ಪದ-ಸಹನೆ
ಪ್ರಕಾರ-ಚುಟುಕುಗಳು
1. ಆಶಯ
ತೊಲಗಲಿ ಜಾತಿ ಧರ್ಮದ ಕೋಟೆ
ಮೊಳಗಲಿ ಮನದಲಿ ಸಹನೆಯ ಮೂಟೆ
ನಲಿಯಲಿ ಮಿಡಿಯುವ ಮಾನವ ಹೃದಯವು
ಜನಿಸಲಿ ನವೀನ ಸಮಾನತೆಯ ಮಗುವು!!
2. ತಿಳಿವು
ಹೊರಗಡೆ ಬಾರದೆ ಒಳಗಿರು ಮಾನವ
ಪ್ರಾಣಿಯ ಪಂಜರದಲಿ ಹಾಕುತ ಮೆರೆದವ
ಮನದಲಿ ನಿಜ ಸಹನೆಯು ಮಡುಗಟ್ಟಿರಲಿ
ಜೀವಿಯ ವೇದನೆ ತನಗೂ ತಿಳಿಯಲಿ!
3. ಪ್ರಾರ್ಥನೆ
ಪ್ರೀತಿ -ಪ್ರೇಮ -ಶಾಂತಿ -ಸಹನೆ
ಬೆಳೆಯಬೇಕು ನಮ್ಮಲಿ,
ಕ್ರೂರ ದ್ವೇಷ-ಮೋಸ-ವಂಚನೆ
ತೊಲಗಬೇಕು ಮನದಲಿ!!
4. ಭರವಸೆ
ಇರಲದು ದೇಶಕೆ ಹಿಮಾಲಯದ ಸಹನೆ
ಬರಲದು ಮಕ್ಕಳ ನಿಷ್ಕಲ್ಮಶ ನಗೆಯು;
ನಗಲದು ಬದುಕು, ನಲಿವಿಗೆ ವಂದನೆ,
ಅಳಲದು ಕೊರೋನ-ಅಟ್ಟಹಾಸದ ನಡೆಯು!
5. ಅಹವಾಲು
ಸಹನೆಯು ಬೇಕು ನಮ್ಮಯ ಬದುಕಲಿ
ಸಹವಾಸವಿರುವ ಸರ್ವರ ಮನದಲಿ
ಸರಿಯದೆ ದೂರ ಹರುಷದ ಬಾಳಲಿ
ಸಮಾನತೆ ಬೇಕು ಜನರ ಕಾರ್ಯದಲಿ!
6. ಕಲಿಯೋಣ
ದೇಶದ ಯೋಧರ ಹಾಗೆಯೇ ನಾವು
ಜತನದಿ ಕಾಯುವ ತಾಯಿಯ ಸಹನೆಯಲಿ!
ಕಾಣದ ಕೈಗಳ ಕ್ರೂರದ ನೃತ್ಯವು
ಭಾದಿಸದಿರಲಿ ಪ್ರತಿ ಮನೆ- ಮನಗಳಲಿ!!
7. ನಮನ
ನಿನ್ನ ಹಿತವಾದ ಸಹನೆಯ ಕಟ್ಟೆಯನು
ನಾ ಹೇಗೆ ತಾನೇ ಮರೆಯಲಿ?
ತಾಯಿ ಭರತ ಮಾತೆ ನಾನು
ನಿನಗೆ ಏನು ತ್ಯಾಗ ಮಾಡಲಿ?!
8. ರೈತ
ದುಡಿಯುವ ರೈತಗೆ ಕಾಯುವ ಸಹನೆ
ಬೆಳೆದ ಬೆಳೆ ಸಿಗಲು ಸಂತಸವು!
ನೀರು ಗೊಬ್ಬರ ಹಾಕಿ ಕಾದೊಡನೆ
ತೆನೆ ಬರಲದು ಹಿತ ಸಂಭ್ರಮವು!
9. ತಿಳಿ
ಪ್ರಕೃತಿಯ ಸಹನೆಯು ಮಹಾನ್ ಆಳ
ಅಳತೆ ಮಾಡದಿರು ಎಲೆ ಮಾನವನೇ!
ಗಾಳಿ -ನೀರು -ಬಿಸಿಲು-ಮಳೆಗಾಲ
ನಿನಗಾಗಿಯೆ ತಿಳಿಯೊ ಶತ ದಾನವನೇ!!
10. ಮಾನವಗೆ
ಮನೆ ಮನದಲಿ ಕಷ್ಟವು ಎಲ್ಲರಿಗಿರಲು
ನಿಜವನು ತಾ ಉಲಿಯಲು ತೊಂದರೆಯೇ?
ಸಹನೆಯ ತಾಳಲು ಸರ್ವಗೆ ಮನವಿರಲು
ಸಕಲವು ಸಿಗವುದು ಎಂಬುದ ಮರೆಯುವೆಯೇ?
@ಪ್ರೇಮ್@
15.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ