[5/4, 6:31 AM] Prem: 1. ಆನಂದ ಸರ್
*ಮಧುರ ಮಂಜುಳ ಗಾನ*
*ಆಕಾಶದಿ ಹೊಂಬಣ್ಣ ಮಿನುಗುವ ತಾರೆ ತೂಗುಮಂಚದಲಿ ಕೂತು ಚಂದಿರನು ತೇಲಿದಂತೆ ತಂಗಾಳಿಯು ಸೋಕಿ ಮನದಲಿ ಮೂಡಿತೊಂದು ಮಧುರ ಮಂಜುಳ ಗಾನ*
🐶🐶🐶🐶🐶🐶🐶
ಮಂಜುಳ ಗಾನದ ಪರಿ ಅದ್ಭುತವಾಗಿ ವರ್ಣಿತವಾಗಿದೆ. ರೂಪಕ ಉತ್ತಮ.
🐶🐶🐶🐶🐶🐶🐶🐶
*ನಾದವೋ ನಿನಾದವೋ ನಾನರಿಯೇ*
*ಎದೆಯಲಿ ದುಂಬಿಯ ಹಾಗೆ ಝೇಂಕರಿಸಿತೊಂದು ಕಂಪನ*
*ಮಿಡಿಯಿತು ಹೃದಯ ಎಲ್ಲೆಲ್ಲೂ ಸಾಹಿತ್ಯ ಸಂಗೀತದ ಸಂಚಯನ*
🐶🐶🐶🐶🐶🐶🐶
ವಾರೆ ವಾ...ರೂಪಕ, ಉಪಮೆಗಳು ಒಂದೇ ಚರಣದಲ್ಲಿ ಮೇಳೈಸಿ, ಅಂತ್ಯ ಪ್ರಾಸವೂ ಮಂಜುಳ ಗಾನವ ಹೊಗಳಿದೆ. ಸೂಪರ್..
🐶🐶🐶🐶🐶🐶🐶
*ಬಳುಕು ಬಳ್ಳಿಯ ನಡುವಲಿ*
*ಕಾಡುಮೇಡಿನ ಲತೆಗಳಲಿ*
*ಮೋಡ ಕರಗಿ ಹಬ್ಬಿ ನಿಂತ ಎಲೆತುದಿಗೆ ಇಬ್ಬನಿಯ ಹನಿಯು ಮುತ್ತಿಕ್ಕಿದಂತೆ*
*ಭಾವದಲಿ ಮಿಂದೆದ್ದು ತನ್ಮಯತೆಯ ಕಡಲಲಿ ಮೊಳಗಿತೊಂದು ಮಧುರ ಮಂಜುಳ ಗಾನ*
🐶🐶🐶🐶🐶🐶🐶
ವಾವ್! ಚಿತ್ರ ಕವಿತ್ವ ಎಂದರೆ ಇದೇನೇ. ಕವನದ ಸಾಲುಗಳಲ್ಲಿ ಓದುವಾಗ ಓದುಗರ ಕಣ್ಣಿಗೆ ಕಟ್ಟಿದಂತೆ ವರ್ಣಿಸುವುದು. ಸೂಪರ್ ಸಾಲುಗಳಿವು... ಪರ್ಸಾನಿಫೈಡ್ ಸಾಲುಗಳು ಅದ್ಭುತ!!
🐶🐶🐶🐶🐶🐶🐶
*ಮಾತುಗಳಿರದ ಮೌನದ ಹಿಂದೆ*,
*ಮನದ ಕುಲುಮೆಯಲಿ ಕೂತ ಮೂಕ ಭಾವ ವಿನೂತನ ರೂಪ ತಾಳಿ ಝಲ್ಲೆನಿಸಿತು ಮಂದಹಾಸದಲಿ ಮನವು ಹೂವಾಗುವಂತೆ ಮಧುರಗಾನ ಮೊಳಗಿದಾಗ*
🐶🐶🐶🐶🐶
ಇಲ್ಲಿ ಕವಿ ತಾನೇನು, ತನ್ನ ರಚನೆಯ ಪರಿಯೇನು ಎಂಬುದನ್ನು ನಾಟಿಸಿದ್ದಾರೆ, ಯಾವುದೇ ಸಂದರ್ಭವನ್ನು ನನ್ನ ಕವಿತೆಯೊಳಗೆ ತಂದು ಗಾನ ಮೀಟಬಲ್ಲೆನೆಂಬ ಭಾವ ಇಲ್ಲಿದೆ.
🐶🐶🐶🐶🐶🐶
*ಮನದ ಎಲ್ಲೆ ಮೀರಿ ಧಾರೆಯೆರೆದ ಸೀರೆಯ ನೆರಿಗೆ ಜಾರಿ*
*ಮುಡಿದ ಮಲ್ಲಿಗೆಯ ಗಂಧ ಕಂಪಿಸುವಂತೆ*
*ಮೆಲ್ಲುಸಿರೆ ಸವಿಗಾನವೆನುತ ಗುನುಗುತಿದೆ ಮಧುರ ಮಂಜುಳ ಗಾನ*
🐶🐶🐶🐶🐶🐶🐶
ಉಪಮೆಗಳ ಆಗರದ ನಿಮ್ಮೀ ಭಾವಗೀತೆಯ ರಸಭರಿತ ಸಾಲುಗಳ ಓದುವುದೆಂದರೆ ದೊಡ್ಡದಾದ ರಸಪೂರಿ ಮಾವಿನಹಣ್ಣು ತಿಂದಂತೆ, ಪ್ರತಿ ಹನಿಯಲ್ಲೂ ಆಸ್ವಾದ, ರುಚಿ!
🐶🐶🐶🐶🐶🐶
*ನವಿಲಿನಂತೆ ಗರಿಗೆದರಿ ನರ್ತನದಿ ಹೊಂಬೆಳಕ ಬೀರಿ*
*ಕೋಗಿಲೆಯ ಕಂಠದಿ ಮೊಳಗುವ ಘಂಟಾನಾದದಂತೆ ಸೂಳ್ನುಡಿಯ ಪಿಸುಮಾತಲಿ ಗೊನಗಿತೊಂದು ಮಧುರ ಮಂಜುಳ ಗಾನ*
🐶🐶🐶🐶🐶🐶🐶🐶
ಪಕ್ಷಿಗಳನ್ನೂ ಬಿಡದ ಮಂಜುಳ ಗಾನವದು. ಸೂಪರ್ ಸನ್ನಿವೇಶದ ಸೃಷ್ಟಿಯಾಗಿದೆ ಇಲ್ಲಿ.
🐶🐶🐶🐶🐶🐶🐶
*ಸಂಗೀತದ ರಸದೌತಣದಿ ಮರ್ಕಟನ ಹಾಗೆ ಹುಚ್ಚೆಬ್ಬಿಸಿದಾಗ ನೆನಪಿನ ಸುಳಿಗೆ ನೂಕಿ ಕದಡಿತು ಕಂಪಿಸಿತು ಮೌನರಾಗ ಚಿಮ್ಮಿ ಮಧುರ ಮಧುರವೆನಿಸಿತು ಮಂಜುಳ ಗಾನ*
🐶🐶🐶🐶🐶🐶🐶🐶
ನಿಮ್ಮ ಮಂಜುಳ ಗಾನಕ್ಕೆ ಆ ಗಾನವೇ ಸಾಟಿ ಗುರುಗಳೇ. ಫೆಂಟಾಸ್ಟಿಕ್ ಕವನ!
@ಪ್ರೇಮ್@
[5/4, 8:10 AM] Prem: ದೇವಿದಾಸ ನಾಯಕರ
*ಮಧುಕಂಠ*
ಇನಿದಾದ ದನಿಗೆ ಮನಸೋತಿತು
ಸವಿಯಾದ ರಾಗಕೆ ತಲೆಬಾಗಿತು
ಆನಂದ ನೀಡಿದೆ ಈ ಮಧುರಗಾನ
ಹೃದಯ ತಣಿಸಿದೆ ನಿನ್ನ ಪ್ರೀತಿ ಮನ/ಪ/
🐱🐱🐱🐱🐱🐱
ಮಗದೊಂದು ಮಧುರಗಾನದ ಪರಿಯ ಹೊತ್ತ ಭಾವಗೀತೆ. ಇದರಲಿ ಮತ್ತೆ ಪ್ರೇಮರಾಗದ ಕಿಟಕಿ...
🐱🐱🐱🐱🐱🐱🐱🐱
ಕಬ್ಬಿನ ರುಚಿಯ ಆ ಇಂಪು
ಬೆಲ್ಲವ ಮೆದ್ದಂತ ಈ ಕಂಪು
ಸಕ್ಕರೆ ಬಣ್ಣದ ಓ ಚೆಲುವೆ
ಸಿಹಿತೊಂಡೆ ತುಟಿಯ ನನ್ನೊಲವೆ
ಜೇನಾಗಿ ಬಾ ನೀ ನಿನ್ನ ಬಾಳಿಗೆ
ಆಸರೆ ನೀನಾಗು ನನ್ನ ಒಲವಿಗೆ/ಪ/
🐱🐱🐱🐱🐱
ಮೊದಲಲ್ಲಿ ಪಲ್ಲವಿಯಲಿದ್ದ ಮಧುರಗಾನ ಚರಣದಿಂದ ಪೂರ್ತಿಯಾಗಿ ಪ್ರೇಮಗಾನಕೆ ತಿರುಗಿ ಪ್ರಿಯತಮೆಯ ವರ್ಣನೆಯ ರೂಪಕ ಸೊಗಸಾಗಿ ಮೂಡಿಬಂದು ಪ್ರೇಮಕಾವ್ಯವಾಗಿ ಮೈಡಳೆದಿದೆ.
🐱🐱🐱🐱🐱🐱🐱🐱
ಸೆಳೆಯುತಿದೆ ನಿನ್ನ ಕಣ್ಣಿನ ನೋಟ
ಕಾಡುತಿದೆ ಎನಗೆ ನಿನ್ನ ಮೈಮಾಟ
ಬಯಸುತಿದೆ ಮನಸು ನಿನ್ನನು
ಮರೆಯಲಾರೆ ನಾ ನಿನ್ನ ಹಾಡನು
ಬಾರೆ ನೀನು ಬದುಕಿಗೆ ಹೂವಾಗಿ
ಕಾಯುತಿರುವೆ ನಾನು ನಿನಗಾಗಿ/ಪ/
🐱🐱🐱🐱🐱🐱
ಕಾವ್ಯವೂ, ಪ್ರಿಯತಮೆಯೂ ಒಂದಾಗಿ ಬಂದು ಕಾಯುವ ಪ್ರಿಯಕರನಿಗೆ ಪ್ರಿಯತಮೆಯೇ ಕಾವ್ಯವಾಗಿಹಳಿಲ್ಲಿ. ಅದ್ಭುತ ವಿಚಾರ. ಕವಿಮನದ ಬಯಕೆ ಸೂಪರ್.
🐱🐱🐱🐱🐱🐱🐱
@ಪ್ರೇಮ್@
[5/4, 8:39 AM] Prem: 3. ರಾಮಸ್ವಾಮಿಯವರ
*"ಇದು ಸತ್ಯದ ಮಾತು"*!!!
*ಕಾಸಿದ್ದರೆ ಈ ಲೋಕದಿ
ಎಲ್ಲಾ ಕಸರತ್ತು.
ಕಾಸಿಲ್ಲದೆ ಹೋದರೆ
ಎಲ್ಲಿದೆ ಕಿಮ್ಮತ್ತು.!
🐭🐭🐭🐭🐭🐭🐭
ಕವನ ಸ್ವಲ್ಪ ಉದ್ದವಾದರೂ ಸತ್ಯದ ಮಾತನ್ನೇ ಹೇಳಿರುವಿರಿ ಸರ್.
🐭🐭🐭🐭🐭🐭🐭
*ಜೇಬಲ್ಲಿ ಕಾಸಿದ್ದರೆ
ಎಲ್ಲಾ ಜೋಕು.
ಕಾಸಿಲ್ಲದೆ ಉಳಿದವನ
ಮೂಲೆಗೆ ನೂಕು.!
🐭🐭🐭🐭🐭🐭
ನೈಜತೆಗೆ ಹಿಡಿದ ಕೈಗನ್ನಡಿಯಾಗಿ ಅಂತ್ಯ ಪ್ರಾಸದೊಂದಿಗೆ ನೇರನುಡಿಯಲಿ ಮೂಡಿ ಬಂದಿವೆ ರಸವತ್ತಾದ ಸತ್ಯದ ಸಾಲುಗಳು.
🐭🐭🐭🐭🐭🐭
*ಇಂಥಾ ಕಾಸು ಕಾಸಿಗೆ
ರೂಪವ ನೀಡಿದೆ ಏಕೆ.??
ಕನಸು ಮನಸಲಿ
ಹಾಕುತಿದೆ ಕೇಕೆ.!!
🐭🐭🐭🐭🐭🐭🐭
ಈ ಸಾಲುಗಳನೋದುವಾಗ ಬೇಂದ್ರೆಯವರ ಕುರುಡು ಕಾಂಚಾಣ ನೆನಪಾಯಿತು. ಉತ್ತಮ ಸಾಲುಗಳು ನಿಜತ್ವವನ್ನು ತೆರೆದಿಟ್ಟಿವೆ.
🐭🐭🐭🐭🐭🐭
*ಲೋಕವು ಮೆಚ್ಚಿದೆ
ಈ ಪುಡಿಗಾಸು.
ಹೆಚ್ಚು ಕಾಸಿದ್ದವರಿಗೆ
ಬದುಕಲು ಬಲು ತ್ರಾಸು.!
🐭🐭🐭🐭🐭🐭
ತ್ರಾಸು ಅಂದರೆ ಸುಲಭ ಅಂತಾನಾ ಸಾರ್? ಗ್ರಾಮ್ಯ ಕನ್ನಡ ಗೊತ್ತಿಲ್ಲ ನನಗೆ. ಹಾಡಲ್ಲಿ ಕೇಳಿ ಗೊತ್ತು ಈ ಪದ.
🐭🐭🐭🐭🐭🐭
*ದುರಾಸೆ ನೆಪದಲಿ ಕಾಸಿಗೆ
ಕಾಸು ಕಾಲೆತಾಯ್ತು
ಲೋಭ, ಮೋಹ, ಮಧ,
ಮಾತ್ಸರ್ಯದಿ ಬೆರೆತಾಯ್ತು.!
🐭🐭🐭🐭🐭🐭
ಕಲೆತಾಯ್ತು ಎಂದಾಗಬೇಕಿತ್ತೇನೋ. ನೀವು ಬಳಸಿದ ಪದ ಕಾಲೆತಾಯ್ತೋ ಇದಕೆ ಅರ್ಥವಿಲ್ಲ, ಅಲ್ಪಪ್ರಾಣ ಮಹಾಪ್ರಾಣ ಗಮನಿಸಿ.ಕಾಸು ಪದ ಹಲವಾರು ಬಾರಿ ರೀಪೀಟ್ ಆಗಿ ಕವನಕೆ ರಿಪೀಟ್ ಎಫೆಕ್ಟ್ ನೀಡಿದೆ.
🐭🐭🐭🐭🐭🐭
*ಈ ಕಾಸಿಗೆ ದೊಡ್ಡ ದೊಡ್ಡ
ಕದನವೆ ನಡೆದಾಯ್ತು.
ಅದು ಯಾರಿಗೂ ದಕ್ಕದೆ
ಮಣ್ಣಲಿ ಮರೆಯಾಯ್ತು.!
🐭🐭🐭🐭🐭🐭
ರಾಜ್ ಕುಮಾರ್ ಅಭಿನಯಿಸಿ ಹಾಡಿದ ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ...ಎಂಬ ಹಾಡಿನ ಸಾಲುಗಳು ನೆನಪಿಗೆ ಬಂದವು.
🐭🐭🐭🐭🐭🐭
*ಮಧುರ ಗಾನ ಹಾಡುತ್ತಾ
ಮೆರೆವುದು ಈ ಪುಡಿಕಾಸು.
ಆಲಿಂಗಿಸಿ ಹೃದಯಕೆ
ಅಂಕುಶ ನೆಡುವುದು ಬಾಸು.!
🐭🐭🐭🐭🐭
ಇಲ್ಲಿ ಯಾಕೋ ಪ್ರಾಸಕ್ಕೆ ಕಟ್ಟುಬಿದ್ದ ಹಾಗನ್ನಿಸಿತು. ಪುಡಿಗಾಸು ಎಂಬ ಪದ ಬಳಸಿದ್ದರೆ ಚೆನ್ನಾಗಿತ್ತೇನೋ. ಸಂಧಿಪದವಾಗಿ.
🐭🐭🐭🐭🐭🐭
*ಋಣವಿದ್ದರೆ ಈ ನಾಡಲಿ
ನಿತ್ಯಾನಂದದಿ ಬೇರೆವೆ
ಇದೆ ಕಾಸು ಬಳಿ ಇದ್ದರೆ
ಈ ಲೋಕದಿ ಬದುಕಲು ಬರವೆ.??
🐭🐭🐭🐭🐭🐭
ಬೇರೆವೆ ಅಲ್ಲ, ಬೆರೆವೆ. ಇರೆ ಕಾಸು ನಿನ್ನ ಬಳಿ ಈ ಲೋಕದಿ ಬದುಕಲು ಬರವೇ ಎನ್ನಬಹುದಿತ್ತೇನೋ..
🐭🐭🐭🐭
*ಬಿಡದೆ ಎಲ್ಲರಿಗೆ ಒಲಿಯಲಿ
ಈ ಪುಡಿಗಾಸು.
ಅತಿಯಾಸೆ ಬಿಟ್ಟರೆ
ಲೋಕಕೆ ಅದುವೆ ಪಾಸು.!
🐭🐭🐭🐭🐭🐭🐭
ಓ ದೇವಾ ಈ ಕವನದ ಸಾಲುಗಳು ಮುಗೀತಾನೇ ಇಲ್ಲ
!ಆಂಗ್ಲ ಪದವೊಂದು ಪ್ರಾಸಕ್ಕಾಗಿ ಬಂದಿದೆ.
🐭🐭🐭🐭🐭🐭
*ತಪ್ಪದೆ ಬರಹ ಕಲಿಯಿರಿ
ಈ ಧರೆಯಲ್ಲಿ.
ಹೊನ್ನು ವರಹ ಸುರಿವುದು
ಪ್ರೀತಿಯ ಬಾಳಲ್ಲಿ.!
🐭🐭🐭🐭🐭🐭🐭
ದುಡ್ಡಿನಿಂದ ಕವನ ಓದು ಬರಹದತ್ತ ತಿರುಗಿದೆ ಇಲ್ಲಿ, ದುಡ್ಡಿದಿಂತ ಪ್ರೀತಿ ಮುಖ್ಯ ಎನ್ನಲಾಗಿದೆ.
🐭🐭🐭🐭🐭🐭
*ನಿತ್ಯದ ತಿಳಿಯಿರಿ ಇದು
ಸತ್ಯದ ಮಾತು.
ಝಣ ಝಣ ಎನ್ನುವ
ಕಾಸೆ ತೂತು.!
🐭🐭🐭🐭🐭🐭🐭
ಅಬ್ಬಾ.. ಸುಸ್ತಾಯ್ತು! ಹಣ ಪೂರ್ತಿ ತಿರುಗಿತು, ಜೀವನ ಮುಖ್ಯವಾಯ್ತು!
🐭🐭🐭🐭🐭🐭
*ಏತಕೆ ಬೇಕು ಮನ
ಕಲಕುವ ಈ ಕಾಸು.
ಈ ತಾಯ್ನಾಡಿಗೆ ಭ್ರಾಂತಿ
ಮರಸಿದರೆ ಲೇಸು.!
*ದುಡ್ಡು ದುಡ್ಡು ದುಡ್ಡು ದುಡ್ಡು
ಈ ದುಡ್ಡಿಗಾಗಿಯೆ ಜಗವೆಲ್ಲಾ
ಈ ದುಡ್ಡೊಂದ್ ಇಲ್ಲದಿರೆ
ಯಾವ ನಾಯಿ ಇಲ್ಲಾ ನರಿಯು ಇಲ್ಲಾ.!
🐭🐭🐭🐭🐭🐭
ಯಬ್ಬಾ..ಮಾರಿಕಣಿವೆಗೇ ಹೋಗಿ ಬಂದಂಗಾಯ್ತು.ದುಡ್ಡಿನ ಸತ್ಯ ಹೊರಬಂತು.
@ಪ್ರೇಮ್@
[5/4, 9:38 AM] Prem: ಗಂಧರ್ವರ
*ನಾನೊಬ್ಬ ಕಳ್ಳ...*
ಅಕ್ಕ ಕರೆದಳೆಂದು
ಊರ ಜಾತ್ರೆಗೆ ಹೋದೆ
ವಾರೆ ನೋಟದ ದೇವತೆಯನೇ
ಅಲ್ಲಿಂದ ಕದ್ದು ತಂದು ಬಿಟ್ಟೆ
🐹🐹🐹🐹🐹🐹🐹
ಜಾತ್ರೆಗೆ ನಾವೆಲ್ಲಾ ಹೋಗ್ತೇವೆ. ಅಲ್ಲಿ ಯಾವ್ಯಾವ ತರದ ಕಳ್ಳರಿದ್ದಾರೆ ಗೊತ್ತಾಯ್ತಲ್ಲಾ... ಭಾಷಾ ಚಿಹ್ನೆಗಳನ್ನು ಉಪಯೋಗಿಸಿದ್ರೆ ಇನ್ನಷ್ಟು ಇಫೆಕ್ಟಿವ್ ಆಗ್ತಿತ್ತೇನೋ ಕವನ.
🐹🐹🐹🐹🐹🐹🐹
ಊರ ಹಿರಿಯರೆಲ್ಲ ಬಂದರು
ವೀಳ್ಯೆ ಬದಲಿಸಿ ಹೋದರು..
ಅಕ್ಕನ ಮನೆಯ ದೊಡ್ಡ ಜಾತ್ರೆ
ಶಿವ ಮೆಚ್ಚುತಾನ ಸುಮ್ಮನೆ ಕುಂತ್ರೆ
ಮಾವನ ಮನೆಯ ಬಂಗಾರಕೇ ಕಣ್ಣು ಹಾಕಿದೆ
ಅಕ್ಕನ ಮನೆಯ ಲಕ್ಷ್ಮಿಯನೇ ಅಲ್ಲಿಂದ ಕದ್ದೆ
🐹🐹🐹🐹🐹🐹🐹
ಹೆಚ್ಚಿನಂಶ ಘಟ್ಟದ ಕಡೆಯ ಪದ್ಧತಿಯಂತೆ ಅಕ್ಕನ ಮಗಳನ್ನೆ ತಂದ ಪರಿ ಇದು ಇರಬಹುದೇನೋ...
🐹🐹🐹🐹🐹🐹🐹
ಮಾವ ಪರಿವಾರ ಸಹಿತ ಬಂದರು
ವಾಚು ಉಂಗ್ರ ಕೊಟ್ಟು ಹೋದರು..
🐹🐹🐹🐹🐹🐹🐹
ನನಗನಿಸಿದ ಮಟ್ಟಿಗೆ ಇಲ್ಲಿ ಮಾವ ಎಂದರೆ ಅಕ್ಕನ ಗಂಡ ಭಾವ ಇರಬಹುದೇನೋ.. ಅಕ್ಕನ ಮಗಳನ್ನು ಮದುವೆಯಾಗುವ ಪದ್ಧತಿ ನಮ್ಮ ಕಡೆಗಿಲ್ಲವಾದ ಕಾರಣ ಇದು ಸ್ವಲ್ಪ ಕನ್ ಫ್ಯೂಜನ್ ನನಗೆ.
🐹🐹🐹🐹🐹🐹🐹
ಅಚ್ಚರಿಯಾಯ್ತೆ ಕದ್ದವಗೇಕೆ
ರಾಜ ಮರ್ಯಾದೆ
ಮುಂದಿನ ಶ್ರಾವಣಕೆ ಬಂದು
ವಾಲಗದ ಮಧುರಗಾನ ಸವಿದು
ಎರಡಕ್ಷತೆ ಹಾಕಬನ್ನಿ ಎಲ್ಲಾ ಅರ್ಥವಾಯ್ತದೆ..
🐹🐹🐹🐹🐹🐹
ಮದುವೆಯ ಮಾತಾದ ಕಾರಣ ರಂಗೇರಿದ ವಿಷಯವೇ ಅದು. ಆದರೆ ನಮ್ಮ ಅಳಿಯಕಟ್ಟಿನಲ್ಲಿ ಮಾವನಿಗೆ ತಂದೆಯ ಸ್ಥಾನಮಾನ. ಅಕ್ಕನ ಗಂಡ ಭಾವ ಗಂಡಿನ ಕೈ ಹಿಡಿದು ಕರೆದುಕೊಂಡು ಬರುವರು. ಭಾವನೆಂದರೆ ಗತ್ತು, ಗೌಜಿ. ಭಾವನೆಂದೂ ಮಾವನಾಗಲಾರ.ಹಾಗಾಗಿ ಈ ಪದ್ಧತಿಯ ಬಗ್ಗೆ ಹೆಚ್ಚು ತಿಳಿಯದು.
🐹🐹🐹🐹🐹🐹🐹🐹
ಕವನ ಉತ್ತಮ. ಗಂಡಿನ ಖುಷಿಯ ಸಂಭ್ರಮ ಹೇಳಲಾಗಿದೆ.
@ಪ್ರೇಮ್@
[5/4, 10:40 AM] Prem: ನನ್ನ ಗಝಲ್ ಗುರುಗಳಾದ ಸುರೇಶ್ ಸರ್ ಅವರ ಗಜಲ್...
ಬಯಕೆಗಳ ಚೆಂಡು ಮೇಲೇರಿ ಹಾರಾಡುವಂಥ ಆಗಸವು ಇದ್ದರೊಳಿತಿತ್ತು.
ಸೂಜಿ ಮೊನೆ ತಗುಲಿ ಒಡೆದಂತಾದ ಸ್ಥಿತಿ ಇರದ ಎದೆಯಾಳದಿರವು ಇದ್ದರೊಳಿತಿತ್ತು
🐰🐰🐰🐰🐰🐰
ಗುರುಗಳೇ ಆಹಾ..ಎಂಥ ಇಮ್ಯಾಜಿನೇಶನ್....ನನಗೆ ಹೇಳಿ ನೀವೇ ಗಝಲ್ ನಲ್ಲಿ ಭಾಷಾ ಚಿಹ್ನೆಗಳ ಮರೆತಿರುವಿರಲ್ಲಾ...
🐰🐰🐰🐰🐰🐰🐰
ಮೋಡ ಹರಡಿದ ಬಾನು ಹವೆಯ ಪ್ರಾಬಲ್ಯಕ್ಕೆ ನಲುಗಲು ವರ್ಷದ ಧಾರೆ ಆಗದೇನು
ಬರಿಯ ಗುಡುಗಿನ ಮೊರೆತದಲ್ಲಿ ಕೊನೆಗೊಂಡು ಭ್ರಮ ನಿರಸನವಾಗದಿಹ ನಿಲುವು ಇದ್ದರೊಳಿತಿತ್ತು
🐰🐰🐰🐰🐰🐰
ಆಹಾ...ಕನಸೆಲ್ಲಾ ನನಸಾದರೆ ಅದೇನು ಒಳಿತು..ಬೇಂದ್ರೆಯವರ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ....ಕವನ ನೆನಪಾಗ್ತಿದೆ...
🐰🐰🐰🐰🐰🐰🐰🐰
ಮುಂಜಾನೆ ಎದ್ದೊಡನೆ ಮೂಡಣದಿ ರವಿ ಮೂಡಿದಾಗ ಅರುಣ ವರ್ಣದ ಕಿರಣ ಬಹಳ ಅಂದ.
ಮಂಜು ಸವರಿದ ಹಾಗೆ ಮನದಾಸೆ ಹರಡಿಸುವ ಒಲವ ಕಿರಣವು ಇದ್ದರೊಳಿತಿತ್ತು
🐰🐰🐰🐰🐰🐰
ರೂಪಕಗಳು ಮಡುಗಟ್ಟಿದ ಸಾಲುಗಳು ಕಣ್ಣಿಗೆ ಕಟ್ಟಿದಂತೆ ರಾಚುತ್ತವೆ. ನಿಮ್ಮ ಚಿತ್ರಕವಿತ್ವ ವರ್ಣಿಸಳಸದಳ.
🐰🐰🐰🐰🐰🐰🐰🐰
ಬಿಸಿಲ ಝಳ ಬೆವರ ಹನಿ ಮೈಯೆಲ್ಲ ತೋಯಿಸುತ ಧಾರೆ ಹರಿಯುವ ಜಲವು ಅಂಟಾಗದೇನು
ಬಿಸಿಯುಸಿರ ಜತೆಗೆ ಎದೆ ಆರ್ದ್ರವಾಗುವ ಕಾಲ ನಂಟಾದ ತನುವು ಇದ್ದರೊಳಿತಿತ್ತು
🐰🐰🐰🐰🐰🐰
ಇದು ಎಲ್ಲರ ಬಯಕೆಯ ಕನಸು. ಕವನದಲಿ ಪಡಿಮೂಡಿದೆ. ಆಹಾ..ನಾನಂತೂ ಕೊಟ್ಟಿಗೆಹಾರದ ತಂಪಾದ ತೋಟದೊಳಗೆ ಫ್ರಿಜ್ಜಲ್ಲಿ ಇದ್ದ ಹಾಗೆ ಕೂಲ್ ಕೂಲಾಗಿರುವೆ. ಒಂದು ವಾರದಿಂದ ದಕ್ಷಿಣ ಕನ್ನಡದ ಸೆಕೆ ಮರೆತು ಹೋಗಿದೆ.
🐰🐰🐰🐰🐰🐰
ಮಾಮರದಿ ಕುಳಿತ ಕೋಗಿಲೆಯ ಮಧುರ ಗಾನ ಹೊರಡಲು ಮೈಮನವು ಕಿವಿಯಾಯ್ತೆ
ಒಲವು ಮೂಡಿದ ನಲ್ಲೆ ಪಿಸುಗುಡುವ ಹಾಡಿನಂತಾದ ಧ್ವನಿಗಳೆಲ್ಲವು ಇದ್ದರೊಳಿತಿತ್ತು.
🐰🐰🐰🐰🐰🐰🐰
ಹೌದಪ್ಪಾ..ಒಲವಿನ ದನಿಯ ನಲ್ಲೆ ಬಳಿಯೆ ಉಲಿಯುತಿರಲು ಆಹಾ..ಏನು ಚಂದ..ಕೋಗಿಲೆಯಂತೇ!
🐰🐰🐰🐰🐰🐰
ಸುರೇಶನಿಗೆ ಸ್ವರ್ಗದಲಿ ಸಡಗರದ ದಿನಗಳೇ ಯಾವತ್ತಿ ಗೂ ಇರುವ ಸತ್ಯದಂತೆ
ಎದೆಯ ಗಿಣಿ ಜತೆಗಿರುತ ರಮಿಸಿ ಸಾಂಗತ್ಯವನು ಬಯ ಸುತಿಹ ಮನವು ಇದ್ದರೊಳಿತಿತ್ತು.
🐰🐰🐰🐰🐰
ಕನಸು ನನಸಾಗಲು ಬಂತು ಗಝಲ್ ..ವಾರೆ ವಾ..ಸೂಪರ್.
@ಪ್ರೇಮ್@
[5/4, 10:48 AM] Prem: 6. MSK ಅವರ
ಶೀರ್ಷಿಕೆ....
*ಮೌನವಾದೆ*
ಕಾಡೊಳು ಹೋದೆ
ಹಕ್ಕಿಗಳ ಕಲರವ
ಚಿಲಿಪಿಲಿ ನಾದವ
ಕಂಡು ಮನಸೊತೆ
🦊🦊🦊🦊🦊🦊🦊
ಮನಸೋತೆ ಆಗಬೇಕಿತ್ತು ಗುರುಗಳೇ...ಸ್ಪೆಲಿಂಗ್ ಮಿಸ್ಟೇಕ್ ಗುರುಗಳೇ...ಕವನ ಸೂಪರ್..ಭಾಷಾ ಚಿಹ್ನೆ ಬಳಸಿ, ಮೇಕಪ್ ಮಾಡಿ..
🦊🦊🦊🦊🦊🦊
ಮೃಗಾಲಯಕ್ಕೆ ಹೋದೆ
ಮಯೂರಿಯ ನಾಟ್ಯವ
ಗರಿಬಿಚ್ಚಿದ ನಂದನವ
ಕಂಡು ಬೆರಗಾದೆ
🦊🦊🦊🦊🦊🦊🦊
ನೀವೆಲ್ಲೇ ಹೋಗಿ ಆನಂದಿಸಿದರೂ ಕವಿಯಾದ ಬಳಿಕ ಪೂರ್ಣ ವಿರಾಮ, ಅಲ್ಪ ವಿರಾಮ, ಆಶ್ಚರ್ಯ ಸೂಚಕ ಚಿಹ್ನೆಗಳನ್ನು ಪರ್ಸಲ್ಲಿ ಹಾಕ್ಕೊಂಡೇ ಹೋಗಿ ಗುರುಗಳೇ...ಅಂದದ ಸಾಲುಗಳು..
🦊🦊🦊🦊🦊🦊🦊
ಸಂಗೀತ ಶಾಲೆಗೆ ಹೋದೆ
ಮಧುರ ಗಾನವ
ಇಂಪಾದ ರಾಗವ
ಕಂಡು ಮೈಮರತೆ
🦊🦊🦊🦊🦊🦊🦊
ಸಂಗೀತಕ್ಕೆ ಸೋಲದವರುಂಟೇ ಜಗದೊಳು....ಉತ್ತಮ ಸಾಲು..
🦊🦊🦊🦊🦊🦊
ದೇವಾಲಯಕೆ ಹೋದೆ
ಶಾಂತ ವಾತಾವರಣವ
ಘಂಟೆ ನಾದವ
ಕಂಡು ಭಕ್ತನಾದೆ
🦊🦊🦊🦊🦊🦊
ದೇವಾಲಯದ ಗಂಟೆ ನಾದದಲ್ಲೇನೋ ಶಕ್ತಿಯಿದೆ. ಪುಟ್ಟ ಮಕ್ಕಳೂ ಹೆದರುವುದಿಲ್ಲ ಅದಕ್ಕೆ. ಅದರ ಶೃತಿಲಯ ಒಂದೆಡೆಯಾದರೆ ರಾಕ್ಷಸರ ಓಡಿಸುವ ಶಕ್ತಿಯಿದೆ ಅದಕ್ಕೆ...
🦊🦊🦊🦊🦊🦊
ಸಮುದ್ರ ದಂಡೆಗೆ ಹೋದೆ
ಅಪ್ಪಳಸಿ ಬರುವ
ತೆರೆಗಳ ಸಪ್ಪಳವ
ಕಂಡು ಮೌನವಾದೆ
🦊🦊🦊🦊🦊🦊
ಸಮುದ್ರದ ದಡದಲ್ಲಿ ಕುಳಿತಾಗಲೆಲ್ಲ ನಾನೂ ನೊರೆಯುಕ್ಕಿಸಿ ಬಂಡೆಗೆ ಬಡಿವ ಬೃಹತ್ ಗಾತ್ರದ ತೆರೆಯಾಗಬೇಕೆಂದು ಯಾವಾಗಲೂ ಅಂದುಕೊಳ್ಳುವೆ. ಅದರ ನೆಗೆತ, ಕುಣಿತ ಎಲ್ಲವೂ ಚಂದವೇ..
🦊🦊🦊🦊🦊🦊🦊
ಅಂದದ ಸರಳ ಕವನ..
@ಪ್ರೇಮ್@
[5/4, 10:53 AM] Prem: 7. ಕೋರಾಪು ಅವರ
🌹 *ಬಯಕೆ*🌹
ಮಾಧವನ ಭಕ್ತೆಯಿವಳು
ರಾಧೆಯಂಥ ಮನದವಳು
ಮಂದಹಾಸ ತೋರುತಾ
ಕಣ್ಣಂಚಲೇ ಕೊಲ್ಲುವಳು
🐻🐻🐻🐻🐻🐻
ಈ ಕವನದ ಶೀರ್ಷಿಕೆ ಬಯಕೆ ಬದಲಿಸಿದ್ದಿದ್ದರೆ ಚೆನ್ನಾಗಿತ್ತು. ಪ್ರೇಮ ಕವನವದು.ಪ್ರಿಯತಮೆಯ ವಿವರಣೆ ಈ ಸಾಲುಗಳಲ್ಲಿದೆ.
🐻🐻🐻🐻🐻🐻🐻
ಪ್ರಶಾಂತತೆ ಭಾವದೊಳು
ಧ್ಯಾನದಲಿ ಲೀನಳಾಗಿ
ನನ್ನ ಮನಸ ಗೆದ್ದಿಹಳು
ಹೃದಯವನು ಕದ್ದಿಹಳು
🐻🐻🐻🐻🐻🐻🐻🐻
ಇಲ್ಲೂ ಪ್ರಿಯತಮೆಯ ವರ್ಣನೆ ಕಂಡಿಹುದು, ಅಲ್ಲಿ ತನ್ನ ಬಯಕೆಯನು ಕವಿ ಬಿಚ್ಚಿಡಲೇ ಇಲ್ಲ...
🐻🐻🐻🐻🐻🐻🐻🐻
ಸವಿಗಾನದ ಕೋಗಿಲೆಯೂ
ನಾಚುವಂಥ ಕಂಠದವಳು
ಮಿತಭಾಷಿ ಸ್ವಭಾವದವಳು
ನನ್ನಂತರಂಗವ ಗೆದ್ದವಳು
🐻🐻🐻🐻🐻🐻🐻
ಪ್ರಿಯತಮೆಯ ಅಂದದ ವರ್ಣನೆಗೆ ಭಾಷಾ ಚಿಹ್ನೆಗಳ ಬಳಸಿದ್ದಿದ್ದರೆ ಅದ್ಭುತವಾಗಿರುತಿತ್ತು.
🐻🐻🐻🐻🐻🐻
ಮಧುರಗಾನ ಮತ್ತು ಬರಿಸಿ
ಜೋಗುಳವನು ಹಾಡಿದೆ
ಮಾಧುರ್ಯಭರಿತ ಕಂಠ
ನಿನ್ನಭಿಮಾನಿ ನಾ ಆಗಿಹೆ
🐻🐻🐻🐻🐻🐻
ಅಭಿಮಾನಿಯ ಬಯಕೆ ಕೊನೆಗೂ ತಿಳಿಯಲೇ ಇಲ್ಲ.. ಕೊನೆಗೊಂದು ಚರಣ ಬಯಕೆಯ ಬಗೆಗೆ ಸೇರಿಸಿಬಿಡಿ ಗುರುಗಳೆ.
@ಪ್ರೇಮ್@
[5/4, 4:44 PM] Prem: ಅಭಿಯವರ ಕವನ
ಸೂಪರ್ ಲವ್ ಸಾಂಗ್..
ಆಹಾ.. ಕವನ ಓದಿ ಅವಳು ಎಲ್ಲಿದ್ದರೂ ಕುಣಿದು ಬರಬೇಕು.
🐼🐼🐼🐼🐼🐼
ಪ್ರತಿ ಪದವೂ ಪ್ರೀತಿಯಿಂದ ಅದ್ದಿ ತೆಗೆದ ಪ್ರೇಮ ಕವನ ಅಂದವಾಗಿ ಮೂಡಿ ಬಂದಿದೆ.
🐼🐼🐼🐼
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ