ಜೋಡಿ
ನಿನ್ನ ನಿಷ್ಕಲ್ಮಶ ನಗುವಲಿ ನನ್ನ ನಗುವಡಗಿದೆ
ಆ ಹೃದಯದೊಳಗೆನ್ನ ಹೃದಯ ಮಿಡಿತವಿದೆ
ಮನದ ವಾಂಛೆಗಳು ಸರಿ ಏಕವಾಗಿರಲು
ಸುಖದ ಕನಸು ಬಂದು ಇಲ್ಲೆ ನೆಲೆಗೊಳ್ಳಲು
ಕಷ್ಟ ನಮ್ಮ ನೋಡಿ ದೂರ ಓಡಿ ಹೋಗಲು
ಇಷ್ಟ ನಿನ್ನಯ ಜೊತೆಗೆ ನಾ ನಿತ್ಯ ಬಾಳಲು..
ಭಯವೆ ಇಲ್ಲವು ನಿನ್ನಿಂದ ಬಾಳ ಹಾದಿಯೊಳು
ಖುಷಿಯೆ ಅನುಕ್ಷಣ ಜೊತೆಗೆ ಸದಾ ನೀನಿರಲು
ನಗುವೆ ಮೊಗದಲಿ ಗೆಲುವು ನಮ್ಮದಾಗಿರಲು
ಸಾವು ಬಂದರೂ ಜತೆಯಲೇ ಒಂದಾಗಲು
ನಾವು ಕಾಯುತಿರುವೆವು ಸಮಯ ಬಳಿ ಬರಲು
ಪ್ರತಿ ಕನಸ ಭಾವಗಳು ಒಂದೇ ಆಗಿರಲು..
ಮನದ ಸವಿ ನಗೆಯಲಿ ಶುಭ್ರ ಬಿಳಿಮೋಡಗಳು
ವೈರತ್ವವಿರದೆ ಸಂತಸದಿ ಬದುಕೊ ಹೃದಯಗಳು
ಬೀಸು ಗಾಳಿಯಲೂ ಪ್ರೇಮದಲೆಯ ರಿಂಗಣಗಳು
ಮಮತೆ ತೋಟದಲಿ ಪ್ರತಿ ನಿತ್ಯ ಹಣ್ಣು ಹಂಪಲು
ಕ್ಷಮೆಯ ಬಯಸುತ ನಲಿಯೊ ಮಗ್ಧ ರೇಖೆಗಳು
ನೈಜದೊಳಗಡೆ ನಿಜವ ಸಾರುತಿವೆ ಘಟನೆಗಳು..
ಒಂದೆ ಭಾವನೆ ಒಂದೆ ಮಾತಿನ ಗೌರವದಲೆಗಳು
ನಯ ವಿನಯ ಸದ್ಗತಿ ಸಂಪನ್ನ ಬಾಳ ಲಕ್ಷಣಗಳು
ನಲಿವು ನೋವಿನ ಕತೆಯ ಮೊದಲ ಬಾಗಿಲುಗಳು
ಮೋಹ ಮದ ಮಾತ್ಸರ್ಯ ತೊರೆದ ಕಣ್ಣುಗಳು
ಸರ್ವ ದೇವರ ಪದ ತಳದಲಿರಿಸಿದ ಮಹಾ ಕ್ಷಣಗಳು
@ಪ್ರೇಮ್@
15.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ