ಸೋಮವಾರ, ಮೇ 6, 2019

993. ನ್ಯಾನೋ ಕತೆ-19

ನ್ಯಾನೋ ಕತೆ

ಅವನು-ಅವಳು

ಅವರಿಬ್ಬರು ಗಂಡ ಹೆಂಡತಿ. ಮದುವೆಯ ಮೊದಲೇ ಪರಸ್ಪರ ವ್ಯವಹಾರಗಳಲ್ಲಿ ತಲೆ ಹಾಕಬಾರದೆಂಬ ಮಾತುಕತೆಯ ಮೇಲೆ ಮದುವೆಯಾಗಿದ್ದರು. ಯಾರು ಯಾವ ಕೆಲಸ ಮಾಡುತ್ತಾರೋ ಪರಸ್ಪರರಿಗೆ ಗೊತ್ತಿತ್ತೋ ಇಲ್ಲವೋ. ಬೆಳಿಗ್ಗೆ ಹೋಗಿ ಸಂಜೆ ಮನೆ ಸೇರುತ್ತಿದ್ದರು ಇಬ್ಬರೂ. ಕೆಲವೊಮ್ಮೆ ಆಫೀಸ್ ಟೂರ್. ಅವರದ್ದು ಒಳ್ಳೆಯ ಸಂಸಾರ. ಹಣದ ವಿಚಾರದಲ್ಲಿ ಒಬ್ಬರಿಗೊಬ್ಬರಿಲ್ಲ. ತಾನು ದುಡಿದದ್ದು ತನಗೆ. ಮಗುವಿಗೆ ಇಬ್ಬರದ್ದೂ. ಇತರರು ಏನೇ ಹೇಳಿದರೂ ಅವರು ಕೇಳಲಾರರು. ತಮ್ಮದು ತಮಗೇ.
@ಪ್ರೇಮ್@
06.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ