ಸೋಮವಾರ, ಏಪ್ರಿಲ್ 6, 2020

1368. ಶಶಿಯಳಲು

1. ಶಶಿಯಳಲು

ಎಲೆ ಇಳೆಯೇ ಹೀಗೆ ಮಾಡಬಹುದೇ ನೀನು?
ನಮ್ಮೀರ್ವರ ನಡುವೆ ನೀನೇಕೆ ಬರುವೆ?
ತಡೆದು ರವಿಯ ಹೊನ್ನ ಕಿರಣವನು!
ಹಗಲಿರುಳು ನಿನ್ನ ಸುತ್ತುವೆ ನಾನು..

ಬೆಳಕನೆಲ್ಲ ನೀ ತಡೆಯುವುದು ತರವೇ?
ನಮ್ಮ ಮಧ್ಯೆ ಬಂದು ನಿಲ್ಲುವುದು ಸರಿಯೇ?
ನನ್ನ ಬೆಳದಿಂಗಳ ನೀನು ಮುಚ್ಚುವುದೇ?
ನನ್ನನಂಧಕಾರದ ಕೂಪಕೆ ನೀ ತಳ್ಳುವುದೇ...

ರವಿ-ಶಶಿಯರು ಬೆಂಗಾವಲು ನಿನಗೆ!
ಹಗಲಿರುಳು ಬೆಳಗುವೆವು ನಿನ್ನ ನಗೆ!
ನೀ ಹೀಗೆ  ಬರಲು ಬೆಳಕ್ಹೇಗೆ ಪ್ರತಿಫಲಿಸಲಿ?
ನನ್ನ ನಂಬಿದವಗೆ ನಾ ಮುಖ ಹೇಗೆ ತೋರಿಸಲಿ?

ಚಂದಿರಗೆ ಕಷ್ಟವೆಂದು ನಿನ್ನ ಜನ ತಿಳಿದಿಹರು!
ಉಪವಾಸ, ಪೂಜೆ- ಜಪತಪಗೈಯ್ಯುವರು!
ನನ್ನೊಲವು ನಿನಗೆಂದು, ಬಾರದಿರು ನಡುವೆ!
ನಾನೆಂದು ನಿನ್ನ ಸುತ್ತ ತಿಳಿದುಕೋ ಒಲವೆ...!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ