ನೋಡವ್ವಾ
ಎಂಥ ಸೊಬಗ ನೋಡವ್ವ
ಈ ಭೂಮಿ ತಾಯಂದ
ಎಂಥಾ ಅಂದ ನೋಡವ್ವಾ..
ಭೂತಾಯ ಚಂದ ಕಂಡು
ಅನುಭವಿಸಿ ಹಾಡವ್ವಾ..
ಹಸಿ ಹಸಿರ ಸೀರೆಯುಟ್ಟು
ತರುಲತೆಯ ರವಿಕೆ ತೊಟ್ಟವ್ವ..
ಸೋಜಿಗದ ಹಗಲು ಇರುಳು
ನಿತ್ಯ ಸುತ್ತಿ ಪಡೆಯುತ್ತಾಳವ್ವ
ಸೂರ್ಯನ ಸುತ್ತಲೂ ತಿರುಗಿ
ಮುತ್ತೈದೆ ಧರ್ಮ ಮೆರೆದಾಳವ್ವ..
ಸೋದರ ಚಂದಿರಗೆ ನಮಿಸಿ
ಸಾಗರದಿ ಚಿಮ್ಮಿದಳವ್ವ
ಸೋದರಿ ಉಷೆಯನು ಒಲಿಸಿ
ಸಂಜೆ ಕೆಂಪಾದಳವ್ವಾ..
ಪಶು ಪಕ್ಷಿ ಕೂಗಿನ ರಾಗ
ಆಲಿಸುತ ಮೆರೆದಿಹಳವ್ವ
ಮರ ಗಿಡ ಕಾಯಿ ಹೂವ
ಹೊರುತ ಸಂತಸ ಪಟ್ಟಾಳವ್ವಾ..
@ಪ್ರೇಮ್@
06.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ