ಭಾನುವಾರ, ಮಾರ್ಚ್ 31, 2019

894. ಭಾವದೊಲುಮೆ

ಭಾವದೊಲುಮೆ

ಬರದಂತೆ ಬಂದೆ ಬಾಳಲ್ಲಿ ಬಿರುಕು!
ಮನದಲ್ಲೆ ನಿಂದೆ ಮರೆಮಾಚಿ ಮುಸುಕು//ಪ//

ನಿಜ ನೀನು ನನಗೆ ನವಿಲಂತೆ ಚಿನ್ನ,
ತಂಗಾಳಿ ತಂದೆ ತಂಪಾಗಿ ರನ್ನ.
ಹಗುರಾದ ಹನಿಯಂತೆ ಹಾಯಾಗಿ ಹರಡಿ,
ಬದುಕಲ್ಲಿ ಬಂಗಾರ ಬರುವಂತೆ ಬಂದೆ//೧//

ನೀನಿರಲಿ ಸುಖವು ನಿನ್ನಿಂದ ಒಲವು,
ನಿನ್ನಿರಲವೇ ಚೆಲುವು, ಮೈಮನದಲ್ಲಿ ಬಲವು..
ಪ್ರಿಯೆ ಪದರವಾಗಿ ಪಸರಿಸಿಯೆ ನೀನು,
ಗತಿ ನೀನೆ ಗ್ರಹಿಸು ಈ ಹೃದಯದ ನೋವು//೨//

ವಸಂತನಂತೆ ನೀ ಚಿಗುರಿಸ ಬಂದೆ,
ಕನ್ನಡಿಯ ಹಾಗೆ ನನ್ನ ಬಿಂಬವ ತಂದೆ.
ನನ್ನುಸಿರಿನ ಉಸಿರೇ, ನನ್ನ ಬಾಳ ಹಸಿರೇ,
ಬಾಳಪಯಣದಲಿ ನೀ ಪ್ರೀತಿಯ ಹೆಸರೇ //೩//

ಮನದೊಳಗಿನ ಪುಷ್ಪ ಅರಳಿತು ನಿನ್ನಿಂದ!
ಸವಿಭಾವದೊಲುಮೆ ಬೆಳಗಿತು ಮುದದಿಂದ!!
ಸರಸದಲಿ ವಿರಸದಲಿ ರಸಕ್ಷಣದಿ ತೇಲಿ!
ಸಂತಸವು ಸಂಭ್ರಮವು ನಿತ್ಯ ಬಾಳಲ್ಲಿ...//೪//
@ಪ್ರೇಮ್@
01.04.2019

894. ಭಾವದೊಲುಮೆ

ಭಾವದೊಲುಮೆ

ಬರದಂತೆ ಬಂದೆ ಬಾಳಲ್ಲಿ ಬಿರುಕು!
ಮನದಲ್ಲೆ ನಿಂದೆ ಮರೆಮಾಚಿ ಮುಸುಕು//ಪ//

ನಿಜ ನೀನು ನನಗೆ ನವಿಲಂತೆ ಚಿನ್ನ,
ತಂಗಾಳಿ ತಂದೆ ತಂಪಾಗಿ ರನ್ನ.
ಹಗುರಾದ ಹನಿಯಂತೆ ಹಾಯಾಗಿ ಹರಡಿ,
ಬದುಕಲ್ಲಿ ಬಂಗಾರ ಬರುವಂತೆ ಬಂದೆ//೧//

ನೀನಿರಲಿ ಸುಖವು ನಿನ್ನಿಂದ ಒಲವು,
ನಿನ್ನಿರಲವೇ ಚೆಲುವು, ಮೈಮನದಲ್ಲಿ ಬಲವು..
ಪ್ರಿಯೆ ಪದರವಾಗಿ ಪಸರಿಸಿಯೆ ನೀನು,
ಗತಿ ನೀನೆ ಗ್ರಹಿಸು ಈ ಹೃದಯದ ನೋವು//೨//

ವಸಂತನಂತೆ ನೀ ಚಿಗುರಿಸ ಬಂದೆ,
ಕನ್ನಡಿಯ ಹಾಗೆ ನನ್ನ ಬಿಂಬವ ತಂದೆ.
ನನ್ನುಸಿರಿನ ಉಸಿರೇ, ನನ್ನ ಬಾಳ ಹಸಿರೇ,
ಬಾಳಪಯಣದಲಿ ನೀ ಪ್ರೀತಿಯ ಹೆಸರೇ //೩//

ಮನದೊಳಗಿನ ಪುಷ್ಪ ಅರಳಿತು ನಿನ್ನಿಂದ!
ಸವಿಭಾವದೊಲುಮೆ ಬೆಳಗಿತು ಮುದದಿಂದ!!
ಸರಸದಲಿ ವಿರಸದಲಿ ರಸಕ್ಷಣದಿ ತೇಲಿ!
ಸಂತಸವು ಸಂಭ್ರಮವು ನಿತ್ಯ ಬಾಳಲ್ಲಿ...//೪//
@ಪ್ರೇಮ್@
01.04.2019

895. ಭಾವಸುಮ

ಭಾವಸುಮ

ಭಾವಗಂಗೆಯಲ್ಲಿ ಮಿಂದು
ನಾದಕಡಲಲಿ ನಿಂದು
ಮಾತಿನಲ್ಲು ಮೌನದಲ್ಲು
ನೀನೇ ಕಾಣುವೆ ಗೆಳತಿ..ನೀನೆ ಕಾಣುವೆ..

ತುಟಿಗಳೆರಡು ಸ್ವಲ್ಪ ತೆರೆದು
ನಗೆಯ ಬೀರಲು
ನಸುನಾಚಿಕೆ ತುಸು ಬೇಸರ
ಕಣ್ತುಂಬಿ ಹೃದಯ ತುಂಬಿ..ನನ್ನ ಹೃದಯ ತುಂಬಿ..

ನವಿರು ಸ್ಪರ್ಶ ಹಿತವಾಗಿ
ನವಿಲಿನಂತೆ ಮನವು ತೂಗಿ
ಬಾಳ ಬುತ್ತಿಯಲಿ ಸಾಗಿ
ಕಾಲ ಗರ್ಭದೊಳಗೆ ಜಾರುವ..ನಾವು..ಕಾಲಗರ್ಭದೊಳಗೆ..

ನವವಸಂತ ಬದುಕಿನಲ್ಲಿ
ನವ ಪಲ್ಲವಿ ಜೀವನ ರಾಗದಲಿ
ಅನುರಣಿತವು ಕಿವಿಯ ಒಳಗೆ
ನಿನ್ನ ಮಧುರ ನುಡಿಯು..ನಿನ್ನ ಮಧುರ..
@ಪ್ರೇಮ್@
01.04.2019

893. ಹನಿಗವನ

ಮೈದಾನ...

ದಾನಗಳಲ್ಲೇ ದೊಡ್ಡ ದಾನ..
ಆಟವಾಡಲು ಭೂಮಾತೆಯು
ನಮಗೆ ಜನತೆಗೆ ಕೊಟ್ಟ
ಮಹಾನ್ ವರದಾನ!!
@ಪ್ರೇಮ್@

892. ಹನಿಯ ಕವನ

ಹನಿಯ ಕವನ

ಮೊದಲ ಮಳೆಯ
ಮೊದಲ ಹನಿ ಉದುರಲು
ಮೊದಲು ಬಂದ
ಮಣ್ಣ ಪರಿಮಳಕೆ
ಮೂಡಿದ ಮೊದಲ
ಪದಗಳ ಸಾಲಿಗೆ
ನಾನೇ ಇಟ್ಟ ಹೆಸರು
ಹನಿಗಳ ಕವನ!!!
@ಪ್ರೇಮ್@
31.03.2019

ಶುಕ್ರವಾರ, ಮಾರ್ಚ್ 29, 2019

891. ಗಝಲ್-79

ಗಝಲ್-79

ಕಪ್ಪೆಯ ವಟವಟ, ಮಳೆಯು ತಟಪಟ
ಸಾವಿನ ಸುದ್ದಿಯು ಇಲ್ಲದೆಯು ಪಟಪಟ..

ಕಿವಿಯಿಂದ ಕಿವಿಗೆ ಮಾಹಿತಿ ಹರಡಿತು.
ಜನರ ಬಾಯಲಿ ಎಲ್ಲೆಡೆಯು ಅಕಟಕಟ!!

ಒಂದಲ್ಲ ಒಂದಿನ ಹೋಗಲೆ ಬೇಕು.
ಶಿವನ ಪಾದದ ಬಳಿಯು ಶಕಟ!!

ಮಾನವ,ಪ್ರಾಣಿ,ಪಕ್ಷಿ, ಜಂತುವನೂ ಬಿಡದು!
ಒಂದು ಕೊನೆದಿನದ ಮಾಯೆಯು ಅಕಟ!

ಬದುಕುತ ಸಾಧಿಸು ಅಲ್ಪ ಸ್ವಲ್ಪವೇ,
ಹೋಗಲು ನೀ ಶುಭಾಶೀರ್ವಾದವ ಪಡೆಯು ಮರ್ಕಟ!

ಜಾರುತ ಬಾಳಲಿ ಕ್ಷಣಗಳ ಬದಲಿಸುತಲಿರು!
ಉಸಿರೊಂದು ದಿನ ನಿನ್ನ ಬಿಡಲಿದೆ ಮಾಡದೆಯು ಪ್ರಕಟ!!

ದಿನಗಳ ಕ್ಷಣಗಳ ಖುಷಿಯಲಿ ಕಳೆಯಿರಿ!
ಬರುತಿದೆ ಧುಮುಕಲು ಗಂಟೆಯು ನಿಕಟ!!!

@ಪ್ರೇಮ್@
30.03.2019

889. ಕವಿಗಳ ವಿಮರ್ಶೆ ಹಾಡಿನಲಿ

ಅಂಬರ ಈ ದಿನ ಹೀಗಿತ್ತು!!!

ಅಂಬರಕ್ಕೆಲ್ಲಿದೆ ಎಣಿಯು ಅಣ್ಣಾ..
ಬರೆದೇ ಬರೆದರು ಕವಿಗಳು ಇದನ್ನಾ...

ಮಹಾಲಕ್ಷ್ಮಿಯವರರುಹಿದರು ಅಜ್ಞಾನದ ಕೇಡನು!
ಯಾರಿಗೂ ತಪ್ಪಿದ್ದಲ್ಲವೆಂದರು ಜಿಟಿಆರ್ ರವರು!!
ಈಶ್ವರಣ್ಣ ಬೆಂಕಿಯಲಿ ಸದ್ದು ಮಾಡಿ ಗುದ್ದಾಡಿದರು!
ನೆಗಳಗುಳಿಯವರು ಅಂಬರಕೆ ತಮ್ಮ ಗಝಲನ್ನೆಸೆದರು!

ಶ್ವೇತಪ್ರಿಯರು ಸಾಕಿಯೊಡನೆ ಕಳೆದರು,
ಅಂಬುಜಾರವರು ಕಲಿಗಾಲಕೆ ಹಾಡಿದರು!
ವಿಶ್ವರೂಪರು ಮನಚೋರಿಯೊಡನಾಡಿದರು!
ಅರುಣಾರವರ ಬಯಕೆಯ ಆರಂಭಿಸಿದರು..

ಪ್ರತಿಮಾರವರು ಪ್ರಿಯಕರನನು ನೆನೆದರು,
ದಾಸಣ್ಣನವರು ಒಲವಲಿ ಮಿಂದರು!!
'ಪ್ರದಿ'ಯವರ ಕುಂಚವು ಶೀರ್ಷಿಕೆರಹಿತ ಕವನವ ಬಿಡಿಸಿತು!
ಸಿದ್ಧು ಸ್ವಾಮಿಯವರಿಂದ ಸತ್ಯ ದರ್ಶನವಾಯಿತು!

ಶಶಿರೇಖಾರವರು ಹುಣ್ಣಿಮೆ ಚಂದ್ರನ ವರ್ಣಿಸಿದರು!
ರವೀಶ ಕವಿಗಳು ಮತ್ತೊಮ್ಮೆ ಕರೆದರು!
ಓಗೊಡುತ ತಕ್ಷಣ ಬಂದ ಚಂದಿರನು ತನ್ನ ನೈದಿಲೆಯೇ ವಿಸ್ಮಯವೆಂದರು!!
ಸಾವಿತ್ರಿಯವರು ಹೊನ್ನ ತೇರಲಿ ಏರಿಸಿಬಿಟ್ಟರು!!

ಶಶಿವಸಂತರು ಕೊನೆಗಾಲವ ನೆನೆದು ಕಣ್ಣೀರಿಟ್ಟರೆ,
ಕುಮುದಾರವರು ಹಗಲಿರುಳಲಿ ಸಂತಸಪಟ್ಟರು!!ಪ್ರಮೀಳಾರವರು ದಿನಕರನ ವರ್ಣಿಸಲು,
ರೂಪಾರವರು ಮುಂಜಾನೆಯ ಸೊಬಗ ಸಂತಸ ಸವಿದರು!!

ಎಂ ಎಸ್ಕೆಯವರು ಋಣ ತೀರಿಸಬಂದರು,
ಆಸೀಫಾರವರು ಯಕ್ಷಪ್ರಶ್ನೆಯಿಂದಲಿ ಬೆಂದರು!
ಶಿಂಧೆಯವರು ಗಝಲನು ಬರೆಯಲು ಹೊರಟರು..
ಗೋಪಿಯವ್ರು ತನ್ನರಗಿಣಿಯನು ಕರೆದರು!!

ಮೊಗೇರಿ ಶೇಖರಣ್ಣ ದೌಡಾಯಿಸಿದರು!
ಇಬ್ಬನಿಯವರು ಅಂಬರ  ದಾಟಿ ಮಂಗಳಕೋಡಿದರು!!
ಪುಟ್ಟಣ್ಣನವರು ಎಲ್ಲೇ ಇರಲಿ, 'ಪ್ರೀತಿಸು' ಅಂದರು,
ಮಂಜುಳರವರು ನೆನಪಾಗಿ 'ಅವನನು'  ಬರಹೇಳಿದರು!!

ವಿಮರ್ಶಕರೆಲ್ಲ ತಮ್ಮನಿಸಿಕೆ ನೀಡಿ,
ಸರಿ-ತಪ್ಪನ್ನು ತಿದ್ದುತ ನಡೆದರು,
ಚಂದಿರನಂಗಳ ನಗುತಲಿ ತುಂಬಿತು..

ಪ್ರೇಮಾರವರು ಪಿತನನು ನೆನೆಯುತ
ನಮ್ಮೆಲ್ಲರ ತಂದೆ ಚಂದಿರನನು ನಮಿಸೆ..
ಇಂದಿನ ದಿನವು ಹೀಗಿತ್ತು!
ಕೆಲವರು ಬರೆವುದು ಬಾಕಿ ಇತ್ತು!!
@ಪ್ರೇಮ್@
29.03.2019

888. ಗಝಲ್-78

ಗಝಲ್-78

ಮುಟ್ಟಲಾಗದ, ಏರಲಾಗದ ಅದ್ಭುತವಾದ ಅಂಬರ,
ದೇವತೆಗಳ ಸಂಚಾರದ ಮಾರ್ಗವಾದ ಅಂಬರ!!

ತಾಯಿಯ ಪ್ರೀತಿಯಂತೆ ಅಳೆಯಲಾರದಂಥ ಗಗನವು!
ಅಕ್ಕಿಯಂತೆ ಸವೆದಷ್ಟು ರುಚಿಯಾದ ಅಂಬರ!!

ಪಾತಾಳಕ್ಕಿಳಿದ ಬೇರಿನಂತೆ ಜಟಿಲವೂ, ಆಳವೂ ಆಕಾಶ,
ಪಾಮರನಿಗೂ ಪೂರ್ಣ ತಿಳಿದುಕೊಳ್ಳಲಾರದ ಅಂಬರ!

ಕಲಿತಷ್ಟು ಮುಗಿಯದ ಗ್ರಹ ತಾರಾ ಕೂಟವಹುದಲ್ಲಿ!
ಚಂದ್ರಮ, ಉಪಗ್ರಹ ಉಲ್ಕೆಗಳ ಬಿಟ್ಟಿರದ ಅಂಬರ!!

ಧೂಮಕೇತು, ನಕ್ಷತ್ರ, ಕಿರುತಟ್ಟೆಗಳ ಹೊತ್ತಿಹುದು ನೋಡಾ!
ದೂರದಲ್ಲಿದ್ದು, ಹತ್ತಿರ ಕಾಣುತಲಿರುವ ಬಿರುಸಾದ ಅಂಬರ!!!

ಮೋಡಗಳೆಡೆಯಲಿ ಅವಿತು ಕುಳಿತಿಹುದು ಕಾಣದೆ!
ಸಾಗರದ ಮೆರೆತಕೂ ಕಾರಣವಾಗಿರುವ ನೀಲಿಬಣ್ಣದ ಅಂಬರ!

ಪ್ರೀತಿಯ ಚಂದಮಾಮನ ಮನೆಯಿಹುದು ಅಲ್ಲಿ!
ಪ್ರೇಮಕಾವ್ಯದ ಪುಸ್ತಕಕೆ ಸಾಟಿಯಾದ ಅಂಬರ!!
@ಪ್ರೇಮ್@
29.03.2019

887. ಅಪ್ಪನ ಮುಖಗಳು

ಅಪ್ಪ

ಹಲವಾರು ದೇವರು ನಮಗೆ
ಅವರಿಹುದು ಕೈಲಾಸ, ವೈಕುಂಠದಲಿ
ಕಣ್ಣಿಗೆ ಕಾಣುವ ದೇವರಲಿ
ಅಮ್ಮನ ಬಳಿಕ ಅಪ್ಪನಿಲ್ಲಿ..

ಅಮ್ಮ ಪ್ರೀತಿಗೆ, ತಂದೆ ಜವಾಬ್ದಾರಿಗೆ..
ಅಮ್ಮ ಪಾತಾಳದ ಬೇರಿನೆಡೆಗೆ
ಪಿತನು ಅಂಬರದ ಕಡೆಗೆ!!
ತಾಯಿ ಅಕ್ಕರೆಗೆ, ಪಪ್ಪ ಶಿಸ್ತಿಗೆ!!
ಆಯಿ ಆಟಕ್ಕೆ, ಅಪ್ಪಾಜಿ ಊಟಕ್ಕೆ!!

ಯಾರನ್ನಾದರೂ ತಾಯಿಯೆಂದರಾಗುವುದು,
ಜಗದಿ ತಂದೆಯೆಂದು ಇತರರ ಕರೆಯಲಾಗದು!
ತಾಯುಂದಿರು ನೂರಾರಿರಬಹುದು!
ತಂದೆಯ ಸ್ಥಾನ ತುಂಬುವುದು ಅವನೊಬ್ಬನೇ...

ದುಡಿಮೆಯೇ ದುಡ್ಡಿನ ದೇವರೆನುವ
ಹಗಲಿರುಳು ಕಷ್ಟಪಟ್ಟು ಕಾರ್ಯಗೈಯ್ಯುವ,
ಮಕ್ಕಳಿಗಾಗಿ ಪರರ ಕಾಟ ಸಹಿಸುವ!
ಮಕ್ಕಳ ಬಗ್ಗೆ ಕನಸು ಕಾಣುವ ಜೀವಿ!

ಕೊನೆಯಲೊಂದು ಮಾತು!
ಹೀಗೂ ಇದ್ದಾರೆ ಅಪ್ಪ, ಮಕ್ಕಳ ಬಾಳಲಿ!
ಜವಾಬದಾರಿಯನ್ನೇ ತೆಗೆದುಕೊಳ್ಳದವ!
ಹೆಂಡತಿ, ಮಕ್ಕಳ ಬಗೆಗೆ ಯೋಚಿಸದವ!
ತಾನು, ತನ್ನ ಬದುಕು,ಕುಡಿತವೆ
ತನಗೆ ದೇವರು, ತನ್ನ ಜೀವನವೆನುವ!
ಕುಡುಕ, ಬೇಜವಾಬ್ದಾರ ತಂದೆ!
ಹೆಂಡತಿ ಮಕ್ಕಳಿಗೆ ಹೊಡೆದು ಬಡಿವ ಭಡವ!
ಹೆದರಿಸುವ ಬಂಢ, ಮಾಡಿದ್ದ ಉಂಡು ಮಲಗುವವ!
ಮೂಢನಂತೆ ಇತರರ ಮೇಲೆ ಎರಗುವವ!
ಮಕ್ಕಳ ಬಾಳಲಿ ನೈಜ ಖಳನಾಯಕನಾದವ!!
ಹೆದರಿಸಿ ಬೆದರಿಸಿ ಧೈರ್ಯ ಕಿತ್ತುಕೊಂಡವ!
ಕೈ ಹಿಡಿದವಳ ಬಾಳಿಗೆ ಕೊಳ್ಳಿ ಇಟ್ಟವ!
@ಪ್ರೇಮ್@
29.03.2019

ಬುಧವಾರ, ಮಾರ್ಚ್ 27, 2019

885. ಗಝಲ್-77

ಗಝಲ್-77

ನನ್ನಂತೆಯೇ ನೀನೂ ಕೂಡಾ ಒಂಟಿಯಲ್ಲವ ಸೂರ್ಯ!
ದಿನನಿತ್ಯ ಸಮಯಕ್ಕೆ ಸರಿಯಾಗಿ ಮರೆಯಲಾರೆ ನಿತ್ಯ ಕಾಯಕವ ಸೂರ್ಯ!!

ಕಿರಣಗಳ ಚೆಲ್ಲುತಲಿ ಜೀವಿಗಳಿಗೆ ಸಹಕರಿಸುವ ಕಾರ್ಯ!
ಧರೆಯ ನೋಡಲು ಸದಾ ಮುಂಜಾನೆ ಬರುವ ಸೂರ್ಯ!

ನಿನಗಿಲ್ಲ ತನಗೆ ಜತೆಗಾರನಿಲ್ಲ ಎಂಬ ಬಾಳಿನ ಚಿಂತೆಗಳ ಕಂತೆ!
ಮನುಜರಿಗೆ ಯೋಚನೆಯ ಮೂಟೆಯ ಹರಿಯ ಬಿಡುವ ಸೂರ್ಯ!

ಸುಮ್ಮನೆ ಕೂರದೆ ಮಾಡಿ ಪರೋಪಕಾರದ ಕೆಲಸವ!
ಬಂಗಾರವಾದೀತು ಬಾಳು, ಬಾಳ ತೋಟಕೆ ಬೆಳಕ ಕೊಡುವ ಸೂರ್ಯ!

ಆಲೋಚನೆಗಳಿಲ್ಲದಿರೆ ಬರುವುದಂತೆ ಸಂತೆಯಲೂ ನಿದ್ದೆ..
ಸಹಾಯ ಬೇಕೆನಗೆ ಮುಗಿಸಲೆನ್ನ ಕಾರ್ಯವ ಸೂರ್ಯ!

ನಗೆಗಡಲ ತೆರೆಯಂತೆ ಉಕ್ಕಿ ಬರುವೆ ಪೂರ್ವದಿ,
ಬೇಗೆ ಸಹಿಸಲಾರೆನು ಬೇಸಿಗೆಯಲಿ ಬೆಂಕಿಯುಗುಳುವ ಸೂರ್ಯ!!

ಪ್ರಿಯ ಧರೆಗೆ ತಂಪನೀಯದೆ ಬಿರುಬಿಸಿಲ ಸುರಿಸುತಲಿ ನೀನು..
ಪ್ರೇಮದಿ ಕಾದ ಜನಕೆ ಬರಲಿ ತಂಪನೀಯುವ ಸೂರ್ಯ!!
@ಪ್ರೇಮ್@
28.03.2019

886. ನಮನ

ನಮನ

ಭಾರತ ಮಾತೆಯೆ ಮಕ್ಕಳು ನಿನ್ನಯ
ಬಾಗುವೆವು ತಲೆ ಆಶೀರ್ವದಿಸು!
ನಾಲ್ಕನೆ ಸ್ಥಾನಕೆ ಏರಿಸಿ ಬಿಟ್ಟೆವು
ತಂತ್ರಜ್ಞಾನದ ಹಾದಿಯಲಿಂದು!!

ಅಮೇರಿಕ,ಚೀನಾ,ರಷ್ಯದ ಬಳಿಕ
ಹೊಡೆದುರುಳಿಸಬಲ್ಲೆವು ಸುತ್ತುವ ಉಪಗ್ರಹಗಳನು!
ಪಾಲಿಸು ನಿತ್ಯವು ಶಕ್ತಿಯ ಯುಕ್ತಿಯ
ಕಾಯುತ ನಿನ್ನಯ ಪ್ರೀತಿಯ ಮಕ್ಕಳನು...

ಆಕಾಶಕೆ ಹಾರಿ, ವಿಮಾನವ ಹಿಡಿದು,
ನಿನ್ನಯ ಕಳ್ಳರ ಸಂಹರಿಸಿಹೆವು.
ಗೋಡೆಯ ದಾಟುವ ಜನರನು ಹಿಡಿದು,
ಸದೆಬಡಿಯುತ ಶೌರ್ಯವ ಮೆರೆದಿಹೆವು!!

ಯೋಧರ ಕಾವಲು ನಿನಗಿದೆ ನಿರತವು..
ಉತ್ತರದಲಿ ಕಾಂಚನ ಜುಂಗ ಅನವರತವು..
ದಕ್ಷಿಣದಿ ಹಿಂದೂ ಸಾಗರ ಕಾಳ್ತೊಳೆಯಲು..
ಮನದಲಿ ದೃಢ ಭಕ್ತಿಯು ಇರಲು...

ಮಂಜಿನ ಸಾಲಲಿ ನಿನ್ನಯ ಪಯಣ..
ಪಶ್ಚಿಮ ಘಟ್ಟದ ಸಾಲಿನ ಕವನ..
ಎಲೆತುದಿ ಹಿಮದಲಿ ನದಿಗಳ ಜನನ..
ದ್ವಾದಶ ಮಾಸವು ಹರಿವುವು ಗಂಗಾ-ಯಮುನ..

ಈಶಾನ್ಯದಿಂದ ಚಹ,ಕಾಫಿಯ ಘಮಘಮ..
ಅರಬ್ಬಿ, ಕೊಲ್ಲಿಗಳಲ್ಲಿ ತೆರೆಗಳ ಸಮಾಗಮ!!
ಬೆಟ್ಟ ಗುಡ್ಡಗಳ ಆರಾವಳಿ ಸಾಲು!
ತುಂಬಿದೆ ನಿನ್ನಲಿ ನಮ್ಮಯ ಬಾಳು!!

ನಿನ್ನಲಿ ಹುಟ್ಟು ನಮಗಭಿಮಾನ
ಭಾರತಿ ನಿನಗೆ ಮಾಡುವೆ ಸನ್ಮಾನ!
ಪಡೆದಿಹೆನಿಲ್ಲಿ ಬಿಸಿ ಉಸಿರಿನ ಸ್ಥಾನ!
ತಾಯಿ ಭಾರತಿಯೆ ನಿನಗೆ ಪ್ರೀತಿಯ ನಮನ!!
@ಪ್ರೇಮ್@
28.03.2019

890.ಗಝಲ್ . 76

ಗಝಲ್-76

ಹಚ್ಚುವೆ ಬಣ್ಣವ ನಗುತಲಿ ನಾ ಕಲಾವಿದ!
ಗೀಚುವೆ ಕಾಗದ ಪೆನ್ನಿನಲಿ ನಾ ಕಲಾವಿದ!!

ಗೀಚಿದ ಪದಗಳ ಭಾವದಿ ಉಲಿಯುವೆ,
ಹೊರಗೆ ಬದುಕುವೆ ಬೇರೆಯೆ ಬಣ್ಣದಲಿ,ನಾ ಕಲಾವಿದ!

ಕುಂಚದ ಅಂಚದು ಮಂಚದ ತುದಿಗೆ ತಾಕಿ ಚಿತ್ರವಾಯಿತು..
ಪಾತ್ರದಲಿ ಲೀನವಾಗಿ ಮೈಮರೆತು ಅಭಿನಯಿಸುತಲಿ ನಾ ಕಲಾವಿದ!

ರಂಗ ಕಲೆಗೆ ಕೊಡುವೆನು ಬಹಳವೇ ಬೆಲೆಯ!
ರಂಗದ ಮೇಲೆ ಪಾತ್ರದ ಹೃದಯದಲಿ, ನಾ ಕಲಾವಿದ!!

ದೇವಾಲಯ,ಮಂದಿರ , ಮಠ ಎಲ್ಲಾದರೇನಂತೆ!
ಪರಕಾಯ ಪ್ರವೇಶ ಮಾಡುತ ಆಡುತಲಿ ನಾ ಕಲಾವಿದ..

ಕೀರ್ತಿ,ನೀತಿ, ಭೀತಿ,ಭಕ್ತಿ,ಶಕ್ತಿಯ ಪ್ರೀತಿಯಲಿ ನಡೆಯುತಲಿ..
ಸಾತ್ವಿಕ ಅಭಿನಯದಿ ಮನಗೆದ್ದು, ಹೇಳುವೆ ವಿನಯದಲಿ ನಾ ಕಲಾವಿದ!

ಏರುತ ಇಳಿಯುತ ಜೀವನ ಸಾಗಿಸುತಿರುವವ..
ಪ್ರೇಮದಿ ರಂಗದಿ ಕುಣಿದು ಕುಪ್ಪಳಿಸುತಲಿ ನಾ ಕಲಾವಿದ!
@ಪ್ರೇಮ್@
27.03.2019

ಮಂಗಳವಾರ, ಮಾರ್ಚ್ 26, 2019

884. ನೆನಪುಗಳು

ನೆನಪುಗಳು

ನಾ ನೋಡ ಹೋಗಿದ್ದೆನೊಂದು
ಐತಿಹಾಸಿಕ ಯಕ್ಷಗಾನ ಪ್ರಸಂಗ!
ರಾತ್ರಿಯಿಡೀ ನಡೆಯುತಲಿತ್ತು ಕಾಳಗ!
ನಾನಿನ್ನೂ ಚಿಕ್ಕವಳಿದ್ದೆ, ಅರ್ಥವಾಗುತ್ತಿರಲಿಲ್ಲ ಆಗ!!

ಮಹಿಷಾಸುರ ದಗ್ಗನೆ ಬಂದ!
ಮೋಹಿನಿ ವೈಯ್ಯಾರದಿ ನರ್ತಿಸಿದಳು!
ಶಿವ ತಾಂಡವ ನೃತ್ಯ ನಡೆಯಿತು..
ಡಣಡಣ ಘಣಘಣ ಬಡಿತಗಳು..

ಆಹಾ! ಏನಂದದ ಕಿರೀಟಗಳು!
ಬಣ್ಣ ಬಣ್ಣದ ಉಡುಗೆಗಳು..
ಯಕ್ಷ, ಕಿನ್ನರ, ಕಿಂಪುರುಷ ವೇಷಗಳು!
ಯಕ್ಷಿಣಿ, ಮಾಟಗಾತಿ, ರಾಜ, ರಾಣಿಯರು!!

ಅಂದದ ಸರ, ಬಳೆ, ಸೀರೆ, ಆಭರಣ
ದೊಡ್ಡ ಮೀಸೆ, ಕೈ ತಿರುಗುವ ಶೈಲಿ
ನಡು ಕುಣಿಸುತ ಕುಣಿವ ಪರಿ!
ತಾಳಕ್ಕೆ ತಕ್ಕನಾಗಿ ಭಾಗವತರ ಹಾಡು!
ತಾಳ, ಚಂಡೆ, ಮದ್ದಳೆಗಳ ಕಲರವ!

ರಾಜನ ಒಡ್ಡೋಲಗಕೆ ರಾಣಿಯ ಆಗಮನ!
ರಾಜ ರಾಣಿಯ ಸಂಭಾಷಣೆ, ಅಭಿನಯ!
ನಾಟ್ಯ ವೈಭವದಲಿ ಮೈಮರೆತೆ ಅನುಕ್ಷಣ..
ಸ್ವಲ್ಪ ಹೊತ್ತಿಗಾಗಲೇ ಬೆಳಕಾಗಿತ್ತು!!
"ಮುಗಿಯಿತು,ಮನೆಗೆ ಹೋಗೋಣ"ಎಂದರು ಅಜ್ಜಿ!
ರಾತ್ರಿಯಿಡೀ ಕಳೆದದ್ದೆ ಗೊತ್ತಾಗಲಿಲ್ಲ!!

@ಪ್ರೇಮ್@
26.03.2019

Articles of me

[10/1/2018, 9:47 AM]

Namma Bantwala: https://nammabantwala.com/just-relax-11/

[10/8/2018, 3:39 PM]

Namma Bantwala: https://nammabantwala.com/just-relax-12/

[10/24/2018, 5:32 PM]
Namma Bantwala: https://nammabantwala.com/just-relax-prem-5/

[10/31/2018, 3:37 PM]

Namma Bantwala: https://nammabantwala.com/just-relax-prem-6/

[11/6/2018, 10:27 AM]

Namma Bantwala: https://nammabantwala.com/just-relax-12/

[11/8/2018, 12:56 PM]

Namma Bantwala: https://nammabantwala.com/just-relax-prem-7/

[11/13/2018, 11:51 AM]

Namma Bantwala: https://nammabantwala.com/just-relax-prem-8/

[11/20/2018, 12:03 PM]

Namma Bantwala: https://nammabantwala.com/just-relax-prem-9/

[11/28/2018, 5:04 PM]

Namma Bantwala: https://nammabantwala.com/kavana-prem-14/

[12/8/2018, 3:22 PM]

Namma Bantwala: https://nammabantwala.com/just-relax-13/

[12/18/2018, 10:23 AM]

https://nammabantwala.com/just-relax-prem-10/

[12/25/2018, 4:12 PM]

Namma Bantwala: https://nammabantwala.com/just-relax-prem-11/

[1/1, 12:51 PM]

Namma Bantwala: http://nammabantwala-com.apache6.cloudsector.net/demo/
2019/01/01/just-relax-prem-2/

[1/9, 3:51 PM]

Namma Bantwala: http://nammabantwala.com/2019/01/09/just-relax-prem-3/

[1/30, 11:29 AM]

Namma Bantwala: http://nammabantwala.com/2019/01/30/just-relax-prem-5/

[2/7, 11:14 AM]

Namma Bantwala: http://nammabantwala.com/2019/02/07/article-just-relax/

[2/14, 1:19 PM]

Namma Bantwala: http://nammabantwala.com/2019/02/14/just-relax-prem-6/

[2/19, 12:56 PM]

Namma Bantwala: http://nammabantwala.com/2019/02/19/just-relax-prem-7/

[2/25, 12:28 PM]

Namma Bantwala: http://nammabantwala.com/2019/02/25/just-relax-prem-8/

[3/4, 5:02 PM]

Namma Bantwala: http://nammabantwala.com/2019/03/04/just-relax-prem-9/

[3/13, 10:01 AM]

Namma Bantwala: http://nammabantwala.com/2019/03/13/just-relax-prem-10/

[3/20, 12:04 PM]

Namma Bantwala: http://nammabantwala.com/2019/03/20/just-relax/

http://nammabantwala.com/2019/03/04/just-relax-prem-9/

http://nammabantwala.com/2019/03/13/just-relax-prem-10/

883. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-38

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-38

ಬೇಸಿಗೆಯ ಬಿಸಿಲು ನಮಗೀಗ ಚುರುಕು ಮುಟ್ಟಿಸುತ್ತಿದೆ. ಮಳೆ ಎಂದು ಬರುವುದೋ ಎಂದು ಕಾಯುವಂತೆ ಮಾಡಿದೆ. ತುಂಬಾ ಸೆಕೆ. ನಡೆಯಲಾಗದು, ಕೂರಲಾಗದು, ಮಲಗಲಾಗದು, ಕೆಲಸ ಮಾಡಲೂ ಕಷ್ಟ! ಕುಡಿಯಲು ತಂಪಾಗಿ ಏನಾದರೂ ಸಿಗಲೆಂದು ಹುಡುಕುತ್ತಿರುತ್ತೇವೆ. ರೆಫ್ರಿಜರೇಟರಿಗೀಗ ಬಾರಿ ಬೇಡಿಕೆ. ಅದರೊಂದಿಗೆ ತಂಪು ಪಾನೀಯಗಳ ಮಾಲೀಕ ಹಾಗೂ ಅಂಗಡಿಯವರಿಗೂ ಬಹಳ ವ್ಯಾಪಾರ! ಆದರೆ ಒಂದು ನೆನಪಿಡಿ. ತಣ್ಣಗಿನ ನೀರನ್ನು ಕುಡಿಯದಿರಲು ವೈದ್ಯರು ಸಲಹೆ ನೀಡುವರು. ನಮ್ಮ ದೇಹಕ್ಕೆ ಅತಿ ಬಿಸಿಯಾದ ಮತ್ತು ಅತಿ ತಂಪಾದ ಆಹಾರ ಸೇವನೆ ಒಳ್ಳೆಯದಲ್ಲ. ರೆಫ್ರಿಜರೇಟರಿಂದ ತೆಗೆದು ಕೂಡಲೇ ನೀರು, ಆಹಾರ ಸೇವಿಸಬಾರದು. ಇದರಿಂದ ನಮ್ಮ ಮೂತ್ರಜನಕಾಂಗ, ಜಠರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಗಂಟಲು ಹಾಗೂ ಅನ್ನನಾಳದಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆ ಕೂಡಾ ಇರುತ್ತದೆ. ಮಕ್ಕಳಿಗೂ ನಿರಂತರ ತಂಪು ನೀರನ್ನು ಕುಡಿಯುವ, ತಂಪು ಪಾನೀಯ ಕುಡಿಯು ಅಭ್ಯಾಸ ಕಲಿಸುವುದು ಬೇಡ. ಹಾಗೆಯೇ ಹಸಿರು, ಕೇಸರಿ, ಗುಲಾಬಿ,ಕಾಫಿ ಬಣ್ಣಗಳಲ್ಲಿ ವಿವಿಧ ಪಾನೀಯಗಳೀಗ ಮಾರುಕಟ್ಟೆಯಲ್ಲಿ ಲಭ್ಯ. ಅವು ಸಿಹಿ ಕೂಡಾ. ತಾವು ಕುಡಿಯುವುದಲ್ಲದೆ ಮಕ್ಕಳಿಗೂ ಕುಡಿಸಿ, ನೆಂಟರ ಮನೆಗೆ ಹೋಗುವಾಗ ಅಲ್ಲಿನ ಮಕ್ಕಳಿಗೂ ಕುಡಿಸಿ ಕಲಿಸುವವರು  ನಾವೇ. ಮಕ್ಕಳೋ ಸಿಹಿಯ ಆಸೆಗಾಗಿ ಕುಡಿಯುವರು. ಆದರೆ ನೆನಪಿರಲಿ ಅವು ಆರೋಗ್ಯಕ್ಕೆ ಹಾನಿಕಾರಿ. ಪಾರ್ಟಿಗಳಲ್ಲಿ ಹಿರಿಯರು ಹಾಟ್ ಡ್ರಿಂಕ್ಸ್ ಕುಡಿಯುವಾಗ(ಅದೂ ಆರೋಗ್ಯಕ್ಕೆ ಹಾನಿಕರವೇ) ಮಕ್ಕಳಿಗೆ ಸಾಫ್ಟ್ ಡ್ರಿಂಕ್ಸ್ ಕೊಟ್ಟು ಚಿಕ್ಕಂದಿನಲ್ಲಿಯೇ ಅವರನ್ನು ಪಾರ್ಟಿಯ ಕುಡಿತಕ್ಕೆ ರೆಡಿ ಮಾಡುವ ಕಾರ್ಯ ನಮ್ಮ ನಮ್ಮ ಮನೆಗಳಲ್ಲೆ ನಡೆಯುತ್ತದೆ. ಹಿರಿಯರು ಫ್ಯಾಷನ್ ಎಂದೋ, ಕಾಮನ್ ಎಂದೋ ಸುಮ್ಮನಾಗುತ್ತಾರೆ. ಆದರೆ ಮುಂದೆ ಅದುವೆ ಅಭ್ಯಾಸವಾಗಿ, ಹಠವಾಗಿ, ಚಟವಾದಾಗ ನೊಂದುಕೊಂಡು ಮಕ್ಕಳ ತಪ್ಪೆಂದು ಅವರನ್ನು ದೂರುತ್ತಾರೆ. ಮಕ್ಕಳ ಮುಂದೆಯೇ ಕುಳಿತು, ಅವರ ಬಳಿಯೇ ನೀರು, ಸೋಡಾ ತರಿಸಿ ಕುಡಿದು ಜಗಳವಾಡಿ, ಹೆದರಿಸಿ, ಬೈಯ್ಯುವ ತಂದೆಯರೂ ಇದ್ದಾರೆ. ಅದನ್ನು ನೋಡಿಕೊಂಡು ಬೆಳೆದ ಮಕ್ಕಳ ಮೇಲಾಗುವ ಮನಸ್ಥಿತಿಯನ್ನು ನೆನೆಯುವಾಗ ಭಯವಾಗುತ್ತದೆ! ನಮ್ಮ ಮಕ್ಕಳನ್ನು ಮುಂದಿನ ಜೀವನಕ್ಕೆ ಉತ್ತಮ ತಳಪಾಯ ಹಾಕಿಕೊಡುವ ಬದಲು ತಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ಜೀವನಕ್ಕೆ ಕೊಳ್ಳಿ ಇಡುವ ಪೋಷಕರನೇಕರಿದ್ದಾರೆ!
       ಬರಗಾಲ ಬರುವುದು ಈಗಲೇ. ನೀರಿನ ತತ್ತರ, ತರಕಾರಿಗಳ ಬೆಲೆ ಗಗನಕ್ಕೆ! ಪ್ರತಿಯೊಂದನ್ನೂ ಜಾಣ್ಮೆಯಿಂದ ಬಳಸಬೇಕು. ಸೆಕೆಯ ಸಮಯದಲ್ಲಿ ಹೆಚ್ಚು ಊಟ ಸೇರದು, ನೀರು, ಪಾನೀಯ ಬೇಕೆನಿಸುವುದು. ಹಾಗಂತ ಸಿಕ್ಕ ಸಿಕ್ಕಲ್ಲೆಲ್ಲಾ ನೀರು ಕುಡಿಯುವುದು ಸಲ್ಲದು. ಕೆಲವೊಮ್ಮೆ ನೀರು ಕುಡಿಯಲು ಯೋಗ್ಯವಿರದೆ ಇದ್ದು ಅದು ಆಮಶಂಕೆಯಂತಹ ರೋಗಗಳನ್ನು ತರುವ ಭೀತಿಯಿದೆ. ಮನೆಯಲ್ಲೆ ತಯಾರಿಸಿದ ಎಳ್ಳು, ಸೌತೆಕಾಯಿ, ಪುದಿನಾ, ಕ್ಯಾರೆಟ್, ಹೆಸರು, ಮೆಂತೆ ಅಥವಾ ಹಣ್ಣುಗಳ ಪಾನೀಯಗಳನ್ನೋ, ಮಿಲ್ಕ್ ಶೇಕ್ ಗಳನ್ನೋ ನಾವೇ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಹಿತಕಾರಿ. ಒಟ್ಟಾರೆಯಾಗಿ ಈ ಬೇಸಿಗೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿರಲಿ. ಮುಂದಿನ ದಿನಗಳಲ್ಲಿ ಮಳೆ ಬರಲಿ, ಆದರೆ ಹಿಂದಿನ ವರುಷದಂತೆ ಪ್ರವಾಹ ಬರದಿರಲಿ. ನೀವೇನಂತೀರಿ?
@ಪ್ರೇಮ್@

882. ಗಝಲ್-75

ಗಝಲ್-75

ಕನಸಿನ ತೋಟದಿಂದ ಹೊರಗೆ ಬಾರೋ ಜಾನು..
ಮನಸಿನ ಮೂಟೆಯೊಳ ಸೇರೋ ಜಾನು..

ನೂರ್ಕಾಲ ಒಟ್ಟಿಗೆ ಬಾಳಿನಾಟವ ಆಡಬಾರೋ..
ಸರ್ದಾರ ನೀನೆನ್ನ ಬದುಕಿಗೆ, ಬಳಿ ಸಾರೋ ಜಾನು..

ಎದೆಕದವ ತೆರೆದಿರುವೆ ಒಳಸೇರಿ ಕುಳಿತುಕೋ...
ಸದೆಬಡಿಯದಂತಹ ಪ್ರೀತಿಯೆನಗೆ ತೋರೋ ಜಾನು..

ದೇವಾಲಯದ ಘಂಟಾ ನಾದದಂತೆ ಹೃದಯ ಬಡಿತ ಸಾಗಿದೆ..
ನಡೆವ ಹಾದಿಗೆ ನಗೆ ಹೂವ ಹಾಸಿ ಕರೆತಾರೋ ಜಾನು..

ವನಸಿರಿಯ ಮಡಿಲಲಿ ಬೀಡು ಬಿಟ್ಟು ಕಾಯುತಿಹೆ ನಿನಗಾಗಿ..
ತರುಲತೆಗಳಂದದದಿ ಹಸಿರಾಗಿ ಮಳೆ ಸುರಿಯೆ ಬಳಿಸಾರೋ ಜಾನು!!

ಮನದಿ ಮತ್ಸರ ಬೇಡ, ನಿನ್ನೊಳಗೆ ನಾ, ನನ್ನೊಳಗೆ ನೀ..
ಕಣಕಣದ ಜೀವದಿ ಪಣತೊಟ್ಟು, ಮುನಿಸಾಗದೆ ಸೇರೋ ಜಾನು..

ತಂತ್ರಜ್ಞಾನಜಂತೆ ವೇಗವಾಗಿ ನನ್ನೊಳಗೆ ಪಸರಿಸೋ ಜೀವವೆ,
ಸಂತ್ರಸ್ಥಳಾಗದಂತೆ ಪ್ರೀತಿಯಲಿ ಪ್ರೇಮನೊಡನಿರಬಾರೋ ಜಾನು...
@ಪ್ರೇಮ್@
26.03.2019

881. ಶಾಕುಂತಲೆ

ಶಾಕುಂತಲಾ

ಉಂಗುರವ ತೊಡಿಸಿಹನು ಪ್ರಿಯಸಖ
ಬರುವೆನೆಂದವನು ಬರಲೇ ಇಲ್ಲವಲ್ಲ!
ಎಷ್ಟು ದಿನ ಕಾಯಲಿ ಅವನಿಗಾಗಿ?
ಈ ಕಾಯುವಿಕೆ ತಂದಿದೆ ನರಕದನುಭವ!

ಪ್ರೀತಿಯ ಮರೆವು ಹೀಗೆ ಬರುವುದೇ..
ತನ್ನ ಪೋಷಕರ ಕರೆತರುವೆನೆಂದನಲ್ಲವೇ?
ರಾಜಕುಮಾರ, ವೈಭೋಗದಲಿ ನನ್ನ ಮರೆತನೇ?
ಬಡವಿ ನಾನು ಆಶ್ರಮದಿ, ಮೋಸ ಹೋದೆನೇ?

ನನ್ನ ಬಾಳು ನನ್ನಿಂದಾಗಿಯೇ  ಒಂಟಿಯಾಯಿತೇ?
ಮನ ಮೆಚ್ಚಿದ ಪ್ರಿಯತಮನು ನೆನೆಯದೆ ಹೋದನೇ?
ಬೇರೆ ಹುಡುಗಿಯ ನೋಡಿ ನನ್ನ ನೆನಪಾಗಲಿಲ್ಲವೇ?

ನನ್ನ ಹೃದಯದ ವೀಣೆ ನೀನು,
ನನ್ನ ರಾಜ್ಯದಿ ರಾಣಿ ಎಂದವ,
ತನ್ನ ವಚನವ ಮರೆತು ನನ್ನನು
ಕರೆತರಲು ಬಾರದ ದುಷ್ಯಂತನವ...

ಕ್ಷಮಿಸಲಾರೆ ನಾನವನನು, ಕಟ್ಟಿಬಿಡುವೆ ಪ್ರಮೀಳಾ ರಾಜ್ಯವ!
ಬದುಕ ಸಾಗಿಸೆ ಅವನಿರದಿರೆ ಸಾಧ್ಯ!
ನಾರಿ ಸಾಧಿಸಬಲ್ಲಲೆಂಬುದ ತೋರಿಸುವೆ..
ಋಷಿ ಕುಟೀರದಲಾನು ಪರರಂತಾಗಲಾರೆ..

ಬರದಿರಲಿ ಬರಲಿ ಮಗನ ಬೆಳೆಸುವೆ,
ನಾನೇ ರಾಜ್ಯಕೆ ಹೋಗಿ ಕೇಳಿಕೊಳ್ಳುವೆ..
ಮರೆವ ಕಾರಣವ ತಿಳಿದುಕೊಳ್ಳುವೆ..
ಧೈರ್ಯದಿಂದ ಮುನ್ನುಗ್ಗಿ ನಡೆವೆ..
@ಪ್ರೇಮ್@
26.03.2019

883. Poem-learn to be alone

Learn to be alone

Giving helping hand to others

Makes you suffer a lot..

In your own need

Nobody could follow…

Being an experienced creature..

O my dear mind…

Learn to be a selfish…

There are many..

To take from you..

Not your sorrows and sad..

But your money and time..

But nobody share it back to you..

World itself is a selfish..

Also it is business minded..

Learn to love your own..

Learn to live alone..

@prem@

26.03.2019

Poem...

https://wp.me/paKtjc-u

ಸೋಮವಾರ, ಮಾರ್ಚ್ 25, 2019

880. ಗಝಲ್-74

ಗಝಲ್-74

ತಾಳ್ಮೆಗೆ ಪ್ರತೀಕವಾದ ಇಳೆ ನಾನು ಬಾಯಾರಿಹೆನು ಬಾರೋ  ವರುಣ...
ಬೇಸಿಗೆಯ ಸುಡು ಬಿಸಿಲ ಕಡು ಬೇಗೆ ತಾಳಲಾರೆನು ಬಾರೋ ವರುಣ..

ರೊಟ್ಟಿಯಂದದಿ ಒಣಗಿಹುದು ಹೊಲದ ಮಣ್ಣು ನೀ ಬಾರದೆ,
ಪಟಪಟನೆ ಸುರಿದು ಧರೆಯೊಡಲನು ಉರಿಯಿಂದುಳಿಸು, ಸೈರಿಸಲಾರೆನು, ಬಾರೋ  ವರುಣ..

ತಂಪೆರೆಸೆನ್ನ ಒಡಲ ದಾಹವನು ತಕ್ಷಣವೇ ಸುರಿಸುರಿದು,
ಬರುವೆಯೆಂದು ಬೆರಗುಗಣ್ಣಿಂದ ಕಾಯುತಲಿಹೆನು, ಬಾರೋ ವರುಣ!

ಬಿದಿರಿನಂದದಿ ಒಣಗಿಹವು ಗಿಡ ಮರಗಳೆನ್ನ ತಾಪ ತಡೆಯಲಾರದೆ!
ಎದೆಯುರಿಯ ಸಹಿಸಲಾರೆನು, ಬಾರೋ ವರುಣ!

ರಾವಣ ಸೀತೆಯನೆಳೆಯಲು ಬಂದಂತೆ ರವಿ ಬಂದಿಹನು ಕೋಪದಲಿ!
ಸಾವಿತ್ರಿ ಯಮನ ಬೇಡಿದಂತೆ ಬೇಡುತಿಹೆನು, ಬಾರೋ ವರುಣ!!

ನಳಪಾಕವ ತಯಾರಿಸೆ ಅಡಿಗೆ ಮನೆಯಲಿ ತರಕಾರಿ ಬೆಂದಂತಾಗಿಹೆನು!
ಬತ್ತಿಹೋದ ಪನ್ನೀರ ಮತ್ತೆ ತರಿಸಲು ಅಂಗಲಾಚುತಿಹೆನು, ಬಾರೋ ವರುಣ..

ಪ್ರೀತಿಯಲಿ ಕಾಯಬೇಕಾಗಿದೆ ಕೋಟಿ ಕೋಟಿಜೀವಿಗಳ..
ಪ್ರೇಮದಿ ಕರುಣೆಯ ತೋರಲು ಕರೆಯುತಿಹೆನು! ಬಾರೋ ವರುಣ !!
@ಪ್ರೇಮ್@
25.03.2019

878. ಗಝಲ್-73

ಗಝಲ್-73

ಮೊದಲ ಮಳೆಯ ದಪ್ಪ ಹನಿಗಳೊಳಗೆ ನೆನಪಾಗುವೆ ನೀನು...
ರಪ್ಪೆಂದು ಮೇಲಿಂದ ಎರೆದಾಗ ನೀ ಬಳಿ ಬಂದಂತೆ ಖುಷಿಪಡುವೆ ನಾನು!!

ಸುರ್ರನೆ ಸುರಿಯುವ ಶಬ್ದಕೆ ನೆಗೆದು ಕುಣಿಯುವ ಮನಸ್ಸು!
ಬರ್ರನೆ ಬಿದ್ದು, ಹಿತವಾದ ಪರಿಮಳಕೆ ಉದಾಹರಣೆಯಾಗುವೆ ನೀನು!

ಬುವಿಗೆ ಮಾತ್ರವಲ್ಲ, ಹೃದಯಕ್ಕೂ ತಂಪಾಯಿತು..
ಗಿಡ ಮರಗಳೂ ಕುಣಿದಂತೆ! ನೀನೇ ಆಗಮಿಸಿದಂತೆ ಮೈಮರೆಯುವೆ ನಾನು!!

ಹನಿಯ ತಂಪಿನ ಸ್ಪರ್ಶ ತಂದಿತೆನಗೆ ಹರ್ಷ!
ಎದೆಗೆ ತಾಕಿದಂತೆ ಆದ ಅನುಭವವೆ ನೀನು!!

ಛಿಲ್ಲೆನುವ ತಂಪು ತಂಪಿನ ಮಧುರತೆಯ ಗಾನ!
ಮುತ್ತಿನ ಮತ್ತಿನಲಿ ಬೆರೆತು ಒಂದಾಗುವೆ ನೀನು!!

ಧರೆಗೆ ಬಿದ್ದ ಸುವರ್ಣಗಳು ಚಿಮ್ಮಿದ ಪುಳಕ...
ಚಳಕದಿ ನೀ ನನ್ನೆದುರು ನಿಂತಂತೆ ಭ್ರಮಿಸುವೆ ನಾನು!

ಪ್ರೀತಿಯಿಂದ ಕಾದ ಬುವಿಗೆ ಮಳೆಹನಿ ಉದುರಿತು!
ಪ್ರೇಮ ತುಂಬಿದ ಹೃದಯಕ್ಕೆ ನೆನಪ ಕಚಗುಳಿಯಿಡುವೆ ನೀನು!!

@ಪ್ರೇಮ್@
24.03.2019

879. ಸೀತೆಯ ಸ್ವಗತ

ಸೀತೆಯ ಸ್ವಗತ

ರಾಮ ನಿನಗೆ ತೋರಿದ ಪ್ರೀತಿ ಅನಂತ!
ನೀ ನನ್ನ ಬಾಳಿಗೆ ಬಂದ ಮನ್ಮಥ!
ನೀನಾದೆ ಮದುವೆಯಾಗಿ ನನ್ನ ಕಾಂತ,
ಆದರೂ ಸಿಗದಾಯಿತು ನಮಗೆ ಏಕಾಂತ!

ಲಕ್ಮ್ಷಣ ನಮ್ಮ ಬಾಳಿಗೆ ಸಹಾಯಕನಾಗಿ ನಿಂತ,
ನೀ ಕಳುಹಿಸಿದೆ ಉಂಗುರವ ಗುರುತಿಗೆ ಅಂತ!
ಹನುಮಂತನು ನಿನ್ನಯ ಹೃದಯದಲ್ಲೆ ಕುಂತ!
ನಮ್ಮಿಬ್ಬರ ಜೀವನವ ಒಂದು ಮಾಡಲಂತ!!

ಊರ್ಮಿಳೆಯು ಯೋಚಿಸಿದಳು ತಾನೇ ಸ್ವಗತ!
ಪರೋಪಕಾರ ಸರ್ವರ ಬದುಕಿಗೆ ಹಿತ!!
ಒಂಟಿಯಾಗುಳಿದಳು ಅರಮನೆಯಲಿ ಗಂಡನ ನಮ್ಮೊಂದಿಗೆ ಕಳುಹಿಸುತ!!
ತೊರೆಯುತ ತನ್ನ ಬಾಳಿನ ಸುಖಾಂತ!!

ಮಂಡೋದರಿಯೋ ಕೇಳಿದಳು ರಾವಣನಿಗೆ 'ಬುದ್ಧಿ ಬಂತಾ?
ತಾನು ಸಾಲದೆ ನಿನಗೆ ಹೆಂಡತಿ ಅಂತ'
ರಾಕ್ಷಸ ಮಾರುಹೋದ ನನ್ನ ಚೆಲುವಿಗಂತ!
ಕೊನೆಗೆ ತನ್ನನ್ನೆ ತಾನು ಕಳಕೊಂಡನಂತೆ...

ಭರತ ನಮ್ಮ ಕಾಡಿಗಟ್ಟಿದ ಸಹೋದರನಂತೆ..
ರಾಜ್ಯವಾಳುವ ಮನಸ್ಸು ಅವನದಂತೆ!!
ಅವನಮ್ಮ ಕೈಕೇಯಿಯಆಸೆ ಫಲಿಸಿತಂತೆ!!
ಕೆಲಸದಾಕೆ ದಾಸಿ ಮಂಥರೆಯ ಕುಮ್ಮಕ್ಕು ನಡೆಯಿತಂತೆ!!
@ಪ್ರೇಮ್@
25.03.2019

ಶನಿವಾರ, ಮಾರ್ಚ್ 23, 2019

877. ನ್ಯಾನೋಕತೆ-17 ವ್ಯತ್ಯಾಸ

ನ್ಯಾನೋ ಕತೆ-

ವ್ಯತ್ಯಾಸ

ಹತ್ತಾರು ವರುಷಗಳ ಹಿಂದಿನ ಕಥೆ! ನಮ್ಮ ಜೀವಕ್ಕೂ ಪ್ರಾಣಿಗಳ ಜೀವಕ್ಕೂ ಅಜಗಜಾಂತರ ವ್ಯತ್ಯಾಸ ಮಾನವನ ಪ್ರಕಾರ! ನಗರ ಪಂಚಾಯತ್ ನಲ್ಲಿ ಬೀದಿ ನಾಯಿ ಕಾಟ ತಪ್ಪಿಸಲು ಆರ್ಡರ್ ಹೊರಡಿಸಲಾಗಿತ್ತು! ನಾಯಿ ಕಂಡಲ್ಲಿ ವಿಷ ಬೆರೆಸಿದ ಕೋಳಿ ಕಾಲು ಎಸೆಯುತ್ತಿದ್ದರು! ಆಗಷ್ಟೆ ಹುಟ್ಟಿದ ಮರಿಗಳ ಹೊಟ್ಟೆಗೆ "ಡಿ.ಪಿ.ಟಿ" ಅಲ್ಲ, ವಿಷದ ಸೂಜಿ ಚುಚ್ಚುತ್ತಿದ್ದರು!
@ಪ್ರೇಮ್@
24.03.2019

876. ಕವನ-ಸಂತಸದಿಂದಿರು

ಸಂತಸದಿಂದಿರು..

ನನ್ನೊಲವಿನ ನವಿಲೆ
ಗರಿಗೆದರುತ ಕುಣಿಯೆ
ಮನದಾಳದಾನಂದ
ಉಳಿಸುತಲಿ ದಿನದಿನದಿ..
ಜಗವಿದು ನೋಡು
ಬದಲಾಗುತಲಿದೆ ವೇಗದಿ
ಬದಲಾಗಬೇಡ ನೀನು
ಸಮಯದ ತೆರದಿ...
ಭಾವನೆ ಮೂಡುವ
ಭರದಲಿ ಬೇಗನೆ
ಭವಸಾಗರ ದಾಟುವ
ಧಾವಂತವು ಬೇಡ..
ದಿನವದು ಬಾಳಲಿ
ಬರಲಿದೆ ನೋಡಾ..
ಜೀವನ ಅರೆಕ್ಷಣ
ಖುಷಿಯಲಿ ಬದುಕು.
ನಾಳೆಯು ಏನೋ
ನಾಳೆಯೆ ಹುಡುಕು.
@ಪ್ರೇಮ್@
24.03.2019

875. ಪ್ರಳಯ

ಪ್ರಳಯ

ಸುದ್ದಿಯೊಂದು ಸದ್ದುಮಾಡಿ
ಹದ್ದಿನಂತೆ ಗದ್ದಲಿಸುತ
ಮೆದ್ದ ಜನತೆ ಹೆದರಿ ಹೋಗಿ
ಸಂದಿಯಲ್ಲಿ ಇಣುಕಿಣುಕಿ
ಕಂದೀಲಿನ ಬೆಳಕಿನಲ್ಲಿ
ರದ್ದಿಯಲ್ಲೆ ಕುಳಿತು, ಹೊರಗೆ ಬಾರದೆ
ತಿಂಡಿ ತೀರ್ಥವೆಲ್ಲ ಮರೆತು
ಕದ್ದದ್ದೆಲ್ಲ ಅಲ್ಲೆ ಬಿಸುಟು
ಸಿದ್ಧರಾಗಿ ಸಾವ ಕಡೆಗೆ
ವದನದಲ್ಲಿ ಬಿಗುಮಾನವು
ಕದನವೆಲ್ಲ ಮರೆತು ಹೋಗಿ,
ಪೆದ್ದರನ್ನೂ ಕರೆದುಕೊಂಡು
ನಿದ್ದೆ ಗಿದ್ದೆಯೆಲ್ಲ ಬಿಟ್ಟು
ಸದ್ದು ಗದ್ದಲವೆಲ್ಲ ಮರೆತು
ವಿಧಿಯಾಟಕೆ ಬಲಿಯಾಗಲು
ಸದಾ ಮದಗಜಗಳಂತಿದ್ದ
ಪದತ್ಯಾಗವ ಮಾಡಿ ಬಂದು
ಜೀವತ್ಯಾಗವಾಗುವುದೆಂದು
ಕದವ ತೆರೆದು ಮನದಲಿ
ಆನಂದವು ಮರೆತುಹೋಗಿ
ಪ್ರಳಯದ ಭೀತಿಯಲ್ಲಿ
ಯಾರಿಗಾರನೂ ಉಳಿಸಲಾಗಲಿಲ್ಲ
ಬದಿಯಲಿಹನೂ ಒಂದೆ ಎಲ್ಲ
ಜಾತಿ ಮತ ಧರ್ಮವಿಲ್ಲ
ನೀರಿನೆದುರು ಒಂದೆ ಸರ್ವರೆಲ್ಲ!
ಜಲಪ್ರಳಯವು ಬಂತಲ್ಲ
ಸಮಾನ ನೋವು ತಂದಿತಲ್ಲ..
ಮನೆ ಮಾರು ಜೀವ ಹಾನಿಯಾಯ್ತಲ್ಲ..
ಎಲ್ಲರೊಂದೆ ಎಂದು ಸಾರಿತಲ್ಲ...
@ಪ್ರೇಮ್@
22.03.2019

*ಪ್ರಳಯ*
*ಪ್ರೇಮ್ ಮೇಡಂ*

*ಇಂದು ವಿಶ್ವ ಜಲ ದಿನ ಆಗಿದ್ದರಿಂದ ಎಲ್ಲರಿಗೂ ಶುಭಾಶಯಗಳು ಹನಿ ಹನಿ ನೀರನ್ನು ಉಳಿಸಿ ನಿಮ್ಮ ಭವಿಷ್ಯವನ್ನ Honey ಆಗಿಸಿಕೊಳ್ಳಿ*

ಜಲಪ್ರಳಯದ ಅನಾವರಣ ಕಣ್ಣಿಗೆ ಕಟ್ಟುವಂತೆ ಕಟ್ಟಿದ್ದಿರಾ ಎಷ್ಟೇ ದೊಡ್ಡವನಿರಲಿ ಸಣ್ಣವನಿರಲಿ ಬಡವನಿರಲಿ ಸಾಹುಕಾರನಿರಲಿ ಯಾವುದೇ ಜಾತಿಯಿರಲಿ ಧರ್ಮವಿರಲಿ ಎಲ್ಲರೂ ನೀರಿನ ಮುಂದೆ ಒಂದೇ ಜಲ ಪ್ರಳಯ ಬಂದು ನಾವೆಲ್ಲಾ ಒಂದೇ ಎನ್ನುವಂತೆ ಆಗಿದೆ ತುಂಬಾ ಚೆನ್ನಾಗಿದೆ ಮೇಡಂ

ಧನ್ಯವಾದಗಳು

: ಪ್ರೇಮ್ ರವರ
ಪ್ರಳಯ ಕವನ

ಎಲ್ಲವೂ ತನ್ನದೇ ಎಂದು ˌತಾನೇ ಎಲ್ಲವೂ ಎಂದು ಸೊಕ್ಕಿನಲ್ಲಿ ಸುಖದ
ಅಮಲಿನಲ್ಲಿರುವ ಮನುಷ್ಯನ
ಕೀಳು ಬುದ್ಧಿಗೆ ಜಲ ಪ್ರಳಯ ಬಂದು
ಜಾತಿ ಮತವೆನ್ನದೆ ಎಲ್ಲರನ್ನೂ
ಸೆಳೆದೊಯ್ಯಿತು.ಪ್ರಕೃತಿಯನ್ನು
ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು
ಉಳಿಸಿ ಬೆಳೆಸುತ್ತದೆ ಎನ್ನುವ
ಉತ್ತಮ ಸಂದೇಶ ಸಾರುವ ಕವನ

*ಗೌರಿ ಪಾಟೀಲ್*

874. ಗಝಲ್-72

ಗಝಲ್-72

ಉಡುವ ಬಟ್ಟೆ ತುಂಡರಿಸುತ ಮರೆಯುತಿಹೆವು ಸಂಸ್ಕೃತಿ.
ಮೈಮಾಟದ ಪ್ರದರ್ಶನವೀಯುತ ಮರೆಯುತಿಹೆವು ಸಂಸ್ಕೃತಿ.

ಹಣೆಯ ಕುಂಕುಮ, ಕೊರಳ ತಾಳಿ ಮಾಯವಾಗಿದೆ ಎಂದೋ,
ಹೊರಗಿನ ವೇಷಕೆ ಮಣೆಯ ಹಾಕುತ ಮರೆಯುತಿಹೆವು ಸಂಸ್ಕೃತಿ....

ಕೈಬಳೆಗಳ ದೂರಕೆಸೆದು, ಕಾಲುಂಗುರ ಬದಿಗೆ ಸರಿಸಿ,
ಗಾಂಧಿ ಕಾಲದ ವೇಷವೆನುತ ಮರೆಯುತಿಹೆವು ಸಂಸ್ಕೃತಿ...

ಕುಡಿತದಮಲಲಿ ತೇಲುತ್ತಲಿ, ಮೈಮಾಟವ ತೋರಿಸುತ್ತಿಹೆವು.
ಹಿರಿಯರನ್ನು ಆಶ್ರಮಕೆ ತಳ್ಳುತ ಮರೆಯುತಿಹೆವು ಸಂಸ್ಕೃತಿ...

ಬದಿಯ ಮನೆಯವನ ನೋಡದೆ, ಜಂಗಮನ ಹಿಡಿದು ಹರಟುತ್ತಿರುವೆವು,
ಅಪಘಾತದಲ್ಲೂ ಚಿತ್ರ ಕ್ಲಿಕ್ಕಿಸುತ ಮರೆಯುತಿಹೆವು ಸಂಸ್ಕೃತಿ..

ಸಡಗರದಿ ಬಣ್ಣದ ಸಿಹಿಯ ಕುಡಿದು, ವೇಗದ ,ರುಚಿಯ ಖಾದ್ಯ ತಿನ್ನುವೆವು.
ಸಾಂಪ್ರದಾಯಿಕ ಅಡಿಗೆ ಬಿಸುಟುತ ಮರೆಯುತಿಹೆವು ಸಂಸ್ಕೃತಿ..

ಅಪ್ಪ ಹಾಕಿದ ಆಲದ ಮರ, ಅಕ್ಕಮಹಾದೇವಿ ಕಾಲ ಬೇಡವೆನುವೆವು,
ಸಿಕ್ಕ ಸಿಕ್ಕ ವಿದೇಶಿ ವಸ್ತು ಕೊಳ್ಳುತ ಮರೆಯುತಿರುವೆವು ಸಂಸ್ಕೃತಿ...
@ಪ್ರೇಮ್@
22.03.2019