ಸೋಮವಾರ, ಏಪ್ರಿಲ್ 6, 2020

1339.ಪ್ರಕೃತಿ ತಾಯಿಗೆ

ಪ್ರಕೃತಿ ತಾಯಿಗೆ..

ಸಿರಿ ಸಂಪತ್ತನು ಹೊಂದಿಹ ದೇವಿಯೇ
ಹಸಿರೇ ನಿನಗೆ ಸಾಟಿಯಿಹುದೇ?
ಗಿಡಗಂಟಿಗಳ ಬೆಳೆಸಿಹ ತಾಯಿಯೇ
ಬಸಿರಲೇ ಜೀವಿಯ ಹಿಡಿದಿಹುದೇ?

ಮನದಲಿ ಪ್ರೀತಿಯ ತುಂಬಿದ ಕರುಣೆಯೆ
ಉಸಿರಿಗೆ ಗಾಳಿಯ ನೀಡುತಲಿಹುದೇ..
ನಲಿವಲಿ ಜೀವನ ಹಂಚುವ ದೀಪವೆ
ಬಳಿಯಲಿ ನೆಮ್ಮದಿ ಕೊಡುತಿರಬಹುದೇ!

ಗಿರಿವನಗಳ ಹೊಂದಿಹ ಪ್ರಕೃತಿ ಗೀತೆಯೇ
ಕೋಗಿಲೆ ರಾಗವ ಮಾರ್ಧನಿಸಿಹುದೇ?
ಸರಿತಪ್ಪುಗಳ ಅರಿತಿಹ ಪಾಠವೆ
ಹೂಮಾಲೆಯನು ಬೆಳೆಸಿಹುದೇ?

ರಾಶಿಗಳಂದದಿ ವೇಷವ ಧರಿಸಿದ
ಹೂ ಕಾಯಿ ಹಣ್ಣುಗಳಾಗರವೇ!
ಭಾಷೆಗಳನೇಕವಾದರೂ ಭಾವದ
ಸ್ಫುರಣೆಯ ಬಗೆ ಒಂದೇ ಅಲ್ಲವೇ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ