮನವ ಅಮವಾಸ್ಯೆನು ತಂದು,
ಬೇಡುತಿಹೆ ಬೆಳಕ ನೀಡು ನೀನು ಮನಕೆ  ವರುಷದಲಿ ಪ್ರತಿದಿನವೂ ಬಂದು!
@ಪ್ರೇಮ್@
30.01.2020

ಡಿಸೆಂಬರ್ 2020 ಯ ವಿಮರ್ಶೆಗಳು

[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/24/2019, 11:14 PM] Wr 100 Ahmd: ಗುರುಗಳೆ ನಮಸ್ತೆ👏

ನೀವು ಶಿರೋನಾಮೆಯ ಬಗ್ಗೆ ಹೇಳಿದ್ದೀರಿ ತಪ್ಪಿಲ್ಲ ನಿಮ್ಮ ಮಾತು ಆದರೆ ಕಾವ್ಯಕ್ಕೆ ಭಾಷೆಯ ಪರಿವಿಲ್ಲ ಜೊತೆಗೆ ಎಲ್ಲ ಭಾಷೆಯ ಕಾವ್ಯಗಳು ಉಳಿದ ಭಾಷೆಗೆ ಹರಿದಾಡುತ್ತವೆ 

ನಾನು ಈ ಮುಖಪುಟವನ್ನು ಮೂರು ತರಹದಲ್ಲಿ ಊಹಿಸಿ ಪ್ರಕಟಿಸಿರುವೆ 

ಮೊದಲಿಗೆ ಜಲಾಲುದ್ದಿನ ರೂಮಿ ಮತ್ತು ಶಮ್ಸ್ ತಬರೇಜ್ ಅವರ ಗುರುಭಕ್ತಿಯ ಮತ್ತು ಶಿಷ್ಯರ ಸಂಭದ್ದದ wailding dance ಅನ್ನುವ ಅರ್ಥದಲ್ಲಿ

ನಂತರ ಬೆಳಕಿಗೆ ಮುಖ ಒಡ್ಡಿದಾಗ ಕಣ್ಣು ಉಲ್ಲಾಸಗೊಳಿಸುವ ಜೀವನೋತ್ಸಾಹದ ಉನ್ಮಾದ ಹೊಂದಿರುವ ಭಾವನೆ

ಇನ್ನೊಂದು ಅಂದರೆ ನನ್ನ ಮಡದಿಯ ಹೆಸರು ತಬಸ್ಸುಮ್ ಅಂದ್ರೆ ಮುಗುಳುನಗೆ ನನ್ನ ಹೆಸರು ನೂರ್ ಅಂದರೆ ಪ್ರಕಾಶ ನೂರ್ ಏ ತಬಸ್ಸುಮ್ ಎಂದರೆ ಪ್ರಕಾಶದಲ್ಲಿ ಬೆಳಕು ಎನ್ನುವ ಭಾವದಿಂದ ಈ ಶೀರ್ಷಿಕೆ ಕೊಟ್ಟಿರುವೆ ....👏👏👏👏👏
[12/31/2019, 4:26 PM] Wr Siraj Ahmed Soraba: *ಸಾವನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಾನೇ ಬರೆದ
ಒಂದು ಉದು೯ ಗಜಲ್*

*ಗಜಲ್*

ಖುಷಿಯಾಂ ಬರಸೆ ಸಾವನ್ ಕೀ ತರಹ್
ಜಿಂದಗಿ ಮೆಹಕೆ ಚಂದನ್ ಕೀ ತರಹ್

ಕೋಯೀ ಮುಷ್ಕಿಲ್ ಸತಾಯೇ ನಾತುಝೆ 
ಚಮಕ್ತಾ ರಹೇ ತೂ ಕುಂದನ್ ಕೀ ತರಹ್ 

ತೂ ಅಗರ್ ಚಲ್ತಾ ರಹೇ ರಾಸ್ತೇ ಖುದ್ ಖುಲೇ
ಕಾಮಿಯಾಬಿ ರಹೇ ಆಂಗನ್ ಕೀ ತರಹ್ 

ತೇರೆ ಜನಮ್ ದಿನ್ ಪರ್ ದುಆ ಕರೇಗಾ ಸಿರಾಜ್
ಮನ್ಜಿಲ್ ತುಝೆ ಪ್ಯಾರ್ ಕರೆ ಮಧುಬನ್ ಕೀ ತರಹ್

*ಯು ಸಿರಾಜ್ ಅಹಮದ್ ಸೊರಬ*
[12/31/2019, 4:49 PM] Wr Siraj Ahmed Soraba: ನನ್ನ ಉದು೯ ಗಜಲ್ ನ ಕನ್ನಡಾನುವಾದ

*ಗಜಲ್*

ಹರುಷಗಳ ಬರುತಿರಲಿ ಮಳೆ
ಸಿಂಚನದ ಹಾಗೆ
ಜೀವನದಲಿ ಕಂಪು ಹರಡಲಿ 
ಚಂದನದ ಹಾಗೆ

ಯಾವ ಕಷ್ಟವೂ ಕಾಡದಿರಲಿ
ನಿನಗೆ 
ಬೆಳಗುತಿರು ಗೆಳೆಯ ನೀನು
ಕುಂದನದ ಹಾಗೆ 

ನೀ ನಡೆವಾಗ ದಾರಿಗಳು ಖುದ್ದು
ತೆರೆದುಕೊಳ್ಳಲಿ 
ವಿಜಯವು ನಿನಗಾಗಿರಲಿ ನಿನ್ನ
ಅಂಗನದ ಹಾಗೆ 

ನಿನ್ನ ಜನುಮ ದಿನಕ್ಕಾಗಿ ದುಆ
ಮಾಡುವನು ಸಿರಾಜ್
ಗಮ್ಯವು ನಿನಗೆ ಪ್ರೀತಿಸುತಿರಲಿ 
ಮಧುಬನದ ಹಾಗೆ
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*

ಜನವರಿ 2020ರ ವಿಮರ್ಶೆಗಳು

[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[1/15, 11:56 AM] +91 70267 76576: ಪ್ರೇಮಾ ಜೀ ಅವರ
  ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ  ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ

ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...

ಜಯಶ್ರೀ...
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ‌ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ. 
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ. 
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ. 
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ  ಅವರ  ಪ್ರಾಣ 

*   ಪ್ರಾಣ  ಅಮೂಲ್ಯ .
*  ಅದನ್ನು  ಚೆನ್ನಾಗಿ  ಪದಗಳ ಜೋಕಾಲಿಯಲಿ ಇಟ್ಟು  ಚೆನ್ನಾಗಿ 
ತೂಗಿದ್ದೀರಿ
*   ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ  ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.

ಪ್ರಪಂಚ  ಸಮತೋಲನ  ಇಲ್ಲದಿರೆ ಉರುಳುವುದು ಸತ್ಯ

ಎಂಬುದನ್ನು  ಅರಿತರೆ ಒಳಿತು .

ಉತ್ತಮ  ಕಥೆ  ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏

ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....

ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.

ಕೆ ಎಸ್ ಗೀತಾವಿಜಯ ಕುಮಾರ್
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ  ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ 


ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.

ನೀತಿ ಕಲಿ...

ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...

ಧನ್ಯವಾದಗಳು.

ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

ಶಿವಪ್ರಸಾದ್ ಆರಾಧ್ಯ

ಫೆಬ್ರವರಿ 2020 ವಿಮರ್ಶೆಗಳು

[2/10, 5:40 PM] Wr Mogeri Shekhar Devadiga: *ರುಬಾಯಿ*

ಮಾಡಬೇಕಯ್ಯ ಯೋಗ, ವ್ಯಾಯಾಮ
ರೋಗರುಜಿನಗಳಿಗೆ ಅದು ಪಂಗನಾಮ
ಚಾಟಿ ಬೀಸಿದರಿಲ್ಲಿ ಕವಿ *ಲಿಂಗರಾಜರು*
ಪರಾವಲಂಬಿ ಬದುಕಿಗೆ ಹಾಕಿ ವಿರಾಮ

*ಮೊಗೇರಿ ಶೇಖರ ದೇವಾಡಿಗ*
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.

ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ

ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.

ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ

 ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ

👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ

👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ

👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ

👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ

👉🏻ಕೊನೆಯ ಚರಣ ಹಿಡಿಸಿತು

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ

 ಸಾಮಾನ್ಯವಾಗಿ   ನಾವು  ಪ್ರಾರ್ಥನೆ ಮಾಡುವಾಗ  ಅದು ಕೊಡು,  ಇದು ಕೊಡು,  ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ,  ಆದರೆ ಕವಯತ್ರಿ  ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ,  ದ್ವೇಷ ಅವುಗಳನ್ನು  ನೀಗಿಸಿ ಎಲ್ಲರಲ್ಲಿ  ಪ್ರೇಮಭಾವವನ್ನು ತುಂಬಿ,  ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು  ಸ್ತುತಿಸಿದ್ದಾರೆ.   ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಾ  ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ.  ಸದುದ್ದೇಶದ  ಕವನ 🙏
[2/15, 6:02 PM] Wr Nagamma: ಪ್ರೇಮ್ ‌ಜೀ🙏🏼

ನಿಮ್ಮ 
ಶಿವಸ್ತುತಿಗೆ..

ತಲೆ‌ದೂಗಿದೆ..

ನನ್ನ ‌ಗುಣಗಳ ‌ಉತ್ತುಂಗಕ್ಕೇರಿಸು..ವಾವ್ ಸೂಪರ್..

ಚೆಂದದ ‌ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!

ತಮ್ಮ..ಸುಂದರ ವಾದ‌ಶಿವಸ್ತುತಿಗಾಗಿ..

ಧನ್ಯವಾದಗಳು.

ಎಸ್. ನಾಗಮ್ಮ🌹
[2/17, 11:47 AM] Wr Prashanth R Dyvajna: 💐🙏 ಪ್ರೇಮ್ ಸರ 🌹

ಬದುಕು ಬಂಗಾರ🌹

🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌


ಅಂದದ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏

👉🏻ಕವನದ ಆಶಯ ಸೂಪರ್

👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.

👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು

👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..‌ಲಗುಬಗೆಯಿಂದ ಬರೆದಿರುವಿರಿ ಅನಿಸಿತು


ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻

ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ.  ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..

ಧನ್ಯವಾದಗಳು ತಮಗೆ 🙏
[2/19, 7:08 AM] Wr Shivaprasad Aradhya: ಪ್ರೇಮ ಕವಿಯತ್ರಿಯ ಬರಹ
ಚ್ಚ ಚ್ಚ ಆದಿಪ್ರಾಸದಲಿ ಹುಚ್ಚ ಎಬ್ಬಿಸಿ ಕುಣಿಸಿವತಣಿಸಿದ ಕವಿಗೆ ಶರಣು ಆದರೆ ತುಚ್ಛಗೆ ದಾನ ಮಾಡಬಾರದು.ಅರ್ಹರಿಗೆ ನೀಡಬೇಕು ಪ್ರಾಸ ದ ಬರದಲಿ ತಪ್ಪಾಗಿದೆ.ಒಟ್ಟಾರೆ ಪ್ರಾಸದ ಬರದಲಿ ಹೀಗೂ ಹುಚ್ಚೆದ್ದು ಬರೆಯಬಹುದೆಂದು ತೋರಿಸಿದ್ದೀರಿ ಅಬ್ಬಬ್ಬಾ ಭಲೇ ಕವಿಯೇ ನೀವೇನು ಸುಮ್ಮನೇನಾ ಎಚ್ಚರವಾಗಿರಬೇಕು ವಿಮರ್ಶೆಗೂ ಮುನ್ನ

ಶಿವಪ್ರಸಾದ್ ಆರಾಧ್ಯ
[2/25, 8:51 AM] Wr Anuradha Shivaprak: ಪ್ರೇಮ್ ಅವರ ಭಾರತೀಯರ ಬುದ್ಧಿ

ಇಂದಿನ ದಿನಗಳಲ್ಲಿ ಭಾರತೀಯರಾದ ನಾವು ಭಾರತದ ಮೂಲ ಸಂಸ್ಕೃತಿ ಮರೆತು ವಿದೇಶಿಯರ ಅನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ. ವಿಕೃತ ಮನಸ್ಸಿನ ಸ್ಥಿತಿಯೂ ಹೌದು. ಭಿಕ್ಷುಕರಂತೆ ಹರಿದ ಬಟ್ಟೆ ಹಾಕಿಕೊಳ್ಳುವುದು ಮಿನಿ ಮಿಡಿಗಳಲ್ಲಿ ಅಂಗ ಪ್ರದರ್ಶನ ಮಾಡುವುದು ನಿಜಕ್ಕೂ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ. 

ಒಳ್ಳೆಯತನವ ಅರಿತುಕೊಂಡು ಅದರಂತೆ ಬದುಕೋಣ ಹಾಯ್ ಬಾಯ್ ಬಿಟ್ಟು ಗೌರವಪೂರ್ವಕ ನಮಸ್ಕಾರ ಸಲ್ಲಿಸೋಣ ಎಂಬ ಆಶಯ ಹೊಂದಿದ ಕವನ ನಿಜಕ್ಕೂ ಉತ್ತಮವಾಗಿದೆ
[2/28, 11:43 AM] +91 70267 76576: ಪ್ರೇಮಾ ಜೀ ಅವರ💐 ಅರ್ಪಿತ  ಹಾರ💐
      ಹನಿ ಬಳಗವ ಹೆಣೆದು ಸಾಹಿತ್ಯ ಸೇವೆ ಮಾಡುತ್ತಿರುವ ಕವಿಮನಗಳಿಗೆ ಅರ್ಪಿಸಿದ ನಿಮ್ಮ ಕವನ ಸುಂದರ ಜಿ... ಬಿಡುವಿಲ್ಲದ ಸಮಯದಲ್ಲಿ ತಿದ್ದಿ ತಿಡಿ ಕಲಿಸುವ ಬಳಗದ ಕಾರ್ಯ ಶ್ಲಾಘನೀಯ.... ಪ್ರೀತಿ, ಸ್ನೇಹ ಮಮಕಾರದಿ ಬೆಳೆಸುವ ಬಳಗ.ಉಳಿ ಪೆಟ್ಟು ಬಿದ್ದಾಗಲೇ ಕಲ್ಲೊಂದು ಮೂರ್ತಿ ಆಗುವದು ಹಾಗೆ ಹೀರಿಯರು ನಮ್ಮ ತಪ್ಪುಗಳನ್ನ ನೇರವಾಗಿ ಹೇಳಿದಾಗ ಬೇಸರಿಸದೆ ತಿಳಿದುಕೊಂಡು ಕಲಿತರೆ ಖುಷಿ ಇಂದ ಕಲಿಯಬಹುದು. ಪ್ರತಿಯೊಂದು ಅಕ್ಷರದ ಸಾಲುಗಳು ವಜ್ರದ ಹಾರಗಳಾಗಿ ಕನ್ನಡಾಂಬೆಯ ಶೃಂಗರಿಸುವ ಭಾವ ವಾವ್ ಅದ್ಭುತ ಜಿ..  ನಿಮ್ಮ ಬಳಗದ ಪ್ರೀತಿಗೆ ಶರಣು ಹೇಳುತ್ತ ಅನಿಸಿಕೆಗಳು ತಪ್ಪಾದಲ್ಲಿ ಕ್ಷಮೆ ಇರಲಿ ಜೀ 
ಧನ್ಯವಾದಗಳು ...

ಜಯಶ್ರೀ..
[2/28, 1:18 PM] Wr Manjula B K: ಪ್ರೇಮ್ ಅವರ ಪದಗಳ ಹಾರ 

ಒಂದು ವಿಭಿನ್ನ ವಿಷಯವನ್ನು ಕವಿತೆಯಲ್ಲಿ ಕವಿತೆಯ ಬಗ್ಗೆಯೇ ಕವನ ರಚಿಸಿದ ಬಗೆ ಸೊಗಸು. 

ಒಂದು ಕವಿತೆಯನ್ನು ರೂಪಿಸುವಾಗ ಯಾವ ಹಂತಗಳನ್ನು ಅನಿಸರಿಸಿದರೆ ಉತ್ತಮ ಕವಿತೆ ರೂಪಿತವಾಗುತ್ತದೆ ಎನ್ನುವ ಸಾಲುಗಳು ಉತ್ತಮ. 

ಮಂಜುಳಾ. ಬಿ. ಕೆ
[2/28, 3:08 PM] Wr Vara Lakshmi Amma: ಪ್ರೇಮ ಅವರ **ಅರ್ಪಿತ ಹಾರ*

 ಸುಂದರವಾದ ಹೂಮಾಲೆಯೊಂದನ್ನು  ಅಂದವಾದ  ಪದ ಸಮೂಹದಿಂದ ಪೋಣಿಸಿ ಅರ್ಪಿಸಿದ್ದಾರೆ.  ಹಿಂದಿನಿಂದ ನಾರು ಸ್ವರ್ಗಕ್ಕೆ ಸೇರುವಂತೆ  ಈ ಹನಿ ಹನಿಬಳಗಕ್ಕೆ ಬಂದ ಕವಿಗಳು ಬರೆಯುತ್ತಾ ತಿದ್ದುತ್ತಾ ಉತ್ತಮ ಗುಣಮಟ್ಟದ  ಸಾಹಿತ್ಯ ನೀಡುತ್ತಾರೆ.  ಇಂಥ ಬಳಗಕ್ಕೆ ಇವರ ಹಾರದ ಅರ್ಪಣೆ ನಿಜಕ್ಕೂ ವಂದನೀಯ.  ಉತ್ತಮ ಬರಹಗಾರರ ಪ್ರೇಮ ಅವರ ಸಾಹಿತ್ಯ  ಸೇವೆಯಲ್ಲಿ  ಹೀಗೆ ಮುಂದುವರಿಯಲಿ ಎಂದು ಹಾರೈಸುವ🙏

ಮಾರ್ಚ್ 2020 ವಿಮರ್ಶೆಗಳು

[3/2, 7:18 AM] Wr Shivaprasad Aradhya: ಪ್ರೇಮ ಕವಿಗಳು ಚೆನ್ನಾಗಿ ಬರೆದಿದ್ದಾರೆ ಆದರೆ ಚಿಕ್ಕ ಚಿಕ್ಕ ಸಾಲುಗಳ ಮಾಡಲು ಕವನವಾಗಿ ಕಾಣಿಸುತ್ತದೆ. ಅದರೆ ಉದ್ದುದ್ದವಾಗಿ ನವ್ಯದಲೂ ಬರದೆ ಗಪದ್ಯವಾಗಿ ಬರೆದರೂ ಉತ್ತಮ ಸಂದೆಶಗಳು ಅತ್ಯುತ್ತಮ ಭಾವಗಳ ಕವನ ಇದು. ಶುಭವಾಗಲಿ ಕವಿಗಳೇ ಶುಭವಾಗಲಿ

ಶಿವಪ್ರಸಾದ್ ಆರಾಧ್ಯ
[3/2, 9:43 AM] Wr Kumar Chalawadi: 🌿🌿🌿
@ಪ್ರೇಮ್@ ರವರ" ನನ್ನ ನೋಡಿ ಕಲಿ" ಶೀರ್ಷಿಕೆ ಓದಿಯೇ ಕವನ ಓದಬೇಕೆನಿಸುತ್ತದೆ! ಚಂದಿರನ ಸ್ವಗತ ಗೀತೆಯಾಗಿ ಮನಸೆಳೆಯುತ್ತದೆ! ಬೆಳಕನ್ನು ಪ್ರತಿಫಲಿಸುವ ಚಂದಿರನ ತ್ಯಾಗ ಮನೋಭಾವವನ್ನು ತಮ್ಮ ಕವನದ ಸಾಲಿನಲ್ಲಿ ಮೇಳೈಸಿದ ರೀತಿ ಚೆಂದ! ' ಪರರಿಗೆ ಸಹಾಯ ಮಾಡುವ ಮನಸಿರಬೇಕು'! 
ಪಾಕ್ಷಿಕಕೊಮ್ಮೆ ಗೋಚರಿಸುವ ಚಂದಿರ 
ಕರಗಿ ಹೋಗುವಂತೆ ' ಮೆರೆದರೂ ಕರಗಿ ಹೋಗುವ' ಸಾಲಿಗೆ ಹೋಲಿಸಿದ್ದು ಆಕರ್ಷಕ!
ಚಂದದ ಕವನ!
🌿🌿🌿
[3/3, 8:16 AM] Wr Shvetha Priya Prashant: *ಪ್ರೇಮ್ ಮೇಡಂ ಅವರ* ಬೇಸರವಾಗಿದೆ ನನಗೆ ಶೀರ್ಷಿಕೆಗೆ ತಕ್ಕಂಕೆ ಹಠ ಮಾರಿತನ ಎದ್ದು ಕಾಣ್ತ ಇದೆ ಕೋತಿ ಮರಿಯನ್ನು ಮನದಲ್ಲಿಟ್ಟುಕೊಂಡು ದೂರವಾದ ಯಾರನ್ನೋ ನೆನಪಿಸಿಕೊಂಡು ಮನದಲ್ಲೇ ಬೈಯ್ದುಕೊಳ್ಳುತ್ತಾ ನೀನಿಲ್ಲದೆ ನನಗೆ ಬೇಸರವಾಗಿದೆ ಯಾಕೋ ಈ ಸಿಟ್ಟು ಸಿಡುಕು ನಿನ್ನ ಸಲುಗೆ ನನಗೆ ಬೇಕೇ ಬೇಕು ಎಲ್ಲಿದ್ದರೂ ಬಾ ಎನ್ನುತ್ತಾ ಕವಿಯುವು ಹತಾಷೆಯನ್ನು ಹೊರಹಾಕಿದ್ದಾರೆ. ಚೆಂದವಿದೆ ಮೇಡಂ.

ಧನ್ಯವಾದಗಳು
*ಶ್ವೇತಪ್ರಿಯ*
[3/4, 7:26 AM] Wr Varalaxmi K N: ನಮಸ್ತೆ ಪ್ರೇಮ ಮೇಡಮ್. 

ಮಹಿಳಾ ದಿನಾಚರಣೆ ಸಮೀಪವಿರುವಾಗ ಹೆಣ್ಣಿನ ಪ್ರಾಧ್ಯಾನತೆ ಬಗ್ಗೆಯೂ ನಿಮ್ಮ ಕವನ ಬೆಳಕು ಚೆಲ್ಲಿದೆ. 
ತನ್ನ ಕಂದಮ್ಮಗಳಿಗೆ ಹೊಟ್ಟೆತುಂಬಾ ಆಹಾರ ಕೊಡಲು ತನ್ನ ಜೀವನವ ಮುಡಿಪಿಡುವ ಬಗೆಯ ಕವನದಲ್ಲಿ ಸೊಗಸಾಗಿ ವಿವರಿಸಿದ್ದೀರಿ. 
ತಪ್ಪಿದ್ದರೆ ತಿದ್ದಿ 
 ಧನ್ಯವಾದಗಳು ಮೇಡಮ್ 🙏

ಕೆ ಎನ್ ವರಲಕ್ಷ್ಮಿ
[3/4, 2:12 PM] Wr Nagamma: ಪ್ರೇಮ್ ಜೀ

ನಿಮ್ಮ
ಉಣಿಸುವ ಕೈಗಳು...

ಬಹಳ ಸುಂದರವಾಗಿ ಮೂಡಿದೆ..

ಅಮ್ಮನ..ಹಿರಿಮೆ ಗರಿಮೆ..ಹಾಡಿದ ಪದ ಗಳು..ಅವಳ ದುಡಿಮೆಯ ಕರಗಳಿಗೆ..ವಂದಿಸಿದೆ..

ಧನ್ಯವಾದಗಳು...

ಎಸ್.ನಾಗಮ್ಮ🌹
[3/5, 7:39 AM] Wr Prashanth R Dyvajna: 🌹 ಪ್ರೇಮ ಮೇಡಂ ಜೀ💐🙏

🌹ಅರ್ಪಣೆ🌹

       ಹೃದಯದ ಅಂತರಂಗದಿ ಭಕ್ತಿ ಭಾವದಿಂದ ಹಾಡಿದ ಕವನ, ಭರತಮಾತೆಯ ಮಡಿಲಲ್ಲಿ ಜನಿಸಿದ ಜನ್ಮ ಧನ್ಯ ಎಂದು ಹೇಳುತ ಜೀವನ ಬಾಂಧವ್ಯ ಸಾರುತ ಸೃಷ್ಟಿ ಸಂಕುಲವ ಸಾರಿದ ಬರಹ ಅಭಿನಂದನೆಗಳು 👌👌👌


ಸುಂದರ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[3/12, 11:30 AM] Wr Nagamma: ಪ್ರೇಮ್ ಜೀ🙏🏼

ದಾರಿ ಯಾವುದಯ್ಯಾ

ಸ್ವಲ್ಪ ಗಳಿಗೆಯಾದ ಇಂಟರ್ನೆಟ್ ಇಲ್ಲದೆ....ನೈಜ ವಾಗಿ..ಎಲ್ಲರೊಡನೆ ಮುಕ್ತ ವಾಗಿ‌ಬೆರೆಯಲಿ..
..ಎಲ್ಲರೂ ಇಂಟರ್ನೆಟ್..ಲೋಕದಲ್ಲಿ...ಲೀನವಾಗಿ..ನಮ್ಮನ್ನೇ ನಾವು ಕಳೆದು ಕೊಂಡಿದ್ದೇವೆ ಎಂಬ..

ಸಮಾಜಿಕ‌ಕಳಕಳಿಯ ಕವನ..
ಕ್ಕಾಗಿ ಧನ್ಯವಾದಗಳು.

ಎಸ್.ನಾಗಮ್ಮ🌹
[3/12, 7:55 PM] Wr Venktesh Chagi: *ಪ್ರೇಮ್ ರವರು ಇಂಟರ್ನೆಟ್ ಬೇಡ ಎನ್ನುತ್ತಿದ್ದರೆ. ಆದರೆ ಇಂಟರ್ನೆಟ್ ಇಲ್ಲದೇ ಇಂದಿನ  ಜಗತ್ತು ಜಗತ್ತು ಇಲ್ಲ. ವಾಸ್ತವವಾಗಿ ಇಂಟರ್ನೆಟ್ ಬೇಕು ಆದರೆ ಬಳಕೆಯ ಮಿತಿ ಮೀರಿದೆ. ಕವನದಲ್ಲಿ ಇಂಟರ್ನೆಟ್ ನ ಅಗತ್ಯತೆಯ ಬಗ್ಗೆ ಒಂದೆರಡು ಸಾಲುಗಳಿಗೆ ಅವಕಾಶ ಕೊಡಬಹುದಿತ್ತು. ಪ್ರಾಸಕ್ಕೆ ಕೊಟ್ಟ ಪ್ರಾಶಸ್ತ್ಯ ಕಡಿಮೆಯಾಗಬಹುದಿತ್ತು. ಕವನ   ಚೆನ್ನಾಗಿದೆ.*

✍ *ವೆಂಕಟೇಶ ಚಾಗಿ*
[3/13, 9:11 AM] Wr Mallesh G Raj: ಪ್ರೇಮ್ ಗುರುಗಳ ಕವನ ಜಲಸಾಗರದಲ್ಲಿ ಏರೀಳಿಯುವ ಅಲೆಗಳ ತೆರನಲಿ ಪ್ರಶ್ನಾಮಾಲಿಕೆಯಂತೆ ಮೂಡಿದೆ.ಯಾರಿದು ಅವರನ್ನೇ ಪ್ರಾಮುಖ್ಯೀಕರಿಸಿದ್ದರೆ ಕವನದ ಸ್ತರ ಇನ್ನೂ ಚೆಂದಿರುತ್ತಿತ್ತೇ ಯೋಚಿಸಿ,ಬುವಿ ಪದ ಗಮನ ಸೆಳೆದದ್ದು  ಒಟ್ಟಾರೆ ಉತ್ತಮ ಪ್ರಯತ್ನ ಶುಭೋದಯದ ಮೊದಲ ಕವನ 👍🏻 ಕವಿ ಭಾವ ಚ್ಯುತಿಯಾಗಿರಲು ಕ್ಷಮೆ ಇರಲಿ.
[3/14, 1:50 PM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್. 
  ಮಳೆರಾಯ ಪ್ರೇಮಾ ಮೇಡಮ್    ಎಷ್ಟು ಚೆಂದದಿ ಕರೆಯುತ್ತಾ ಇರುವರು .ದಯಮಾಡಿ ಬಂದುಬಿಡಿ ಮಳೆರಾಯ.
ಮಳೆರಾಯನಿಗಾಗಿ  ಮನುಜ ಮತ್ತು ಪಶುಪಕ್ಷಿಗಳು ಪರಿತಪಿಸುವ ಕವನಕೆ ನಮನಗಳು ಮೇಡಮ್. 
ತಪ್ಪಿದ್ದರೆ ತಿದ್ದಿ 
ಧನ್ಯವಾದಗಳು ಮೇಡಮ್ 
ಕೆ ಎನ್ ವರಲಕ್ಷ್ಮಿ
[3/14, 3:22 PM] Wr Mallesh G Raj: ಪ್ರೇಮ್ ಮೇಡಂ ನಿಮ್ಮಲ್ಲಿ ಇನ್ನೂ ಮಳೆಯಾಗಿಲ್ಲವೇ?  ನೀವು ಕವನ ಬರೆದ ಮೇಲೂ ಆಗಿಲ್ಲ ಅಂದರೆ,  ಆಗಿರಲೇಬೇಕು.ಪ್ರಾರ್ಥನೆಯ ಮೊರೆ  ವರುಣನಿಗಾಗಲೇ ಮುಟ್ಟಿರಬಹುದು 🙏
[3/16, 2:09 PM] +91 84313 19753: ಪ್ರೇಮ ಮೇಡಂ 

ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ 

ಉತ್ತಮ ಸಂದೇಶ ಹೊತ್ತು ತಂದಿದೆ 

ಕವನದೊಳಗಿನ 
ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು. 

ಧನ್ಯವಾದಗಳು
[3/17, 1:30 PM] Wr Manjula B K: ಪ್ರೇಮ್ ಅವರ ಹಂಚಿ ತಿನ್ನೋಣ 

ಮನುಷ್ಯನ ಬದುಕು ಮೂರು ದಿನದ ಸಂತೆ. ಅದರಲ್ಲಿ ಹಂಚಿ ತಿನ್ನುವುದುರಲ್ಲಿ ಇರುವುದು ಸುಖ ಎನ್ನುವ ಸಂದೇಶ ಉತ್ತಮ. 

ಪಾಲಿಗೆ ಬಂದಿರುವುದು ಪಂಚಾಮೃತ ಎನ್ನುವ ಹಾಗೆ ನಮಗೆ ಸಿಕ್ಕ ಅನ್ನದ ಪಾಲಿನಲ್ಲಿ ನಾವು ಸುಖ ಕಾಣಬೇಕು. 

ಮಂಜುಳ
[3/18, 8:04 AM] +91 84313 19753: ಪ್ರೇಮ ಮೇಡಂ 
ಅವರ ಮುಸ್ಸಂಜೆ 

ಚನ್ನಾಗಿ ಮೂಡಿ ಬಂದಿದೆ 
ಯಾರಿಗೂ ಯಾರುಂಟು ಎರವಿನ ಸಂಸಾರಗೊಳಗೆ ಎಂಬಂತೆ ಮುಗ್ದ ಮನಸ್ಸುಗಳ ಒಳಲಾದದೊಳಗೆ ಅಡಗಿರುವ ನೋವು ನಲಿವಿನ ಕಥನವಾಗಿದೆ.  

ಧನ್ಯವಾದಗಳು 
ಬಸವರಾಜ ಲಿಂಗಸ್ಗೂರು. 
(ಕವಿಭಾವಕ್ಕೆ ದಕ್ಕೆಯಾದಲ್ಲಿ ಕ್ಷಮೆ ಇರಲಿ)
[3/18, 10:30 AM] +91 99724 97039: 🙏🏻ಪ್ರೇಮ್ ಮೇಡಂ 
ತಾವು ಬದುಕಿನ ಇಳಿ ವಯಸ್ಸನ್ನು ಮುಸ್ಸಂಜೆಗೆ ಹೋಲಿಸಿ, ಈ ಸಂದರ್ಭದಲ್ಲಿ ಸತಿಗೆ ಪತಿ ಪತಿಗೆ ಸತಿ ಆಸರೆ ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ  ಧನ್ಯವಾದಗಳು ಮೇಡಂ
[3/18, 3:04 PM] Wr Deepa Sadanand: ನಮಸ್ತೇ ಪ್ರೇಮ ಮೇಡಮ್... 

ಬಾಳ ಸಂಜೆಯಲಿ , ನನಗೆ ನೀನು, ನಿನಗೆ ನಾನೆನುತ.. ನೆಮ್ಮದಿಯ ಬದುಕನ್ನು ಜೀವಿಸೋಣ, 
ಮಕ್ಕಳ ಲಾಲನೆ ಪಾಲನೆ ಪೋಷಣೆಗಳೆಲ್ಲಾ ನಮ್ಮ ಕರ್ತವ್ಯ ಜವಾಬ್ದಾರಿಯೆಂದು ಮುಗಿಸಿಯಾಗಿದೆ.. 
ನಮ್ಮ ಈ ಜೀವನದಲ್ಲಿ 
ಈ ಸಂಜೆಯನ್ನು ಯಾರಿಗೂ ಹೊರೆಯಾಗದೇ ಸುಂದರವಾಗಿ ಕಳೆಯೋಣ ಎಂದ ಕವನ ಸುಂದರವಾಗಿ ಮೂಡಿಬಂದಿದೆ.. 
ಧನ್ಯವಾದಗಳು 

ದೀಪಾಸದಾನಂದ..
[3/19, 6:39 AM] Wr Vani Bhandari: ಪ್ರೇಮ್ ಜಿ 
ನಿಮ್ಮ ಕವನ ಸುಂದರ ಅರ್ಥಪೂರ್ಣತೆಯಲ್ಲಿ ಕವನ ಒಡಮೂಡಿದೆ 
 ಚೂಪರ್ 🌹🌹ಮೇಡಂ.
☕☕
[3/19, 11:57 AM] Wr Manjula B K: ಪ್ರೇಮ್ ಅವರ ಅಲ್ಲೋಲ ಕಲ್ಲೋಲ 

ಪ್ರಕೃತಿಯ ನಾಶದಿಂದ ಪ್ರಾಣಿಗಳ ಜೀವನ ನಿಜಕ್ಕೂ ಅಲ್ಲೋಲ ಕಲ್ಲೋಲವೇ ಸರಿ. 

ನಾಡ ಮಾಡಲು ಹೊರಟಿಹನು ಮನುಜ ಪ್ರಾಣಿಗಳ ಜೀವನವನ್ನೇ ತನ್ನ ಅಳಿವಿಗೂ ಅದುವೇ ಕಾರಣ ಎಂಬುದೇ ಕಾರಣ ಎಂದು ಮರೆತ. 

ಮಂಜುಳ. ಬಿ. ಕೆ
[3/20, 12:06 PM] Wr Veena Joshi Ankola: ಕವನ _೧

ಇಂದಿನ ಮೊದಲ ಕವನ ಪ್ರೇಮ್ ಅವರ ನೆಮ್ಮದಿ .

ಮೊದಲ ಮೂರು ಪ್ಯಾರಾಗಳು
ಜೀವಿಯೊಂದು ಪುಣ್ಯಫಲದಿಂದ ಭೂಮಿಯ ಮೇಲೆ ಜನಿಸಿದಾಗ ',
ಅದು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತುಂಬಾ ಭಾವಪೂರ್ಣವಾಗಿ ವಿವರಿದ್ದಾರೆ.ಪ್ರೀತಿ ಪ್ರೇಮದಿಂದ ಹಂಚಿಕೊಂಡು ಬದುಕುವುದರ ಮಹತ್ವವನ್ನು ಮನೋಜ್ಞವಾಗಿ ಬಿಂಬಿಸಿದ ಪರಿ ಚಂದ .
ಮುಂದೆ ಬರೆಯುತ್ತಾ ಕವಿಗೆ ಕೋ ವೈರಾಗ್ಯ ಭಾವ ಕಾಡಿದೆ ಇಲ್ಲಿ ತಂದುದೇನೂ ಇಲ್ಲ ತೆಗೆದುಕೊಂಡು ಹೋಗುವುದೇನೂ ಇಲ್ಲ ಆದರೂ ಈಮನುಷ್ಯ ಎಲ್ಲವೂ ತನ್ನದೇ, ತಾನೇ ,ಎಂದು ಮೆರೆಯುತ್ತಾನೆ .ಕೊನೆಗೆ ಉಳಿಯುವುದೇನು ಇಲ್ಲ ಕೇವಲ ಇಲ್ಲಿ ಹಂಚಿದ ಪ್ರೀತಿ ಮಾತ್ರ .....
ಇದು ಎಲ್ಲರೂ ಅರಿತ ಸತ್ಯವೇ ಆದರೂ ..ಚಿತ್ರ ಕವನಕ್ಕೆ ಇದನ್ನು ಹೊಂದಿಸಿ ಬರೆದ ಬಗ್ಗೆ ಮನಸ್ಸಿಗೆ ಹಿತ ನೀಡಿತು.
ಹೀಗೆ ಬರೆಯುತ್ತಿರಿ ಶುಭವಾಗಲಿ .
ವೀಣಾ 🌹🌹
[3/23, 3:01 PM] +91 94492 29189: ಪ್ರೇಮ್ ಅವರು ಬರೆದ ಛಾಯಾಗ್ರಾಹಕ ಕವನ  "ಛಾಯಾಗ್ರಾಹಕ" ಚಂದ್ರನನ್ನು ಛಾಯಾಗ್ರಾಹಕನಿಗೆ ಹೋಲಿಸಿ ಪ್ರಕೃತಿಯನ್ನು ಅವನ ಕಣ್ಣುಗಳಿಂದ ನೋಡುವ ರೀತಿ ಮಜವಾಗಿದೆ ಕವಿಯ ಕಲ್ಪನೆ ಚೆನ್ನಾಗಿದೆ.ಮತ್ತು ಎಲ್ಲ ಜಾತಿಧರ್ಮದವರು ಚಂದ್ರನನ್ನು ಹೆಗೆ ಅವಲಂಬಿಸಿದ್ದಾರೆ ಎಂಬುದನ್ನು ಸೂಚ್ಯವಾಗಿ ವಿವರಿಸಿದ್ದೀರಿ...ದನ್ಯವಾದಗಳು
[3/24, 7:39 AM] Wr Indira P K: ಪ್ರೇಮ ಮೇಡಂ ರವರೆ ನಮಸ್ತೆ🙏🙏
ಕರುಣಾಜನಕ ಸ್ಥಿತಿ.
ಕುಡುಕ ಗಂಡನ ಜೊತೆಗಿರುವ ಸಂಸಾರದಲ್ಲಿನ ಹೆಣ್ಣಿನ ಭವಣೆಯ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಹಾಗೂ ಅಲ್ಲಿರುವ ನೂರೆಂಟು ಸಮಸ್ಯೆ ಗಳ ಚಿತ್ರಣವಿರುವ ಕವನ ಸುಂದರವಾಗಿದೆ .💐
[3/24, 10:14 AM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್. 

ಜೀವನಕ್ಕೆ ಬೇಕಾದ ಊಟ ಬಟ್ಟೆ ವಸತಿ,  ಪಡೆಯಲು  ಬೇಕಾಗಿರುವುದುದುಡಿಮೆ  .ಇಷ್ಟು ಇದ್ದರೆ ಜೀವನವ ನಿಶ್ಚಿಂತೆಯಿಂದ ಸಾಗಿಸಬಹುದು  ಎಂಬ ಸಾರ ಹೊಂದಿಹ,  ಜೀವನದ ಕಟುಸತ್ಯ ತಿಳಿಸಿಹ ಕವನಕೆ ನಮನಗಳುಮೇಡಮ್. 
ತಪ್ಪಿದ್ದರೆ ತಿದ್ದಿ.
[3/26, 3:15 PM] Wr Vinuta Kicchikeri: ಪ್ರೇಮ್ ಜೀ 🙏

ಆರಾಮಾಗಿ ಓದಿಸಿಕೊಂಡು ಹೋಗುವ ಕವನ...ಯಾವತ್ತಿನಂತೆ ಇಂದು ಕೂಡ ಚಂದದ ಕವನ.ಯಾವ ಚಿತ್ರ ಕೊಟ್ಟರೂ,ಯಾವ ವಿಷಯ ಕೊಟ್ಟರು ಬರೆವ ನಿಮಗೊಂದು ಶರಣು..‌

ಇಂದಿನ ಚಿತ್ರಕ್ಕೆ ವಾಸ್ತವದ ಅರಿವನ್ನು ಮೂಡಿಸಿ ,ಅದನ್ನು ಕವನವಾಗಿಸಿ ಬಹಳ ಸುಂದರ ವಾಗಿ ಬರೆದಿರುವಿರಿ...

ಧನ್ಯವಾದಗಳು💐👏
ವಿನುತಾ ಕಿಚ್ಚಿಕೇರಿ
[3/26, 3:25 PM] Wr Shivaprasad Aradhya: ಪ್ರೇಮ್ ಜೀ ವಾವ್ವ ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಭಲೇ ಸಿರಿಚಂತರ ಫಾರಿನ್ ಕಾಯಿಲೆಯಿದು ಹರಡಿದವರು ಇಲ್ಲಿಂದ ಹೊರಗೆ ದುಡಿಯಲು ಹೋದವರು ಹಾಗೂ ಯಾತ್ರಾರ್ಥಿಗಳು ಈಗ ಅನುಭಿಸುವ ಕಷ್ಟ ಸಾಮಾನ್ಯರು ಕೂಲಿಯವರು ಹಾಗೂ ಅನಾಥರು ಹಾಗೂ ಬಿಕ್ಷುಕರಿಗೆ ಖೋಜಾಗಳಿಗೆ ಸ್ಲಂವಾಸಿಗಳಿಗೆ ಬಹಳವಾಗಿ ಕಷ್ಟ ತಂದಿದೆ.ಬಂದ ನಿಮ್ಮ ಕವನದ ಸರಳತೆ ಚೆಂದ.

ಶಿವಪ್ರಸಾದ್ ಆರಾಧ್ಯ
[3/27, 9:15 AM] Wr Ganesh Pai: ಪ್ರೇಮಾ ಗುರುಗಳೇ ನಮಸ್ತೆ,

ಜೀವನೋತ್ಸಾಹಕ್ಕೆ ಪ್ರಚೋದನೆ ತುಂಬುವ ತಮ್ಮ ಚಿತ್ರಕವನ *ಸಾಗು ನೀ ಮುಂದೆ* ಚೆನ್ನಾಗಿದೆ👌🏻👌🏻 ಹಾಡುವಂತಿದೆ.

ಧನ್ಯವಾದಗಳು🙏🏼🙏🏼
[3/27, 11:24 AM] Wr Vara Lakshmi Amma: ಪ್ರೇಮ ಅವರ ಕವನ 
 ದಟ್ಟ ವನದ ನಡುವೆ ಏಕಾಂಗಿಯಾಗಿ  ನಡೆಯುತ್ತಾ,  ನಮ್ಮ ಮನದಲ್ಲಿ  ಧೈರ್ಯ, ದೃಢತೆ, ತುಂಬಿಕೊಳ್ಳಬೇಕು,  ಇದುವೇ ನಮ್ಮ ನ್ನು ಜೀವನದಲ್ಲಿ  ಮುಂದುವರಿಯಲು ಸಹಾಯಮಾಡುತ್ತದೆ ಎನ್ನುವ  ಆಶಯ ಇರುವ ಕವನ. 
 ಸರಳ ಕವನವಾದರೂ ಆಶಯ ಚಂದ. 🙏

ಏಪ್ರಿಲ್-1 ರಿದ 8 2020ರ ವರೆಗಿನ ವಿಮರ್ಶೆಗಳು

[4/1, 3:04 PM] Tr Ramesh: ಪ್ರೇಮ್ ಅವರ *ನಿರ್ಧಾರ* ನ್ಯಾನೋ ವಿಷಯ ಚೆನ್ನಾಗಿದೆ. ಆದರೆ ವಾಕ್ಯ ಜೋಡಣೆ ಸರಿಯಾಗದೇ ಗೊಂದಲವುಂಟು ಮಾಡುತ್ತಿತ್ತು.  ತಂಗಿಯ ಮದುವೆಗೆ, ಲಕ್ಷಗಟ್ಟಲೆ ಮನೆಗೆ ಹಣಕೊಟ್ಟನೋ?, ಮನೆಗೆ ಲಕ್ಷಗಟ್ಟಲೆ ಹಣ ಕೊಟ್ಟನೋ?

ಲಕ್ಷ ಗಟ್ಟಲೆ ಹಣಕೊಟ್ಟ ಮೇಲೆ ಮದುವೆಗೆ ಹುಡುಗನನ್ನು ಗೊತ್ತುಮಾಡಿದ್ದೋ? ಹುಡುಗನನ್ನು ಗೊತ್ತು ಮಾಡಿದ ಮೇಲೆ ಹಣ ಕಳಿಸಿದ್ದೋ?

ಹುಡುಗನೆಬ್ಬ ಅಲ್ಲ ಹುಡುಗನೊಬ್ಬ ಆಗಬೇಕಿತ್ತಲ್ಲವೇ?

ಇಂಗ್ಲಿಷ್ ಶಿಕ್ಷಕಿಯಾದರೂ ಕನ್ನಡದಲ್ಲಿ ಬರೆಯುವಾಗ ಕನ್ನಡ ಕಾಗುಣಿತ, ವಾಕ್ಯರಚನೆ ಬಗ್ಗೆ ಗಮನ ಕೊಡಬೇಕಿತ್ತಲ್ಲವೇ?
[4/1, 6:26 PM] Wr Samyakth Kadaba: 🌷🌷🌷🌷🌷🌷

 *ನಮಸ್ತೆ* 

👉 *ಪ್ರೇಮ್ ಇವರು* ಬರೆದಿರುವ
 *ನಿರ್ಧಾರ* ಎಂಬ ನ್ಯಾನೋ ಕಥೆಯಲ್ಲಿ ....
👉🏻ಕಷ್ಟದಲ್ಲಿರುವವರಿಗೆ ,ದೇವರಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ತಿಳಿಹೇಳುವ ಪ್ರಯತ್ನವಿದೆ ಎಂಬುದು ನನ್ನ ಅನಿಸಿಕೆ.
 👉🏻ಉಪಯುಕ್ತವಾದ ಕತೆಯಲ್ಲಿ ಅನುಪಮವಾದ ನೀತಿ ಇರುವುದನ್ನು ಇಲ್ಲಿ ಗಮನಿಸಬಹುದು.
👉🏻ಮಹಮ್ಮದ್ ದುಡಿಮೆಗಾಗಿ ದೂರದ ಊರಿಗೆ ತೆರಳಿ ಹಿಂದಿರುಗುವಾಗ ಅಡೆತಡೆ ಬಂದರೂ ,ಅದು ಅವನಿಗೆ ಒಳ್ಳೆಯದೇ ಆಗುತ್ತದೆ.
👉🏻ಉತ್ತಮವಾಗಿದೆ.ಶುಭವಾಗಲಿ...
           🌼ತಪ್ಪಿದ್ದರೆ ಕ್ಷಮೆಯಿರಲಿ

✍🏻 *ಸಮ್ಯಕ್ತ್.ಹೆಚ್.ಜೈನ್.ಕಡಬ* 
🌷🌷🌷🌷🌷🌷
[4/2, 12:34 PM] Wr Varalaxmi K N: ನಮಸ್ತೆ ಪ್ರೇಮ ಮೇಡಮ್.ಮನಸ್ಸಿದ್ದರೆ  ಮಾರ್ಗ ಎಂಬಂತೆ, ಸಮಸ್ಯೆ ಇದೇ ಅಂದರೆ ಪರಿಹಾರ ಕೂಡ ಇದ್ದೇ ಇರುತ್ತದೆ ಎಂದು *ಟಾಮಿ** ಮೂಲಕ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು 🙏
[4/3, 10:22 AM] +91 84313 19753: ಪ್ರೇಮ್ ಮೇಡಂ 
ಅವರ ಶ್ರಮ ನ್ಯಾನೋ ಕಥೆ ಉತ್ತಮವಾಗಿದೆ. 

ಹೆತ್ತವರು ತಮ್ಮೆಲ್ಲ ಕಷ್ಟಗಳನು ಮಕ್ಕಳಿಗೆ ತಿಳಿಸದೇ ನನ್ನ ಮಕ್ಕಳು ಓದಿ ದೊಡ್ಡ ದೊಡ್ಡ ಆಫೀಸರ್ ಗಳು ಆಗ್ಬೇಕು ಅನ್ನೋದು ಪ್ರತಿಯೊಬ್ಬ ತಂದೆತಾಯಿಯ  ಕನಸಾಗಿರುತ್ತದೆ,  ಹಾಗೆ ಬೆಳೆದು ದೊಡ್ಡವರಾದ ಮಕ್ಕಳು ಶಾಲಾ ಕಾಲೇಜ್ ಗಳಿಗೆ ಹೆತ್ತವರು ಕಳಿಸಿರುವ ಮಹತ್ವವನ್ನು  ಅರಿತು ಗುರುವಿನ ಗುಲಾಮನಾಗಿ ಮುನ್ನೆಡದರೆ ಯಶಸ್ಸು ತಾನಾಗಿಯೇ ದೊರೆಯುತ್ತದೆ,ಹೆತ್ತವರ ಬಯಕೆ ಪ್ರತಿಫಲ ದೊರೆಯುತ್ತದೆ.  ಲವ್ ಗಿವ್ವು ಅಂತಾ ಹೋದರೆ ಜೀವನ ಹಾಳಾಗುವುದಲ್ಲದೆ ತಂದೆತಾಯಿಗಳನ್ನು ಮರಗುವಂತೆ ಮಾಡುತ್ತದೆ. 

👍ಉತ್ತಮವಾಗಿದೆ 
👉ಚನ್ನಾಗಿದೆ 
👉ಸಂದೇಶಭರಿತವಾಗಿದೆ 
✌ಸರಳವಾಗಿದೆ 

ಸುಂದರ ನ್ಯಾನೋ ಕತೆಯನ್ನು ಓದಿಸಿದಕ್ಕೆ 
ಧನ್ಯವಾದಗಳು ಮೇಡಂ 
ಕವಿಮನಕ್ಕೆ ಧಕ್ಕೆಯಾದಲ್ಲಿ ಕ್ಷಮೆ ಇರಲಿ. 
ಬಸವರಾಜ ಲಿಂಗಸ್ಗೂರು... 💕
[4/3, 12:11 PM] Wr Manu Vaidya: *ಪ್ರೇಮ್ ಮೇಡಂ ಅವರ ಕಥೆಯ ಕುರಿತಾಗಿ*

*ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ* ಎಂಬ ನೀತಿಯನ್ನು ಸಾರುವ ಕಥೆ ಚೆನ್ನಾಗಿ ಮೂಡಿ ಬಂದಿದೆ.. ಮತ್ತೊಂದು ದೃಷ್ಟಿಕೋನದಲ್ಲಿ, ಮಕ್ಕಳಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ತಂದೆ, ತಾಯಿ ಏನು ಬೇಕಾದರೂ ಮಾಡಬಲ್ಲರು ಎಂಬುದು ಕೂಡ ನಿಮ್ಮ ಕಥೆಯಲ್ಲಿ ಕಂಡು ಬಂತು..

ಇನ್ನು ನಿಮ್ಮ ಕಥೆಯಲ್ಲಿ..

👉🏻ನಿರೂಪಣಾ ಶೈಲಿ ಬದಲಾದರೆ ಇನ್ನೂ ಚೆಂದವಾಗುತ್ತದೆ.. ಕಥೆ ಹೇಳಿಕೆಯಂತಾದರೆ ಚೆಂದವಲ್ಲ
👉🏻ಕಥೆಯಲ್ಲಿ ಪಾತ್ರಗಳನ್ನು ಮಾತಾಡಿಸಿದರೆ ಇನ್ನಷ್ಟು ಉತ್ತಮ
👉🏻ವಿಭಿನ್ನ ಕಥಾವಸ್ತುವನ್ನು ಯೋಚಿಸಿ..
👉🏻ಒಟ್ಟಿನಲ್ಲಿ ಉತ್ತಮ ಪ್ರಯತ್ನ...

ನನಗನಿಸಿದಂತೆ ಹೇಳಿರುವೆ, ತಪ್ಪಾಗಿದ್ದರೆ ಕ್ಷಮೆ ಇರಲಿ🙏🙏🙏😁

✍🏻 *ಮನು ವೈದ್ಯ*
[4/3, 2:08 PM] Wr Vani Bhandari: ಈ ಅಭಿಮಾನ ಸದಾ ಇರಲಿ ಜಿ.
👍🏻👍🏻👍🏻

ಒಮ್ಮೊಮ್ಮೆ ಬದುಕು ಸಾರ್ಥಕ ಅನಿಸುತ್ತದೆ ನಂಗೆ.

ನಗುತ ನಗುತ ಇಬ್ಬರು ಖುಷಿ ಖುಷಿಯಾಗಿ ಇರಿ.

ಗಾಡ್ ಬ್ಲೇಸ್ ಯು🌹
[4/4, 9:58 AM] Wr Nagamani Mysore: ಓಪನಿಂಗ್ ಬ್ಯಾಟಿಂಗ್ ಪ್ರೇಮ್ ಅವರು ಚೆನ್ನಾಗಿ ಬಾರಿಸಿದ್ದಾರೆ. ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ನ್ಯಾನೋ ಕಥೆಯಲ್ಲಿ ಪ್ರತಿಬಿಂಬಿಸುವ ಪ್ರಯತ್ನ ಚೆನ್ನಾಗಿದೆ... 

*ಅತಿಯಾದರೆ ಅಮೃತವೂ ವಿಷ*

ಯುವಜನತೆ ಇದನ್ನು ತಿಳಿಯಬೇಕು.. 

👏👏
[4/4, 10:39 AM] Wr Vinuta Kicchikeri: ಪ್ರೇಮ್ ಜೀ🙏

ಮೊಬೈಲಿನ ದಷ್ಪರಿಣಾಮದ ಕುರಿತು ಬರೆದ ಕಥೆ ಚಂದ

ವಿನುತಾ ಕಿಚ್ಚಿಕೇರಿ
[4/4, 11:22 AM] Wr Thaggihalli Ravi: *ಪರಿಣಾಮ* ಪ್ರೇಮಾ ಸುಳ್ಯರವರ ಕಥೆಯು ತಂತ್ರಜ್ಞಾನದ ಅನಿಯಮಿತ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.


ತಗ್ಗೀಹಳ್ಳಿ ರವಿಕುಮಾರ
[4/4, 6:46 PM] Wr C G Venktesh: ಪ್ರೇಮ್ ಮೇಡಂ ರವರ  ಕಥೆ *ಪರಿಣಾಮ*,  ಚೆನ್ನಾಗಿದೆ👌👌 ಮೊಬೈಲ್  ಮಿತಿಮೀರಿದ ಬಳಕೆಯಿಂದ ಇಂದು ಹಲವಾರು ಸಮಸ್ಯೆಗಳನ್ನು ಕಾಣಬಹುದು ಅವುಗಳ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ನಿಮ್ಮ ನ್ಯಾನೋ ಕಥೆ ಚೆನ್ನಾಗಿದೆ . ಉತ್ತಮ ಕಥೆ ಓದಿಸಿದ್ದಕ್ಕೆ ಧನ್ಯವಾದಗಳು🙏🙏
[4/4, 7:12 PM] +91 74113 99610: *ಪ್ರೇಮ್ ಜೀ.. ನಮಸ್ತೆ🙏*

*ಅತಿಯಾದ ಮೊಬೈಲ್ ಬಳಕೆಯಿಂದಾಗಿ ಜೀವನ ಹಾಳಾಗುವುದನ್ನು ಅರಿಯಬಹುದು*.👌

**ಸುಂದರ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.*👌

*ನಾ ಕನ್ನಡಿಗ ಜೀ.. ನಮಸ್ತೆ🙏*

*ಅತಿಯಾದ ಆಸೆಗಳು ತಂದೊಡ್ಡುವ ಸಮಸ್ಯೆಗಳನ್ನು ತಿಳಿಯಬಹುದು*.

**ಕಥೆ ತುಂಬಾ ಚೆನ್ನಾಗಿದೆ.*👌

*✍ಮಹಾದೇವ ರಾಯಚೂರು*
[4/6, 10:00 AM] Wr Dinesh Sir: ☘ನಮಸ್ಕಾರಗಳು🙏


ಗೀತೆ  :- *ಪೂರ್ಣ ಚಂದಿರ*

ಕವಿ   :-  *ಪ್ರೇಮ್ ರವರು*

*ನೀಡಿದ ಪದ ಬಳಕೆಯಾಗಿದೆ*

    ಸೊಗಸಾದ ಭಾವಗೀತೆಯೊಂದನ್ನು ನಮ್ಮೆದುರಿರಿಸಿದ್ದೀರಿ. ಗುಳಿಕೆನ್ನೆಯ ಮೋಡಿಗಾರನ ಒಲವ ಲೀಲೆ ಗೀತೆಯಲ್ಲಿ ಅದ್ಭುತವಾಗಿ ಮೂಡಿದೆ. ಇರುಳನ್ನೆ ಬೆಳಗುವ ಆ ನಗೆ ಸಿರಿಯ  ವೈಭವವೆ ಅದ್ಭುತ. ತುಸು ಕೋಪ ಪ್ರೀತಿ ಭರಿತ ಪ್ರತೀ ಮಾತುಗಳು, ಬಾಳ ಜ್ಯೋತಿಯನ್ನು ಆತ ಬೆಳಗಿದ.ನಗೆ ಕಾರಂಜಿಯ ಚಿಮ್ಮಿಸಿ ಸೊಬಗಿನ ಕ್ಷಣಗಳನ್ನೆ ಎದುರಿರಿಸಿದ ಎಂಬ ಕವಿಭಾವ ಚೆಂದವಿದೆ.


*ಭಾವಗೀತೆ ಸೊಗಸಾಗಿದೆ*👌

ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿ

👍💐☘💐
[4/7, 3:16 PM] Wr Vinuta Kicchikeri: ಪ್ರೇಮ್ ಜೀ🙏
👉🏻ಚಂದದ ಗೀತೆ
👉🏻 ಪದಗಳಲ್ಲಿ ಹೊಸತನವಿದೆ
👉🏻"ನನ್ನೆದೆ ಎದೆ "ಬಾಂದಳ
ನನ್ನೆದೆಯ ಬಾಂದಳದಿ ಆಗಿದ್ರೆ ಸಾಕಿತ್ತೇನೋ...

👉🏻ನನ್ನ ಅನಿಸಿಕೆ ಅಷ್ಟೇ
ಧನ್ಯವಾದಗಳು💐🙏
ವಿನುತಾ ಕಿಚ್ಚಿಕೇರಿ
[4/8, 5:15 PM] Wr Pramila Chullikana: ಪ್ರೇಮಾ ಮೇಡಂ ಕವನ ನೃತ್ಯ.. ನಿಮ್ಮ ಕವನದಲ್ಲಿ 'ನ' ಅಕ್ಷರವೇ ನವಿಲಾಗಿ ನೃತ್ಯಗೈದಂತೆ ಭಾಸವಾಯಿತು... ವಿಭಿನ್ನ ರೀತಿಯಲ್ಲಿ ಪದಗಳ ಪೋಣಿಸಿ ಗೀತೆಯಾಗಿಸಿದ ಪರಿ ಸೂಪರ್👌👌
🙏🙏

1373. ನೃತ್ಯ

ಭಾವಗೀತೆ

*ನೃತ್ಯ*

ನಡು ನಡುವಲಿ ಕುಣಿಯುತಲಿ
ನಡುವಲಿ ನವ ನಡುಕ!
ನಡೆ ನಡೆಯುತ ನಲಿಯುತಲಿ
ನಿಶೆಯಂದದ  ಬದುಕ!

ನವಿಲಂತೆಯೆ ನವಿರಾದ
ನರ್ತಿಪ ನಡವಳಿಕೆಯಿದು
ನಾಜೂಕಿನ, ನಿರ್ಮಲದ
ನಾಚಿಕೆಯ ನಿಮಿಷವಿದು!

ನೂರೆಂಟು ಭಾವನೆಗಳ
ನೂಲಿಸುವ ಕಲೆ ಕೃತಿಯು
ನೈಜತೆಯ ನಂಬಿಕೆಯಲಿ
ನಡು ಕುಲುಕಿಸೋ ಮತಿಯು..

ನಾಟ್ಯಕಿದೋ ನಂಜಿರದು
ನಯನದಲೂ ಆಟ!
ನೈಪುಣ್ಯತೆ ಬೇಕಿಹುದು
ನಗುನಗುತಲಿ ನೋಟ!
@ಪ್ರೇಮ್@
08.04.2020

ಮಂಗಳವಾರ, ಏಪ್ರಿಲ್ 7, 2020

1372. ಭಾವಗೀತೆ-ಭಾವದಲೆಯಲಿ

ಭಾವದಲೆಯಲಿ..

ಬದುಕು ಇದ್ದರೆ ಅದು ನಿನ್ನೊಡನಿರಲಿ
ನಿನ್ನ ಹೊರತಾದ ಬದುಕಿಗೆ ಧಿಕ್ಕಾರವಿರಲಿ

ಪ್ರೀತಿ ಇರುವುದಾದರೆ ಅದು ನಿನ್ನೊಡನಿರಲಿ
ಇತರರ ಪ್ರೀತಿಗೆ ಮನ ಬಯಸದಿರಲಿ
ನೊಂದ ಮನಗಳೆರಡು ಜೊತೆ ಸೇರಿ ನಲಿಯಲಿ
ಬಾಳ ರಥವು ವೇಗವಾಗಿ ಮುನ್ನಡೆಯಲಿ

ನಡೆವ ಪ್ರತಿ ಹೆಜ್ಜೆಯೊಂದಿಗೆ ನಿನ್ನ ಹೆಜ್ಜೆ ಸೇರಲಿ
ಹೃದಯದ ಪ್ರತಿ ಬಡಿತವೂ ನಿನಗಾಗಿ ಮೀಸಲಾಗಿರಲಿ
 ತಪ್ಪ ತಿದ್ದುತಲಿ ಮನವೆಂದು ಕಲಿಯುತಲಿ
ನನಗೆ ನೀನು ನಿನಗೆ ನಾನು ಜೊತೆಯಾಗಿ ಸಾಗುತಲಿ

 ನನ್ನೆದೆ ಎದೆ  ಬಾಂದಳದಲಿ ರವಿ ನೀ ಉದಯಿಸುತಲಿ
ರಾತ್ರಿಯಾಗಲು ಬಿಡದೆ ಹಗಲಿರುಳು ಬೆಳಗುತಲಿ.
 ಮಾತು ಮುತ್ತಾಗಿರಲಿ ಪ್ರೀತಿ ತುತ್ತಾಗಿರಲಿ
ಭವದ ಪ್ರತಿ ಕ್ಷಣದಲೂ ನಗೆ ಹೂ ಬಾಡದಿರಲಿ
 
ನಿನ್ನಧರಕೆ ನನ್ನುಸಿರ ಬಿಸಿ ಸೇರಿ ತಣಿಯಲಿ
ನನ್ನುಸಿರದು ನಿನಗಾಗಿಯೇ ಕಾದು ಹೊರಬರಲಿ..
ಸರಸ ಸಲ್ಲಾಪದಲಿ ದಿನ ವರ್ಷ ಕ್ಷಣವಾಗಲಿ
ಮಧುರ ಭಾವದಿ ಮನ ಕುಣಿದು ಹಾಡಲಿ
@ಪ್ರೇಮ್@
07.04.2020

1371. ವಿಮರ್ಷೆಯ ಬಗೆಗೆ ಲೇಖನ

ನಮ್ವಿಮ ಬರಹಗಳಿಗೆ ವಿಮರ್ಶೆ ಬೇಕು. ಕವಿಯು ತನ್ನ ತಾ ತಿಳಿಯಲು, ಪರರ ಭಾವವ ಅರ್ಥೈಸಿಕೊಳ್ಳಲು...
ಕಲಿಕೆಗೆ, ಬೆಳವಣಿಗೆಗೆ..
       ವಿಮರ್ಶೆ ನಮ್ಮನ್ನು ಕಣ್ತೆರೆಸುತ್ತದೆ, ಹರಿತಗೊಳಿಸುತ್ತದೆ, ಅಹಂ ನ್ನು ತಡೆಯುತ್ತದೆ.
 ವಿಮರ್ಶಿಸುವವ ಸಾಕಷ್ಟು ತಿಳಿದುಕೊಂಡಿದ್ದರೆ ಮಾತ್ರ ಸರಿಯಾದ ವಿಮರ್ಶೆ ಸಾಧ್ಯ, ಕವನ ಬರೆಯುವುದು ಸುಲಭ, ವಿಮರ್ಶೆ ಕಷ್ಟ,ಅಲಂಕಾರ, ಪ್ರಾಸ, ಛಂದಸ್ಸು, ಕನ್ನಡ ಸಾಹಿತ್ಯದ ಮಜಲುಗಳನ್ನು ಅರೆದು ಕುಡಿದವ ಮಾತ್ರ ಉತ್ತಮ ವಿಮರ್ಶಕನಾಗಬಲ್ಲ, ಅದೇ ತಲೆಬರಹದ ಬೇರೊಂದು ಬರಹವನ್ನು ಓದಿದ್ದರೆ ಮಾತ್ರ ಅವೆರಡನ್ನು ಹೋಲಿಕೆ ಮಾಡಬಹುದು. ಹಾಗಾಗಿ ಯಾವುದೇ ಭಾಷೆಯಲ್ಲಿ ಕವಿಗಳ ಸಂಖ್ಯೆ ಜಾಸ್ತಿ, ವಿಮರ್ಶಕರ ಸಂಖ್ಯೆ ಕಡಿಮೆ. 
   ವಿಮರ್ಶಕ ಹೇಳಿದ್ದನ್ನೆಲ್ಲಾ ಕವಿ ಒಪ್ಪಲೇ ಬೇಕೆಂದಿಲ್ಲ, ಕವಿ ಬರೆದದ್ದನ್ನೆಲ್ಲಾ ವಿಮರ್ಶಕ ಉತ್ತಮವೆಂದು ಹೇಳಬೇಕಾಗಿಯೂ ಇಲ್ಲ. ಇಂಗ್ಲಿಷ್ ಸಾಹಿತ್ಯದೊಡನೆ  ಕನ್ನಡ ಸಾಹಿತ್ಯದಲ್ಲೂ ಸ್ನಾತಕೋತ್ತರ ಪದವಿ ಪಡೆದ ಕಾರಣ, ಕನ್ನಡದ ತೌಲನಿಕ ಅಧ್ಯಯನ ಹಾಗೂ ಆಂಗ್ಲ ಭಾಷೆಯ ಕ್ರಿಟಿಕ್ಸ್ ಅಲ್ಪ ಸ್ವಲ್ಪ ಓದಿದ ಜ್ಞಾನದಿಂದ ಈ ಮಾತು ಹೇಳುತ್ತಿರುವೆ.
   ಯಾರು ಉತ್ತಮ ಓದುಗಾರರೋ ಅವರು ಉತ್ತಮ ವಿಮರ್ಶಕರಾಗಬಲ್ಲರು. ಯಾವ ದೃಷ್ಟಿಕೋನದಲ್ಲಿ ಬೇಕಾದರೂ ವಿಮರ್ಶಕ ಒಂದು ಸಾಹಿತ್ಯವನ್ನು ವಿಮರ್ಶಿಸಬಹುದು. ಆದರೆ ಬರಹಗಾರನ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಬೇಕೆಂದೆ ಬರವಣಿಗೆ ಸರಿಯಿಲ್ಲವೆಂದು ಹಿಡಿದೆತ್ತಿ ಪದೇಪದೇ ದೂರುವಂತಿರಬಾರದು.
    ಯಾವುದೇ ಪೂರ್ವಾಗ್ರಹ ಪೀಡಿತನಾಗದೆ ಸಾಹಿತ್ಯವನ್ನು ವಿಮರ್ಶಿಸಬೇಕು.
    ವಿಮರ್ಶಕನಿಗೆ ವಿಮರ್ಶೆಯ ನಂತರ ಬರುವ ಸಂತಸದಾಯಕ ಪದಗಳನ್ನೂ, ನಿಂದನೆಗಳನ್ನೂ ಒಪ್ಪಿಕೊಂಡು ಅದಕ್ಕೆ ಸರಿಯಾಗಿ ಉತ್ತರಿಸುವ ತಾಕತ್ತೂ ಇರಬೇಕಾಗುತ್ತದೆ. ತಾನೇಕೆ ಹೀಗಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವೂ ಇರಬೇಕಾಗುತ್ತದೆ. 
   ಎಲ್ಲದಕ್ಕೂ ಜ್ಞಾನ ಭಂಢಾರ ಹಾಗೂ ಅಧ್ಯಯನವೇ ಪೂರಕ.
@ಪ್ರೇಮ್@

ಸೋಮವಾರ, ಏಪ್ರಿಲ್ 6, 2020

1369. ಅಜ್ಜೆರ್

ಅಜ್ಜೆರ್

ಅಜ್ಜೆರೆಗಗ್ಯರೆ ಬಜ್ಜೆಯಿ ಬೋಡುಗೆ
ಪಜ್ಜೆಲ ದೀನಗ ಓಲುಲ ತೋಜ್ಜಿಗೆ
ಪಜ್ಜಿಲ ಆವುಗೆ ನುಂಗೆಲ್ ಲಾವುಗೆ
ಸಜ್ಜಿಗೆ ಬೊರ್ಚಿಗೆ, ಅಜ್ಜಿನ ಕೈರುಚಿ..

ಒಂಜಿಲ ಯಾವುಗೆ ಅರ್ಧಲ ಯಾವುಗೆ
ಕಂಜಿನ್ ಕಟ್ಟಿನ ಕಂಗ್ ದಲಾವುಗೆ
ಪಂಜಿಲು ತಾಡ್ ದ್ ಬೂರ್ದಿನ ಗಿಡತ
ಬುಲೆವಂದಿ ಬಜ್ಜೆಯಿಲಾಪುಂಡುಗೆ..

ಗಂಜಿದ ರುಚಿ ಅವು ತಿಕ್ಕೊಡುಂದಾಂಡ
ದಿಂಜಿದಿ ಬಂಜಿದ ಒಕ್ಕಣೆ ಪಂಡ
ಪಜ್ಜಿಲ ಆವು, ನೀರ್ ದಲಾವು
ಅಜ್ಜೆರೆಗೊಂಜಿ ಬಜ್ಜೆಯಿ ಬೋಡುಗೆ..

ಕಲ್ಲ್ ದ ಅಡಿತ  ಡೆಂಜಿದ ಲೆಕ್ಕಂದಿನ
ಗಟ್ಟಿದ ಬಜ್ಜೆಯಿಲಾಪುಂಡುಗೆ
ಚೂಲಿನ್ ಗೆತ್ತ್ ದ್ ಪೂಲುಲ ಮಲ್ತ್ ದ್
ಅಗ್ಯುನ ಗಮ್ಮತ್ತ್ ತೂವೊಡಿಗೆ..

ಅಜ್ಜಿನ ಬರಿಟೆ ಒಟ್ಟಿಗೆ ಕುಲ್ಲುದು
ಪೂಲುನು ಕೈಟ್ ಲ ಪತೊಂದು
 ಎಲ್ಲೆಲ್ಯ ತುಂಡುಲ ಮಲ್ತ್ ದ್
ರಡ್ಡ್ ಜನಲಾ ಪಟ್ಟ್ ದ್ ತಿನ್ಪುನ ಪೊರ್ಲುನು ತೂವೊಡಿಗೆ...
@ಪ್ರೇಮ್@
20.10.2019

1370. ಗಝಲ್-24

ಗಝಲ್

ನೊಂದ ಮನದ ಕಣ್ಣೀರೊರೆಸುವ ಕೈಯಾಗು ನೀ
ಬಡವರ ಪಾಲಿಗೆ ಆಸರೆಯಾಗುವ ವರವಾಗು ನೀ..

ಸೋಲಿನಲಿ ಸೋತವರು ಬಹಳ ಜನರಿಹರು ಜಗದಲಿ
ಗೆಲುವಿಗೆ ಭರವಸೆ ಕೊಡುವ ನಲಿವಾಗು ನೀ..

ಬದುಕಿನಲಿ ಭಯಪಡುವ ಭವಿಷ್ಯ ಬರಿದಾಯಿತೆನುವ ಬಡವರಿಹರು.
ಬಡತನದ ಬವಣೆಯ ಕಳೆಯುವ ಊರುಗೋಲಾಗು ನೀ..

ಮನ ಮುದುರಿಸಿ ಸಾವಿಗೆ ಶರಣಾಗುವವರೂ ಇಹರು
ಹೊಸಬಾಳಿಗೆ ಅವಕಾಶಗಳ ಕೊಡುವ ನಾಯಕನಾಗು ನೀ..

ಮೈಗಳ್ಳರು ಕಳ್ಳತನದಿ ಇತರರ ತಲೆಯೊಡೆಯುವ ಯೋಚನೆಯಲಿಹರು
ಕೆಲಸ ಮಾಡದೆ ಸುಖಪಡುವವರಿಗೆ ಭದ್ರಕಾಳಿಯಾಗು ನೀ..

ಗಿಡಮರಗಳು ನೀರಿಲ್ಲದೆ ಅಳುವಾಗ ಕಡಿದು ಮುಗಿಸುವವರಿಹರು.
ಸಾಲು ಮರದ ತಿಮ್ಮಕ್ಕನಂತೆ ನಗುವಾಗು ನೀ..

ಅನಾಥ ಮಕ್ಕಳು ಕ್ಷಣದ ಪ್ರೀತಿಗೆ ಹಂಬಲಿಸುತಿಹರು.
ಪ್ರೇಮವುಣಿಸುವ, ಸಂತೈಸಿ ಸಲಹುವ ದೇವತೆಯಾಗು ನೀ..
@ಪ್ರೇಮ್@
05.04.2020

1368. ಶಶಿಯಳಲು

1. ಶಶಿಯಳಲು

ಎಲೆ ಇಳೆಯೇ ಹೀಗೆ ಮಾಡಬಹುದೇ ನೀನು?
ನಮ್ಮೀರ್ವರ ನಡುವೆ ನೀನೇಕೆ ಬರುವೆ?
ತಡೆದು ರವಿಯ ಹೊನ್ನ ಕಿರಣವನು!
ಹಗಲಿರುಳು ನಿನ್ನ ಸುತ್ತುವೆ ನಾನು..

ಬೆಳಕನೆಲ್ಲ ನೀ ತಡೆಯುವುದು ತರವೇ?
ನಮ್ಮ ಮಧ್ಯೆ ಬಂದು ನಿಲ್ಲುವುದು ಸರಿಯೇ?
ನನ್ನ ಬೆಳದಿಂಗಳ ನೀನು ಮುಚ್ಚುವುದೇ?
ನನ್ನನಂಧಕಾರದ ಕೂಪಕೆ ನೀ ತಳ್ಳುವುದೇ...

ರವಿ-ಶಶಿಯರು ಬೆಂಗಾವಲು ನಿನಗೆ!
ಹಗಲಿರುಳು ಬೆಳಗುವೆವು ನಿನ್ನ ನಗೆ!
ನೀ ಹೀಗೆ  ಬರಲು ಬೆಳಕ್ಹೇಗೆ ಪ್ರತಿಫಲಿಸಲಿ?
ನನ್ನ ನಂಬಿದವಗೆ ನಾ ಮುಖ ಹೇಗೆ ತೋರಿಸಲಿ?

ಚಂದಿರಗೆ ಕಷ್ಟವೆಂದು ನಿನ್ನ ಜನ ತಿಳಿದಿಹರು!
ಉಪವಾಸ, ಪೂಜೆ- ಜಪತಪಗೈಯ್ಯುವರು!
ನನ್ನೊಲವು ನಿನಗೆಂದು, ಬಾರದಿರು ನಡುವೆ!
ನಾನೆಂದು ನಿನ್ನ ಸುತ್ತ ತಿಳಿದುಕೋ ಒಲವೆ...!
@ಪ್ರೇಮ್@

1368. ಕರುಳಬಳ್ಳಿ

ಕರುಳಬಳ್ಳಿ

ನನ್ನ ಎದೆಯ ಭಾವದಿಂದ
ಇಳಿದ ಕರುಳ ಬಳ್ಳಿ..
ಹೃದಯದಿಂದ ಕೈಗೆ ಇಳಿದ
ಹಾಡು ಇದೆ ಇಲ್ಲಿ..

ಜಪವು ತಪವು ಬೇಡವದಕೆ
ಮನದಿ ನಿತ್ಯ ನರ್ತನ
ಭವದ ದ್ವಾರ ಸರಿಸಿ ಬಂತು
ಕಾವ್ಯ ಧಾರೆ ಕೀರ್ತನ..

ನನ್ನ ಕವನ ನನ್ನ ಮಗುವು
ಬಂದು ನಲಿಯುತಿರುವುದು
ಮೇಲೆ ಕೆಳಗೆ ಜಗ್ಗಿ ನನ್ನ
ಆಟ ಆಡುತಿರುವುದು..

ಬಾಳಿನಲ್ಲಿ ಒಂಟಿತನವ
ದೂರ ಸರಿಸುತಿರುವುದು
ಪದಗಳೆಲ್ಲ ಒಟ್ಟು ಸೇರಿ
ಆಟವಾಡುತಿರುವುದು..
@ಪ್ರೇಮ್@

ಖುಷಿ ಕೃಷ್ಣರ ಅನಿಸಿಕೆ

*ಹೀಗೊಂದು ಹಾರೈಕೆ..*

ಭಾವ ಜೀವದ ಯಾನ...
ಈ ಹೆಸರು ಕೇಳಿದ ತಕ್ಷಣ ಎದೆಯೊಳಗೆ ಭಾವನೆಗಳು ಮೂಡಲು ಪ್ರಾರಂಭಿಸುತ್ತವೆ.
ಮೂಡಿದ ಭಾವನೆಗಳೆಲ್ಲಾ ಜೊತೆಯಾಗಿ ಸಾಗಲು ಪ್ರಾರಂಭಿಸುತ್ತವೆ.ಭಾವನೆಗಳ ಪ್ರಯಾಣ ಕನಸಿನ ಲೋಕಕ್ಕೆ ರಹದಾರಿಯಾಗಿಬಿಡುತ್ತದೆ.
ಇಂತಹ ಭಾವನೆಗಳ ಲೋಕದಲ್ಲೊಂದು ಸುತ್ತು ಪ್ರಯಾಣ ಪ್ರಾರಂಭಿಸುವುದಾದರೆ...
ಅದು ಅತಿಸುಲಭದ ದಾರಿಯೊಂದಿದೆ ಅದೆ...
ಪ್ರೇಮ ಉದಯ್ ಕುಮಾರ್ ರವರ ಕವನ ಸಂಕಲನ ಭಾವಜೀವ ಯಾನ.
ಇವರ ಈ ಕವನ ಸಂಕಲನದ ಪ್ರತಿ ಕವನಗಳು ಭಾವನೆಗಳೊಂದಿಗೆ ಬೆಸೆದುಕೊಂಡಿವೆ....
ಓದುಗರನ್ನು ಭಾವನಲೋಕಕ್ಕೆ ಕರೆದೋಯ್ಯುವುದರ ಜೊತೆಗೆ ಓದಿನ ಖುಷಿಯನ್ನು ಎದೆಯೊಳಗೆ ಉಳಿಸಿಬಿಡುತ್ತವೆ..
ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಭರವಸೆಯ ಕವಯತ್ರಿಯಾಗಿ ಪ್ರೇಮ ಉದಯ್ ಕುಮಾರ್ ರವರ ಮುಂಚೂಣಿಯಲ್ಲಿದ್ದು ಇವರ ಕವನ ಸಂಕಲನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಸೇರಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯೂ ಹೌದು.
ಇವರ ಕವನಗಳು ಸಂಕಲನವು ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಧೃವತಾರೆಯಂತೆ ಹೊಳೆಯುತ್ತಿರಲಿ...
ಕವಯತ್ರಿ ಪ್ರೇಮ ಉದಯ್ ಕುಮಾರ್ ರವರಿಗೆ ಶುಭವಾಗಲೆಂದು ಹಾರೈಸುತ್ತೇನೆ..
ಅತ್ಯಂತ ಗೌರವದಿಂದ 

ಖುಷಿಕೃಷ್ಣ 
ಮೊಬೈಲ್- 9964649325
✍ *ಪ್ರೇಮ್ ಎನ್ನುವ ಭರವಸೆಯ ಹುಟ್ಟುಹಾಕುತ್ತಿರುವ ಕವಯತ್ರಿ*
ಸ್ವ ವಿಮರ್ಶೆಯ ಜೊತೆಗೆ ಚೆಂದದ ಹನಿಗವನಗಳನ್ನು ಬರೆದು...
ಹನಿಹನಿಇಬ್ಬನಿ ಗೆ ಕೊಡುಗೆ ನೀಡಿದ ಕವಯತ್ರಿಯವರಿಗೆ ಧನ್ಯವಾದಗಳು....
ಇವರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ  ಪ್ರಬುದ್ಧ ಕವಿಯತ್ರಿಯೊಬ್ಬರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಳ್ಳುವ ಮತ್ತು ಶಾಶ್ವತವಾಗಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳು ಕಾಣುತ್ತಿರುವುದು ಖುಷಿಯ ಸಂಗತಿ....
ನಿರಂತರತೆ ಮತ್ತು ಬರವಣಿಗೆಯ ಬೆನ್ನು ಹತ್ತಿದರೆ ಯಶಸ್ಸು ಖಂಡಿತಾ ನಿಮ್ಮ ಅಂಗೈಯೊಳಗೆ ನಲಿದಾಡಲಿದೆ .
ನಿಮ್ಮ ಭರವಸೆಯ ಬರವಣಿಗೆ ಹೀಗೆ ನಿತ್ಯ ನಿರಂತರವಾಗಿ ಜಾರಿಯಲ್ಲಿರಲೆಂದು ವಿನಂತಿಸುತ್ತೇನೆ....
ಧನ್ಯವಾದಗಳೊಂದಿಗೆ 
ಅತ್ಯಂತ ಪ್ರೀತಿಯಿಂದ 
ಸಾಮಾನ್ಯ ಸಾಹಿತ್ಯ ಸೇವಕ 
✍ಖುಷಿಕೃಷ್ಣ ✍

1367. ಗಝಲ್-23

ಗಝಲ್

ಮನುಜಾ ನೀ ನನ್ನೊಳಗಿನ ಗಿಡ ಮರಗಳ ಕಡಿವಾಗ ನಾ ಮೌನ!
ನನ್ನೆದೆಯನು ತೋಡಿ ಗುಂಡಿಗಳ ತೆಗೆವಾಗ ನಾ ಮೌನ!!

ನಿನ್ನ ಮಕ್ಕಳು ನನ್ನ ಮೇಲೆ ಕುಣಿದು ಕುಪ್ಪಳಿಸುವರು,
ಮಿಠಾಯಿ ತಿಂದು ಪ್ಲಾಸ್ಟಿಕ್ ಬಿಸುಟಾಗ ನಾ ಮೌನ!

ಹರಿತವಾದ ಕತ್ತಿಯಿಂದ ಮರವ ಕತ್ತರಿಸುತಲಿರುವೆ,
ಕಾಂಕ್ರೀಟಿನ ಕಾಡು ಎತ್ತರೆತ್ತರಕೆ ಏರುವಾಗ ನಾ ಮೌನ!

ಕೆಂಪು ನೆತ್ತರದು ಹರಿದು ನನ್ನ ಮೇಲೆ ಬೀಳುವುದು,
ಜಾಗ, ನೀರು,ಗಾಳಿಗಾಗಿ ಹೋರಾಡಿ ನೀ ಸಾಯುವಾಗ ನಾ ಮೌನ!

ನಿನ್ನ ಕರಗಳು ಬಳಸುವ ವಸ್ತುಗಳು ನನ್ನ ಮೇಲೆ ಹಲವಾರಿವೆ,
ಕಸವು ಮೇಲೆ ಬಿದ್ದು ಮೂಗಿಗೆ ನಾರುವಾಗ ನಾ ಮೌನ!

ಮಳೆ, ಬೆಳೆ, ನೀರು, ಆಹಾರ, ಗಾಳಿಯಿಲ್ಲದೆ ಪರಿತಪಿಸುವೆ,
ವಲಸೆ ತಿರುಗುತಲಿ,  ನನಗೆ ವಿಷವುಣಿಸಿ ನೀನೂ ಉಣುವಾಗ ನಾ ಮೌನ!

ಪ್ರೇಮದೆನ್ನೆಡೆಗೆ ನೋಡದೆ ಜೀವಗಳ ತುರುವು ಮುರುವಾಗಿರಿಸುವೆ!
ನಿನ್ನ ಬೇಡದ, ಆಗದ ಮಂಕುಬುದ್ಧಿಯ ನೋಡಿದಾಗ ನಾ ಮೌನ!
@ಪ್ರೇಮ್@
18.05.2018

1366. ಬದುಕು ಖುಷಿಯಾಗಿರಲಿ

1. ಬದುಕು ಖುಷಿಯಾಗಿರಲಿ...

ಕಸಿವಿಸಿಯಿಲ್ಲವು ಖುಷಿಯ ಕ್ಷಣದಲಿ
ಕಸದಂತಿರದೆ ಖನಿಯಂತಿರಲಿ ಬಾಳಿನಲಿ..
ಕುಶಲವಿರುವ ಸವಿ ಹೃದಯದಲಿ
ಕೃತಕತೆಯ ನುಡಿಗಳು ನುಸುಳದಿರಲಿ..

ಕಿಸಕ್ಕನೆ ಕಿಸಿಯುತ ಪರರ ಮುಂದೆ
ಬೇಡಿ ಅಂಗಲಾಚುವ ಕ್ಷಣ ಬರದಿರಲಿ..
ಕೊಸರಲಿ ಬದುಕು ಕೆಸರಿನ ಕಮಲವರಳಿದಂತೆ
ಬಣ್ಣ ಬಣ್ಣದ ಕನಸುಗಳ ನನಸಾಗಿಸುತಲಿ..

ಕೆಸರಿನಲಿ ಬೆಳೆದ ಕೆಸುವಿನಂತೆ
ಹರವಾಗಿ ಹಬ್ಬಲಿ ಮಾಡಿದ ಸಮಾಜ ಸೇವೆ!
ಕೆಲಸವಿಲ್ಲದೆ ಕಳೆದ ಕ್ಷಣಗಳ ಲೆಕ್ಕವಿಟ್ಟು 
ಮತ್ತೆ ಕಸುಬು ಮಾಡುವಂತಾಗಲಿ ಮನಕೆ...

ಕಸುವು ಇರುವವರೆಗೆ ದೇಹದಲಿ
ಖುಷಿಯ ದುಡಿತಕೆ ಬರ ಬಾರದಿರಲಿ..
ಕೆಸರಿನಲಿಹ ಹಂದಿಯಂತಾಗದಿರಲಿ
ಕೆಲಸವಿಲ್ಲದೆ ಬರಡಾದ ಬದುಕು...

ಕರಗಳ ಸವೆಸುತ ದುಡಿಯುವ ಮನಸಿಗೆ
ಕಿಸೆಗಳು ತುಂಬುವ ಹಾಗಿರಲಿ..
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಜ್ಞಾನ ಕೋಶದ ನುಡಿ ನೆನಪಿರಲಿ...

ಕೋಶವ ಓದುತ ದೇಶವ ತಿರುಗುತ
ಜ್ಞಾನವು ಹರಿಯುತ ಬರುತಿರಲಿ!
ಮೋಸವ ಮಾಡದೆ ಮಾಸಲು ಮೈಯಲು
ಕಾಸಿನ ಹಂಗಿಲ್ಲದೆ ಅವಕಾಶವ ಬಿಡದಿರಲಿ...

@ಪ್ರೇಮ್@
(ಪ್ರೇಮಾ ಉದಯ್ ಕುಮಾರ್
ಸ.ಪ.ಪೂ.ಕಾಲೇಜು
ಐವರ್ನಾಡು, ಸುಳ್ಯ, ದ.ಕ)

1365. ನೀನೆನಗೆ ನಾನಿನಗೆ

ನೀನೆನಗೆ ನಾನಿನಗೆ

ಮುಸ್ಸಂಜೆಯ ಇಳಿ ಹೊತ್ತಿನಲಿ
ಸೂರ್ಯನೂ ಭೂಮಿಯೊಳಗೆ
ಜಾರಿ ಹೋಗಿ ಅವಿತು ಕೂರುವ!
ಇಳಿವಯಸ್ಸಿನ ಜೀವ ನಮ್ಮದು
ನಾವಿಬ್ಬರೊಂದೇ ಎಂದು ಸಾರುವ!

ಮಕ್ಕಳಿಹರು ಮೊಮ್ಮಕ್ಕಳಿಹರು,
ಅವರ ಕಾರ್ಯವು ಅವರವರಿಗೆ!
ಪ್ರೀತಿಯಿಂದಲಿ ಸಲಹಿ ಕಾಯಲು
ಬಾಳ ಸಂಗಾತಿಯು ಜೊತೆಜೊತೆಗೆ!

ನೋವಿನಲ್ಲೂ ನಲಿವಿನಲ್ಲೂ
ನಿನಗೆ ನಾನು ನನಗೆ ನೀನು!
ತಾಳಿ ಕಟ್ಟಿ ಭಾಷೆ ನೀಡಿದ
ಮಧುರ ಕ್ಷಣವದು ಮರೆವುದೇನು!?

ಊರು ಬಿಡಲಿದೆ ಕಾಡು ಕರೆದಿದೆ
ದೇವ ಲೋಕವು ನಮಗೆ ಕಾದಿದೆ!
ಪ್ರೀತಿಗಿಲ್ಲವು ವಯಸ್ಸ ಹಂಗದು,
ಜವಾಬ್ದಾರಿಯ ಜಾರ ಕೂಡದು!

ಉಸಿರಾಡುವವರೆಗೆ ನಾನಿರುವೆ ನಿನಗೆ
ಉಸಿರು ನಿಲ್ಲಲು ಭೇಟಿ ಕೊನೆಗೆ!
ಸ್ವರ್ಗ ನರಕವ ಕೂಡಿ ನೋಡಿ
ಬಿಡಲು ಬದುಕಿನ ತುಂಬಿದ ಗಾಡಿ!

@ಪ್ರೇಮ್@

1364. ಬಂತು ನಮಗೆ ಸ್ವಾತಂತ್ರ್ಯ

1. ಬಂತು ನಮಗೆ ಸ್ವಾತಂತ್ರ್ಯ

ನಮ್ಮೆಲ್ಲ ನಾಯಕರು,ಹಿರಿಯರು ಹೋರಾಡಿ,
ಬಂತು ನಮಗೆ ಸ್ವಾತಂತ್ರ್ಯ!!
ಹಿರಿಯರು ಕಿರಿಯರು ಜತೆಗೂಡಿ,
ಬಂತು ನಮಗೆ ಸ್ವಾತಂತ್ರ್ಯ//

ಹಾಳಾದ ಕಟ್ಟಡಗಳ ಕಟ್ಟಲು,
ಲೆಕ್ಕವಿಲ್ಲದಷ್ಟು ವಿದ್ಯಾಲಯಗಳ ತೆರೆಯಲು,
ದಟ್ಟಡವಿಯ ಮರಗಳ ಕಡಿಯಲು,
ಬಂತು ನಮಗೆ ಸ್ವಾತಂತ್ರ್ಯ!

ಜಾತಿ -ಮತಗಳ ನಡುವೆ ಹೋರಾಡಲು,
ರಾಜ್ಯ-ರಾಜ್ಯಗಳ ನಡುವೆ ಕಿತ್ತಾಡಲು,
ಹೆಣ್ಣು ಮಕ್ಕಳ ಮಾನಾಪಹರಣ ಮಾಡಲು,
ಬಂತು ನಮಗೆ ಸ್ವಾತಂತ್ರ್ಯ!

ನಮ್ಮದೇ ಆದ ಗುಂಪುಗಳ ಕಟ್ಟಿಕೊಳ್ಳಲು,
ಗಲ್ಲಿ ಗಲ್ಲಿಯಲಿ ಮತ ಕೇಳಿ ಪೊಳ್ಳು ಭರವಸೆ ನೀಡಲು,
ರಸ್ತೆಯಗಲಿಸಲು ಹಳೆ ಮರಗಳ ಕಡಿದು ಮಾರಲು!
ಬಂತು ನಮಗೆ ಸ್ವಾತಂತ್ರ್ಯ!

ಹೊಸ ಹೊಸ ಪಕ್ಷ ಕಟ್ಟಲು,
ಮತ ಹಾಕಲು,ಹಾಕದೆ ಇರಲು,
ಅಲ್ಲಲ್ಲಿ ಬಂದ್ ಮಾಡಿ ಸಿಕ್ಕಿದ್ದ ಸುಡಲು,
ಬಂತು ನಮಗೆ ಸ್ವಾತಂತ್ರ್ಯ!
@ಪ್ರೇಮ್@

1363. ಅಗೆದಷ್ಟು ಆಳ



ಕವಿತೆ

ಅಗೆದಷ್ಟು ಆಳ...

ಬದುಕ ಆಳ ಬಯಕೆ ಕೋಟಿ
ಅಗೆಯೆ ಅರಿವು, ಕ್ಷಣವು ಪೈಪೋಟಿ!
ಕಲಿಕೆ ಸಹಜ ಸರ್ವ ಕ್ಷಣವೂ
ಮುಗಿಲಿಗೇರೋ ಮನದ ತವಕವೂ..

ಮನ-ಮನೆಯಲಿ ವಿಷದ ಬೀಜ!
ಘಳಿಗೆ ಪ್ರೀತಿ, ಒಡನೆ ದ್ವೇಷದ ಧ್ವಜ!
ಮೂಢ ನಂಬಿಕೆಯ ಬೀಜ ಕಿತ್ತು, ಸತ್ಯ
ನಂಬಿಕೆಯ ನೀರ ಸುರಿಯಬೇಕು ನಿತ್ಯ!!

ಮೋಸ ವಂಚನೆಯ ಸಾಲು ಜಾಡು
ವ್ಯಾಪಾರದಲ್ಲಿ ಬೇಕೆಂದು ಲಾಭ ನೋಡು!
ತಿನ್ನೋ ಅನ್ನ ಬಳಸೋ ವಸ್ತು,
ನಕಲು ಕೊಂಡು ತಾನು ಸುಸ್ತು!

ಆರೋಗ್ಯವ ಕೆಡಿಸಿಕೊಂಡು, 
ಹಣವನೆಲ್ಲ ವ್ಯಯಿಸಿ ನಡೆವ!
ಸಮಯ ನೋಡಿ ದಿನವ ಕಳೆವ
ಮೂರ್ಖ ಮನುಜ ತಾ  ಮೇಲೆಂದು ಮೆರೆವ!!
@ಪ್ರೇಮ್@
24.07.2019

1362. ನಮನ

ನಮನ

ಮನದಲಿ ಮೂಡಿಪ ರೂಪಕೆ ಮಣಿವೆನು..
ನೆನಪಲಿ ಕಾಡಿದ ಯೋಗಿಗೆ ಮಣಿವೆನು..
ಬುವಿಯಲಿ ನನ್ನಯ ಜೀವವ ತಂದಾ
ಶಕ್ತಿಯು ಎನ್ನುವ ದೇವಗೆ ಮಣಿವೆನು...//

ಭಾವನೆ ಮನದಲಿ ತುಂಬಿಸಿ ಬಿಟ್ಟನು
ಕಾಮನೆ ಬಿಡಲದು ಸಲಹೆಯ ಕೊಟ್ಟನು!
ಮಾನವನಾಗಿಹೆ ನಡತೆಯ ಕಲಿಯಲು,
ದಾನವ ಗುಣವನು ತೊರೆಯಲು ತಿಳಿಸುತ..//

ಕಾಣದ ಲೋಕಕೆ  ತೆರಳುತ ನುಡಿದನು
"ನಿನ್ನಯ ಜೀವನ ರೂಪಿಸಿ ಬದುಕಲು,
ಮೋಸವ ಮಾಡದೆ ಬಾಳನು ಬೆಳಗಲು,
ನ್ಯಾಯದ ಹಾದಿಯ ಹಿಡಿಯುತ ನಡೆಯಲು//

ಅರಿವನು ಕೊಡುತಲಿ ಹೃದಯವಂತಿಕೆಯ
ಬೆಳೆಸುತ, ಬಡವರ ಕಣ್ಣೀರೊರೆಸುತ,
ಹಲವಗೆ ಸಹಾಯ ಮಾಡುತ ಬಾಳಲು
ನೆಮ್ಮದಿ ಸಿಗುವುದು ಮೈಮನ ತಣಿವುದು..//

ಭೂಮಿಗೆ ಬಂದರೆ ಕುರುಹನು ಬಿಡುತಲಿ,
ಜೇವನ ಪಾವನ ಮಾಡುತ ನಲಿಯುತ
ತನ್ನಯ ಆತ್ಮದಿ ದೇವನ ಕರೆಯುತ
ನಗೆಯನು ಎಸೆಯುತ ಬಾಳ್ವೆಯ ಮಾಡುತ..//

ನನ್ನದು ಎನ್ನುವ ಮಾತದು ಏತಕೆ?
ನಮ್ಮದು ಎಂದರೆ ಸರ್ವಗೆ ಹಿತಕರ.
ಬಾಳಲಿ ಅಂದದ ಗೂಡನು ನೋಡುವೆ
ಇಲ್ಲದೆ ಇದ್ದರೆ ಗುಂಡಿಗೆ ಬೀಳುವೆ..//

@ಪ್ರೇಮ್@

ವಿಮರ್ಶೆಗಳು

[1/25/2019, 6:12 PM] Wr Shindhe: *ಪ್ರೇಮ್* ಅವರ *ಅಮ್ಮ* ಹನಿ ತಾಯಿಯ ದೊಡ್ಡ ಋಣಭಾರದ ಗಂಟನ್ನೆ ಹೊತ್ತು ತಂದಿದೆ 
*ತಾಯಿಯೇ ಅಡಿಯಿಂದ ಮುಡಿವರೆಗೂ ಬೆಳಿಸಿರುವೆ ಇದರ ಋಣ ನಾ ಹೇಗೆ ಮರೆಯಲಿ ಅದನ್ನ ಹೇಗೆ ತೀರಿಸಲಿ ತಾಯಿಯ ಋಣ ತೀರಿಸಲಸಾಧ್ಯ ಮರೆಯಲಸಾಧ್ಯ ಮರೆತವರು ಮನುಷ್ಯರೆ ಅಲ್ಲಾ*
👌🏻ಸರಳ ಸುಂದರ ಹನಿ
🙏🏻🙏🏻🙏🏻🙏🏻
*ರಾಜ್ ಶಿಂಧೆ*
[2/4/2019, 5:10 PM] Wr Turvekere Ramesh: *ಪ್ರೇಮ ಉದಯ್ ಕುಮಾರ್ ಅವರು ನ್ಯಾನೋ ಕಥೆ ಕುರಿತು ಒಂದೆರಡು ಮಾತು*

೧ನಿಮ್ಮ ಕಥೆಯಲ್ಲಿ ಪರಿಸ್ಥಿತಿಯ ಬಗ್ಗೆ ಬಹು ಸೊಗಸಾಗಿ ರಚನೆ ಮಾಡಿದ್ದೀರಾ ಮೇಡಂ 🙏🙏🙏🙏🙏🙏🙏🙏🙏🙏

೨ಪರಿಸ್ಥಿತಿಗಳು ಮನುಷ್ಯನನ್ನು ಯಾವ ಹಂತಕ್ಕಾದರೂ ತಂದು ನಿಲ್ಲಿಸುತ್ತದೆ ಎಂಬ ಭಾವಾರ್ಥ ಬರುವ ನಿಮ್ಮ ಕಥೆ ಬಹು ಸೊಗಸಾಗಿ ಮೂಡಿ ಬಂದಿದೆ 🌹🌹🌹🌹🌹🌹🌹🌹🌹 
೩ಆದರೆ ಇದೇ ಪರಿಸ್ಥಿತಿಯ ಲಾಭ ಪಡೆದುಕೊಂಡು ಕೆಲವು ಸಾಮಾನ್ಯ ಸೇವಕರು ಶತದಡ್ಡ ಎನ್ನುವ ಹೆಸರಿನಲ್ಲಿ ಚೆನ್ನಾಗೇ ಲಾಭ ಮಾಡಿಕೊಂಡು ಉಂಡು ಹೋಗುತ್ತಿದ್ದಾರೆ ಮುಖವಾಡ ಧರಿಸಿರುವ ಶತದಡ್ಡ ಎನ್ನುವ ಪ್ರಾಣಿಗಳು ಈ ಸಾಮಾನ್ಯ ಸೇವಕನ ಮುಖವಾಡ ಬದಲಾದರೆ ನಿಮ್ಮ ಕಥೆಯಲ್ಲಿ ಬರುವ ಕಿರಣ್ ಗತಿ ಈತನಿಗೂ ಬರುತ್ತದೆ 👌👌👌👌👌👌👌👌👌👌👌👌👌
[2/4/2019, 5:11 PM] Wr Divya Achar: ಪ್ರೇಮ್ ರವರ ನ್ಯಾನೊ ಕಥೆ
ಪರಿಸ್ಥಿತಿ ಯಾರನ್ನು ಯಾವಾಗ
ಬೇಕಾದರು ತಿರುವಿ ಹಾಕಬಹುದು
ಎನ್ನುವುದಕ್ಕೆ ನಿಮ್ಮ ಬರಹವೇ ಸಾಕ್ಷಿ
👌👌💐
[2/6/2019, 6:17 PM] Wr Anil Kulkarni: ಭೂಮಿ ಭಾಮ ಮೇಡಮ್ ಅವರ *ಊರುಗೋಲು*

ತನ್ನ ತಂದೆ ಮಾಡಿದ ತಪ್ಪಿಗೆ ತನ್ನ ತಾತನಿಗೆ ನೆರವಾಗುವ ಮೊಮ್ಮಗ, ದೊಡ್ಡವರು ಮಾಡುವ ತಪ್ಪು ಅವರಿಗೆ ತಿಳಿಯುತ್ತದೆಯೋ ಇಲ್ಲವೋ ಆದರೆ ಚಿಕ್ಕ ಮಕ್ಕಳಲ್ಲಿ ಯಾವುದೇ ಅಂಜಿಕೆ ಇಲ್ಲದೆ ಸಹಾಯ ಮಾಡುವ ಗುಣ. ಕಥೆ ಚೆನ್ನಾಗಿ ಮೂಡಿ ಬಂದಿದೆ ಮೇಡಮ್...


ಪ್ರೇಮ್ ಮೇಡಮ್ ಅವರ *ಅಸಹಾಯಕತೆ* 

ನಂಬಿ ಕೆಟ್ಟವರೆ ಜಾಸ್ತಿ ಈ ಸಮಾಜದಲ್ಲಿ, ಏನು ತಿಳಿಯದ ಬದುಕಿನಲ್ಲಿ ತನ್ನನ್ನೇ ತಾನು ಅರ್ಪಿಸಿಕೊಂಡು ಮೋಸ ಹೋದ ಮುಗ್ಧ ಹೃದಯದ ಕಥೆ ಚೆನ್ನಾಗಿದೆ ಮೇಡಮ್...


ಎಸ್. ಎಚ್. ಪಾಟೀಲ ಅವರ *ಮನ ಪರಿವರ್ತನೆ*

ಮಾನವ ಎಷ್ಟೇ ಹೊಡೆದಾಡಿದರು ಮಾನವೀಯತೆ ದೃಷ್ಟಿಯಲ್ಲಿ ಒಂದೇ ಎಂಬ ಭಾವನೆ ಸಾರುವ ಕಥೆ. ತುಂಬಾ ಚೆನ್ನಾಗಿದೆ...


-ಅನಿಲ್ ಕುಲಕರ್ಣಿ....
[2/8/2019, 7:42 PM] Wr Turvekere Ramesh: 👌👌👌👌👌👌👌👌ಪ್ರೇಮ ಮೇಡಂ ಅವರ ನ್ಯಾನೋ ಕಥೆ ತುಂಬಾ 🌸🌸🌸🌸🌸🌸🌸🌸🌸🌸ಸೊಗಸಾಗಿ ಮೂಡಿ ಬಂದಿದೆ 🌹🌹🌹🌹🌹🌹🌹🌹ಹೌದು ಇಂದಿನ ರಾಜಕೀಯ ನಾಯಕರು ಜಾತಿ ಮತದ ಹೊಸರೋಡ್ ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುವಂತೆ ಮಾಡಿ ಅವರ ಬೆಳೆ ಅವರು ಬೇಯಿಸಿಕೊಳ್ಳುತ್ತಾರೆ ಇದನ್ನು ನಾವು ಬೇಗ ಅರಿತುಕೊಳ್ಳಬೇಕು ನಾವು ಬದಲಾಗಬೇಕು ಸಮಾಜ ಬದಲಾಗುತ್ತದೆ ಬಹು ಸೊಗಸಾದ ಕತೆ 🙏🙏🙏🙏🙏🙏🙏🙏🙏🙏
[3/6/2019, 1:57 PM] +91 90088 34612: ಪ್ರೇಮ್ ಅವರ *ಕಾವು* ಕವನ,ಅಮ್ಮ ಮಗುವಿನ ಸಂಭಾಷಣೆ ತುಂಬಾ ಚೆನ್ನಾಗಿದೆ...ಹೀಗೇ ನಿಮ್ಮ ಸಾಹಿತ್ಯ ಕೃಷಿ  ಸುಗಮವಾಗಿ ಬೆಳೆಯುತ್ತಿರಲಿ..ಶುಭವಾಗಲಿ

ಶಶಿಕಾಂತೆ..
[3/6/2019, 9:22 PM] Wr Amrithahasta Prakash: ಪ್ರೇಮಕ್ಕ ನವರ ಕವನವು  ಓದುಗರ ಮನಸ್ಸನ್ನು ಕರಗಿಸಿ ಬಿಡುತ್ತದೆ  ಸೂಪರ್ ಅಕ್ಕಾ

ಶಶಿಧರ್ ರವರ ವಿಮರ್ಶೆ

ಪ್ರೇಮ್ ಅವರ *ನೀ ನನ್ನ ಜೊತೆಗಿರುವೆ* ಭಕ್ತಿ ಗೀತೆ ಶಿವನನ್ನು ಮನದಲ್ಲಿ ಪ್ರತಿಸ್ಠಾಪನೆ ಮಾಡಿ ಕೊಂಡರೆ  ಆ ಶಿವ ಸತ್ಯ,ನ್ಯಾಯದ, ದಾರಿಯಲ್ಲಿ ಕರೆದೊಯ್ಯುವ ಎಂಬಂತೆ ತಿಳಿಸಿದ್ದಾರೆ..ಬಹಳ ಚೆನ್ನಾಗಿದೆ..ಒಳ್ಳೇದಾಗಲಿ..ಹೀಗೇ ಭಕ್ತಿಗೀತೆಗಳದ್ದೇ ವೊಂದು ಸಂಕಲನವಾಗಲಿ...

ಸೋನೆಕವಿ ವಿಮರ್ಶೆ-2

ಪ್ರೇಮಕ್ಕ ನವರ ಕವನ ಮೂರು ಸಲ ಓದಿ ಬಿಟ್ಟೆ  ಓದುತ್ತ  ಇದ್ದರೆ ಮತ್ತೆ ಓದಬೇಕು ಎನಿಸುವಷ್ಟು ಸರಳ ಸುಂದರ ಪದಗಳಿಂದ ಕವನ ಕಟ್ಟಿದ್ದಾರೆ

 ಕಟುಕರಾಗದೆ  ಕೆಡುಕು ಮಾಡುವವರಿಗೆ ಬುದ್ದಿ ಹೇಳಿ  ಅವರು ಕಟುಕರೆಂದು ನೀವು ಕಟುಕರಂತೆ ಅಗಬೇಡಿ  

ಕದನ ಬೇಡ  ರಕ್ತ ಹರಿಸುವ ಖಡ್ಗವನ್ನು ಬಿಟ್ಟು 
ಶಾಂತವಾಗಿರುವ ಲೇಖನಿಯಿಂದಲೇ 
ಎಲ್ಲೆಡೆ ಶಾಂತಿಯ ಚೆಲ್ಲುವಂತ ಸಂದೇಶ ನೀಡಿದ್ದಾರೆ 
  
ಹೌದು ಬಾಳು ಬಂಗಾರವಾಗಬೇಕಾದರೆ  ಕವಿ ಬರೆಯುವ ಪ್ರತಿ ಪದವು ಬಂಗಾರದಂತಿರಬೇಕು ಹಿತರರು ಬೇಗನೆ ಬದಲಾಗುವಂತೆ  ಎಲ್ಲರೂ ಸ್ವತಂತ್ರವಾಗಿ ಬದುಕಲು ಕವನದಲ್ಲಿ ಬಡಿದೆಬ್ಬಿಸಲು ತಿಳಿಸಿದ್ದಾರೆ  
 
ಕಾಲ ಬದಲಾದಂತೆ ಬರಿ ಸುಳ್ಳು ವಂಚನೆಗಳಿಂದ ತುಂಬಿ ಹೋಗಿದೆ ಇದನ್ನು ಬದಲಿಸುವ ಶಕ್ತಿ ಕವನಕ್ಕಿದೇ ಇಂತ ಬರಹದಲ್ಲಿಯೇ  ಜೀವನ ಪಾವನವಾಗ  ಲೆಂದು ತಿಳಿಸಿದ್ದಾರೆ 

  ಕವಿ ಬರೆದ ಕವನವು ಹೇಗಿರ ಬೇಕು ಗೊತ್ತೇ ಉದಾಹರಣೆ ಈಗ  ಪ್ರೇಮ್ ರವರ ಕವನವೇ  ತೆಗೆದು ಕೊಳ್ಳಿ ಇದನ್ನು ಓದಿಯೇ ನನಗನಿಸಿದ್ದು  ನಾನು ಒಬ್ಬ ಕವಿಯಾಗಿ  ಈ ತರಹ ಕವನಗಳನ್ನು ಕಟ್ಟಿ ಸಮಾಜದಲ್ಲಿನ ಜನ ಅರ್ಥೈಸಿ ಕೊಳ್ಳುವಂತ ಬರಹವು ಬರೆಯಬೇಕೆನಿಸಿತು  ನೋಡಿ ಅಕ್ಕಾ ನವರು ಎಷ್ಟು  ಲೀಲಾ ಜಾಲವಾಗಿ ಕವಿಗಳಿಗೆ ಎಷ್ಟೆಲ್ಲ  ಹೇಳಿದ್ದಾರೆ  ಅಲ್ವಾ  ಕವಿಗಳು ಬರೆದ ಕವನವು  ಓದುಗರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಬರೆಯಬೇಕೆಂದು ಕವಯತ್ರಿ ಪ್ರೇಮ್ ರವರು ಅದ್ಬುತ ಕವನ ಮೂಲಕ ತಿಳಿಸಿಕೊಟ್ಟಿದ್ದಾರೆ  ನಿಜಕ್ಕೂ  ನನಗೆ  ತುಂಬಾ ಇಷ್ಟವಾದ ಕವನಗಲ್ಲಿ  ಇದು ಒಂದು ತುಂಬಾ ಅರ್ಥಗರ್ಭಿತವಾಗಿವೆ 

ಧನ್ಯವಾದಗಳು ಆಕ್ಕ 

 ತಿಳಿದಷ್ಟು  ಹೇಳಿದ್ದೇನೆ  ತಪ್ಪುಗಳು ಇದ್ದರೆ ಕ್ಷಮಿಸಿ ತಿದ್ದು ಬಿಡಿ

ಸೋನೆಕವಿ ವಿಮರ್ಶೆ-1

*ಪ್ರೇಮಕ್ಕನವರ*

~ಮನ ಕವಿತೆಯಲ್ಲಿ~
ಮದುವೆಯಾದ
ಹೆಣ್ಣು ಗಂಡಿನ ಮನಸ್ತಿತಿಗಳ ಚಹರೆಯೊಳಗೆ ಬದುಕಿನ  ಸಮಸ್ಯೆಗಳನ್ನು ಮುಂದಿಟ್ಟು ನಮ್ಮ ಮನೆ ಒಲೆ ತುತ್ತು ಎನ್ನುವ ರಗಳಯಲ್ಲಿ,
ಉತ್ತರಿಸಲಾಗದ ಸ್ಥಿತಿಯ ಭಾವನೆಗಳಿಗೆ ಬೆಲೆ ಇಲ್ಲದಂತೆ ಸೊರೆಯಾಗುತಿರುವ ನೆರಳಿದೆ, 

೦೧]
ಗಂಡ ಹೆಂಡತಿಯ ಬೇಸರಿಕೆ,  ಗೊಂದಲತೆ, 
ಸಮಸ್ಯೆಗಳನಿಟ್ಟುಕೊಂಡು ಸಮಾಜದ ದ್ವಿಮುಖ ಪ್ರಕ್ರಿಯೆಯನ್ನು ಪ್ರಸ್ತುತವಾಗಿ ಹೇಳುವ ದೊಡ್ಡತನಯಿದೆ,

೦೨]
ಪತಾಯನ್ನು ಪೂಜಿಸುತ್ತಿದವಳ ಹೃದಯರಂಗ ಯಾವುದೋ ಕಾರಣಗಳಿಂದ ನೊಂದು,
ಎಲ್ಲವನ್ನು ತ್ಯಜಿಸುವ ತವಕದಲ್ಲಿ ತನ್ನ  ಆತ್ಮ ತೃಪ್ತಿಯನ್ನೆ ಹಾಳು ಮಾಡುವ ಅನಾಗರಿತೆಯ ಸಂಸ್ಕೃತಿಯ ನೆರಳಿದೆ.

೦೩]
ಹೆಣ್ಣಿನ  ಭಾವನಾತ್ಮಕ ಸಂವೇದನೆಗಳು 
ಭಾವ ತುಂಬಿ ಅಳುವ ಚಹರೆಯೊಂದಿಗೆ ದಾರಿ ಹಿಡಿದು  ದೂರು ನೀಡುತಿರುವ ಅಸಂಸ್ಕೃತಿಯತ್ತ ಧಾವಿಸುವ ಪರಿಪಾಠವಿದೆ.

೦೪]
ಬದುಕು ಬಂಗಾರವಾಯ್ತು ಬಾಳು ಹಸನಾಯ್ತು ಎನ್ನುವ ಹೃದಯಗೀತೆಗೆ ಈ ಭಾವಗೀತೆ
 ಮುನಿದುಕೊಂಡಿದೆ,

೦೫]
ಬುದ್ಧಿ ಹೇಳುವ  ಮನಸ್ತಿತಿಗಳನ್ನು ತಿರಸ್ಕರಿಸಿ 
ತನ್ನ ಹಠದೊಳಗೆ ಮಠ ಕಟ್ಟುವ,
ಏನನ್ನೋ ಸಾಧಿಸುವ ದಿಕ್ಕಿನಲ್ಲಿ ಚಲಿಸುವಂತಿದೆ, 
 

೦೬]
*ಗಂಡು ಹೆಣ್ಣಿನ*
*"ಸಂಸಾರದ ಗುಟ್ಟು ವ್ಯಾದಿ ರಟ್ಟು"* ಎನ್ನುವಂತೆ ಆ ನೀತಿಗೆ ವಿರುದ್ಧವಾಗಿದೆ.

೦೭]
*"ಪುಟ್ಟ  ಸಂಸಾರ  ಆನಂದ ಸಾಗರ"* ಎನ್ನುವ  ಮಾತಿಗೆ ಆಸ್ತಿ, ಮನೆ ಜಾಗ.ತೋಟ, ಬಟ್ಟೆ  ಬರೆ,
ಎನ್ನುವ  ಪ್ರತಿಮೆಗಳಿಗೆ ಮೀಸಲಾಗದೆ, ಅವಳ ಭಾವನೆಗಳು ಸತ್ತು ಹೋಗಿವೆಯಂತೆ !
ಬದುಕುವ ಆಸೆ
ಅವಳಿಗಿಲ್ಲಂತೆ !
ಎನ್ನುವ  ಅತಿಯಾದ ಪ್ರೀತಿಯನ್ನು ಬೇಸರದಿಂದಲೆ ಹೇಳುತಿದೆ. 

ಒಟ್ಟಾರೆ 
ಕೊನೆಯಲ್ಲಿ ಮಾತ್ರ ಈ ಕವಿತೆಗೆ ಕೊಟ್ಟ ಕಾರಣ ,
ಇದರೊಳಗಿರುವ ಮಾತುಗಳಿಗೆ, ಭಾವನೆಗಳಿಗೆ ಸರಿ ಹೊಂದುವುದಿಲ್ಲ, 
ಅದಕ್ಕೆ  ಬಲವಾದ ಕಾರಣಗಳನ್ನು ಪೋಷಿಸಿದರೆ ಒಳಿತು ಎನಿಸಿತು.

ಇದಲ್ಲದೆ 
ಹೆಣ್ಣು  ಗಂಡಿನ ಮನಸ್ಥಿತಿಗಳ ಚಹರೆಯೊಳಗ ,
ಈ ಕವಿತೆಯಲ್ಲಿ ಮೇಲ ನೋಟಕ್ಕೆ ಹೆಣ್ಣು  ಹೇಳುವಂತೆಯೆ ಇದೆ.
ಆದರೆ  ಅದು ರಹಸ್ಯವಾಗಿಟ್ಟಿರುವ ತಂತ್ರಗಾರಿಕೆ ಒಪ್ಪಿತ, 


ಧನ್ಯವಾದ.

#ಸೋನೆ.

1361 . ಕಾರ್ಮಿಕ

ಕಾರ್ಮಿಕ

ಕಾರ್ಮಿಕರೆಲ್ಲರು ದೇಶದ ಮಡಿಲು
ತನ್ನದೆ ಕಾಯಕ ರಾಷ್ಟ್ರದ ಒಡಲು..

ಜನಮನಕೆ ಸಹಕಾರಿಯು ಕಾರ್ಮಿಕ
ತನ್ನಿಂದಲೆ ದೇಶ ಸೇವೆಯು ಮಾರ್ಮಿಕ
ತಾನೆಂದಂತೆ ಇಡೀ ದಿನ ಕೆಲಸ
ಉಣ್ಣುವ ಕೈಗಳ ದಿನನಿತ್ಯದ ದುಡಿತ//

ಕೆಲಸದಿ ಸಂತಸ ಕಾಣುವ ರೈತ,
ಇತರಗೆ ಉಣಿಸುವುದರಲೆ ತಾ ಮೈ ಮರೆತ.
ತನ್ನಯ ಕಾರ್ಯವು ಪರರಿಗೆ ಸೀಮಿತ.
ಕೆಲಸ ಕಾರ್ಯವದು ನಡೆವುದು ಸಂತತ//

ಕಾರ್ಮಿಕನ ಕೈಗದು ಇಲ್ಲವು ಆಯಾಸ,
ದುಡಿಯುವ ಕರಗಳಿಗೆ ನಿತ್ಯವು ಸಂತಸ,!
ಮನಃಶುದ್ಧಿಯೆ ನಮ್ಮ ಕೆಲಸಕೆ ಧೈರ್ಯವು,
ಚಿತ್ತ ಶುದ್ಧಿಯಿಂದ ಕೆಲಸವು ಹಗುರವು//

ಕಾರ್ಮಿಕನೇ ಭಾರತ ದೇಶದ ಜೀವಾಳ,
ಕಾಯಕ ಮಾಡುವ ಯೋಗಿಯೇ ವಿರಳ!
ಮಾಯದ ಜೀವನ ಸಾಧ್ಯವೆ ಇಲ್ಲವು!
ಕಾಯಕ ಮಾಡುತ ಬದುಕು ಆನಂದವು//
@ಪ್ರೇಮ್@
01.05.2019

1360.ಮಲೆಕುಡಿಯರ ಹಾಡು-1

ಮಲೆಕುಡಿಯರ ಹಾಡು

ಬದುಕದು ನಮ್ಮಯ ವಿಸ್ಮಯ ಕೇಳಿರಿ
ಕಾಡಿನ ಮಕ್ಕಳು ನಾವಣ್ಣ..
ನಮ್ಮಯ ಬಾಳುವೆ ಕಾಡಲೆ ಇಹುದು
ಮಣ್ಣಿನ ಮಕ್ಕಳು ನಾವಣ್ಣ....
ಹೈೂಯ್ಯರೆ ಹೈೂಯ್ಯಾರೆ ಹೈೂ...

ಓಟೆಹುಳಿ , ಜಿರಕಿನ ಹುಳಿ
ದೊಡ್ಡಲ ಹುಳಿ, ಗಜನಿಂಬೆ
ಹುಣಸೇ ಹುಳಿ, ಮಂತು ಹುಳಿ..
ಇವುಗಳೆ ನಮ್ಮ ಸಹಪಾಟಿಗಳಮ್ಮಾ.......ಹೈೂ..

ಕೆಸುವಿನ ಸೊಪ್ಪು, ಗೆಡ್ಡೆ, ಬೈನೆಯ ದಿಂಡು
ಬಾಳೆಯ ದಿಂಡು, ಹಣ್ಣು, ಬಳ್ಳಿಯ ಬೆಣ್ಣೆ ಗೆಡ್ಡೆ
ನಮ್ಮ ಹಬ್ಬದಡುಗೆಯ ಆಹಾರವಣ್ಣ....ಹೈೂ..

ಎರೆಹುಳ ಕೋಲಿಗೆ ಕಟ್ಟಿ
ಮೀನು, ಏಡಿಗಳ ಹಿಡಿವೆವು ಅಣ್ಣ..
ಮೊಲವೋ, ಕಾಡು ಕೋಳಿಯೋ ಸಿಕ್ಕರೆ
ಸವಿರುಚಿ ನಮಗದು ಅಣ್ಣಾ...ಹೈೂ..

ಬಿದಿರನು ತಂದು ಬುಟ್ಟಿಯ ಹೆಣೆದು
ಓಟೆಯ ತಂದು ಮೊರವನು ಮಾಡಿ
ಮುಂಡುಗದೆಲೆಯಲಿ ಚಾಪೆಯ ಹಾಸುವೆವೋ ಅಣ್ಣಾ....ಹೈೂ..

ಮನೆಮಠವೆಮಗೆ ಮರ, ಮಣ್ಣಲ್ಲೆ..
ಕಾಡಿನ ಜೀವಿಗಳು ಗೆಳೆಯರೆ ಅಲ್ವೇ..
ತಾವೂ ಬದುಕುತ ಬದುಕಲು ಬಿಡುವವರೂ...ನಾವಣ್ಣಾ..ಹೈೂ..

ನಾವು ಕಾಡಿನ ಕಂದರಣ್ಣಾ...
ನಾವು ಮಣ್ಣಿನ ಮಕ್ಕಳಣ್ಣಾ..
ಹೈೂ...ಹೈೂ...
@ಪ್ರೇಮ್@

1359. ನಡೆಯಲಿ ಹೀಗೆ

ನಡೆಯಲಿ ಹೀಗೆ...

ತಂಪು ಮನದ ಕೆಂಪು ರಕುತ
ಕುದಿಯದಿರಲಿ ಮನಗಳೆ
ಕಂಪು ಬೀರೊ ಸೊಂಪು ಹರಡೋ
ಬದುಕು ಸವೆಸಿ ನರಗಳೆ..

ನಾಳೆ ಹೇಗೆ ಏನೊ ಎಂತೋ
ಅರಿಯಲುಂಟು ದಿನಗಳು..
ಇಂದು ಈಗ ನಮ್ಮದಾಗಿ
ಸಲಹಲುಂಟು ಕ್ಷಣಗಳು...

ನವ್ಯ ರಾಗ ನಮ್ಮ ಬಾಳು
ಕಾವ್ಯ -ಗೀತೆ ಹಾಡಲು,
ಸವ್ಯಸಾಚಿ ವದನದೊಳು
ಮಂದಹಾಸ ಮೂಡಲು..

ನಲಿವು ನೋವು ಸವಿಯಲುಂಟು
ಬಾಳ ನೌಕೆ ಸಾಗಲು..
ಕಷ್ಟ ಸುಖವ ಪಡೆಯಲುಂಟು
ಅನುಭವವು ಹೆಚ್ಚಲು..

ಕೆಂಪು ಸೂರ್ಯ ಬರುತಲಿರಲು
ತಂಪು ಚಂದ್ರ ಮರೆಯಲಿ
ರಾತ್ರಿಯಂಧಕಾರ ಬರಲು
ದೀಪ ಬೇಕು ಬಳಿಯಲಿ..

@ಪ್ರೇಮ್@

1358. ಬಾಳು ಬೆಳಗಲಿ

ಬಾಳು ಬೆಳಗಲಿ

ಬಾನಿನ ನಿಶೆಗೆ ಚಂದಿರ ಕಿರೀಟ
ಬಾಳಿನ ಬೆಳಕಿಗೆ ಗುಣವು ಮುಕುಟ..

ವೇಷದ ಬದುಕಿಗೆ ಕ್ಷಣ ಕ್ಷಣ ಇಹುದು
ವ್ಯರ್ಥವ ಮಾಡದೆ ಕಳೆವವ ಜಾಣ,
ವ್ಯತ್ಯಯವಾಗದೆ ಇರದು ಎಂದಾದರೂ
ಬಾಳನು ಹಸನು ಮಾಡಲು ಪಣತೊಡು...

ಮಂದಿಗೆ ಸರಿಯಾಗಿ ಬಾಳಲು ಆಗದು
ಮುಂದಿನ ದಾರಿಯು ಸವೆಸಲು ಸಾಗು
ಕಂದೀಲಿನ ಬೆಳಕೆಲ್ಲಾ ಕಡೆ ಸಿಗದು
ಕುಂದದೆ ಬಾಳಿನ ಬೆಳಕನು ಪಡೆವುದು..

ಭಯದಲಿ ಬಾಳುವೆ ಸಾರ್ಥಕವಲ್ಲವು
ಸಾಧನೆ ಇಲ್ಲದೆ ಬದುಕೇ ವ್ಯರ್ಥವು..
ವಿದ್ಯೆ ವಿನಯ ವಿನೂತನ ಜೊತೆಯಲಿ
ವಿಧವಿಧ ತಂತ್ರದಿ ದಿನಗಳು ಸಾಗಲಿ..

ಯೋಚನೆ ಉತ್ತಮ ದಿಕ್ಕಲಿ ಬರಲಿ
ಮಾತಿನ ಹಿಡಿತವು ನಾಲಗೆಗಿರಲಿ..
ಜ್ಯೋತಿಯ ಕಿರಣವು ಬೆಳಗಿ ಬರಲಿ
ಪ್ರೀತಿಯ ವದನವು ಬೆಳಕನು ಚೆಲ್ಲಲಿ...

@ಪ್ರೇಮ್@

1357. ಸೀತಕ್ಕ

ಸೀತಕ್ಕ

ಸೀತಕ್ಕ ಬೈದೆರ್ ಯೇ ಮೂಂಕುಡು ಸೀತಕ್ಕ ಬೈದೆರ್ಯೆ..

ಉಸುಲು ದೆಪ್ಪೆರೆ ಆವಂದಿಲೆಕ್ಕ
ಮೂಂಕುಡು ಕುಲ್ದೆರ್ ಯೇ..
ಗಟ್ಟಿಡೆ ಮೂಂಕುಡು ಕುಲ್ದೆರ್ಯೇ..

ಸೊರ್ ಸೊರ್ ಪನೊಂದು ಅಪಗಪಗ
ಮೂಂಕುಡ್ದ್ ಜಾರ್ವೆರ್ಯೆ..
ಸೀತಕ್ಕ ಮೂಂಕುಡ್ದು ತಾಲ್ವೆರ್ಯೇ..

ಗೊರ ಗೊರ ಮಿತ್ತ್ ಒಯ್ತ್ ಒಯ್ತ್ ಸಾಕಾದ್ ಪೋಂಡುಯೇ.. ಅರೆನ್ ಒಯ್ತ್ ಸಾಕಾದ್ ಪೋಂಡುಯೇ..

ತರೆಲ ಬೇನೆ ಮೈ ಕೈ ಬೇನೆ
ಸಾಕಾದ್ ಪೋಂಡುಯೇ
ಸೀತಕ್ಕಗ್ ದಾನೆಯೇ..

ಡೆಲ್ಲಿಗ್ ಪೋಯರ್ ಎಂಕ್ ದಾದುಂಡುಂದು ಸೀತಕ್ಕ ಕೇನ್ವೆರ್ಯೇ..
ಪೇಂಟೆದ ಡಾಕ್ಟ್ರೆನ ಮರ್ದೇ ಬೋಡುಗೆಯೇ..

ಕೆಬಿಲ ಬೇನೆ, ಚಳಿಲ ಜಾಸ್ತಿ
ಬಾರಿ ಅಬತಾರಯೇ..ಸೀತಕ್ಕನ ಬಾರೀ ಅಬತಾರಯೇ..

ಚೌಳಿಲ ಆಪುಜಿ ಬೆಚ್ಚಲ ಸೇರುಜೀ
ನಾಲಯುಗ್ ರುಚಿಯಿಜ್ಜೀ
ಬಂಜಿಗ್ ಬಡವಿಜ್ಜೀ..

ಕೈಪುಲ ಕೈಪೆ, ಸಾರ್ ಲ ಕೈಪೆ 
ಉಪ್ಪಡ್ ಸೇರುಂಡೂ ಆಂಡ
ಉಷ್ಣಲ ಆಪುಂಡು..

ಕಷಾಯ ಪರಿಯೆ, ಮರ್ದ್ ಲ ಪರಿಯೆ, ಪೋಯೆರೆ ಕೇಂಜೆರ್ ಯೇ..ಸೀತಕ್ಕ ಪೋಯೆರೆ ಕೇಂಜೆರ್ ಯೇ..

ಸರಲಾ ಗರಗರ ಸೌಂಡುಲ ಗರಗರ
ಈರ್ ಏರ್ ಪನ್ಪೆರ್ ಯೇ..ಮಾತೆರ್ಲಾ ಫೋನುಡು ಗುರ್ತನೆ ಪತ್ತುಜೆರ್ ಯೇ..
@ಪ್ರೇಮ್@
19.10.2019

1356. ನರಮಾನಿ

ನರಮಾನಿ

ನರಮಾನಿ ಯಾನ್ ಪಶುವತ್ತ್!
ಕಣ್ಣೀರ್ ತೂದು ಕೈಟೇ ಒರೆಸುವೆ
ಬಡವುದ ಪೊರ್ತುಡು ಬತ್ತಿನಾಯನ ಬಡವು ನಿಗುಪುವೆ
ಖಾಲಿ ಕೈಟಿಪ್ಪುನಗ ಬಂಜಿಗ್ ಕೊರುವೆ
ಮನಸ್ ಮಲ್ಲ ಮಲ್ತ್ ಇಲ್ಲಡ್ ಕುಲ್ಲಾವೆ
ಆಂಡ ಧಗೆ ಮಲ್ತಿನಾಯಗ್ ಜಾಗ್ ಕೊರಯೆ!

ನರಮಾನಿ ಯಾನ್ ಪಶುವತ್ತ್!
ಪೆತ್ತ ಕಂಜಿಗ್ ಮಾನಾದಿಗೆ ಕೊರುವೆ,
ನಾಯಿ ಪುಚ್ಚೆಗ್ ಮೋಕೆ ಕೊರುವೆ
ಚನಿಲ್ ಮುಲಕುಲೆಗಿಲ್ಲಡ್ ಜಾಗ್ ಕೊರುವೆ
ರಡ್ಡ್ ನಾಲಯಿದಾಯನ್ ಮಾಪು ಮಲ್ಪಾಯೆ!

ನರಮಾನಿ ಯಾನ್ ಪಶುವತ್ತ್!
ಪೇರ್ ಗ್ ಪೇರ್ ಕೊರುವೆ
ನೀರ್ ಗ್ ನೀರ್ ಕೊರುವೆ,
ಸರಿ ತಪ್ಪುನು ಎದುರೇ ಪನ್ ವೆ
ತುಳುವಪ್ಪೆ ಬದ್ಕಿನ ಮಟ್ಟಿಲ್ ಡ್ ಉಂತವೆ!

@ಪ್ರೇಮ್@
.03.12.2019

ಅಕ್ಕ ಇರೆನ ಪೊರ್ಲ ಕಬಿತೆ ಇರೆನ.
ಇರೆಗ್ ತೆರಿಪಂದೆ ಕೆಲವು ಕನ್ನಡೊನು ದೆತ್ತ್ ತುಳುನು ಸೇರಯೆ ಬೇಜಾರಾಂಡ ಮಾಪು ಇಪ್ಪಡ್ 🙏🏻🙏🏻🙏🏻.
ನನಾತ್ ತುಳು ಬರವು ಇರೆರ್ದ್ ಬರಡ್ 😊

1355. celebration

Celebration

We wanted to celebrate 
Dasera festival grandly.. 
So we cleaned the house.. 
Very carefully.. 
Very neatly.. 

A fat spider lost its life
In the left corner 
Of the hall..
A pregnant spider half died
In the right corner 
Of the bedroom.. 

All the ant family
Burnt for powder... 
The powder sticked on 
The feet of the baby too.. 
Who sometimes sip her toes. 

A cockroach was dancing
For the poisonous power of red hit, under the gas stove.. 
Vegetables were kept there.. 

God's photo would lose 
It's dust today.. 
Soon after cleaning a lamp 
Will be burnt to the god.. 
The black carbon it emits.. 

Rats run behind the house.. 
The one which was just got 
Babies caught and killed 
By the great owner... 

Tomorrow dasera will be
Celebrated grandly.. 
With the relatives.. 
Who comes here.. 
To the home with family. 
@prem@