[5/1, 10:06 AM] Wr Sreemati Joshi: ಪ್ರೇಮ ಮೇಡಂ ನಮಸ್ತೆ🙏🙏 ನಿಮ್ಮ ವಚನದ ಸುತ್ತು ಒಂದು ನೋಟ👏👏 ದೇವರು ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎಂಬುದನ್ನು ನಿಮ್ಮ ವಚನದ ಸಾರದಲಿ ಹೇಳಿದ್ದಿರಿ.. ತಂದೆ ತಾಯಿ ಬಂಧು ಬಳಗ ಆತ್ಮೀಯರು ಸಮಾಜ ನೆರೆಹೊರೆ ಎಲ್ಲದರ ನೆರವನ್ನು ಪಡೆಯುತ್ತಾ ಬದುಕಬೇಕು ಎಂದರೂ ದೇವರ ಕೃಪಾಕಟಾಕ್ಷ ನಮ್ಮ ಮೇಲೆ ಇರಲೀ ಬೇಕು ಎಂಬುದನ್ನು ತಿಳಿಸಿದ್ದೀರಿ 99/ಪ್ರಯತ್ನ ಮಾಡಿದರೂ ಅದ ೧/ದೇವರು ಕೊಡುವ ಫಲವೇ ನಿರ್ಣಾಯಕ ಆಗುತ್ತದೆ ಅಲ್ವಾ ಸೂಪರ್ ಧನ್ಯವಾದಗಳು🙏🙏
[5/2, 1:31 PM] Wr Vara Lakshmi: ಪ್ರೇಮ್ ಅವರ ವಚನ
ವಂಚನೆಯ ಬದುಕು ಎಂದಿಗೂ ಶ್ರೇಯಸ್ಸು ತರುವುದಿಲ್ಲ. ಆತ್ಮವಂಚನೆ ಮಾಡಿಕೊಂಡು ಬದುಕ ಬೇಡ, ಮೆಚ್ಚುವುದಿಲ್ಲ ಆ ಶಿವ ಎನ್ನುತ್ತಾರೆ.
ಉತ್ತಮ ವಚನ🙏
[5/3, 2:26 PM] Wr Dinesh Sir: 🙏🙏
*ಪ್ರೇಮ್ ರವರ* ವಚನ
ಪದ ಬಳಕೆ ಆಗಿದೆ.
ಅರ್ಥಪೂರ್ಣವಾಗಿದೆ.
ಬಹಳ ಚೆನ್ನಾಗಿದೆ.ಮಡಿವಂತಿಕೆ ಎನ್ನುವುದು ಕೇವಲ ಸ್ನಾನ ಮಾಡಿ, ದೇಹ ಶುದ್ದಿಗೊಳಿಸಿದರೆ ಆಗದು.ಮನ ಪರಿಶುದ್ಧವಾಗಿರಬೇಕು. ಕಟುನುಡಿಗಳನ್ನಾಡಿ ಇತರರ ಹಂಗಿಸದೆ, ನೊಂದವರ ಸಮಾಧಾನಿಸಿ ಸಂತೈಸಿದರೆ ಅದೆ ನಿಜವಾದ ಮಡಿವಂತಿಕೆ.ಈ ದಿಶೆಯಲ್ಲು ಸಾಗೋಣ ಎಂಬ ವಚನ ಸೂಪರ್ ಇದೆ.
👍👍👍👍👌👌👌🙏🙏
[5/4, 12:31 PM] Wr Sham Prasad Bhat: *ಪ್ರೇಮ್*
*ವಚನ*
ಸಂಕುಚಿತ ಮನೋಭಾವದ ವಿಸ್ತರಿತ ರೂಪದಂತಿರುವ ವಚನವಿದು.
ನಾನು, ನನ್ನದು ಎನ್ನುವ ಬೇಲಿಯೊಳಗೆ ವಿಹರಿಸುವ ಮನುಜರಿಗೆ ಜಗದ ಆಗುಹೋಗುಗಳ ಬಗ್ಗೆ ಅರಿವಿಲ್ಲ.ಅರಿಯಬೇಕೆಂಬ ವ್ಯವಧಾನವೂ ಅವರಿಗಿಲ್ಲ.
ತನ್ನ ಅಭ್ಯುದಯವೇ ಪರಮಗುರಿ.
ಜಗದೊಳಗಿನ ಅಸಮತೋಲನವನ್ನು ನೀನು ಒಪ್ಪುವೆಯಾ ಎಂದು ಶಿವನನ್ನು ಪ್ರಶ್ನೆ ಮಾಡಿದ ವಚನ ಸೊಗಸಾಗಿದೆ..ಪ್ರಸ್ತುತ ಜಗದಲ್ಲಿ ನಡೆಯತ್ತಿರುವ ಅಸಮರ್ಪಕ ಸಂಗತಿಯತ್ತ ಬೆಳಕು ಚೆಲ್ಲಿದೆ.
ಧನ್ಯವಾದಗಳು
*ಶ್ಯಾಮ್ ಪ್ರಸಾದ್*
[5/4, 2:25 PM] Wr Shama patil: ಪ್ರೇಮರ ಪ್ರಕಾರ
ಮಾನವ ತಾನು ನಡೆವ ದಾರಿ ಸುಗಮವಾಗಿರಬೇಕೆಂದು ಹೇಗೆ ಬಯಸುತ್ತಾನೊ ಹಾಗೆ ಇತರರ ದಾರಿಗೆ ಕಲ್ಲು ಮುಳ್ಳ ಹಾಕಬಾರದು ನಾನು ಮಾತ್ರ ಚನ್ನಾಗಿರ ಬೇಕೆನುವ ಹಾಗಿದ್ರೆ ದೇವರು ಮೆಚ್ಚುವನೇನಯ್ಶ ಶಿವಾ ಎಂದಿದಾರೆ
[5/6, 6:53 AM] Wr Siddesh: *ನನ್ನ ಮತ್ತು ನನ್ನವಳ ನಡುವೆ ಶೀತಲ ಸಮರ*
ಅವಳ ಕೋಪದಿ ಬಲಯಾದ ಬಡಪಾಯಿ ನಾವು ...
ಸುಂದರ ಕವನ
ಪ್ರೇಮ್ ಮೆಡಮ್
[5/6, 1:01 PM] +91 89719 21907: *ಪ್ರೇಮ್* ಹನಿಗವನದ ಸುತ್ತ ಒಂದು ಅವಲೋಕನ... ಸತಿ ಪತಿಗಳ ನಡುವೆ ನಡೆಯುವ ಶೀತಲ ಸಮರ ತೋರುವ ಪರಿಣಾಮವನ್ನು ಅರ್ಥಪೂರ್ಣ ವಾಗಿ ಚಿತ್ರಿಸಿದ್ದಾರೆ.ಜೀವನದಲ್ಲಿ ಗಂಡ ಹೆಂಡತಿ ಎನ್ನುವ ಎರಡು ಪ್ರಧಾನ ಪಾತ್ರಗಳು ಅಭಿನಯಿಸುತ್ತಿರುವಾಗ...ಸಿಟ್ಟು ಅಶಾಂತಿ, ಅಸಹನೆ, ಅರ್ಥವ್ಯವಸ್ಥೆ ತಮ್ಮದೇ ಆದ ಪಾತ್ರ ನಿರ್ವಹಿಸತ್ತವೆ...ಆಗ ನಡೆಯುವ ಶಿತಲ ಸಮರಗಳು ಅನುಭವಿಸಿದವರಿಗೇ ಗೊತ್ತು.ಅಲ್ಲಿ ಬಲಿಪಶುವಾಗುವುದು ಗಂಡೆಂದು ಮತ್ತೆ ಹೇಳಬೇಕಾಗಿಲ್ಲ.ಆದರೂ ಹೇಗೋ ಹೊಂದಿಕೊಂಡು ಜೀವನ ಸಾಗಿಸುತ್ತಾರೆ...ಕವಿ ಮುಂದಕ್ಕೆ ಹೋಗಿ ಇನ್ನೂ ಹೇಗೆಲ್ಲಾ ನಡೆಯಬಹುದು ಶೀತಲ ಸಮರ ಎನ್ನುವುದನ್ನ ಹೀಗೆ ಹೇಳುತ್ತಾರೆ...ಸತಿಯೊಬ್ಬಳು ಪತಿರಾಯನನ್ನ ಗರಗರ ತಿರುಗಿಸಿದಾಗ ಪತಿರಾಯನ ಸ್ಥಿತಿ ಹೇಗಾಗಿರಬೇಡ...ಅದೇ ಪತಿರಾಯ ಹರೋಹರ...ಇದು ವಾಸ್ತವಿಕತೆಗೆ ದೂರ ಎನಬಹುದಾದರೂ ಅಲ್ಲಗಳೆಯುವಂತಿಲ್ಲ...ಒಟ್ಟಾರೆ ಸತಿಪತಿಗಳು ಅರಿತು ಬೆರೆತು ನಡೆದರೆ ಈ ಶೀತಲ ಸಮರವಿರದೇ ಬದುಕು ಸಮರಸದಿಂದ ಕೂಡಿರುವುದು ಎಂದು ಹೇಳ ಹೊರಟಿದ್ದಾರೆ...ಮನೋಜ್ಞ ಹನಿಗವನ...ಶುಭವಾಗಲಿ
[5/7, 2:43 PM] Wr Ajith: @ಪ್ರೇಮಾ ಉದಯಕುಮಾರ್ ಮೇಡಂ...
*ಬೇಕು*
ಹೌದು ನಮಗೆ ಬೇಕು ಅನ್ನೋದು ಎಷ್ಟು ಮುಖ್ಯವಾಗುತ್ತದೆಯೋ ಆಗ ನಮ್ಮಲ್ಲಿ ಆಸೆಯು ಅತಿರೇಖಕ್ಕೇರುತ್ತದೆ.
ಆಗ ಅಶಾಂತಿ ತಾಂಡವಾದಿ ಜಗತ್ತು ಕಾಂತಿಯನ್ನು ಹಂಬಲಿಸುವಂತಾಗುತ್ತದೆ...
ಇಲ್ಲಿ ಬೇಕು ಅನ್ನೋದು ಎಷ್ಟು ಮುಖ್ಯವಾಗಿರುತ್ತದೆಯೋ ಶಾಂತಿಯು ಅಷ್ಟೇ ಮುಖ್ಯವಾಗಿರುತ್ತದೆ.
ಭಕ್ತಿ ಅದು ಶಕ್ತಿ ಆಗಬೇಕು ಯಾಕೆಂದರೆ ಶಕ್ತಿಯಲ್ಲಿ ಭಕ್ತಿ ಇದೆ, ಭಕ್ತಿಯಲ್ಲಿ ಶಕ್ತಿಯು ಇದೆ. ಇಲ್ಲಿ ಭಕ್ತಿಯಲ್ಲಿ ಮೌನತೆ ಇದೆ ಅದು ದೇವರ ಮೇಲಿನ ಆಸೆಯಕ್ಕೆ ಮಾತ್ರ ಸೀಮಿತಗೊಂಡಾಗ ಶಾಂತಿ ನೆಲೆಸುತ್ತದೆ..
ಭಕ್ತಿ,ಶಕ್ತಿ,ಮತ್ತು ಶಾಂತಿ ಇದು ದೇವರಗುಡಿಯಲ್ಲಿ ಮಾತ್ರ ಸಿಗುವಂತದ್ದು, ಆದರೆ ಒಂದೊಂದು ಸಲ ಆ ಶಾಂತಿಯು ದೇವಸ್ಥಾನಗಳಲ್ಲಿ ಕಾಣುವುದೇ ಇಲ್ಲ...
ಕಿತ್ತಾಟ ಹೊಡೆದಾಟಗಳಲ್ಲಿ ಮುಳುಗಿ ಬಿಟ್ಟಾಗ ಶಾಂತಿ ಎಲ್ಲಿಯೂ ಕಾಣದು...
ಭಕ್ತಿ ಎಂಬ ಭಂಡಾರದಂತ ಶಕ್ತಿಯಲ್ಲಿ ನಮಗೆ ಶಾಂತ ಸ್ವಭಾವ ಮಾತ್ರ ಕಾಣಬೇಕು... ಆದರೆ ಇಲ್ಲಿ ಮುಖ್ಯವಾಗಿ ಆ ಭಕ್ತಿಯ ಕ್ರಾಂತಿ ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ ಒಬ್ಬ ಮನುಷ್ಯನ ಮನಸ್ಸು ಎಷ್ಟು ಭಯಾನಕ ಇರುತ್ತದೆ ಎಂದರೆ ಅವನ ಎದೆಯನ್ನು ಹೊಕ್ಕು ನೋಡಿದರೆ ಅಲ್ಲಿ ಆತ ದೇವರಲ್ಲಿ ಪ್ರಾರ್ಥಿಸುವ ಮನಸ್ಸು ಏನನ್ನು ಹಸಂಬಲಿಸುತ್ತಿರುತ್ತದೆ ಎಂಬುದನ್ನು ನೋಡಿದರೆ ಈ ಜಗತ್ತಿನ ಅವನ ಎದೇಯಲ್ಲಿರು ಕ್ರೂರತನಕ್ಕಿಂತ ಆ ಭಾಹ್ಯ ಜಗತ್ತಿನ ಅಶಾಂತಿಯೇ ಎಷ್ಟೊ ಮುಖ್ಯ ಎಂದು ತಿಳಿಯುತ್ತದೆ....
ಬೇಕು ಅನ್ನೋದು ಮನುಷ್ಯನಿಗೆ ಅಪಾಯ ಒಡ್ಡಬಾರದು ಎಂದರೆ ಅವನಿಗೆ ಶಾಂತಿಯನ್ನು ಪ್ರತಿಪಟಿಸುವ ಭಾವ ಇರಬೇಕು....
*ಚುಪರ್* Aj...
😊😊
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ