ಗುರುವಾರ, ಏಪ್ರಿಲ್ 16, 2020

1392. ಭಾವಗೀತೆ-ಹೀಗಿರಲಿ ಬಾಳು

ಭಾವಗೀತೆ

ಹೀಗಿರಲಿ ಬಾಳು

ಜೀವ ಬಾಳು ಅಲ್ಲ ಗೋಳು
ಸಹನೆ ಬೇಕು ಮನದಲಿ
ಕನಸ ಸವಿಯ ಸವಿದು ಬೆಳೆದು
ಹರುಷ ಬೇಕು ದಿನದಲಿ...

ಎದೆಯ ಮುದುಡಿ ಹಾಕಬೇಡಿ
ಭಯದ ಮೂಲ ಓಡಿಸಿ.
ಭವದ ಖುಷಿಯ ಕಳೆಯಬೇಡಿ
ಭವ್ಯ ಬದುಕು ರೂಪಿಸಿ...

ಏಳು ಬೀಳು ಇಹುದು ದಿನವು
ನೀತಿ ಮಾರ್ಗ ಹುಡುಕಿರಿ.
ಸತ್ಯವಂತರಾಗಿ ಜನರೇ
ನಿತ್ಯ ಕ್ಷಣವ  ಕಳೆಯಿರಿ..

ಜ್ಞಾನ ಪ್ರಾಣ ವಿದ್ಯೆ ಬೇಕು
ಜಾಣತನದಿ ಸಾಗಿರಿ
ಕಲಿಕೆ ಬಯಕೆ ಇರಲೇ ಬೇಕು
ಮನುಜ ಮತವ ಸಾರಿರಿ....
@ಪ್ರೇಮ್@
16.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ