ಬುಧವಾರ, ಮೇ 8, 2019

997. ನಿನ್ನೊಡನೆ ಕಳೆದ ಕ್ಷಣ

ನಿನ್ನೊಡನೆ ಕಳೆದ ಕ್ಷಣ

ಮದುವೆಯೆಂಬ ಬಂಧದಿ ನಿನ್ನವಳಾಗಿ,
ಅನುರಾಗದ ಜೀವನ ನಿನ್ನೊಂದಿಗೆ ಸಾಗಿ!
ಇಂದಿಗೆ ಅಷ್ಟ ವಸಂತಗಳ ಸಂಭ್ರಮ!
ಮಗಳು ದಿಯಾಳ ಸಮಾಗಮ!

ಪ್ರೀತಿ ಚಿಗುರು ಎಲ್ಲೆಡೆ ಪಸರಿಸಿ
ನಿನ್ನೊಡನೆ ಬಾಳಿಗಡಿಯಿರಿಸಿ,
ಒಂಟಿ ಬಾಳನು ಜಂಟಿಯಾಗಿಸಿದ ಕ್ಷಣ,
ಎಂಟು ವರುಷಗಳ ಹಿಂದೆ ಬೆಸೆದ ಋಣ!

ನಾ ನಿನ್ನೊಳು, ನೀ ನನ್ನಲಿ
ಪ್ರೀತಿ ಫಲಿತ ಮಧುರ ಸುದಿನ!
ಕನಸ ಮೂಟೆಗಳನು ಕಟ್ಟಿಕೊಂಡು
ನಿನ್ನ ಮನೆ ಬಾಗಿಲೊಳಗೆ ಅಡಿಯಿಟ್ಟ ದಿನ!

ಹುಟ್ಟು ಹಬ್ಬ ಆಚರಿಸುತ್ತಿದ್ದ ನನ್ನ ಬಾಳಲಿ
ಹೊಸದಾಗಿ ಸೇರಿಸಿದೆ ನೀನು
ಮದುವೆ ವಾರ್ಷಿಕೋತ್ಸವದ ಹಬ್ಬ!
ಬಾಳಲಿ ಜೊತೆಯಾಗಿ ಸಿಹಿಕಹಿಯ ಮೇಳೈಸಿ!

ಬದುಕಲಿ ತಾಳ್ಮೆ, ನೋವು, ಖುಷಿಯ ಸೈರಿಸುವ ಗುಣ,
ಹಂಚಿಕೊಂಡು ಬಾಳುವ ಭಾವ,
ಕೇರಿಂಗ್ ಶೇರಿಂಗ್ ಗಳೆಂಬ ಮೋಹ
ನನ್ನೊಂದಿಗಿರು ಸದಾ ನನ್ನ ಬಾಳ ಜೊತೆಗಾರ!
@ಪ್ರೇಮ್@
08.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ