ಶಾಯರಿಗಳು
ಮನೆ ಮನ ಎರಡೂ
ತಂಪಾಗಿರಬೇಕು!
ಮನೆ ಬಿಸಿಲಿನಿಂದ
ಮನ ತಂಪು ಯೋಚನೆಗಳಿಂದ!!
2.
ಮನೆಯೊಳಗೆ ಬೇಕಾದ
ಸಾಮಾನುಗಳಿಲ್ಲದಿದ್ದರೆ
ಅಂಗಡಿಯಿಂದ ತರಬಹುದು.
ಮನದೊಳಗೆ ಬೇಕಾಗ ಆಲೋಚನೆಗಳಿಲ್ಲದೆ ಹೋದರೆ
ಎಲ್ಲೂ ಸಿಗದು, ನಾವೇ ತಯಾರಿಸಬೇಕು!!!
3.
ನವಿಲಿಗೆ ಮಾತ್ರ ನಾಟ್ಯ ಸ್ವತ್ತಲ್ಲ
ಉದಾತ್ತ ಆಲೋಚನೆಗಳುಳ್ಳ
ಮನವೂ ನರ್ತಿಸುತ್ತಾ ಬದುಕುತ್ತದೆ!!
@ಪ್ರೇಮ್@
03.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ