ಸೋಮವಾರ, ಏಪ್ರಿಲ್ 6, 2020

1349. ಗಾಳಿಯಲ್ಲಿಟ್ಟ ದೀಪ

ಗಾಳಿಯಲಿಟ್ಟ ದೀಪ

ಬದುಕ ಭಾಗವು ಅಲ್ಪ
ಗಾಳಿಯಲಿಟ್ಟ ದೀಪ!
ಎಷ್ಟುರಿವುದೋ ಎಂತೋ
ಬಲ್ಲವರಿಲ್ಲ ಕಾಯಕಲ್ಪ...

ಬಾಳಲಿ ಆಗಾಗ ಇರಲಿ
ಸರ್ವ ಜನಸೇವೆ ಅಲ್ಪ
ಮಾಡಲಾಗದಿದ್ದರೂ ಶಿಲ್ಪ-
ಬದುಕಿರಬೇಕು ಸ್ವಲ್ಪ!

ನಮಗಾಗಿ ಇತರರಿಗಾಗಿ
ಮಾಡಬೇಕು ಜಪ
ಒಳ್ಳೆ ಕಾರ್ಯವಾಗಬೇಕು
ನಮ್ಮ ನಿತ್ಯದ ತಪ..

ತನ್ನಲಿದ್ದುದರಲಿ ಇತರ
ಜನರೊಡನೆ ಹಂಚಿಕೊಳ್ಳತ
ಬಾಳ ಬಂಡಿಯಲಿ
ಸಂತಸವಿರಲಿ ಅನವರತ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ