ಗಝಲ್
ವಯಸು ದೇಹಕೆ ಮುದವು ಮನಕೆ ಸಾಗೋಣ ಮುಂದೆ
ನಲಿವ ನೆನೆದು ನೋವ ಮರೆತು ಸಾಗೋಣ ಮುಂದೆ...
ನನಗೆ ನೀನು ನಿನಗೆ ನಾನು ಭವದ ಜಗದಲಿ
ಭಯವ ಮರೆತು ಪ್ರೀತಿ ಬೆರೆತು ಸಾಗೋಣ ಮುಂದೆ..
ಇಂದು ಇಹುದು ನಾಳೆ ಏನೋ ಯಾರು ಬಲ್ಲರು?
ಮುದದ ಬಾಳು ಬಾಡದಂತೆ ನಿತ್ಯ ಸಾಗೋಣ ಮುಂದೆ!
ಬಡವ ಬಲ್ಲಿದ ರೋಗಿ ಭೋಗಿ ಸರ್ವರಿರುವರು ಇಲ್ಲಿ
ಬಾಳ ಬಂಡಿ ಸವೆಸೆ ಪ್ರಯಾಣ ಸಾಗೋಣ ಮುಂದೆ
ಜಾತಿ ಮತದ ಕಟ್ಟೆಯೊಡೆದು ಕ್ಷಣವ ನೋಡಬೇಕು
ಶಾಂತಿ ತುಂಬಿ ಭ್ರಾಂತಿ ಮರೆತು ಸಾಗೋಣ ಮುಂದೆ.
ಅಳುವು ನಗುವು ಬೆರೆತು ಮೆರೆವ ಕ್ಷಣಿಕ ಆಟವಿದು
ಸಮಾಜವೆಂಬ ಬಂಧದಲಿ ನಲಿದು ಅಳುತ ಸಾಗೋಣ ಮುಂದೆ
ಪ್ರೀತಿ ಪ್ರೇಮ ಇರಲಿ ಹೀಗೆ ದ್ವೇಷ ಏತಕೆ
ಮಾತಿನಲಿ ಜಗಳ ಕದನ ತೊರೆದು ಸಾಗೋಣ ಮುಂದೆ..
@ಪ್ರೇಮ್@
28.04.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ