ಕಥನ ಕವನ
ಹೀಗೊಂದು ಕತೆ
ಆಕೆ ಸುರಸುಂದರಾಂಗಿ, ಜಿಂಕೆ ಕಣ್ಣು.
ದಾಳಿಂಬೆ ಹಲ್ಲುಗಳು, ಹವಳದ ತುಟಿ
ಜೇನಿನಲ್ಲಿ ಅದ್ದಿ ತೆಗೆದ ಸವಿಯಾದ ನಗು
ಗೋಧಿ ಬಣ್ಣ ನೀಳವಾದ ಮೈಕಟ್ಟು..
ಆತ ಸದಾನಂದ, ಹೆಸರಿನಂತೆ ನಗುಮೊಗ
ಬಿಳುಪಿನ ಸುಣ್ಣದಂಥ ನಿಷ್ಕಲ್ಮಶ ಹಲ್ಲು!
ಅಂತೆಯೇ ಆಗಲವಾದ, ಕೂದಲುಳ್ಳ ಎದೆ!
ಮುಗ್ಧ ಮುಖ, ದಪ್ಪಕ್ಕೆ ತಕ್ಕಎತ್ತರ, ಸುಂದರ!
ಸುಂದರಿ ತುದಿಗಣ್ಣಲ್ಲೇ ಸದನ ನೋಡಿ ಕಿರುನಗೆ ಬೀರಿದಳು!
ಸದನು ಆ ಕಿರುನಗೆಯ ನೋಡಿ ತನ್ನ ತಾನು ಮರೆತನು!
ಅವಳ ಕುಡಿನೋಟಕಾಗಿ ಕಾದು ಕುಳಿತನು!
ಸಂತೆಗೆ ಹೋದಾಗ ಅವಳ ಕಂಡು ದೂರದಿಂದ ಚೀಟಿಯೆಸೆದನು!
ಗಿಣಿಗೆ ಚೀಟಿ ಸಿಕ್ಕಿತು,ಅದರಲಿತ್ತವನ ಜಂಗಮಗಂಟೆಯ ಸಂಖ್ಯೆ!
ಮತ್ತೆ ಕೇಳಬೇಕೆ ಪ್ರಾರಂಭವಾಯಿತು!
ವಾಟ್ಸಪ್, ಮುಖಪುಟ, ಟೆಲಿಗ್ರಾಮ್, ಹೈಕ್, ಟ್ವಿಟರ್ ಚಾಟ್!
ಒಂದು ತಿಂಗಳ ಕಾಲ ಹರಟೆ, ಮಾತು, ನಗು, ಅಳು, ಪಟ, ವೀಡಿಯೋ ಹೋಗಿ ಬಂದವು!
ಸಣ್ಣ ವಿಷಯಕ್ಕಾಗಿ ಮನಸ್ತಾಪ, ಗಲಾಟೆ, ಜಗಳ, ತಟಪಟ!
ಸಾಮಾಜಿಕ ಜಾಲ ತಾಣದಲೆಲ್ಲ ಬ್ಲಾಕ್ ಮಾಡಲಾಯಿತು!
ತದನಂತರ ಒಂಟಿತನ, ಬೇಸರ, ತರತರ!
ಹಲದಿನಗಳ ಬಳಿಕ ಮತ್ತೆ ಮೊದಲಿನಂತೆ ಬದುಕು ಚಿಗುರೊಡೆಯಿತು!
ಸದನಿಗೊಂದು, ಸುಂದರಿಗೊಂದು ಹೊಸ ಪ್ರೊಫೈಲೊಂದಿಗೆ!
ಜನರು ಅವರಿಬ್ಬರೇ! ತಾಣವೂ ಅದೇ!
ಮೊಬೈಲುಗಳೂ ಅವುಗಳೇ!
ಅಂಕೆ-ಸಂಖ್ಯೆ ಹೆಸರು ಬದಲಾವಣೆಗಳೊಂದಿಗೆ!!
@ಪ್ರೇಮ್@
27.04.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ