ಲೇಖನಿ
ನನ್ನಯ ಲೇಖನಿ ಬರೆವುದು ವೇಗದಿ
ಕನ್ನಡ, ಇಂಗ್ಲಿಷ್, ಹಿಂದಿಯನು!
ಅಷ್ಟೇ ಅಲ್ಲವು ಅದರಲಿ ಬರೆವುದು
ನನ್ನ ಮನದ ಆಳವನು..//
ಬುದ್ಧಿಯ ಜ್ಞಾನದ ಪದಗಳು ಬಂದು
ಬರಹ ಎನ್ನುತ ಕೂರುವುವು
ಪುಸ್ತಕ ಹಿಡಿದು ಕುಳಿತರೆ ಬರುವುದು
ಪೆನ್ನಿನ ಶಾಯಿಯ ಲೇಖನವು//
ಕತೆ , ಕಾದಂಬರಿ, ಕವನವೋ, ಕಾವ್ಯವೊ
ಬರೆಯಲು ಲೇಖನಿ ಬೇಕಲ್ವೇ?
ಹಾಳೆಯ ಮೇಲೆ ನೃತ್ಯವ ಮಾಡುತ
ಶಾಯಿಯ ಚೆಲ್ಲೋದೆ ಬದುಕಲ್ವೇ?//
ಪೆನ್ನಿನ ಕೆಲಸವು ಪೆನ್ನಿಗೇ ಗೊತ್ತು!
ಅಳಿವಿನ ಅಂಚಲಿ ಇಹುದಿಂದು!
ಡಿಜಿಟಲ್ ಯುಗವು, ಕೈ ಬರಹವು ಕಡಿಮೆ
ಸೀಲಲೆ ಸಹಿಯನೂ ಹಾಕುವರು!!//
ಲೇಖನಿ ಸರಿಯುತಲಿಹುದದು ದೂರಕೆ
ಕಂಪ್ಯೂಟರ್ ಪಾಠವ ಕೇಳಣ್ಣ!
ಗುಂಡಿಯ ಒತ್ತುತ ಬರೆವುದ ಕಲಿತು
ಈ ಪೆನ್ನನು ಮರೆಯಲು ಬೇಡಣ್ಣ!
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ, ದ.ಕ
premauday184@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ