[5/1, 3:01 PM] Wr Ravi Jadav Sonekavi: *ಪ್ರೇಮಕ್ಕನವರ*
*"ಕೊನೆ ಕ್ಷಣದಿ ನೆನೆದ ನನ್ನ ಮುದ್ದಿನ ಅಪ್ಪ*
ಪ್ರೇಮ ಎನ್ನುವ ಪರಿಭಾಷೆಯೊಳಗೆ ಪ್ರೇಮ ಕವಿತೆಗಳತ್ತ ಗಮನ ಹರಿಸದ ಹೃದಯ, ಪ್ರೇಮಕ್ಕ, ನಾನು ಶತ ದಡ್ಡ ಸೋನೆ ಹುಡ್ಗ😍, ಮಾಡುವ ಸಣ್ಣ ನಮಸ್ಕಾರ😍.
*ಪ್ರೇಮಕ್ಕನವರ ಮತ್ತು ಅಭಿಯವರ ಕವಿತೆಗಳ ಹೋಲಿಕೆ.....*
ಅಭಿಯವರ ಕವಿತೆಗೂ ಪ್ರೇಮಕ್ಕನವರ ಕವಿತೆಯ ಅಂತರಾಳಕ್ಕೂ ಒಂದು ಅವಿನಾಭಾವ ಸಂಬಂಧ ವಿದೆ, ಈ ಎರಡು ಕವಿತೆಯನ್ನು ನೋಡಿದಾಗ,ನನಗೆ ಕಾಡುವ ಆತಂಕವೆಂದರೆ ಅಭಿಯವರು ತಂದೆಯ ಮೇಲಿಟ್ಟಿರುವ ಪ್ರೀತಿ ಅಭಿಮಾನ, ನನ್ನನು ಮೌನವಾಗಿಸುವ ಹಾಗೆ ಮಾಡುವ ಪರಿ, ಮತ್ತೆ ಪ್ರೇಮಕ್ಕನವರ ಕವಿತೆಯ ಭಾವಗೀತೆ ಹೃದಯ ತಟ್ಟಿದಾಗ, ಎದೆಯಾಳದ ಶೋಕಗೀತೆ ಕಾಡಿಸುವ ಹಾಗೆ, ಒಂದರಲ್ಲಿ ಸಂತೋಷ ನಲಿವು ತುಂಬಿ,ಆನಂದದಿಂದಿರುವ ಹರಿಯುವ ಅಲೆ, ಬಂದರೆ, ಮತ್ತೊಂದರಲ್ಲಿ ದುಃಖ, ನೋವು, ಉಮಳಿಸಿ ಬರುತ್ತದೆ,
ಇದು ಪ್ರೇಮಕ್ಕನವರ ಕಲ್ಪನೆ ಕವಿತೆಯಾದರೆ ನನ್ನ ಓದಿನ ಹಿಡಿತಕ್ಕೆ ಸ್ಫೂರ್ತಿಯಾಗವಂತೆಯಿದೆ. ಒಂದು ವೇಳೆ ನಿಜವಾದರೆ ನನ್ನೀ ಈ ಅಂತರಾಳ ಬಿಕ್ಕಿ ಬಿಕ್ಕಿ ಅಳುವ ಆತಂಕದಲ್ಲಿ ಬೇಸರ ಪಡುತ್ತದೆ ಮೈ ಮನ, ಓದಿದ ಹೃದಯಕ್ಕೆ ಬೇಸರದ ಛಾಯೆ ತರುವ ಭಾವನಾತ್ಮಕ ಸಂವೇದನೆಗಳು ಮಾತನಾಡುವಂತಿವೆ.
ಈ ಕವಿತೆಯಲ್ಲಿ ಬಸರಿ ಮಗಳ ಚಿತ್ರಣವಿದ್ದು,
ಆಕೆ ತನ್ನ ತಂದೆಯ ಕುರಿತು ಕಂಡಿರುವ ಕನಸು, ನನಸಿನಂತೆ ಕಾಡಿಸುವ ತಾಕಲಾಟದಂತೆ, ಓದುಗರನ್ನು ದುಃಖಿಸುವಂತೆ ಮಾಡುತ್ತದೆ.
ಕನಸು ಬಿದ್ದಿದೆ, ಅದು ನನಸೊ-ಕನಸೊ ಎನ್ನುವ ಗೊಂದಲದಲ್ಲಿದ್ದಾಳೆ ಮಗಳು. ಬಿದ್ದಿದ ಕನಸು, ನನಸಾದ್ದಿತ್ತೆ ಎನ್ನುವ ಆತಂಕದಲ್ಲಿ ತಂದೆಯನ್ನು ನೋಡುವ ತವಕದಲ್ಲಿದ್ದಾಳೆ,
ಅಪ್ಪ-ಅಮ್ಮ, ಅತ್ತೆ-ಮಾವ, ದೊಡ್ಡಮ್ಮ-ಅಜ್ಜಿ. ಕೆಲವು ಸಾಂಸಾರಿಕ ಸಂಬಂಧಗಳ ಬೆಸುಗೆಯಿಂದ ಕವಿತೆ ಸಿಹಿಯೊಂದಿಗೆ ಕಹಿಗಾಳಿಯನ್ನು ಮೆತ್ತುಕೊಂಡಿದೆ.
ರಾತ್ರಿ ಕಂಡ ಕನಸು, ನನ್ನ ತಂದೆಯನ್ನು ವಿಷಯದಲ್ಲಿ ನಿಜವಾಗಿ ಹೋಗಿದೆ. ಮಗಳಿಗೆ ತಂದೆಯನ್ನು ಹರಹು ಬಾಗಿಲ ಬಡಿದು ನೋವಿಸುವಂತೆ ಮುರಿದಿದೆ ಮನಸು.
*ಒಟ್ಟು ಕವಿತೆ*
ಕನಸಿನಿಂದ ಶುರುವಾದ ಕವಿತೆ, ಕನಸು ವೆಂಬ ಛಾಯೆಯಲ್ಲಿ ನನಸಾಗಿ ದುರಂತವನ್ನು ತೆರೆದಿಟ್ಟಿದೆ, ಆ ನೋವಿನ ತೀವ್ರತೆಯನ್ನು ಬಸರಿ ಮಗಳ ಮನವನ್ನು ಮಾನಸಿಕವಾಗಿ ಕಾಡಿಸಿ, ಮುಕ್ತಾಯವಾಗಿದೆ.
*$$$ಸೋನೆ😍😍😍😍*
(ರವಿಕುಮಾರ್ ಜಾಧವ)
[5/2, 1:46 PM] +91 94493 61345: ಕವನ- ಕಿರಿದು
ಕವಿ/ಕವಯತ್ರಿ- ಪ್ರೇಮ್
ಸಾಧಿಸಿದ್ದು ಕಡಿಮೆ, ಸಾಧಿಸಬೇಕಾಗಿರುವುದು ಬಹಳ. ಅದಕ್ಕೆ ಬೇಕು ಅವಿರತ ಪ್ರಯತ್ನ ಎನ್ನುವ ಕವನದ ಭಾವ ಇಷ್ಟವಾಯಿತು. ಆದರೆ ಅವಸರದಲ್ಲಿ ಬರೆದಂತಿದೆ. ಕೆಲವು ಸಾಲುಗಳ ನಡುವೆ ಕೊಂಡಿ ತಪ್ಪಿದ ಅನುಭವ ಆಯಿತು.
ಧನ್ಯವಾದಗಳು.
ಸರಸ್ವತಿ.
[5/2, 3:01 PM] +91 70220 69778: ✍🥀 *ಕವನ* ಕಿರಿದು
*ಕವಿಯತ್ರಿ* ಪ್ರೇಮ್
👉ಬಾಳಿನಲ್ಲಿ ನೀನು ನಲಿಯಲು ನಿನ್ನ ಸಾಧನೆ ಸಾಲದು.ಬಿಡುವಿಲ್ಲದ ಕಾಯಕ ನಿನ್ನದಾಗಬೇಕು.
👉ನನ್ನದೆನ್ನಲು ಏನಿದೆ ಇಲ್ಲಿ? ಎಲ್ಲ ಅವನದು.ಏನಾದ್ರೂ ಜಗದ ಒಳತಿಗೆ ಮಾಡಿದ್ದು ಇದ್ದರೆ ಅದೇ ಶಕ್ತಿ ಎಮಗೆ.
👉ವಿಶಾಲ ಮನಸ್ಸಿನಿಂದ ನಮ್ಮ ಕೆಲಸ ನಾವು ಮಾಡಿ ನಾಲ್ಕು ಜನರಿಗೆ ಒಳ್ಳೆಯದು ಮಾಡಿದರೆ ಅದರಂತಹ ಒಳ್ಳೆಯ ಕೆಲಸ ಬೇರೊಂದು ಇಲ್ಲ.
👉 ಹಾಗಾಗಿ ನಮ್ಮ ಕಾರ್ಯಸಮಾಜ ಸೇವೆಯಲ್ಲಿ ಒಂದಾಗಿ ಬೆಳಗಲಿ.ಎನ್ನುವ ಕವನ ಚೆನ್ನಾಗಿದೆ.👌👌
[5/2, 3:31 PM] +91 83103 59376: ಪ್ರೇಮ್ ಅವರ ಕಿರಿದು
ಬದುಕಿನ ಹಾದಿಯಲ್ಲಿ ಸಾಧನೆ ಎಂಬ ಹಾದಿ ಎಂಬುದು ತುಂಬಾ ದೊಡ್ಡದು.
ನಾವು ಸಾಧಿಸಿರುವುದು ತುಂಬಾ ಕಿರಿದು. ಸಾಧನೆ ಮಾಡಬೇಕಾದ ಹಾದಿ ತುಂಬಾ ದೂರವಿದೆ.
ಸಮಾಜ ಸೇವೆ ಮಾಡುವ ಹಾದಿಯಲ್ಲಿ ಸಾಗಿ ಅದರಡಿಯಲ್ಲಿ ಒಂದಿಷ್ಟು ಸಾಧನೆ ಮಾಡು ಎಂಬ ಆಶಯ ಚಂದವಿದೆ.
ಮಂಜುಳ. ಬಿ. ಕೆ
[5/4, 10:54 AM] Wr Anupama Anupallavi: ಪ್ರೇಮ ಮೇಡಂ ಅವರ ಕವನ ಅಂದುಕೊಂಡಿದ್ದೆವು.
ಹೌದು ಅಂದುಕೊಂಡಂತೆ ಇಲ್ಲಿ ಯಾವುದು ನಡೆಯುಬಹುದು ನಡೆಯದೆ ಇರಬಹದುದು. ಆದರೆ ಪ್ರಕೃತಿಯ ವಿಷಯದಲ್ಲಿ ಹ್ಮೂ ಅಸಾಧ್ಯ.
ಫೋನಿ ಚಂಡಮಾರುತದ ಅಬ್ಬರ ಜೋರಾಗಿದ್ದು ಇದೀಗ ಒಡಿಶಾದ ಪುರಿ ಕರಾವಳಿಗೆ ಪೋನಿ ಚಂಡಮಾರುತ ಅಪ್ಪಳಿಸಿದೆ. ಒಡಿಶಾದಲ್ಲಿ ಬಿರುಗಾಳಿ ಸಹಿತ ಬಾರಿ ಮಳೆಯಾಗುತ್ತಿದೆ.
ಅದರ ಭೀಕರತೆಯನ್ನು ಕವಿಯತ್ರಿ ತಮ್ಮ ಕವನದ ಮೂಲಕ ಓದುಗರಿಗೆ ಪ್ರಕೃತಿಯ ವಿರಾಟರೂಪವನ್ನು ನೋಡಲಾರದೆ ಇನ್ನಾದರೂ ಬಿಟ್ಟು ಹೋಗೂ ಎಂಬ ಆತಂಕ ಕಳವಳ ವ್ಯಕ್ತ ಪಡಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ ಫ್ಯಾನಿ ಚಂಡಮಾರುತ ಇಂದು ಒಡಿಶಾಕ್ಕೆ ಪದಾರ್ಪಣೆ ಮಾಡಿದ್ದು, ಸುಮಾರು 180 ರಿಂದ 200 ಕಿಮೀಗಳ ವೇಗದಲ್ಲಿ ಅಪ್ಪಳಿಸಿದೆ. ಪೋನಿ ಸೈಕ್ಲೋನ್ ಅಪ್ಪಳಿಸಿದ ಹಿನ್ನೆಲೆ ಒಡಿಶಾದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಸುಮಾರು 11 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ್ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಒಡಿಶಾದ ಕರಾವಳಿಯಲ್ಲಿ ಸುಮಾರು 4 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದ್ದು, 54 ಎನ್ ಡಿಆರ್ ಎಫ್ ತಂಡಗಳು, 8 ಕೋಸ್ಟ್ ಗಾರ್ಡ್ ನಾಲ್ಕು ಚಿತಾ ಹೆಲಿಕಾಪ್ಟರ್ ಗಳು 2 ಹಡಗು ಸನ್ನದ್ಧ ಸ್ಥಿತಿಯಲ್ಲಿವೆ. ಇನ್ನು ಒಡಿಶಾದಲ್ಲಿ ಮೇ 15ರವರೆಗೆ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದೆ.
ಫೋನಿ ಅಬ್ಬರದಿಂದಾಗಿ ಆಂಧ್ರಪ್ರದೇಶ, ತಮಿಳುನಾಡುಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ ಪೋನಿ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೆ ತಟ್ಟುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಗದ್ಯರೂಪದಲ್ಲಿರುವ ಕವನ ಮೊದಲೆರಡು ಚರಣದಲ್ಲಿ ಸಂಭ್ರಮದ ಹುರುಪಿನಲ್ಲಿ ಶಾಪವಾಗಿ ಬಂದ ಫೋನಿನಿಂದ ಮೂರನೆ ಚರಣದಲ್ಲಿ ಫೋನಿನ ಹಿಂದಿನ ಪ್ರಕೃತಿಯ ಮಾಲಿನ್ಯ ಕುರುಹುನೋಂದಿಗೆ ಅಲ್ಪ ಮನುಷ್ಯನ ದುರಾಸೆಯಿಂದ ಪ್ರಾಕೃತಿಕ ವಿಕೋಪಗಳು ಭೂಮಿಯಲ್ಲಿ ಮಾಡುವಂತಹ ಅವಘಡಗಳ ನೆನೆಯುತ್ತಾರೆ.
ಉತ್ತಮ ರಚನೆ ಮೇಡಂ.
ವೃಕ್ಷೋ ರಕ್ಷತಿ ರಕ್ಷಿತಃ
ಧನ್ಯವಾದಗಳು🌍🌳🌱🌴🌎
[5/6, 10:49 AM] Wr Shivkumar: *ಮುಗಿಯದ ಪಯಣ....*
ಮೊದಲ ಸಾಲಿನಲ್ಲಿ ಬಸ್ಸು ಬೇಡ ಬಂಡಿ ಎಂದಿದ್ದರೆ ಚಂದ
ಮಂದಿಯೊಳಗಾವು ಯಾವುದು ಲೆಕ್ಕ..
ಈ ಸಾಲು ಅರ್ಥವಾಗಲಿಲ್ಲ.
*********
*ಸುಖಿ ಸಂಸಾರ...*
ಸುಖಿ ಸಂಸಾರದ ಬಗ್ಗೆ ಕವನ ಬರೆಯುತ್ತಿರುವಿರಾದರೆ ಅದಕ್ಕೆ ಪೂರಕವಾದ ಹೋಲಿಕೆಗಳನ್ನೇ ತೆಗೆದುಕೊಳ್ಳಿ,
ಮಧ್ಯೆ ಮಧ್ಯೆ ಸೋಲು ಗೆಲ್ಲಲು ವು ಸಹಜ, ಸಜ್ಜನರ ದುರ್ಜನರ ಸಂಗ ಇತ್ಯಾದಿ ಕೆಲವು general ಹೋಲಿಕೆ ಸೇರಿಸಿರುವಿರಿ ತುಸು ವಿಷಯಾಂತರ ಎನಿಸುತ್ತಿದೆ.
**********
*ಬದುಕು...*
ಕ್ರೂರಿಯಾಗ ಬೇಡ ಬುದ್ದಬಸವಾದಿ ತತ್ವಗಳ ಓದು ಎಂದು ಕರೆಕೊಡುವ ಕವನ ಚನ್ನಾಗಿದೆ,
ಕತ್ತಿಯ ಬದಲು ಲೇಖನಿ ಹಿಡಿ ಎಂಬ ಸಾಲು ಚೆನ್ನಾಗಿದೆ ಆದರೆ ಕವನದ ನಿರೂಪಣಾ ಶೈಲಿಗೆ ಹೊಂದಿಕೆ ಯಾಗುತ್ತಿಲ್ಲ ಎನಿಸುತ್ತಿದೆ
************
[5/7, 8:49 AM] Wr Divya Achar: ಪ್ರೇಮ್ ರವರ ಕವನ
*ನಾ* *ಬಂದೆ*
ಉತ್ತಮವಾಗಿ ಮೂಡಿಬಂದಿದೆ
💐💐💐
[5/7, 11:31 AM] Wr Chinnupriya: *ಪ್ರೇಮ್* ಅವರ *ನಾ ಬಂದೆ*...
ಕವನದ ಭಾವ ಚನ್ನಾಗಿದೆ... ತಾನು ಮಾಡಿದ್ದೇ ಮತ್ತೆ ತನಗೆ ತಿರುಗುಬಾಣವಾಗುವುದು ಎಂಬುದನ್ನ ಹೇಳಿದ್ದಾರೆ. *ಮಾಡಿದ್ದುಣ್ಣೋ ಮಹರಾಯ* ಗಾದೆಯ ಮಾತಿನಂತೆ ಕವನವಿದೆ....
ಒಂದು ಸಣ್ಣ ಸಲಹೆ...
*ಕವನದ ಭಾವ ಚಂದವಿದ್ದರೂ, ಸಾಲುಗಳು ಹೆಚ್ಚು ಗದ್ಯವಾಗುತ್ತಾ ಸಾಗಿದೆ. ಆದಷ್ಟೂ ಗದ್ಯದಿಂದ ಪದ್ಯದೆಡೆಗೆ ಗಮನ ನೀಡಿ.*
ಧನ್ಯವಾದಗಳು. 🙏🏻
[5/7, 12:01 PM] Wr S K Hiremat: ಪ್ರೇಮ್ ಅವರ *ನಾ ಬಂದೆ* ಒಂದು ಚಂದದ ಭಾವಲಹರಿ. ಒಂದು ಮುಕ್ತ ಕವನದ ಶೈಲಿ.
ಸೊಗಸಾಗಿದೆ👍🏼 ಅಮ್ಮನ ಮಹತ್ವ , ದುಃಖ ನೋವನ್ನು ಅಪ್ಪನಾಗಿ ಅರಿತ , ಕಳಕಳಿಯನ್ನು ತೋರುವ ಕವನವಿದು. ಉತ್ಕೃಷ್ಟ ಅತ್ಮಾವಲೋಕನವಿದೆ
*ನನ್ನ ಮಗ ನನ್ನ ದೂರಮಾಡಿದಾಗ*
*ನನ್ನ ಪರರಂತೆ ಕಂಡಾಗ ತಿಳಿಯಿತು!*
*ತಲೆಗೆ ಸುರಿದ ನೀರೇ ಕಾಲಿಗಿಳಿವುದು!*
ಗಮನಸೆಳೆವ ಸಾಲುಗಳು.
Free verse ಗೂ ಕೂಡ ವಿಶಿಷ್ಟವಾದ ಪದಬಳಕೆ , ಗೂಢತೆ, ವೈರುದ್ಯತೆಯ ಗಟ್ಟಿತನದ ರೂಪವಿರುತ್ತದೆ. ಅದು ಇಲ್ಲದೆ ಹೋದಾಗ ಕಾವ್ಯಪಂಕ್ತಿಗಳು ಗದ್ಯವಾಕ್ಯವೆನಿಸುತ್ತವೆ. ಗಮನಿಸಿ ಮುಂದುವರೆಸಿ
ಶುಭವಾಗಲಿ
ತ್ರಿನೇತ್ರಜ್
[5/8, 11:16 AM] Wr Shashirekha: *ಪ್ರೇಮಕ್ಕ ಅವರ ನಿನ್ನೊಡನೆ ಕಳೆದ ಕ್ಷಣ.....*
*ಬರಿದೇ ಹುಟ್ಟು ಹಬ್ಬ ಆಚರಿಸಿಕೊಂಡು ಸಂತಸ ಪಡುತಿದ್ದ ಮನಕೆ, ಮತ್ತೊಂದು ಬಾರಿ ಶುಭಾಶಯಗಳ ಸುರಿಮಳೆಯಲ್ಲಿ ತೋಯ್ಯುವ ಅವಕಾಶ , ಅದು ಮದುವೆಯ ವಾರ್ಷಿಕೋತ್ಸವದ ದಿನ, ಬದುಕಿನ ಪ್ರತಿ ಹಂತದಲ್ಲೂ ಕೈ ಹಿಡಿದು ನಡೆವ ಜೀವ ಒಂದು ಬದುಕಿಗೆ ಬಂದ ದಿನದ ಬಗೆಗೆ ಬರೆದ ಭಾವ ಚಂದವಿದೆ ಅಕ್ಕ*
*ಎಂಟನೇ ವರುಷದ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು, ಹೀಗೆ ನೂರು ಕಾಲ ಜೊತೆಯಾಗಿರಿ*
💐💐💐💐💐💐
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ