ಬಣ್ಣಗಳಾಟ
ಮನದೊಳಿರೆ ಬಿಳಿಯ ಬಣ್ಣ
ಖ್ಯಾತನಾಗುವೆ ನೀನು ಅಣ್ಣ..
ಕೆಂಪು ಕಣ್ಣಿಗೆಂದೂ ತಂಪು
ಹಾಕುತಿರಲು ಮನಕೆ ಇಂಪು..
ಕಪ್ಪು ಎಲ್ಲವನ್ನು ನುಂಗಿ
ತಾನೆ ಮೆರೆವ ಭಟ್ಟಂಗಿ
ಹಸಿರು ತಾನು ಜಗದಲಿರಲು
ಉಸಿರಿಗಾಗಿ ಗಾಳಿ ಸಿಗಲು..
ಹಳದಿಯದೋ ಸಿಂಗಾರಕೆ
ನೇರಳೆಯು ಕಣ್ಣಾಸೆಗೆ
ಊದಾ ಬೂದಿ ಬಣ್ಣವದು
ಕಡಿಮೆಯಿಲ್ಲ ಶೋಕಿಗೆ..
ನೀಲಿಯು ಬಾನು-ಸಾಗರ
ಹಾಳಾಗದಿರೆ ಬದುಕಿನಾಗರ
ಕೇಸರಿಯು ದೇವರ ದ್ಯೋತಕ
ಸಾಧನೆಯ ಸಂಕೇತ ಸೂಚಕ..
ಕಾಮನ ಬಿಲ್ಲ ಬಣ್ಣಗಳೇಳು
ಬಿಂಬಿಸುವವು ಬದುಕಿನ ಏಳು-ಬೀಳು
ಒಗ್ಗಟ್ಟಿಗಿದೆ ಮಹಾನ್ ಶಕ್ತಿ
ಬಳಸಬೇಕು ಉಪಯೋಗಿಸಿ ಯುಕ್ತಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ